WhatsApp Multi-Device Support Rolled Out: ಬಿಡುಗಡೆಯಾಗಿದೆ ವಾಟ್ಸ್ ಆಪ್ ನ ಈ ಬಹುನಿರೀಕ್ಷಿತ ವೈಶಿಷ್ಟ್ಯ, ನಿಮಗೂ ಸಿಕ್ಕಿದೇಯಾ ಪರೀಕ್ಷಿಸಿ

WhatsApp New Feature - ವಾಟ್ಸ್ ಆಪ್ (WhatsApp) ಬಳಕೆದಾರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಹೌದು, ವಾಟ್ಸ್ ಆಪ್ ತನ್ನ ಬಹು ನಿರೀಕ್ಷಿತ ವೈಶಿಷ್ಟ್ಯ ಬಿಡುಗಡೆಗೊಳಿಸಲು ಆರಂಭಿಸಿದೆ. 

Written by - Nitin Tabib | Last Updated : Jul 15, 2021, 02:45 PM IST
  • ತನ್ನ ಬಳಕೆದಾರರಿಗೆ ಬಹುನಿರೀಕ್ಷಿತ ವೈಶಿಷ್ಟ್ಯ ಬಿಡುಗಡೆಗೊಳಿಸಿದ WhatsApp.
  • ತನ್ನ ಬೀಟಾ ಬಳಕೆದಾರರಿಗೆ Multi-Device Support ನೀಡಿದ WhatsApp.
  • ಕಳೆದ ಬುದವಾರದಿಂದಲೇ ಸಂಸ್ಥೆ ಈ ವೈಶಿಷ್ಟ್ಯ ಬಿಡುಗಡೆಗೊಳಿಸಲು ಆರಂಭಿಸಿದೆ

Trending Photos

WhatsApp Multi-Device Support Rolled Out: ಬಿಡುಗಡೆಯಾಗಿದೆ ವಾಟ್ಸ್ ಆಪ್ ನ ಈ ಬಹುನಿರೀಕ್ಷಿತ ವೈಶಿಷ್ಟ್ಯ, ನಿಮಗೂ ಸಿಕ್ಕಿದೇಯಾ ಪರೀಕ್ಷಿಸಿ title=
WhatsApp Multi-Device Support Feature (Courtesy:Will Cathcart Twitter Handle)

ನವದೆಹಲಿ: WhatsApp New Feature - ವಾಟ್ಸ್ ಆಪ್ (WhatsApp) ಬಳಕೆದಾರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಹೌದು, ವಾಟ್ಸ್ ಆಪ್ ತನ್ನ ಬಹು ನಿರೀಕ್ಷಿತ ವೈಶಿಷ್ಟ್ಯ ಬಿಡುಗಡೆಗೊಳಿಸಲು ಆರಂಭಿಸಿದೆ. ವಾಟ್ಸ್ ಆಪ್ ನ ಈ ನೂತನ ವೈಶಿಷ್ಟ್ಯದ ಹೆಸರು Multi-Device ಸಪೋರ್ಟ್ (WhatsApp Multi-Device Support Feature). ಈ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ಫೋನ್ ಹೊರತುಪಡಿಸಿ, ನಾಲ್ಕು ವಿಭಿನ್ನ ಡಿವೈಸ್ ಗಳ ಮೇಲೆ ನಿಮ್ಮ ವಾಟ್ಸ್ ಆಪ್ ಖಾತೆಯನ್ನು ನಿರ್ವಹಿಸಬಹುದು. ಇದರಲ್ಲಿ ವಿಶೇಷತೆ ಎಂದರೆ, ನಾಲ್ಕು ವಿವಿಧ ಡಿವೈಸ್ ಗಳ ಜೊತೆಗೆ ವಾಟ್ಸ್ ಆಪ್ ಖಾತೆ ಲಿಂಕ್ ಆದರೂ ಕೂಡ ಬಳಕೆದಾರರ ಪ್ರೈವೆಸಿಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಏಕೆಂದರೆ, ವಾಟ್ಸ್ ಆಪ್ ಈ ವೈಶಿಷ್ಟ್ಯವನ್ನು ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಜೊತೆಗೆ ಪ್ರಸ್ತುತಪಡಿಸುತ್ತಿದೆ.

