ವಿಷದ ಬಾಟಲಿ ತಂದೋನಿಗೆ ಡಿಸಿ ಕ್ಲಾಸ್‌..!

  • Zee Media Bureau
  • Jun 22, 2022, 05:47 PM IST

ವಿಷದ ಬಾಟಲಿ ತಗೊಂಡು ಡಿಸಿ ಬಳಿ ಬಂದ ಸಂಘಟನೆಯ ಮುಖಂಡನೊಬ್ಬನಿಗೆ ಕಲಬುರಗಿ ಜಿಲ್ಲಾಧಿಕಾರಿ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.. ಡ್ರಾಮಾ ಎಲ್ಲಾ ಮಾಡಬೇಡ.. ಗೆಟ್ ಔಟ್ ಎಂದು ಗದರಿಸಿ ಕಳುಹಿಸಿದ್ದಾರೆ.. ಅಫಜಲಪುರ ತಾಲೂಕಿನ ಗೌರ ಬಿ ಗ್ರಾಮ ಪಂಚಾಯತಿಯ ನಾಲ್ವರು ನಿವೃತ್ತ ಬಿಲ್ ಕಲೆಕ್ಟರ್‌ಗಳ ಬಾಕಿ ವೇತನಕ್ಕೆ ಆಗ್ರಹಿಸಿ CITU ಮುಖಂಡ ಶ್ರೀಮಂತ ಬಿರಾದಾರ ಡಿಸಿ ಭೇಟಿ ಮಾಡಿದ್ದಾರೆ. ಕೈಯಲ್ಲೊಂದು ವಿಷದ ಬಾಟಲಿ, ಹೂವಿನ ಹಾರ ತೆಗೆದುಕೊಂಡು ಹೋಗಿ ವೇತನ ಕೊಡಿ ಇಲ್ಲವೇ ವಿಷ ಕೊಡಿ ಎಂದು ಡಿಸಿ ಅವರ ಮುಂದೆ ಹೇಳಿದ್ದಾರೆ. ಈ ವೇಳೆ ಡಿಸಿ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ಕೊಡ್ತಾ ಇದ್ದೀಯಾ ನಿನ್ನ ಮೇಲೆ ಕೇಸ್ ಹಾಕಬೇಕಾಗುತ್ತೆ ಗೆಟ್ ಔಟ್ ಎಂದು ಆವಾಜ್ ಹಾಕಿದ್ದಾರೆ..

Trending News