ದೀಪಾವಳಿಗೆ ಉಚಿತವಾಗಿ ಸಿಗುತ್ತಿದೆ ಸ್ಮಾರ್ಟ್ ಫೋನ್, ಸ್ಮಾರ್ಟ್ ಟಿವಿ ಈ ಕಂಪನಿ ನೀಡುತ್ತಿದೆ ಸುವರ್ಣಾವಕಾಶ

Xiaomi Tech Shubh Muhurat festive sale:ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Xiaomi ಇದೀಗ ಹೊಸ ಫೋನ್ ಅಥವಾ ಗ್ಯಾಜೆಟ್ ಖರೀದಿಸದಂತೆ ಗ್ರಾಹಕರಿಗೆ ಸೂಚಿಸಿದೆ. ಯಾಕೆಂದರೆ ಕಂಪನಿ ಗ್ರಾಹಕರಿಗೆ ಉಚಿತ ಟಿವಿ ಮತ್ತು ಸ್ಮಾರ್ಟ್ ಫೋನ್ ಪಡೆಯುವ ಅವಕಾಶವನ್ನು ನೀಡುತ್ತಿದೆ. 

Written by - Ranjitha R K | Last Updated : Sep 15, 2022, 01:26 PM IST
  • Xiaomi ಗ್ರಾಹಕರಿಗೆ ನೀಡುತ್ತಿದೆ ವಿಶೇಷ ಅವಕಾಶ
  • ಗ್ರಾಹಕರಿಗೆ ಸಿಗಲಿದೆ ಉಚಿತ ಟಿವಿ, ಸ್ಮಾರ್ಟ್ ಫೋನ್
  • ಸೆ . 20 ರಿಂದ ಆರಂಭವಾಗಲಿದೆ ಸೇಲ್
ದೀಪಾವಳಿಗೆ  ಉಚಿತವಾಗಿ ಸಿಗುತ್ತಿದೆ ಸ್ಮಾರ್ಟ್ ಫೋನ್, ಸ್ಮಾರ್ಟ್ ಟಿವಿ  ಈ ಕಂಪನಿ ನೀಡುತ್ತಿದೆ ಸುವರ್ಣಾವಕಾಶ  title=
Xiaomi Tech Shubh Muhurat festive sale (file photo)

Xiaomi Tech Ka Shubh Muhurat festive sale : ಹಬ್ಬದ ದಿನಗಳು ಸಮೀಪಿಸುತ್ತಿವೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ಇ-ಕಾಮರ್ಸ್ ಸೈಟ್‌ಗಳು ಆಫರ್ ಗಳ  ಮೇಲೆ ಆಫರ್ ನೀಡುತ್ತಿವೆ. ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡುವ ಮೂಲಕ ಖರೀದಿದಾರರನ್ನು ಆಕರ್ಷಿಸುತ್ತಿವೆ. ಮತ್ತೊಂದೆಡೆ, ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Xiaomi ಇದೀಗ ಹೊಸ ಫೋನ್ ಅಥವಾ ಗ್ಯಾಜೆಟ್ ಖರೀದಿಸದಂತೆ ಗ್ರಾಹಕರಿಗೆ ಸೂಚಿಸಿದೆ. ಯಾಕೆಂದರೆ ಕಂಪನಿ ಗ್ರಾಹಕರಿಗೆ ಉಚಿತ ಟಿವಿ ಮತ್ತು ಸ್ಮಾರ್ಟ್ ಫೋನ್ ಪಡೆಯುವ ಅವಕಾಶವನ್ನು ನೀಡುತ್ತಿದೆ. ಈ ರೀತಿಯಾಗಿ ಬ್ರ್ಯಾಂಡ್ ತನ್ನ ಮುಂಬರುವ ಸೇಲ್ ನ  ಜಾಹೀರಾತುನೀಡುತ್ತಿದೆ.  