ನಿಮ್ಮ ಸ್ಮಾರ್ಟ್ ಫೋನ್ ಸಕ್ರೀಯವಾಗಿಲ್ಲದಿದ್ದರೂ ಕೂಡ ನೀವು ನಿಮ್ಮ ವಾಟ್ಸ್ ಆಪ್ ಬಳಸಬಹುದು
ಈ ಮಲ್ಟಿ ಡಿವೈಸ್ ಸಪೋರ್ಟ್ ವೈಶಿಷ್ಟ್ಯ ಎಂದರೆ, ಒಂದು ವೇಳೆ ನಿಮ್ಮ ಫೋನ್ ಸಕ್ರೀಯವಾಗಿಲ್ಲದಿದ್ದರೂ ಕೂಡ ಅಥವಾ ಇಂಟರ್ನೆಟ್ ಕನೆಕ್ಟಿವಿಟಿ ಇಲ್ಲದಿದ್ದರೂ ಕೂಡ ನೀವು ಡೆಸ್ಕ್ ಟಾಪ್ ಮೇಲೆ ವಾಟ್ಸ್ ಆಪ್ ಚಾಟಿಂಗ್ ನಡೆಸಬಹುದು. ಆದರೆ, ಬೇರೆ ಡಿವೈಸ್ ಮೇಲೆ ವಾಟ್ಸ್ ಆಪ್ ಬಳಸಲು ಇಂಟರ್ನೆಟ್ ಅವಶ್ಯಕತೆ ಇದೆ. ಕಂಪನಿ ಪ್ರಸ್ತುತ ಈ ವೈಶಿಷ್ಟ್ಯವನ್ನು ಬೀಟಾ ವರ್ಶನ್ ಗಾಗಿ ಮಾತ್ರ ರೋಲ್ಔಟ್ ಮಾಡಿದೆ.

ಟ್ವೀಟ್ ಮೂಲಕ ಮಾಹಿತಿ ನೀಡಿದ ವಿಲ್ ಕೇಥ್ಕಾರ್ಟ್ (WhatsApp Latest News)
ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಿರುವ ವಾಟ್ಸ್ ಆಪ್ ಮುಖ್ಯಸ್ಥ ವಿಲ್ ಕೇಥ್ಕಾರ್ಟ್, ಬೀಟಾ ವರ್ಶನ್ ಗಾಗಿ ಮಲ್ಟಿ-ಡಿವೈಸ್ ಸಪೋರ್ಟ್ ವೈಶಿಷ್ಟ್ಯವನ್ನು ಬಿಡುಗಡೆಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಬಳಕೆದಾರರು ಇನ್ಮುಂದೆ ತಮ್ಮ ಫೋನ್ ಸಕ್ರೀಯವಿಲ್ಲದಿದ್ದಾಗಲು ಕೂಡ ವಾಟ್ಸ್ ಆಪ್ ನ ಡೆಸ್ಕ್ ಟಾಪ್ ಅಥವಾ ವೆಬ್ ಎಕ್ಸ್ಪೀರಿಯನ್ಸ್ ಅನುಭವಿಸಬಹುದು ಎಂದು ಅವರು ಹೇಳಿದ್ದಾರೆ. ಕಳೆದ ಬುಧವಾರದಿಂದಲೇ ಕಂಪನಿ ಈ ಹೊಸ ವೈಶಿಷ್ಟ್ಯವನ್ನು ಬಿಡುಗಡೆಗೊಳಿಸಲು ಆರಂಭಿಸಿದೆ.

ಇದನ್ನೂ ಓದಿ- NASA Study: 9 ವರ್ಷಗಳ ಬಳಿಕ ಚಂದ್ರನ ಸ್ಥಿತಿಯಲ್ಲಿ ಬದಲಾವಣೆ, ಇಡೀ ವಿಶ್ವಕ್ಕೆ ಎದುರಾಗಲಿದೆ ಭಾರಿ ಅಪಾಯ!

