ದಾಸ ಮತ್ತೆ ಜೈಲು ಸೇರೋದು ಫಿಕ್ಸ್: ರೇಣುಕಾಸ್ವಾಮಿ ಕೊಲೆ ಸ್ಪಾಟಲ್ಲಿ ದರ್ಶನ್ ಇದ್ರು ಅನ್ನೋದಕ್ಕೆ ಮತ್ತೆರಡು ಫೋಟೋ ಲಭ್ಯ..!?

Actor Darshan health update : ಅರೋಪಿ ದರ್ಶನ್‌ ಜಾಮೀನು ಪಡೆದು ಬಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ಸೇರಿದ್ರು. 48 ಗಂಟೆಗಳಲ್ಲಿ MRI, ಸಿಟಿ ಸ್ಕ್ಯಾನ್ ಬ್ಲಡ್ ರಿಪೋರ್ಟ್ ಬರುತ್ತೆ ನಂತರ ಏನ್ ಮಾಡಬೇಕು ಅಂತ ಡಿಸೈಡ್ ಮಾಡ್ತೇವೆ ಎಂದು ಹೇಳಿದ್ದ ಡಾಕ್ಟರ್ ನವೀನ್ ಆದಾದ ಬಳಿಕ ಇಲ್ಲಿಯವರೆಗೂ ಕೂಡ ಯಾವುದೇ ಅಪ್ಡೇಟ್ ಕೂಡ ಮಾಡಿಲ್ಲ.. ಇದೀಗ... ಸಂಪೂರ್ಣ ಮಾಹಿತಿ ಇಲ್ಲಿದೆ.. 

Written by - Krishna N K | Last Updated : Nov 21, 2024, 05:33 PM IST
    • ಬಳ್ಳಾರಿ ಜೈಲಿನಿಂದ ಹೊರ ಬರೋದಕ್ಕೆ ನಾಟಕ ಮಾಡಿದ್ರಾ ದರ್ಶನ್..?
    • ಬಿಮ್ಸ್ ಡಾಕ್ಟರ್ ಗಳು ನೀಡಿದ ಮೆಡಿಕಲ್ ರಿಪೋರ್ಟ್ ಸುಳ್ಳಾ..?
    • ದರ್ಶನ್ ಆರೋಗ್ಯದ ಗುಟ್ಟನ್ನು ಮಿಚ್ಚಿಡ್ತಿರೋದ್ಯಾ‌ಕೇ ಕುಟುಂಬಸ್ಥರು..!
ದಾಸ ಮತ್ತೆ ಜೈಲು ಸೇರೋದು ಫಿಕ್ಸ್: ರೇಣುಕಾಸ್ವಾಮಿ ಕೊಲೆ ಸ್ಪಾಟಲ್ಲಿ ದರ್ಶನ್ ಇದ್ರು ಅನ್ನೋದಕ್ಕೆ ಮತ್ತೆರಡು ಫೋಟೋ ಲಭ್ಯ..!? title=

Darshan case : ರೇಣುಕಾಸ್ವಾಮಿ ಕೊಲೆ ಕೇಸ್ ನ ಆರೋಪಿಗೆ ಇನ್ನೇನು ಆಪರೇಷನ್ ಮಾಡ್ಸಿಲ್ಲ ಅಂದ್ರೆ ಪಾರ್ಶ್ವವಾಯು ಆಗುತ್ತೆ. ಹಾಗಾಗಿ ಜಾಮೀನು ಕೊಡಲೇ ಬೇಕು ಎಂದು ಮನವಿ ಮಾಡಿಕೊಂಡು ಮಧ್ಯಂತರ ಜಾಮೀನು ಪಡೆದು ಹೊರ ಬಂದಿರುವ ನಟ ದರ್ಶನ್ ಈಗ ಹೇಗಿದ್ದಾರೆ. ಆಪರೇಷನ್‌ ಮಾಡ್ಸಿಕೊಂಡ್ರ,? ಇಲ್ಲ ಜೈಲು ಬಿಟ್ಟು ಹೊರ ಬರ್ತಿದ್ದಾಂಗೆ ಬೆನ್ನು ನೋವು ಮಾಯವಾಯ್ತಾ‌ ಅನ್ನೋ ಅನುಮಾನ ಮೂಡುತ್ತಿದ್ರೆ, ಈಗ ಪೊಲೀಸರು ಕೊಲೆ ಆರೋಪಿಗೆ ಮತ್ತೊಂದು ಶಾಕ್ ಕೊಡೋದಕ್ಕೆ ರೆಡಿ ಆಗಿದ್ದಾರೆ.

