Viral video : ಸರ ಸರನೆ ಬಂದು ಮನೆ ಒಳಗೆ ನುಗ್ಗಲು ಯತ್ನಿಸಿದ ಹಾವು.! ಮುಂದೆ?

Viral vedio : ಕೆಲವು ವಿಡಿಯೋಗಳು ಸೋಜಿಗವನ್ನೇ ಉಂಟು ಮಾಡಿಬಿಡುತ್ತವೆ. ಮತ್ತೆ ಕೆಲವು ಬೆವರಿಳಿಸಿ ಬಿಡುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. 

Written by - Ranjitha R K | Last Updated : Jan 16, 2023, 03:10 PM IST
  • ಸಾಮಾಜಿಕ ಮಾಧ್ಯಮ ಎನ್ನುವುದು ಸೋಜಿಗದ ಜಗತ್ತು.
  • ನಾನಾ ರೀತಿಯ ವಿಡಿಯೋಗಳು ಅಪ್ ಲೋಡ್ ಆಗುತ್ತಿರುತ್ತವೆ.
  • ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Viral video : ಸರ ಸರನೆ ಬಂದು ಮನೆ ಒಳಗೆ ನುಗ್ಗಲು ಯತ್ನಿಸಿದ ಹಾವು.! ಮುಂದೆ?  title=

Viral Video : ಸಾಮಾಜಿಕ ಮಾಧ್ಯಮ ಎನ್ನುವುದು ಸೋಜಿಗದ ಜಗತ್ತು. ದಿನ ಬೆಳಗಾದರೆ ಸಾಕು ಇಲ್ಲಿ ನಾನಾ ರೀತಿಯ ವಿಡಿಯೋಗಳು  ಅಪ್ ಲೋಡ್ ಆಗುತ್ತಿರುತ್ತವೆ. ದಿನಕ್ಕೆ ಸಾವಿರಾರು ವಿಡಿಯೋಗಳು ಇಲ್ಲಿ ಕಾಣ ಸಿಗುತ್ತವೆ. ಕೆಲವು ವಿಡಿಯೋಗಳು ಇರಿಸು ಮುರುಸು ಉಂಟು ಮಾಡಿದರೂ, ಇನ್ನು ಕೆಲವು ಭಾವನಾತ್ಮಕವಾಗಿ ನಮ್ಮನ್ನು ಬೆಸೆದು ಬಿಡುತ್ತವೆ. ಇನ್ನು ಕೆಲವು ವಿಡಿಯೋಗಳು ಸೋಜಿಗವನ್ನೇ ಉಂಟು ಮಾಡಿಬಿಡುತ್ತವೆ. ಮತ್ತೆ ಕೆಲವು ಬೆವರಿಳಿಸಿ ಬಿಡುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. 

ಇಲ್ಲಿ ಕಾಣುವ ವಿಡಿಯೋದಲ್ಲಿ ಪುಟ್ಟ ಮಗುವೊಂದುತನ್ನ ಆಟಿಕೆಗಳೊಂದಿಗೆ ಆಡುತ್ತಿದೆ. ಆ ಮಗುವಿನ ಪಕ್ಕದಲ್ಲೇ ಮಗುವಿನ ತಾತ ಕೂಡಾ ನಿಂತಿರುವುದನ್ನು ಕಾಣಬಹುದು. ಮಗು ಜಗತ್ತನ್ನೇ ಮರೆತು ತನ್ನ  ಪಾಡಿಗೆ ಆಡುತ್ತಿದೆ. ಇದ್ದಕ್ಕಿದ್ದಂತೆ ಮಗಿವಿನ ತಾತ ಕಿರುಚಲು ಆರಂಭಿಸುತ್ತಾರೆ. ಅವರ ಕಿರುಚಾಟ ಕೇಳಿ ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಮಗಿವಿನ ತಂದೆ ಓಡೋಡಿ ಬರುತ್ತಾರೆ. ಮಾತ್ರವಲ್ಲ ಮಗುವನ್ನು ಎತ್ತಿಕೊಂಡು ಮನೆಯೊಳಗೆ ಹೋಗುತ್ತಾರೆ. 

ಇದನ್ನೂ ಓದಿ : Viral Video: ಬೈಕ್ ಸ್ಕಿಡ್‌ ಆಗಿ ಚಲಿಸುತ್ತಿದ್ದ ಬಸ್‌ನ ಕೆಳಗೆ ಸಿಲುಕಿದ ವ್ಯಕ್ತಿ, ಮುಂದೆ...

ಅಸಲಿಗೆ ತಾತ ಕಿರುಚಾಡಿದ್ದು, ಅಲ್ಲಿ ಸರಸರನೆ ಹದಿದಾಡಿಕೊಂಡು ಬಂದ ಹಾವನ್ನು ಕಂಡು. ಹೌದು ಶರವೇಗದಲ್ಲಿ ಬಂದ ಹಾವು ಮನೆಯೊಳಗೂ ನುಗ್ಗಲು ಯತ್ನಿಸುತ್ತದೆ. ಆದರೆ ಮಗುವನ್ನು ಕರೆದುಕೊಂಡು ಹೋಗುವ ವೇಳೆ ಪಾಪುವಿನ ತಂದೆ ಮತ್ತು ತಾತಾ ಮನೆಯ ಬಾಗಿಲನ್ನು ಭದ್ರವಾಗಿ ಹಾಕಿ ಬಿಡುತ್ತಾರೆ. ಹಾಗಾಗಿ ಹಾವು ಎಷ್ಟೇ ಪ್ರಯತ್ನಿಸಿದರೂ ಮನೆ ಒಳಗೆ ಹೋಗುವುದು ಸಾಧ್ಯವಾಗುವುದಿಲ್ಲ.  ನಂತರ ಅಲ್ಲೇ ಸುತ್ತಾಡಿದ ಬಳಿಕ ಹಾವು ಹೊರಗೆ ಹೋಗುತ್ತದೆ.  

 

ಇದನ್ನೂ ಓದಿ :  Lions Fight Video: ಸಿಂಹಿಣಿಯ ಪ್ರೀತಿಯಲ್ಲಿ ಭೀಕರ ಕಾಳಗಕ್ಕಿಳಿದ ಎರಡು ದೈತ್ಯ ಸಿಂಹಗಳು... ವಿಡಿಯೋ ನೋಡಿ

ಈ  ವಿಡಿಯೋವನ್ನು cinta.sholawatnabi ಎಂಬ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಸಾವಿರಾರು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಕಾಮೆಂಟ್ ಕೂಡಾ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News