ರೈಲಿನಲ್ಲಿ ಯವತಿಯರ ಮಸ್ತ್‌ ಡ್ಯಾನ್ಸ್‌..! ವಿಡಿಯೋ ವೈರಲ್‌ 

Viral Video : ವೈದೇಹಿ ಎಂಬ ಟ್ಟಿಟರ್‌ ಬಳಕೆದಾರರು ಹಂಚಿಕೊಂಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಜನಪ್ರಿಯ ಹಾಡಿನ ಬೀಟ್‌ಗಳಿಗೆ ಹುಡುಗಿಯರ ಗುಂಪು ನೃತ್ಯ ಮಾಡುವುದನ್ನು ಕಾಣಬಹುದು. ಯುವತಿಯರ ಡಾನ್ಸ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.

Written by - Krishna N K | Last Updated : May 7, 2023, 02:07 PM IST
  • ಇದು ಡಿಜಿಟಲ್ ಯುಗ, ಎಲ್ಲರೂ ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌, ಟ್ಟಿಟರ್‌ನಲ್ಲಿದ್ದಾರೆ.
  • ಇತ್ತೀಚೆಗೆ ರೀಲ್‌ಗಳನ್ನು ಮಾಡುವುದು ಸರ್ವೇ ಸಾಮಾನ್ಯವಾಗಿದೆ.
  • ಅಲ್ಲದೆ, ಹೆಚ್ಚು ವಿವ್ಸ್‌ ಪಡೆಯಲು ಸಾರ್ವಜನಿಕ ಪ್ರದೇಶಗಳಲ್ಲಿ ಡ್ಯಾನ್ಸ್‌ ಮಾಡುತ್ತಿದ್ದಾರೆ.
ರೈಲಿನಲ್ಲಿ ಯವತಿಯರ ಮಸ್ತ್‌ ಡ್ಯಾನ್ಸ್‌..! ವಿಡಿಯೋ ವೈರಲ್‌  title=

Girls Dance In Train : ಇದು ಡಿಜಿಟಲ್ ಯುಗ, ಎಲ್ಲರೂ ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌, ಟ್ಟಿಟರ್‌ನಲ್ಲಿದ್ದಾರೆ. ಜನರು ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಾರೆ, ಉಪಯುಕ್ತ ಮಾಹಿತಿಯನ್ನು ವೀಕ್ಷಿಸುವುದರಿಂದ ಹಿಡಿದು ಮನರಂಜನೆ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೆ, ರೀಲ್ಸ್‌, ಶಾರ್ಟ್‌ ವಿಡಿಯೋ ಮೂಲಕ ರಾತ್ರೋರಾತ್ರಿ ಫೇಮಸ್‌ ಸಹ ಆಗ್ತಾರೆ.

ಹೌದು.. ಇತ್ತೀಚೆಗೆ ರೀಲ್‌ಗಳನ್ನು ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಕ್ಯಾಮರಾದಲ್ಲಿ ಜನರು ನೃತ್ಯ, ಹಾಡುಗಾರಿಕೆ, ನಟನೆ ಮತ್ತು ಇತರ ವಿಚಿತ್ರ ಚಟುವಟಿಕೆಗಳ ವೀಡಿಯೊಗಳನ್ನು ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚಿನ ರೀಲ್ಸ್ ಕ್ರೇಜ್ ಹೇಗಿದೆ ಅಂದ್ರೆ, ಚಿತ್ರ ವಿಚಿತ್ರವಾಗಿ ವಿಡಿಯೋ ಮಾಡುವ ಮೂಲಕ ವೈರಲ್‌ ಆಗುತ್ತಿದ್ದಾರೆ. ಅಲ್ಲದೆ, ಹೆಚ್ಚು ವಿವ್ಸ್‌ ಪಡೆಯಲು ಸಾರ್ವಜನಿಕ ಪ್ರದೇಶಗಳಲ್ಲಿ ಡ್ಯಾನ್ಸ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: ಚುನಾವಣೆ ಬಿಸಿ ಮಧ್ಯೆ ರಾಜ್ಯದಲ್ಲಿ ಮಿಂಚು-ಗುಡುಗು ಸಹಿತ ಭಾರೀ ಮಳೆ: ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ!

ಸದ್ಯ ಹುಡುಗಿಯರ ಗುಂಪುವೊಂದು ರೈಲಿನೊಳಗೆ ನೃತ್ಯ ಮಾಡುತ್ತಿರುವ ವಿಡಿಯೋ ಒಂದು ಸೋಷಿಯಲ್‌ ವೈರಲ್‌ ಆಗುತ್ತಿದೆ. ಯುವತಿಯರ ಡ್ಯಾನ್ಸ್‌ಗೆ ವಿಡಿಯೋ ಜನಪ್ರಿಯತೆ ಗಳಿಸಿದೆ. ಹೌದು.. ವೈದೇಹಿ ಎಂಬ ಟ್ಟಿಟರ್‌ ಬಳಕೆದಾರರು ಹಂಚಿಕೊಂಡಿರುವ ವೀಡಿಯೊದಲ್ಲಿ ಜನಪ್ರಿಯ ಹಾಡಿನ ಬೀಟ್‌ಗಳಿಗೆ ಹುಡುಗಿಯರ ಗುಂಪು ನೃತ್ಯ ಮಾಡುವುದನ್ನು ಕಾಣಬಹುದು.  ಪ್ರಯಾಣಿಕರ ನಡುವೆ ಈ ಯುವತಿಯರು ಡಾನ್ಸ್‌ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಸಧ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಹುಡುಗಿಯರ ಆತ್ಮವಿಶ್ವಾಸ ಮತ್ತು ನೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ರೀತಿ ಸಾರ್ವಜನಿಕರ ಸ್ಥಳದಲ್ಲಿ ನೃತ್ಯ ಮಾಡುವುದು ಸರಿಯಲ್ಲ ಎಂದು ಟೀಕೆ ಮಾಡಿದ್ದಾರೆ. ಅಲ್ಲದೆ, ಈ ರೀತಿಯ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಭಾರತೀಯ ರೈಲ್ವೆಗೆ ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News