WhatsApp Upcoming Features: ಬಳಕೆದಾರರ ಚಾಟಿಂಗ್ ಅನುಭವ ಬದಲಿಸಲು ಮುಂದಾದ WhatsApp? ಬಳಕೆದಾರರಿಗೇನು ಲಾಭ?

WhatsApp Upcoming Features: ಈ ವೈಶಿಷ್ಟ್ಯಗಳ ಮೇಲೆ ವಾಟ್ಸಾಪ್ ವೇಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ವೈಶಿಷ್ಟ್ಯಗಳು ಮುಂದಿನ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Written by - Nitin Tabib | Last Updated : Jun 12, 2021, 10:46 PM IST
  • ಬಳಕೆದಾರರ ಅನುಭವ ಹೆಚ್ಚಿಸಲು ವಾಟ್ಸ್ ಆಪ್ ನಿಂದ ವಿನೂತನ ಪ್ರಯೋಗ
  • ಮುಂದಿನ ತಿಂಗಳು ಜಾರಿಯಾಗಲಿವೆ ಈ ನೂತನ ವೈಶಿಷ್ಟ್ಯಗಳು.
  • ಇವುಗಳಲ್ಲಿನ ಕೆಲ ವೈಶಿಷ್ಟ್ಯಗಳು ಪರೀಕ್ಷೆಯ ಹಂತದಲ್ಲಿವೆ.
WhatsApp Upcoming Features: ಬಳಕೆದಾರರ ಚಾಟಿಂಗ್ ಅನುಭವ ಬದಲಿಸಲು ಮುಂದಾದ WhatsApp? ಬಳಕೆದಾರರಿಗೇನು ಲಾಭ? title=
WhatsApp Upcoming Features (File Photo)

WhatsApp Upcoming Features: ವಾಟ್ಸ್ ಆಪ್ ತನ್ನ ಬಳಕೆದಾರರ ಚಾಟಿಂಗ್ ಅನುಭವ ಹೆಚ್ಚಿಸಲು ನಿತ್ಯ ವಿನೂತನ ಪ್ರಯೋಗಗಳನ್ನು ನಡೆಸುತ್ತಲೇ ಇರುತ್ತದೆ. ಇದೆ ಸರಣಿಯಲ್ಲಿ ಇದೀಗ ವಾಟ್ಸ್ ಆಪ್ (WhatsApp) ಹೊಸ ಹಾಗೂ ಅಪ್ಡೇಟೆಡ್ ವೈಶಿಷ್ಟ್ಯಗಳ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಈ ವೈಶಿಷ್ಟ್ಯಗಳಿಂದ ನಿಮ್ಮ ಚಾಟಿಂಗ್ ಅನುಭವ ಮತ್ತಷ್ಟು ಸ್ವಾರಸ್ಯಕರವಾಗಲಿದೆ. ಈ ವೈಶಿಷ್ಟ್ಯಗಳ ಮೇಲೆ ವಾಟ್ಸ್ ಆಪ್ ವೇಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ತಿಂಗಳು ಈ ವೈಶಿಷ್ಟ್ಯಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. 

Disappearing Mode (WhatsApp New Features)
ಈ ವೈಶಿಷ್ಟ್ಯವನ್ನು ಬಳಸಿ ನೀವು  ನಿಮ್ಮ 7 ದಿನಗಳ ಹಳೆಯ ಚಾಟ್‌ಗಳನ್ನು ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳಿಸಬಹುದು. ಆದರೆ ನೀವು ಈ ವೈಶಿಷ್ಟ್ಯವನ್ನು ಆನ್ ಮಾಡದಿದ್ದರೆ, ನಿಮ್ಮ ಚಾಟ್ ಕಣ್ಮರೆಯಾಗುವುದಿಲ್ಲ. ಹಲವು ಬಳಕೆದಾರರು ಈಗಾಗಲೇ ಈ ವೈಶಿಷ್ಟ್ಯವನ್ನು ಪಡೆದುಕೊಂಡಿದ್ದಾರೆ. ಈ ಆಯ್ಕೆಯ ಮೂಲಕ, ವ್ಯಕ್ತಿಯ ಚಾಟ್ ಕಣ್ಮರೆಯಾಗಬಹುದು.