ಸ್ಟೇಬಲ್ ವರ್ಶನ್ ಬಳಕೆದಾರರು ಬೀಟಾ ಪ್ರೋಗ್ರಾಮ್ ಗೆ ಸ್ವಿಚ್ ಆಗಬಹುದು
ವಾಟ್ಸ್ ಆಪ್ ನ ಬೀಟಾ ಪ್ರೋಗ್ರಾಮ್ ಭಾಗವಾಗಿರುವ ಬಳಕೆದಾರರಿಗೆ ಮೊದಲು ಕಂಪನಿ ಈ ವೈಶಿಷ್ಟ್ಯವನ್ನು ನೀಡುತ್ತಿದೆ. ಮುಂಬರುವ ದಿನಗಳಲ್ಲಿ ವಾಟ್ಸ್ ಆಪ್ ಸ್ಟೇಬಲ್ ವರ್ಶನ್ ಬಳಕೆದಾರರಿಗೂ ಕೂಡ ಬೀಟಾ ವರ್ಶನ್ ಗೆ ಸ್ವಿಚ್ ಆಗಲು ಕಂಪನಿ ಅವಕಾಶ ನೀಡುವ ಸಿದ್ಧತೆ ನಡೆಸುತ್ತಿದೆ. ಮುಂಬರುವ ದಿನಗಳಲ್ಲಿ ಈ ಆಯ್ಕೆ Linked Devices ಸ್ಕ್ರೀನ್ ನಲ್ಲಿ ನಿಮಗೆ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ-WhatsApp Setting : ನೀವು ಈ ಸೆಟ್ಟಿಂಗ್‌ಗಳನ್ನು WhatsAppನಲ್ಲಿ ಮಾಡಿದ್ದೀರಾ? ತಕ್ಷಣ ಬದಲಾಯಿಸಿ! ಇಲ್ಲದಿದ್ರೆ ಅಪಾಯ

QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಡಿವೈಸ್ ಲಿಂಕ್ ಮಾಡಬಹುದು
ಯಾವ ಬಳಕೆದಾರರ ವಾಟ್ಸ್ ಆಪ್ ನ ಈ ಮಲ್ಟಿ ಡಿವೈಸ್ ಸಪೋರ್ಟ್ ವೈಶಿಷ್ಟ್ಯ ನೀಡಲಾಗಿದೆಯೋ, ಅವರು ತಮ್ಮ ಫೋನ್ ಅಲ್ಲದೆ ಇತರ ಡಿವೈಸ್ ಗಳ ಮೇಲೂ ಕೂಡ ವಾಟ್ಸ್ ಆಪ್ ಆಕ್ಸಸ್ ಮಾಡಬಹುದು. ಇದಕ್ಕಾಗಿ ಅವರು QR Code ಸ್ಕ್ಯಾನ್ ಮಾಡಬೇಕಾಗಲಿದೆ. ಬೇರೆ ಡಿವೈಸ್ ಮೇಲೆ ವಾಟ್ಸ್ ಆಪ್ ಲಿಂಕ್ ಮಾಡಲು ಬಯೋಮೆಟ್ರಿಕ್ ಅನುಮತಿ ಕೂಡ ಬೇಕಾಗಲಿದೆ. ಇದರ ವೈಶಿಷ್ಟ್ಯ ಎಂದರೆ ಬಳಕೆದಾರರು ಯಾವಾಗ ಬೇಕಾದರೂ ಕೂಡ ಲಿಂಕ್ಡ್ ಡಿವೈಸಿಸ್ ಆಯ್ಕೆಯನ್ನು ಬಳಸಿ ಬೇರೆ ಡಿವೈಸ್ ನಿಂದ ಲಾಗ್ ಔಟ್ ಆಗಬಹುದು. ಇದರಿಂದ ಜೋಡಣೆಗೊಂಡ ಡಿವೈಸ್ ಮೇಲೆ ಅವರ ಖಾತೆಯನ್ನು ಕೊನೆಯ ಬಾರಿಗೆ ಯಾವಾಗ ವೀಕ್ಷಿಸಲಾಗಿದೆ ಎಂಬುದೂ ಕೂಡ ತಿಳಿಯಲಿದೆ.

ಇದನ್ನೂ ಓದಿ- Whatsapp Story: ನಿಮ್ಮ ವಾಟ್ಸಾಪ್ ಸ್ಟೋರಿಯನ್ನು ಯಾರಾದರೂ ಡೌನ್‌ಲೋಡ್ ಮಾಡಬಹುದು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News