ಯೆಸ್ ದರ್ಶನ್‌ಗೆ ಇದುವರೆಗೂ ಕೂಡ ಅಪರೇಷನ್ ಯಾಕೆ ಮಾಡ್ಸಿಲ್ಲ, ಡಾಕ್ಟರ್ ಗಳು ಸುಳ್ಳು ರಿಪೋರ್ಟ್ ಕೊಟ್ಟಿದ್ದಾರೆ ಅನ್ಸುತ್ತೆ. ಯಾಕಂದ್ರೆ ಇಂತಹ ಅನುಮಾನ ಶುರುವಾಗೋದಕ್ಕೆ ಬಲವಾದ ಕಾರಣವಿದೆ.
ಬಳ್ಳಾರಿ ಜೈಲಿನಲ್ಲಿದ್ದಾಗ ಒಂದು ಬ್ಯಾಗ್ ಹಿಡಿದುಕೊಂಡು ‌ಬರೋದಕ್ಕೂ ಕುಂಟುತ್ತ ಬರ್ತಿದ್ದ ದರ್ಶನ್ ತುರ್ತಾಗಿ ಅಪರೇಷನ್ ಮಾಡ್ಸಿಲೇ ಬೇಕು ಎಂದು ಆರು ವಾರಗಳ ಮಧ್ಯಂತರ ಜಾಮೀನು ಪಡೆದು ಬಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ಸೇರಿದ್ರು. 48 ಗಂಟೆಗಳಲ್ಲಿ MRI, ಸಿಟಿ ಸ್ಕ್ಯಾನ್ ಬ್ಲಡ್ ರಿಪೋರ್ಟ್ ಬರುತ್ತೆ ನಂತರ ಏನ್ ಮಾಡಬೇಕು ಅಂತ ಡಿಸೈಡ್ ಮಾಡ್ತೇವೆ ಎಂದು ಹೇಳಿದ್ದ ಡಾಕ್ಟರ್ ನವೀನ್ ಆದಾದ ಬಳಿಕ ಇಲ್ಲಿಯವರೆಗೂ ಕೂಡ ಯಾವುದೇ ಅಪ್ಡೇಟ್ ಕೂಡ ಮಾಡಿಲ್ಲ. 

ಇದನ್ನೂ ಓದಿ:ಎನ್‌ ಗುರು ಈ ನಟಿಗೆ ವಯಸ್ಸೇ ಆಗಲ್ವಾ..! 39ರಲ್ಲೂ 18ರಂತೆ ಕಾಣ್ತಾಳೆ.. ಫೊಟೋಸ್‌ ನೋಡಿ..

ಮೊದಲ ವಾರದ ಮೆಡಿಕಲ್ ರಿಪೋರ್ಟ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದು ಬಿಟ್ರೆ ಯಾವ ಟ್ರೀಟ್ಮೆಂಟ್ ನಡೆಯುತ್ತಿದೆ ಅನ್ನೋದರ ಬಗ್ಗೆ ಎಲ್ಲೂ ಕೂಡ ಬಹಿರಂಗಪಡಿಸಿಲ್ಲ. ಹಾಗಾದ್ರೆ ಬಳ್ಳಾರಿ ಜೈಲಿನಿಂದ ಹೊರಬಂದ ಕೂಡಲೇ ಬೆನ್ನು ನೋವು ವಾಸಿಯಾಯ್ತ..? ಡಾಕ್ಟರ್ ಗಳು ಫೇಕ್ ರಿಪೋರ್ಟ್ ಕೊಟ್ರಾ ಅನ್ನೋ ಅನುಮಾನ ಶುರುವಾಗಿದೆ.
 