ಸೆಪ್ಟೆಂಬರ್ 20 ರಿಂದ ಪ್ರಾರಂಭವಾಗಲಿದೆ ಸೇಲ್ : 
Xiaomi ಯ 'ಟೆಕ್ ಕಾ ಶುಭ್ ಮುಹೂರ್ತ' ಸೇಲ್ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದಕ್ಕೂ ಮೊದಲು ಕಂಪನಿ 'ಡೋಂಟ್ ಬೈ ಟೇಕ್  ಎಟ್ " ಹ್ಯಾಶ್‌ಟ್ಯಾಗ್ ನ ಜಾಹೀರಾತು  ನೀಡುತ್ತಿದೆ. ಈ ಮೂಲಕ ಹಬ್ಬದ ಸಂದರ್ಭದಕ್ಕಿ ಕಂಪನಿ ನಡೆಸುವ ಸೇಲ್ ಗೆ ಹೆಚ್ಚಿನ ಬಳಕೆದಾರರನ್ನು ಆಕರ್ಷಿಸುತ್ತಿದೆ. ದೀಪಾವಳಿಯ ಮೊದಲು ಕಂಪನಿಯು ದೊಡ್ಡ ಮಟ್ಟದ ಸೇಲ್ ನಡೆಸಲಿದೆ. ಭಾರತದಲ್ಲಿ ಸೆಪ್ಟೆಂಬರ್ 20 ರಿಂದ ಈ ಸೇಲ್ ಪ್ರಾರಂಭವಾಗಲಿದೆ. 

ಇದನ್ನೂ ಓದಿ : Budget Smartphone: ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯ ಹೊಂದಿರುವ 5G ಸ್ಮಾರ್ಟ್‌ಫೋನ್!

ಅನೇಕ ಉತ್ಪನ್ನಗಳ ಮೇಲೆ ಸಿಗಲಿದೆ ಭಾರಿ ರಿಯಾಯಿತಿ :
ಈ ಸೇಲ್ ನಲ್ಲಿ ಫೋನ್‌ಗಳು ಮಾತ್ರವಲ್ಲದೆ ಹೆಚ್ಚಿನ ಗ್ಯಾಜೆಟ್‌ಗಳ ಮೇಲೆ ಕೂಡಾ ರಿಯಾಯಿತಿ ಸಿಗಲಿದೆ ಎನ್ನಲಾಗಿದೆ.  ಕಂಪನಿಯ ವೆಬ್‌ಸೈಟ್ ಪ್ರಕಾರ, ಮಾರಾಟದಲ್ಲಿ ಲಭ್ಯವಿರುವ ಪ್ರಮುಖ ಸಾಧನಗಳೆಂದರೆ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳಾಗಿವೆ.

 ಉಚಿತವಾಗಿ ಸಿಗಲಿದೆ ಫೋನ್ ಮತ್ತು ಟಿವಿ :
ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸೆಪ್ಟೆಂಬರ್ 15 ರಿಂದ ಯಾವೆಲ್ಲ ವಸ್ತುಗಳ ಮೇಲೆ ರಿಯಾಯಿತಿ ಸಿಗಲಿದೆ ಎನ್ನುವುದನ್ನು ಹಚಿಕೊಳ್ಳಲಿದೆ. ಸ್ಪಿನ್ ದಿ ವೀಲ್, ಸೂಪರ್ ಸ್ಲಾಟ್ ಮೆಷಿನ್ ಮತ್ತು ಫೈರ್‌ಕ್ರ್ಯಾಕರ್ ರನ್ ಸ್ಪರ್ಧೆಗಳು ಸಹ ಇಲ್ಲಿರಲಿವೆ. ಇಲ್ಲಿ  ಉಚಿತ Xiaomi ಸ್ಮಾರ್ಟ್ ಟಿವಿಗಳು, Redmi Note 11SE ಯನ್ನು ಗೆಲ್ಲಬಹುದು. ಇದಲ್ಲದೆ, ಹೊಸದಾಗಿ ಬಿಡುಗಡೆಯಾದ Redmi A1 ಮತ್ತು Redmi 11 ಪ್ರೈಮ್ ಸರಣಿಯಂತಹ ಸಾಧನಗಳನ್ನು ಮಾರಾಟದಲ್ಲಿ ಪ್ರಸ್ತುತಪಡಿಸುತ್ತದೆ. 

ಇದನ್ನೂ ಓದಿ : ಇದ್ದಕ್ಕಿದ್ದಂತೆ ಕಡಿಮೆಯಾದ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಬೆಲೆ.! ಹೊಸ ಬೆಲೆ ಕೇಳಿ ಗ್ರಾಹಕರು ಫುಲ್ ಖುಷ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News