video : ಹಾವು ಮುಂಗುಸಿಯ ಈ ಭಯಂಕರ ಕಾದಾಟದಲ್ಲಿ ಕೊನೆಗೂ ಗೆದ್ದವರು ಯಾರು ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮರುಭೂಮಿಯಂತಹ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ವಿಷಪೂರಿತ ಹಾವು ಮತ್ತು ಮುಂಗುಸಿ ಮುಖಾಮುಖಿಯಾಗುತ್ತಿರುವುದನ್ನು ಕಾಣಬಹುದು.

Written by - Ranjitha R K | Last Updated : May 3, 2022, 03:53 PM IST
  • ವಿವಿಧ ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಂಡುಬರುತ್ತವೆ.
  • ಹಾವನ್ನು ಕೆಣಕಲು ಹೋದರೆ ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ
  • ಹಾವು ಕೆಲವು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಹೆದರುತ್ತವೆ.
video : ಹಾವು ಮುಂಗುಸಿಯ ಈ ಭಯಂಕರ  ಕಾದಾಟದಲ್ಲಿ ಕೊನೆಗೂ ಗೆದ್ದವರು ಯಾರು ? title=
Viral news (photo twitter)

ಬೆಂಗಳೂರು : ವಿವಿಧ ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಂಡುಬರುತ್ತವೆ. ಕೆಲವು ಹಾವುಗಳು ಕಡಿಮೆ ವಿಷವನ್ನು ಹೊಂದಿದ್ದರೆ ಇನ್ನು ಕೆಲವು ಭಯಾನಕ ವಿಶ್ಕಾರಿಯಾಗಿರುತ್ತವೆ. ಹಾವನ್ನು ಕೆಣಕಲು ಹೋದರೆ ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ. ಮನುಷ್ಯರಂತೆಯೇ, ಪ್ರಾಣಿ, ಕೀಟ ಏನೇ ಇರಲಿ ಸಾವಿನ ದವಡೆಗೆ ದುಡಿ ಬಿಡುತ್ತದೆ ಸರ್ಪದ ವಿಷ. ಆದರೂ ಹಾವುಗಳು ಮುಂಗುಸಿ ಮತ್ತು ಗಿಡುಗ ಸೇರಿದಂತೆ ಕೆಲವು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಹೆದರುತ್ತವೆ.  ಹಾವು- ಮುಂಗುಸಿ ಕಾದಾಟವನ್ನು ಅನೇಕ ಬಾರಿ ನೀವು ಕೂಡಾ ನೋಡಿರಬಹುದು. ಹಾವು ಮುಂಗುಸಿ ಜಗಳದಲ್ಲಿಸಾಮಾನ್ಯವಾಗಿ ಮುಂಗುಸಿಯೇ ಮೇಲು ಗೈ ಸಾಧಿಸುತ್ತದೆ. 

ಹಾವು ಮತ್ತು ಮುಂಗುಸಿ ಕಾದಾಟ :
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮರುಭೂಮಿಯಂತಹ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ವಿಷಪೂರಿತ ಹಾವು ಮತ್ತು ಮುಂಗುಸಿ ಮುಖಾಮುಖಿಯಾಗುತ್ತಿರುವುದನ್ನು ಕಾಣಬಹುದು. ಮುಖಾಮುಖಿಯಾಗುತ್ತಿರುವಂತೆ, ಹಾವು ಮತ್ತು ಮುಂಗುಸಿ ಮಧ್ಯೆ ಭಯಂಕರ ಕಾದಾಟ ಆರಂಭವಾಗುತ್ತದೆ. ಒಂದೆರಡು ಬಾರಿ ಹಾವು ಮುಂಗುಸಿಯ ಮೈ ಮೇಲೆ ಎರಗಲು ಬರುತ್ತದೆ. ಆದರೆ ಮುಂಗುಸಿ ಬಿಡಬೇಕಲ್ಲ. ಮರು ದಾಳಿ ಮಾಡಿ ಬಿಡುತ್ತದೆ. 

ಇದನ್ನೂ ಓದಿ : ಕೊರೊನಾ ನಿಯಂತ್ರಣಕ್ಕೆ ಚೀನಾ ಏನು ಮಾಡುತ್ತಿದೆ! ವಿಡಿಯೋ ನೋಡಿದ್ರೆ ಶಾಕ್ ಆಗ್ತೀರ...

ಅನೇಕ ಬಾರಿ ಹಾವು ಮುಂಗುಸಿಯನ್ನು ಕಚ್ಚಲು ಪ್ರಯತ್ನಿಸುತ್ತದೆ. ಆದರೆ ಮುಂಗುಸಿ ತಪ್ಪಿಸಿಕೊಳ್ಳುತ್ತದೆ. ಮುಂಗುಸಿ ಕೂಡ ಹಾವಿನ ಬಾಲವನ್ನು ಮತ್ತೆ ಮತ್ತೆ ಹಿಡಿಯಲು ಪ್ರಯತ್ನಿಸುತ್ತದೆ. ಈ ಹೊತ್ತಿನಲ್ಲಿ ಇನ್ನು ಮುಂಗುಸಿ ತನ್ನನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವುದನ್ನು ಹಾವು ಅರ್ಥ ಮಾಡಿಕೊಳ್ಳುತ್ತದೆ. ಅಲ್ಲೇ ಇದ್ದಾರೆ ಪ್ರಾಣಕ್ಕೆ ಮುಳುವಾಗುತ್ತದೆ ಎನ್ನುವುದನ್ನು ಮನಗಂಡ ಹಾವು ಅಲ್ಲಿಂದ ಓಡಿ ಹೋಗುತ್ತದೆ. 

 

ಈ ವೀಡಿಯೊವನ್ನು @em4g1 ಹೆಸರಿನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ 42 ಸೆಕೆಂಡ್ ವೀಡಿಯೋವನ್ನು 2 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ದೃಶ್ಯವನ್ನು ನೋಡಿದ ನೆಟ್ಟಿಗರು ಕೂಡ ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ :  Viral Video: ಮದುವೆ ಬಳಿಕ ಧೂಳನ್ನೂ ಲೆಕ್ಕಿಸದೆ ಕಾರಿನ ಹಿಂದೆ ಓಡಿದ ವಧು-ವರ..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News