ಇನ್ನೂ ರಿಪೋರ್ಟ್ ಬಂದ ಮೇಲೆ ಫಿಸಿಯೋಥೆರಪಿಯೇ ಫೈನಲ್ ಅಲ್ಲ ಅಂದಿದ್ರು.ಆದಾದ ಬಳಿಕ ರೋಗಿ ಒಪ್ಪಿಗೆ ಕೊಟ್ಟ ನಂತರ ಅಪರೇಷನ್ ಮಾಡೋದಕ್ಕೆ ಡೇಟ್ ಫಿಕ್ಸ್ ಮಾಡ್ತೇವೆ ಎಂದು ಹೇಳಿದ್ರು.ಆದ್ರೆ ಇದುವರೆಗೂ ಕೂಡ ಯಾವುದೇ ರೀತಿಯ ಅಪರೆಷನ್ ಮಾಡ್ಸಿಲ್ಲ. ಐದು ವಾರಗಳ ಕಾಲ ಪಿಸಿಯೋಥೆರಪಿ ಮಾಡಿ ಕೊನೆಯ ವಾರದಲ್ಲಿ ಅಪರೇಷನ್ ಮಾಡಿಸಿ ಇನ್ನೂ ಮೂರ್ನಾಲ್ಕು ತಿಂಗಳು ವಿಶ್ರಾಂತಿ ‌ಬೇಕಾಗಿದೆ ಎಂದು ರಿಪೋರ್ಟ್ ನೀಡಿ ಮತ್ತೆ‌ ಮಧ್ಯಂತರ ಜಾಮೀನು ಅವದಿಯನ್ನು ವಿಸ್ತರಣೆ ಮಾಡೋ ಪ್ಲಾನ್ ಮಾಡಿದ್ದಾರೆ ಅನ್ನೋದು ಒಂದು ಮೂಲಗಳ ಮಾಹಿತಿ.

ಇದನ್ನೂ ಓದಿ:ನಗಿಸಿ, ನಗುತ್ತಾ, ಹಾಡುತ್ತ ನಲಿಯುತ್ತಿದ್ದ ಈ ಸ್ಟಾರ್ ಹೀರೋಯಿನ್‌ಗೆ ಅಪರೂಪದ ಖಾಯಿಲೆ..!

ಇದರ ಬೆನ್ನಲ್ಲೇ ರೆಗ್ಯೂಲರ್ ಬೇಲ್ ಗೆ ಅರ್ಜಿ ಹಾಕಿದ್ದು ಒಂದು ವೇಳೆ ಬೇಲ್ ರಿಜೆಕ್ಟ್ ಆದ್ರೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಬೇಕು ಅಲ್ಲಿಯವರೆಗೂ ಕೂಡ ಕಾಯಬೇಕು. ಇತ್ತ ಮಧ್ಯಂತರ ಬೇಲ್ ಅವಧಿ ಮುಗಿದ ಕೂಡಲೇ ಬಳ್ಳಾರಿ ಜೈಲಿಗೆ ಹೋಗಲೇಬೇಕು. ಜೈಲಿಗೆ ಹೋಗುವುದನ್ನು ತಪ್ಪಿಸಲು ದರ್ಶನ್, ಕುಟುಂಬಸ್ಥರು ಹಾಗೂ ಡಾಕ್ಟರ್ಸ್ ಕೊಟ್ಟ ಸ್ಕ್ರಿಪ್ಟ್ ನಲ್ಲಿ ಆಕ್ಟ್ ಮಾಡ್ತಿದ್ದಾರಾ ಅನ್ನೋ ಅನುಮಾನ ಮೂಡುತ್ತಿದೆ.

