ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಅಪಾಯಕಾರಿ ವೈರಸ್ ಇರಬಹುದು!: ಹೀಗೆ ಮಾಡಿದರೆ ಅಪಾಯವಿಲ್ಲ

ಸ್ಮಾರ್ಟ್‌ಫೋನ್ ನಲ್ಲಿರುವ ಸೂಕ್ಷ್ಮಜೀವಿಗಳು ಮತ್ತು ವೈರಸ್‌ಗಳು ನಮ್ಮ ದೇಹವನ್ನು ಸೇರಿಕೊಂಡು ಅನಾರೋಗ್ಯವನ್ನುಂಟು ಮಾಡುತ್ತವೆ. ಕೋವಿಡ್-19 ನಂತರಹ ಮಾರಕ ರೋಗಕ್ಕೂ ತುತ್ತಾಗುವ ಸಾಧ್ಯತೆಯೂ ಇರುತ್ತದೆ.

Written by - Puttaraj K Alur | Last Updated : Nov 6, 2021, 07:10 AM IST
  • ಅತಿಯಾಗಿ ಸ್ಮಾರ್ಟ್‌ಫೋನ್ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ
  • ಸ್ಮಾರ್ಟ್‌ಫೋನ್ ಸ್ವಚ್ಛಗೊಳಿಸದೆ ಬಳಸಿದರೆ ನಮಗೆ ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗಬಹುದು
  • ಸ್ಮಾರ್ಟ್‌ಫೋನ್ ಬಳಕೆ ಜೊತೆಗೆ ನಮ್ಮ ಆರೋಗ್ಯದ ಬಗ್ಗೆಯೂ ನಾವು ಗಮನಹರಿಸಬೇಕಾಗಿದೆ
ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಅಪಾಯಕಾರಿ ವೈರಸ್ ಇರಬಹುದು!: ಹೀಗೆ ಮಾಡಿದರೆ ಅಪಾಯವಿಲ್ಲ title=
ಸ್ಮಾರ್ಟ್‌ಫೋನ್ ನಿಂದ ಅಪಾಯಕಾರಿ ಕಾಯಿಲೆ

ನವದೆಹಲಿ: ಇಂದು ನಾವೆಲ್ಲರೂ ಮಲಗುವವರೆಗೂ ಸ್ಮಾರ್ಟ್‌ಫೋನ್‌(Smartphone)ಗಳನ್ನು ಬಳಸುತ್ತಿರುತ್ತೇವೆ. ನಾವು ಹೊರಗಡೆ ಎಲ್ಲಿಗೆ ಹೋದರೂ ನಮ್ಮ ಜೊತೆ ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ನಾವು ಸ್ಮಾರ್ಟ್‌ಫೋನ್ ಅನ್ನು ಅತಿಯಾಗಿ ಬಳಸುವುದಕ್ಕೆ ಅಡಿಕ್ಟ್ ಆಗಿದ್ದೇವೆ. ಸ್ಮಾರ್ಟ್‌ಫೋನ್ ಇಲ್ಲದೆ ನಮ್ಮ ಜೀವನವೇ ನಡೆಯುದಿಲ್ಲವೆನ್ನುವಷ್ಟರ ಮಟ್ಟಿಗೆ ನಾವು ಬದುಕುತ್ತಿದ್ದೇವೆ. ಅತಿಯಾಗಿ ಸ್ಮಾರ್ಟ್‌ಫೋನ್ ಬಳಸುವುದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಇದು ಗೊತ್ತಿದ್ದರೂ ನಾವು ಸ್ಮಾರ್ಟ್‌ಫೋನ್ ಬಳಕೆಯ ದಾಸರಾಗಿದ್ದೇವೆ.

ಅತಿಯಾಗಿ ಸ್ಮಾರ್ಟ್‌ಫೋನ್ ಬಳಸುವುದು ಅಪಾಯವನ್ನು ನಾವೇ ತಂದುಕೊಂಡಂತೆ. ಏಕೆಂದರೆ ಈ ಸಾಧನಗಳಲ್ಲಿ ಸಾವಿರಾರು ಸೂಕ್ಷ್ಮಜೀವಿಗಳು(Bacteria On Smartphone) ಇರುತ್ತವಂತೆ. ಹೀಗಾಗಿ ನೀವು ನಿಮ್ಮ ಫೋನ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸ್ಮಾರ್ಟ್‌ಫೋನ್ ನಲ್ಲಿರುವ ವೈರಸ್ ನಿಮಗೆ ಅನಾರೋಗ್ಯವನ್ನುಂಟು ಮಾಡಬಹುದು. ಸ್ಮಾರ್ಟ್‌ಫೋನ್  ಒಂದು ರೀತಿ ನಾವೇ ರೋಗಗಳನ್ನು ಆಹ್ವಾನಿಸಿದಂತೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಮಾತ್ರ ಸಂಭಾವ್ಯ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಇದರ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ.    

