Snake Viral Video: ಅಡುಗೆ ಮನೆಗೆ ಎಂಟ್ರಿ ಕೊಟ್ಟ ನಾಗರಹಾವು, ಮುಂದೆ...

Viral Video: ಗ್ರಾಮದ ಹನುಮಂತ ಗುಂಡಳ್ಳಿ ಅವರ ನಿವಾಸಕ್ಕೆ ಹಿತ್ತಲ ಬಾಗಿಲ ಮೂಲಕ‌ ಎಂಟ್ರಿ ಕೊಟ್ಟಿದ್ದ ನಾಗರಹಾವು ಅಡುಗೆ ಮನೆಯ ಡಬ್ಬಾ ಹಿಂದೆ ಅಡಗಿ ಕುಳಿತಿತ್ತು. ಮಹಿಳೆ ಅಡುಗೆ ಮನೆಗೆ ಬಂದ ಬಳಿಕ ಅಲ್ಲಿ ಬುಸ್ ಬುಸ್ ಅನ್ನೋ ಶಬ್ದ ಕೇಳಿಸಿದೆ. 

Written by - Yashaswini V | Last Updated : Jun 21, 2023, 10:57 AM IST
  • ಮಹಿಳೆ ಅಡುಗೆ ಮನೆಗೆ ಬಂದ ಕೂಡಲೇ ಬುಸ್ ಬುಸ್ ಎಂಬ ಶಬ್ಧ
  • ಪದೇ ಪದೇ ಬುಸ್ ಬುಸ್ ಎಂಬ ಶಬ್ದ ಕೇಳಿಸಿದ್ದರಿಂದ ಆತಂಕಗೊಂಡ ಮಹಿಳೆ
  • ಆತಂಕದಿಂದ ಚೀರಾಡಿ ಮನೆಯವರನ್ನೆಲ್ಲಾ ಸೇರಿಸಿದ ಮಹಿಳೆ...
Snake Viral Video: ಅಡುಗೆ ಮನೆಗೆ ಎಂಟ್ರಿ ಕೊಟ್ಟ ನಾಗರಹಾವು, ಮುಂದೆ...  title=
Cobral viral video

Snake Viral Video: ಬೆಳ್ಳಂ‌ಬೆಳಿಗ್ಗೆ ಅಡುಗೆ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷಗೊಂಡು ಕುಟುಂಬಸ್ಥರು ಭಯಭೀತಗೊಂಡಿರುವ  ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಜಗಾಪುರ ಗ್ರಾಮದಲ್ಲಿ ನಿನ್ನೆ(ಜೂನ್ 20, 2023)  ಜರುಗಿದೆ.

ಗ್ರಾಮದ ಹನುಮಂತ ಗುಂಡಳ್ಳಿ ಅವರ ನಿವಾಸಕ್ಕೆ ಹಿತ್ತಲ ಬಾಗಿಲ ಮೂಲಕ‌ ಎಂಟ್ರಿ ಕೊಟ್ಟಿದ್ದ ನಾಗರಹಾವು ಅಡುಗೆ ಮನೆಯ ಡಬ್ಬಾ ಹಿಂದೆ ಅಡಗಿ ಕುಳಿತಿತ್ತು. ಮಹಿಳೆ ಅಡುಗೆ ಮನೆಗೆ ಬಂದ ಬಳಿಕ ಅಲ್ಲಿ ಬುಸ್ ಬುಸ್ ಅನ್ನೋ ಶಬ್ದ ಕೇಳಿಸಿದೆ. 

ಕೆಲವು ನಿಮಿಷಗಳವರೆಗೆ ಇದೇ ರೀತಿ ಪದೇ ಪದೇ ಬುಸ್ ಬುಸ್ ಎಂಬ ಶಬ್ದ ಕೇಳಿಸಿದ್ದರಿಂದ ಆತಂಕಗೊಂಡ ಮಹಿಳೆ ಚೀರಾಡಿ ಮನೆಮಂದಿಯೆನ್ನೆಲ್ಲ ಕರೆದಿದ್ದಾಳೆ. ಆಗ ಅಡುಗೆ ಮನೆಯಲ್ಲಿ ನಾಗಸರ್ಪ ಇರುವುದು ಬೆಳಕಿಗೆ ಬಂದಿದೆ. 

ಇದನ್ನೂ ಓದಿ- Cat Video: ಮೀನು, ಮಾಂಸ ಯಾರಿಗ್ಬೇಕು.. ಕರಂ ಕುರುಂ ಅಂತ ಕಲ್ಲಂಗಡಿ ತಿನ್ನುವ ಬೆಕ್ಕು! ಸಖತ್‌ ಫನ್ನಿ ವಿಡಿಯೋ ಇದು

ಅಡುಗೆ ಮನೆಯಲ್ಲಿ ನಾಗರಹಾವು ಅವಿತಿರುವುದನ್ನು ಮನಗಂಡ ಮನೆಯವರು ತಕ್ಷಣವೇ   ಉರಗ ರಕ್ಷಕ ಬಿ.ಆರ್.ಸುರೇಬಾನ ಅವರಿಗೆ ಕರೆ ಮಾಡಿ ಕರೆದಿದ್ದಾರೆ. 

ವಿಷಯ ತಿಳಿಯುತ್ತಿದ್ದಂತೆ ಮನೆಗೆ ಬಂದ ಉರಗ ರಕ್ಷಕ ಬಿ.ಆರ್.ಸುರೇಬಾನ ಅಡುಗೆ ಮನೆಯಲ್ಲಿ ಡಬ್ಬದ ಹಿಂದೆ ಅವಿತು ಕುಳಿತಿದ್ದ ನಾಲ್ಕು ಅಡಿಯಷ್ಟು ಉದ್ದದ ನಾಗರಹಾವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. 

ಅಡುಗೆ ಮನೆಯಲ್ಲಿ ಅವಿತು ಕುಳಿತಿರುವ ನಾಗಪ್ಪನ ವೈರಲ್ ವಿಡಿಯೋವನ್ನು ನೀವೂ ಒಮ್ಮೆ ನೋಡಿ... 
 

ಇದನ್ನೂ ಓದಿ- ಮುದ್ದಾಗಿ ಹೆಡೆ ಎತ್ತಿ ಕ್ಯಾಮರಾಗೆ ಪೋಸ್‌ ಕೊಟ್ಟ ನಾಗರಹಾವು..! ವಿಡಿಯೋ ವೈರಲ್‌

ಹಾವುಗಳನ್ನ ಸೆರೆ ಹಿಡಿದು ಸುರಕ್ಷಿತವಾಗಿ ಬಿಡುವದರಲ್ಲಿ ಸುರೇಬಾನ್ ಅವರು ಈ‌ ಭಾಗದಲ್ಲಿ ಸಾಕಷ್ಟು ಹೆಸರುವಾಸಿಯಾಗಿದ್ದು, ಈಗಾಗಲೇ ಸತತ ಆರು ವರ್ಷಗಳಿಂದ ಸಾವಿರಾರು ಹಾವುಗಳನ್ನ ಸೆರೆ ಹಿಡಿದು, ಅದೆಷ್ಟೋ ಅಪಾಯಗಳನ್ನ ತಪ್ಪಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News