ವೇದಿಕೆ ಮೇಲೆಯೇ ಆ್ಯಂಕರ್‌ಗೆ ಮುತ್ತು ಕೊಟ್ಟ ಖ್ಯಾತ ನಟ..! ವಿಡಿಯೋ ವೈರಲ್

Suma Kanakala kiss : ಸ್ಟಾರ್ ಆ್ಯಂಕರ್‌ ಸುಮಾ ಕನಕಲಾ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಈಕೆ ಎಲ್ಲರಿಗೂ ಚಿರಪರಿಚಿತೆ.. ಈ ನಿರೂಪಕಿಯ ಸ್ಟೈಲ್ ಮತ್ತು ಡೈಲಾಗ್‌ ಪಂಚ್‌ಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ.. ಸದಾ ನಗುತ್ತಾ ಕೂಲ್ ಆಗಿರುವ ಸುಮಾ ಇತ್ತೀಚೆಗಷ್ಟೇ ಮುಜುಗರ ಎದುರಿಸಬೇಕಾಗಿತ್ತು.. 

Written by - Krishna N K | Last Updated : Aug 6, 2024, 12:50 PM IST
    • ಸ್ಟಾರ್ ಆ್ಯಂಕರ್‌ ಸುಮಾ ಕನಕಲಾ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ.
    • ಸುಮಾ ಇತ್ತೀಚೆಗಷ್ಟೇ ಮುಜುಗರದ ಸನ್ನಿವೇಶ ಎದುರಿಸಬೇಕಾಯಿತು.
    • ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..
ವೇದಿಕೆ ಮೇಲೆಯೇ ಆ್ಯಂಕರ್‌ಗೆ ಮುತ್ತು ಕೊಟ್ಟ ಖ್ಯಾತ ನಟ..! ವಿಡಿಯೋ ವೈರಲ್ title=

Thangalaan movie : ಸುಮಾ ಕನಕಲಾ ತೆಲುಗು ಭಾಷಿಗರಾದರೂ ಸೋಷಿಯಲ್‌ ಮೀಡಿಯಾದ ಮೂಲಕ ಎಲ್ಲರಿಗೂ ಚಿರಪರಿಚಿತರು. ಸದಾ ನಗುತ್ತಾ ಕೂಲ್ ಆಗಿರುವ ಸುಮಾ ಇತ್ತೀಚೆಗಷ್ಟೇ ಮುಜುಗರದ ಸನ್ನಿವೇಶ ಎದುರಿಸಬೇಕಾಯಿತು. ತಂಗಲಾನ್‌ ನಟನೊಬ್ಬ ಏಕಾಎಕಿ ಕಿಸ್‌ ಮಾಡಿದ್ದು, ಆ್ಯಂಕರ್‌ ಶಾಕ್‌ ನೀಡಿತು.. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

ಪಾ. ರಂಜೀತ್‌ ನಿರ್ದೇಶನದ ತಂಗಲಾನ್‌ ಚಿತ್ರ ಬಿಡುಗಡೆಗೆ ರೆಡಿಯಾಗುತ್ತಿದೆ.. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಸ್ಟಾರ್ ಹೀರೋ ವಿಕ್ರಮ್ ನಟಿಸಿದ್ದಾರೆ. ‘ಕಬಾಲಿ’, ‘ಕಾಲಾ’, ‘ಸರ್ಪಟ್‌ ಪರಂಪರೆ’ ಚಿತ್ರಗಳ ಮೂಲಕ ಪಾ. ರಂಜಿತ್ ಖ್ಯಾತಿ ಪಡೆದಿದ್ದಾರೆ.. ಮಾಳವಿಕಾ ಮೋಹನನ್ ಮತ್ತು ಪಾರ್ವತಿ ತಿರುವೋತ್ತು ತಂಗಲಾನ್‌ ನಾಯಕಿಯರು.

ಇದನ್ನೂ ಓದಿ:ʼಎಸಿಪಿ ಚಂದನ್‌ʼ ಹುಲಿ ಅಲ್ಲ ʼಸೆಕ್ಯೂರಿಟಿʼ..! ಅಧಿಕಾರಿಯನ್ನೇ ಟ್ರೋಲ್‌ ಮಾಡಿದ ದರ್ಶನ್‌ ಫ್ಯಾನ್ಸ್‌

ಹಾಲಿವುಡ್ ನಟ ಡೇನಿಯಲ್ ಕಲ್ತಗಿರೋನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಎಲ್ಲಾ ಹೈಪ್ ಮುಗಿಸಿರುವ ತಂಗಲಾನ್‌ ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿದೆ. ಇತ್ತೀಚಿಗಷ್ಟೇ ಚಿತ್ರದ ಪ್ರಚಾರದ ಭಾಗವಾಗಿ ಹೈದರಾಬಾದ್‌ನಲ್ಲಿ ಪ್ರೀ ರಿಲೀಸ್ ಇವೆಂಟ್‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..

ಪ್ರೀ ರಿಲೀಸ್ ಸಮಾರಂಭದಲ್ಲಿ ಸುಮಾ ಅವರು ಹಾಲಿವುಡ್ ನ ಖ್ಯಾತ ನಟ ಡೇನಿಯಲ್ ಕಾಲ್ಟಗಿರೋನ್ ಅವರನ್ನು ವೇದಿಕೆಗೆ ಆಹ್ವಾನಿಸಿದರು. ಸುಮಾ ಅವರು ಈ ವಿದೇಶ ನಟನೊಂದಿಗೆ ತೆಲುಗಿನಲ್ಲಿ ಮಾತನಾಡಲು ಪ್ರಯತ್ನಿಸಿದರು. ಆಗ ಡೇನಿಯಲ್‌, ಇಲ್ಲಿನ ಹುಡುಗಿಯರಲ್ಲಿ ಸುಮ ಅತ್ಯಂತ ಸುಂದರಿ ಅಂತ ಹೇಳುತ್ತಾನೆ. ಅಲ್ಲದೆ, ಕೈಗೆ ಮುತ್ತಿಡುತ್ತಾನೆ..

ಇದನ್ನೂ ಓದಿ:ಪುಷ್ಪ 2 ರಿಲೀಸ್ ತಡವಾಗಲು ಇದೇ ಅಸಲಿ ಕಾರಣ.. ರಹಸ್ಯ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ!

ಇದನ್ನ ನಿರೀಕ್ಷಿಸದ ಸುಮಾ ಆಶ್ಚರ್ಯಚಕಿತರಾದರು. ನಂತರ, 'ರಾಜಾ (ರಾಜೀವ್ ಕಣಕಾಲ) ಇವನು ನನ್ನ ಅಣ್ಣ.. ರಾಖಿ ಹಬ್ಬ ಬರುತ್ತಿದೆ..' ಅಂತ ತಮ್ಮ ಗಂಡನಿಗೆ ಹೇಳುವ ಮೂಲಕ ಪ್ರಸಂಗವನ್ನ ಕೂಲಾಗಿ ತೆಗೆದುಕೊಂಡರು. ಇದರಿಂದ ಪ್ರೇಕ್ಷಕರು ನಗೆಗಡಲಿನಲ್ಲಿ ತೇಲಿದರು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News