Amazon snake cat : ಸೃಷ್ಟಿಯ ಗರ್ಭದಲ್ಲಿ ಅನೇಕ ಕುತೂಹಲಕಾರಿ ವಿಚಾರಗಳು ಅಡಗಿವೆ. ನಮ್ಮ ಕಣ್ಣಿಗೆ ಕಾಣುವ ವಸ್ತುಗಳು, ಪ್ರಾಣಿಗಳಿಗಿಂತಲೂ ಚಿತ್ರ ವಿಚಿತ್ರ ಜೀವಿಗಳು ಮನುಷ್ಯನಿಂದ ದೂರ ಬಹುದೂರದಲ್ಲಿ ವಾಸಿಸುತ್ತಿವೆ. ಅದರಂತೆ ನಿಗೂಢ ಹಾಗೂ ದಟ್ಟ ಕಾನನ ಅಮೆಜಾನ್ನಲ್ಲಿಯೂ ಆಗಾಗ ವಿಚಿತ್ರ ಪ್ರಾಣಿಗಳು ಪತ್ತೆಯಾಗುವ ಮೂಲಕ ಅಚ್ಚರಿಗೆ ಕಾರಣವಾಗುತ್ತಿರುತ್ತವೆ. ಇದೀಗ ʼಅಮೆಜಾನ್ ಸ್ನೇಕ್ ಕ್ಯಾಟ್ʼ ಎಂಬ ಬೆಕ್ಕಿನ ನಂಬಲಾಗದ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಟ್ಟಿಟರ್ನಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿರುವ ಬೆಕ್ಕನ್ನು, ʼಸರ್ಪನ್ಸ್ ಕ್ಯಾಟಸ್ʼ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಮೇಲಿನ ಅತ್ಯಂತ ಅಪರೂಪದ ಬೆಕ್ಕಿನ ಜಾತಿಯಾಗಿದೆ. ಈ ಪ್ರಾಣಿಗಳು ಅಮೆಜಾನ್ ಮಳೆಕಾಡಿನಲ್ಲಿ ಮನುಷ್ಯರೂ ಸಹ ತಲುಪಲು ಕಷ್ಟವಾಗುವ ಪ್ರದೇಶಗಳಲ್ಲಿ ವಾಸಿಸುತ್ತವೆ. ಆದ್ದರಿಂದ ಅವುಗಳು ಮಾನವರ ಕಣ್ಣಿಗೆ ಬಿಳುವುದು ಅತಿ ಕಡಿವೆ.
Serpens catus is the rarest species of feline on Earth .These Animals live in hard to reach regions of the Amazon rainforest , and therefore they are relatively poorly studied .The first images capturing the snake cat appeared only in the 2020.Weighs up the 4 stone pic.twitter.com/rpeMQKCF4I
— Jeff_kamara2 (@Kamara2R) March 14, 2023
ಈ ಚಿತ್ರವನ್ನು ಮಾರ್ಚ್ 14 ರಂದು @Kamara2R ಎಂಬ ಬಳಕೆದಾರರು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದುವರೆಗೆ, ಪೋಸ್ಟ್ ಸುಮಾರು 21 ಸಾವಿರ ವೀಕ್ಷಣೆಗಳನ್ನು ಪಡೆದಿದೆ. 150 ಕ್ಕೂ ಹೆಚ್ಚು ಲೈಕ್ಗಳನ್ನು ಸ್ವೀಕರಿಸಲಾಗಿದೆ. ಈ ಚಿತ್ರಕ್ಕೆ ಹಲವು ನೆಟಿಜನ್ಗಳು ಪ್ರತಿಕ್ರಿಯಿಸಿದ್ದಾರೆ. ಕೆಲವು ಬಳಕೆದಾರರು ಇದು ಬೆಕ್ಕುಗಳ ಜಾತಿಯಲ್ಲ, ಫೋಟೋಶಾಪ್ನಿಂದ ಈ ರಿತಿ ಡಿಸೈನ್ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ಈ ಚಿತ್ರವನ್ನು ನಕಲಿ ಎಂದು ದೂರಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.