ಇದನ್ನೂ ಓದಿ: Whatsapp Trick: WhatsApp ಸ್ಟೇಟಸ್ ಡೌನ್‌ಲೋಡ್ ಮಾಡುವುದು ಹೇಗೆಂದು ತಿಳಿಯಿರಿ

ಸ್ಮಾರ್ಟ್‌ಫೋನ್ ನಿಂದ ಅಪಾಯಕಾರಿ ಕಾಯಿಲೆ

ನಮ್ಮ ಸ್ಮಾರ್ಟ್‌ಫೋನ್ ನಮಗೆ ಅಪಾಯಕಾರಿ ಕಾಯಿಲೆ(Illness By Bacteria)ಗಳನ್ನು ತರುತ್ತದೆ. ನಾವು ಎಲ್ಲಿಗೆ ಹೋದರೂ ಜೊತೆಗೆ ಸ್ಮಾರ್ಟ್‌ಫೋನ್ ಕೊಂಡೊಯ್ಯುತ್ತೇವೆ. ಅನೇಕ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ನಾವು ಕೈ ತೊಳೆಯದೆ ಸ್ಮಾರ್ಟ್‌ಫೋನ್ ಬಳಸುತ್ತೇವೆ. ಈ ರೀತಿ ಮಾಡುವುದರಿಂದ ಸ್ಮಾರ್ಟ್‌ಫೋನ್ ನಲ್ಲಿರುವ ಸೂಕ್ಷ್ಮಜೀವಿಗಳು ಮತ್ತು ವೈರಸ್‌ಗಳು ನಮ್ಮ ದೇಹವನ್ನು ಸೇರಿಕೊಂಡು ಅನಾರೋಗ್ಯವನ್ನುಂಟು ಮಾಡುತ್ತವೆ. ಕೋವಿಡ್-19 ನಂತರಹ ಮಾರಕ ರೋಗಕ್ಕೂ ತುತ್ತಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅತಿಮುಖ್ಯ.    

ಮಾರಕ ವೈರಸ್ ನಿಂದ ಪಾರಾಗುವುದು ಹೇಗೆ?   

ನೀವು ಹೊರಗಡೆ ಸುತ್ತಾಡಿಕೊಂಡು ಮನೆಗೆ ಬಂದಿದ್ದರೆ ನಿಮ್ಮ ಕೈ, ಮುಖ ಮತ್ತು ಬಾಯಿಯನ್ನು ಸ್ವಚ್ಛವಾಗಿ ತೊಳೆಯಬೇಕು. ಇದರ ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್(Smartphone) ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಸಚ್ಛಗೊಳಿಸಬೇಕು. ನಿಮ್ಮ ಸ್ಮಾರ್ಟ್‌ಫೋನ್ ಸೋಂಕುರಹಿತವಾಗಿರುವುದನ್ನು ಖಚಿತಪಡಿಸಿಕೊಂಡು ಬಳಕೆ ಮಾಡಬೇಕು. ಇದನ್ನು ಪ್ರತಿದಿನವೂ ಪಾಲಿಸಬೇಕು. ಆದರೆ ಬಹುತೇಕರು ಹೀಗೆ ಮಾಡದೆ ನಿರ್ಲಕ್ಷ್ಯವಹಿಸುತ್ತಾರೆ. ಹೀಗಾಗಿ ಅವರಿಗೆ ಗೊತ್ತಾಗದೆ ಎಷ್ಟೋಸಲ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

ಯಾವಾಗಲೂ ಸ್ಮಾರ್ಟ್‌ಫೋನ್ ಸಚ್ಛಗೊಳಿಸಿ

ಪ್ರತಿದಿನ ನಾವು ಸ್ಮಾರ್ಟ್‌ಫೋನ್ ಬಳಕೆ ಮಾಡುವುದರಿಂದ ಅದರಲ್ಲಿ ಅನೇಕ ಸೂಕ್ಷ್ಮಜೀವಿಗಳು(Bacteria On Smartphone) ಸೇರಿಕೊಂಡಿರುತ್ತವೆ. ಅದನ್ನು ಸ್ವಚ್ಛಗೊಳಿಸದೆ ಹಾಗೆ ಬಳಸಿದರೆ ನಾವು ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಹೀಗಾಗಿ ಸೋಂಕುನಿವಾರಕ ಬಳಸಿ ಫೋನ್ ಅನ್ನು ಪ್ರತಿದಿನವೂ ಸ್ವಚ್ಛಗೊಳಿಸಿ. ಸ್ಯಾನಿಟೈಜ್ ಮಾಡುವ ಮೂಲಕ ಫೋನ್‌ನಲ್ಲಿರುವ ಫಿಂಗರ್‌ಪ್ರಿಂಟ್ ಮತ್ತು ಕೊಳೆಯನ್ನು ಸ್ವಚ್ಛಗೊಳಿಸಿ. ಇದಕ್ಕೆ ಸೋಂಕುನಿವಾರಕ ಸ್ಪ್ರೇ ಬಳಸಿ. ಮೊದಲು ಡ್ರೈ ಮತ್ತು ಕ್ಲೀನ್ ಫೈಬರ್ ನಿಂದ ನಿಮ್ಮ ಫೋನಿನ ಸ್ಕ್ರೀನ್ ಸ್ವಚ್ಛಗೊಳಿಸಿ ಮತ್ತು ನಂತರ ಅದನ್ನು ಒದ್ದೆಯಾದ ಬಟ್ಟೆಯಿಂದ ಕ್ಲೀನ್ ಮಾಡಿ.