ಕಾಮಾಕ್ಷಿಪಾಳ್ಯ ಪೊಲೀಸ್ರು ಹೆಚ್ಚುವರಿ ಚಾರ್ಜ್ ಶೀಟ್ ನ ಕೋರ್ಟ್ ಗೆ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ. ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊಲೆ ನಡೆದ ಸ್ಥಳದ ಎರಡು ಫೋಟೋಗಳನ್ನು ಪ್ರತ್ಯಕ್ಷದರ್ಶಿ ಮೊಬೈಲ್ ನಿಂದ ರಿಕವರಿ ಮಾಡಿಸಿದ್ದಾರೆ. ಪುನೀತ್ ಮೊಬೈಲ್ ಅಲ್ಲಿ ಎರಡು ಫೋಟೋ ರಿಕವರಿಯಾಗಿದ್ದು, ಕೊಲೆ ನಡೆದ ಶೆಡ್ ನಲ್ಲಿ ಎಲ್ಲರ ಜೊತೆ ನಿಂತಿರೋ ದರ್ಶನ್ ಬ್ಲೂ ಟೀ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ನಲ್ಲಿ ಇರೋ ಫೋಟೋ ರಿಕವರಿಯಾಗಿದೆ.

ಇದನ್ನೂ ಓದಿ:Bigg Boss ಮನೆಗೆ ಮತ್ತೆ ಮೂರು ವೈಲ್ಡ್ ಕಾರ್ಡ್ ಎಂಟ್ರಿ !ಮೂವರು ನಟಿಯರ ಪ್ರವೇಶದೊಂದಿಗೆ ಗ್ಲಾಮರಸ್ ಲೋಕವಾದ ದೊಡ್ಮನೆ

ಘಟನೆ ಬಳಿಕ ಎರಡು ಫೋಟೋಗಳನ್ನು ಪುನೀತ್ ಡಿಲೀಟ್ ಮಾಡಿದ್ದ. ಪುನೀತ್ ಮೊಬೈಲ್ ವಶಕ್ಕೆ ಪಡೆದು ಎಫ್ ಎಸ್ ಎಲ್ ಗೆ ರವಾನೆ ಮಾಡಲಾಗಿತ್ತು. ಸದ್ಯ ಸೀಜ್ ಮಾಡಿದ್ದ ಎರಡು ಮೊಬೈಲ್ ಹಾಗೂ ಫೋಟೋ ಗಳನ್ನ ದೋಷಾರೋಪ ಪಟ್ಟಿಯಲ್ಲಿ ಎರಡು ಫೋಟೋಗಳನ್ನ ಸೇರಿಸಲಾಗಿದೆ. ಇನ್ನೇನು ಸೋಮವಾರದ ಒಳಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ ಪೋಲಿಸರು.

ಒಟ್ಟಿನಲ್ಲಿ ನಟ ದರ್ಶನ್ ಆರು ವಾರಗಳ ಮಧ್ಯಂತರ ಬೇಲ್ ಒಳಗೆ ಹೇಗಾದರೂ ಮಾಡಿ ರೆಗ್ಯೂಲರ್ ಬೇಲ್ ಪಡೆಯಲು ಪ್ರಯತ್ನ ಮಾಡ್ತಿದ್ರೆ. ಇತ್ತ ಎಸ್ ಪಿಪಿ ಮಧ್ಯಂತರ ಜಾಮೀನು ರದ್ದು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.ಅಲ್ಲದೇ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸೋದಕ್ಕೆ ಪೊಲೀಸರು ಮುಂದಾಗಿದ್ದಾರೆ‌. ರೇಣುಕಾಸ್ವಾಮಿ ಕೊಲೆ ಕೇಸ್ ಇಂಟರ್ವಿಲ್ ಗೆ ಬಂದು ನಿಂತಿದ್ದು,  ಕ್ಲೈಮ್ಯಾಕ್ಸ್ ಏನಾಗುತ್ತೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News