Whatsapp ಇನ್ಮುಂದೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವುದಿಲ್ಲ, ಇಲ್ಲಿದೆ ಫುಲ್ ಲಿಸ್ಟ್

ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಎಲ್ಲರ ಜೀವನಾಡಿ ಆಗಿದೆ. ಆದರೆ ಶೀಘ್ರದಲ್ಲೇ ಈ ಆಪ್ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವುದಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ ಈ ಪಟ್ಟಿಯಲ್ಲಿ ಇಲ್ಲವೇ ಎಂದು ತಿಳಿಯಲು ನೀವು ಬಯಸಿದರೆ, ಇದನ್ನು ಓದಿ...

Written by - Yashaswini V | Last Updated : Sep 6, 2021, 09:53 AM IST
  • ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ WhatsApp ಅನ್ನು ಶೀಘ್ರದಲ್ಲೇ ನಿಷೇಧಿಸಲಾಗುವುದು
  • 40 ಸ್ಮಾರ್ಟ್‌ಫೋನ್‌ಗಳಿಗೆ WhatsApp ಬೆಂಬಲ ಸಿಗುವುದಿಲ್ಲ
  • ಎರಡು ತಿಂಗಳ ನಂತರ ಯಾವ ಸ್ಮಾರ್ಟ್‌ಫೋನ್‌ಗಳಲ್ಲಿ WhatsApp ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಯಿರಿ
Whatsapp ಇನ್ಮುಂದೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವುದಿಲ್ಲ, ಇಲ್ಲಿದೆ ಫುಲ್ ಲಿಸ್ಟ್ title=
Whatsapp latest update

ನವದೆಹಲಿ: ಇಂದಿನ ದಿನಗಳಲ್ಲಿ, ವಾಟ್ಸಾಪ್ (Whatsapp) ಅನ್ನು ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡದ ಯಾವುದೇ ವ್ಯಕ್ತಿ ಇಲ್ಲ. ವಾಟ್ಸಾಪ್ ಅಂತಹ ಒಂದು ಮೆಸೇಜಿಂಗ್ ಆಪ್ ಆಗಿದ್ದು ಅದು ಪ್ರತಿ ವಯಸ್ಸು ಮತ್ತು ಪ್ರತಿಯೊಂದು ರೀತಿಯ ಬಳಕೆದಾರರಿಗೂ ಆಕರ್ಷಕವಾಗಿದೆ. ಇಂದು, ಸಂಬಂಧಿಕರು ಮತ್ತು ಸ್ನೇಹಿತರು ದೂರ ಉಳಿದ ನಂತರವೂ ಪರಸ್ಪರ ಸಂಪರ್ಕ ಹೊಂದಿದ್ದರೆ, ಅದಕ್ಕೆ ವಾಟ್ಸಾಪ್ ಒಂದು ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಆದರೆ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಅನ್ನು ನಿಷೇಧಿಸುತ್ತದೆ ಎಂದು ಹೇಳಲಾಗುತ್ತಿದೆ. ಅದರ ಬಗ್ಗೆ ಪ್ರಮುಖ ಮಾಹಿತಿಯನ್ನು ತಿಳಿಯೋಣ....

ವಾಟ್ಸಾಪ್ ಅನ್ನು ಏಕೆ ನಿಷೇಧಿಸಬಹುದು? 
ಆಂಡ್ರಾಯ್ಡ್ 4.0.4 ಅಥವಾ ಅದಕ್ಕಿಂತ ಮುಂಚಿನ ಆಂಡ್ರಾಯ್ಡ್ (Android) ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳು ವಾಟ್ಸಾಪ್ ರನ್ ಮಾಡುವುದನ್ನು ನಿಲ್ಲಿಸುತ್ತವೆ ಮತ್ತು ಬಳಕೆದಾರರು ಇನ್ನು ಮುಂದೆ ತಮ್ಮ ಫೋನ್‌ಗಳಲ್ಲಿ ವಾಟ್ಸಾಪ್ ಚಾಟ್ (Whatsapp Chat) ಗಳನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದು ವರದಿ ಆಗಿದೆ. ಇನ್ನು ಆಪಲ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೇಳುವುದಾದರೆ, ಐಒಎಸ್ 9 ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಐಫೋನ್‌ಗಳು ಬೂಟ್ ಔಟ್ ಆಗುತ್ತವೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Whatsapp Alert : ಈ ಫೀಚರ್ ನಿಂದ ಕಳುವಾಗಲಿದೆ ಎಲ್ಲಾ ಡಾಟಾ, ಈ ರೀತಿ ಬಳಸಿಕೊಳ್ಳುತ್ತಾರೆ Hacker