ಇದನ್ನೂ ಓದಿ: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಇಲ್ಲದೆ WhatsApp ವೆಬ್ ಅನ್ನು ಬಳಸುವುದು ಹೇಗೆ?

ಸಾಧನವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ

ಸ್ವಚ್ಛಗೊಳಿಸುವಾಗ ಫೋನಿನ ಸ್ಕ್ರೀನ್ ಮೇಲೆ ನೇರವಾಗಿ ಸ್ಯಾನಿಟೈಸರ್ ಅಥವಾ ಸೋಂಕುನಿವಾರಕವನ್ನು ಸಿಂಪಡಿಸಬೇಡಿ. ಅದು ಸ್ಕ್ರೀನ್ ಹಾನಿಗೊಳಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಸ್ವಚ್ಛಗೊಳಿಸಲು ಮೊದಲು ಶುದ್ಧ ಮತ್ತು ಮೃದುವಾದ ಬಟ್ಟೆಯ ಮೇಲೆ ಸೋಂಕುನಿವಾರಕವನ್ನು ಸಿಂಪಡಿಸಿ ಮತ್ತು ಆ ಬಟ್ಟೆಯಿಂದ ನಿಮ್ಮ ಫೋನ್ ಅನ್ನು ಸ್ವಚ್ಛಗೊಳಿಸಿ. ಶೇ.70ರಷ್ಟು ಆಲ್ಕೋಹಾಲ್ ಆಧಾರಿತ ಸೋಂಕುನಿವಾರಕವನ್ನು ಬಳಸಲು ಪ್ರಯತ್ನಿಸಿ.

ಫೋನ್ ಆಫ್ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್(Laptop) ಅಥವಾ ಇತರ ಯಾವುದೇ ಸಾಧನವನ್ನು ನೀವು ಸ್ವಚ್ಛಗೊಳಿಸುವಾಗ ಅವುಗಳನ್ನು ಸ್ವಿಚ್ ಆಫ್ ಮಾಡಿ. ಫೋನ್ ಚಾರ್ಜ್ ಆಗುತ್ತಿರುವಾಗ ಅದನ್ನು ಸ್ವಚ್ಛಗೊಳಿಸಬೇಡಿ. ಇಲ್ಲದಿದ್ದರೆ ಸಾಧನದಲ್ಲಿ ತೇವಾಂಶ ಹೆಚ್ಚಾಗಿ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸಿ.   

ಸ್ಮಾರ್ಟ್‌ಫೋನ್ ಕವರ್ ಸ್ವಚ್ಛಗೊಳಿಸಿ

ನೀವು ಕಾಲಕಾಲಕ್ಕೆ ಸ್ಮಾರ್ಟ್‌ಫೋನ್(Smartphone)ಅನ್ನು ಸ್ವಚ್ಛಗೊಳಿಸುವುದು ಉತ್ತಮ. ಇದರ ಜೊತೆಗೆ ಫೋನ್‌ನ ಕವರ್ ಅನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿ. ಇದು ಕೂಡ ಅವಶ್ಯಕವಾಗಿದೆ, ಏಕೆಂದರೆ ಕವರ್‌ನಲ್ಲಿ ಅನೇಕ ಸೂಕ್ಷ್ಮಾಣುಗಳು ಇರುತ್ತವೆ. ಆದ್ದರಿಂದ ಫೋನಿನ ಕವರ್ ಅನ್ನು ಕೂಡ ಸ್ವಚ್ಛಗೊಳಿಸಿದರೆ ನೀವು ನಿಶ್ಚಿಂತೆಯಿಂದ ಇರಬಹುದು.   

ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಆರಾಮವಾಗಿ ನಿಮ್ಮ ಫೋನ್ ಅನ್ನು ಸೂಕ್ಷ್ಮಜೀವಿಗಳಿಂದ ದೂರವಿಡಬಹುದು. ಹೀಗೆ ಮಾಡುವುದರಿಂದ ನೀವು ಅನೇಕ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News