View Once (WhatsApp Latest News)
ವಾಟ್ಸಾಪ್ ವ್ಯೂ ಒನ್ಸ್ ವೈಶಿಷ್ಟ್ಯದ ಮೇಲೂ ಕೂಡ ಕಾರ್ಯನಿರ್ವಹಿಸುತ್ತಿದ್ದು, ಇದು ಹೆಚ್ಚಿನ ಉಪಯೋಗಕ್ಕೆ ಬರಲಿದೆ. ನೀವು ಯಾರಿಗಾದರೂ ವೀಡಿಯೊ, ಫೋಟೋ, ಡಾಕ್ಯುಮೆಂಟ್ ಅಥವಾ ಸಂದೇಶವನ್ನು ಕಳುಹಿಸಿದರೆ, ಈ ವೈಶಿಷ್ಟ್ಯದ ಮೂಲಕ, ನೀವು ಕಳುಹಿಸಿದ ಸಂದೇಶ ಕೇವಲ ಒಂದು ಬಾರಿಗೆ ಕಾಣಿಸಿಕೊಂಡು ಬಳಿಕ ಕಣ್ಮರೆಯಾಗಲಿದೆ. ಈ ವೈಶಿಷ್ಟ್ಯವು ಇನ್‌ಸ್ಟಾಗ್ರಾಮ್‌ನ ಮೆಸೇಜಿಂಗ್ ಅಪ್ಲಿಕೇಶನ್‌ಗೆ ಹೋಲುತ್ತದೆ. ನಿಮ್ಮ ಕಡೆಯಿಂದ ಸಂದೇಶವು ರಿಸೀವರ್ ಬಳಿ ತಲುಪಿದಾಗ ಮತ್ತು ಅವರು ಅದನ್ನು ಒಮ್ಮೆ ನೋಡಿದಾಗ, ನಿಮ್ಮ ಸಂದೇಶ ಕಣ್ಮರೆಯಾಗಲಿದೆ.

ಇದನ್ನೂ ಓದಿ-WhatsApp:ವಾಟ್ಸಾಪ್‌ನಲ್ಲಿ ನಿಮ್ಮ ರಹಸ್ಯ ಚಾಟ್ ಅನ್ನು ಮರೆಮಾಡಬೇಕೆ? ಈ ಟ್ರಿಕ್ ಒಮ್ಮೆ ಟ್ರೈ ಮಾಡಿ

Multi-device Support (WhatsApp Latest Update)
ಈ ವೈಶಿಷ್ಟ್ಯ ಬಳಕೆದಾರರ ಪಾಲಿಗೆ ತುಂಬಾ ಉಪಯುಕ್ತ ಎಂದು ಸಾಬೀತಾಗಲಿದೆ.  ಶೀಘ್ರದಲ್ಲೇ ಬಹು ಸಾಧನ ಬೆಂಬಲ ವೈಶಿಷ್ಟ್ಯವನ್ನು ಬಳಕೆದಾರರಿಗಾಗಿ ಪ್ರಾರಂಭಿಸಲಾಗುತ್ತಿದೆ. ಇದರ ಮೂಲಕ, ನೀವು ಏಕಕಾಲಕ್ಕೆ ಅನೇಕ ಸಾಧನಗಳಲ್ಲಿ ವಾಟ್ಸಾಪ್ ತೆರೆಯಲು ಸಾಧ್ಯವಾಗಳಿದೆ. ಈ ವೈಶಿಷ್ಟ್ಯವು ವೃತ್ತಿಪರ ಜೀವನದಲ್ಲಿ ಬಹಳ ಉಪಯುಕ್ತವೆಂದು ಸಾಬೀತಾಗಲಿದೆ.

ಇದನ್ನೂ ಓದಿ- ಈಗ ಮೊದಲಿಗಿಂತಲೂ ಸೇಫ್ ಆಗಿರಲಿದೆ WhatsApp ಚಾಟ್ ಹೇಗೆ ತಿಳಿಯಿರಿ

App Colour Change (WhatsApp Upcoming Features)
ಬಳಕೆದಾರರ ಚಾಟ್ ಅನುಭವವನ್ನು ಮತ್ತಷ್ಟು ಸ್ವಾರಸ್ಯಕರವಾಗಿಸಲು ಅಪ್ಲಿಕೇಶನ್ ಬಣ್ಣವನ್ನು ಬದಲಾಯಿಸುವ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದು ಕಂಪನಿ ಕಳೆದ ತಿಂಗಳು ಪ್ರಕಟಿಸಿದೆ. ಇದು ಮಾತ್ರವಲ್ಲ, ಬಳಕೆದಾರರು ತಮ್ಮ ಚಾಟ್ ಪಠ್ಯದ ಬಣ್ಣವನ್ನು ಬದಲಾಯಿಸಲು ಸಹ ಸಾಧ್ಯವಾಗಲಿದೆ ಎಂದು ಕಂಪನಿ ಹೇಳಿದೆ. ಇದು ಬಳಕೆದಾರರ ಚಾಟ್ ಸ್ಕ್ರೀನ್ ಅನ್ನು ಸಾಕಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಲಿದ್ದು, ಪ್ರಸ್ತುತ ಇದು ಪರೀಕ್ಷೆಯ ಹಂತದಲ್ಲಿದೆ.

ಇದನ್ನೂ ಓದಿ-Whatsapp call : ವಾಟ್ಸ್ ಆಪ್ ನಲ್ಲಿಯೂ ಒಂದೇ ಸಲ 50 ಜನರಿಗೆ ಕರೆ ಮಾಡಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News