ಈ ಸ್ಮಾರ್ಟ್‌ಫೋನ್‌ಗಳಲ್ಲಿ WhatsApp ಬೆಂಬಲ ಲಭ್ಯವಿರುವುದಿಲ್ಲ  :
ಆಪಲ್ ಐಒಎಸ್ (iOS) ಮತ್ತು ಆಂಡ್ರಾಯ್ಡ್, ಎರಡೂ ಆಪರೇಟಿಂಗ್ ಸಿಸ್ಟಮ್‌ಗಳ ಜೊತೆಯಲ್ಲಿ, ವಾಟ್ಸಾಪ್ ಸಪೋರ್ಟ್ ಶೀಘ್ರದಲ್ಲೇ ನಿಲ್ಲುತ್ತದೆ. ಅಂದರೆ, ಈ ಸ್ಮಾರ್ಟ್‌ಫೋನ್‌ಗಳಲ್ಲಿ (Smartphones) ವಾಟ್ಸಾಪ್ ಅನ್ನು ನಿಷೇಧಿಸಲಾಗುವುದು. ಈ ಸ್ಮಾರ್ಟ್‌ಫೋನ್‌ಗಳಲ್ಲಿ  ಸ್ಯಾಮ್ ಸಂಗ್ ಗ್ಯಾಲಕ್ಸಿ S3 ಮಿನಿ, ಸ್ಯಾಮ್ ಸಂಗ್ ಟ್ರೆಂಡ್ II, ಸ್ಯಾಮ್ ಸಂಗ್ ಟ್ರೆಂಡ್ ಲೈಟ್, ಸ್ಯಾಮ್ ಸಂಗ್ ಕೋರ್, ಸ್ಯಾಮ್ ಸಂಗ್ S2, LG Optimus F7, F5, L3 II Dual, F7 II, F5 II, Sony Xperia, Hawaii Ascend Mate, Ascend D2, Apple iPhone ಎಸ್ಇ, 6 ಎಸ್ ಮತ್ತು 6 ಎಸ್ ಪ್ಲಸ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ.

ಇದನ್ನೂ ಓದಿ- Colourful ಆಗಲು ಹೋರಟ WhatsApp, ಈ ಬಳಕೆದಾರರಿಗೆ ಸಿಗಲಿದೆ ಈ ಝಕ್ಕಾಸ್ ವೈಶಿಷ್ಟ್ಯ

ಎರಡು ತಿಂಗಳಲ್ಲಿ ಈ ಫೋನ್‌ಗಳು ವಾಟ್ಸಾಪ್ ಬೆಂಬಲವನ್ನು ಕಳೆದುಕೊಳ್ಳುತ್ತವೆ. ಆದ್ದರಿಂದ ನೀವು ಹೊಸ ಫೋನನ್ನು ಖರೀದಿಸುವ ಅಥವಾ ಸರಿಯಾದ ಪರಿಹಾರವನ್ನು ಕಂಡುಕೊಳ್ಳುವ ಸಮಯ ಇದಾಗಿದೆ. ಇದರಿಂದ ವಾಟ್ಸಾಪ್ ನಿಮ್ಮ ಫೋನ್‌ನಲ್ಲಿ ಕೆಲಸ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News