WhatsApp ಕದಿಯುತ್ತಿದೆ Facebookನ ಈ ಅದ್ಭುತ ವೈಶಿಷ್ಟ್ಯ

WhatsApp New Update - ವಾಟ್ಸ್ ಆಪ್ ಅಪ್ಡೇಟ್ ಗಳು ದಿನದಿಂದ ದಿನಕ್ಕೆ ತುಂಬಾ ಸ್ವಾರಸ್ಯಕರವಾಗುತ್ತಿವೆ. ವರದಿಗಳ ಪ್ರಕಾರ ವಾಟ್ಸ್ ಆಪ್ ತರಲು ಹೊರಟಿರುವ ಮುಂದಿನ ವೈಶಿಷ್ಟ್ಯ ಜನರಿಗೆ ಭಾರಿ ಖುಷಿ ಕೊಡಲಿದೆ ಎನ್ನಲಾಗಿದೆ. ಹೌದು, ತನ್ನ ಮುಂದಿನ ಅಪ್ಡೇಟ್ ನಲ್ಲಿ ವಾಟ್ಸ್ ಆಪ್ ಸಂದೇಶ ಪ್ರತಿಕ್ರಿಯೆ ಜಾರಿಗೊಳಿಸುತ್ತಿದೆ. ಯಾವುದು ಈ ಹೊಸ ಅಪ್ಡೇಟ್ ಮತ್ತು ಏನದರ ವೈಶಿಷ್ಟ್ಯ ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Aug 28, 2021, 12:05 PM IST
  • ತನ್ನ ಮುಂದಿನ ಅಪ್ಡೇಟ್ ನಲ್ಲಿ ವಾಟ್ಸ್ ಆಪ್ ತರುತ್ತಿದೆ ಮೆಸೇಜ್ ರಿಯಾಕ್ಷನ್ ವೈಶಿಷ್ಟ್ಯ
  • ಇನ್ಸ್ಟಾಗ್ರಾಮ್ ರೀತಿಯ ಇನ್ಮುಂದೆ ನೀವು ವಾಟ್ಸ್ ಆಪ್ ನಲ್ಲಿಯೂ ಕೂಡ ಬರುವ ಸಂದೇಶಗಳಿಗೆ ಇಮೊಜಿ ಬಳಸಿ ಪ್ರತಿಕ್ರಿಯೆ ನೀಡಬಹುದು.
  • ಈ ವೈಶಿಷ್ಟ್ಯ ಮೊದಲು ಅಂಡ್ರಾಯಿಡ್ ಬಳಕೆದಾರರಿಗೆ ಮೊದಲು ಹಾಗೂ iOS ಬಳಕೆದಾರರಿಗೆ ನಂತರ ಜಾರಿಯಾಗಲಿದೆ.
WhatsApp ಕದಿಯುತ್ತಿದೆ Facebookನ ಈ ಅದ್ಭುತ ವೈಶಿಷ್ಟ್ಯ title=
WhatsApp New Update (File Photo)

WhatsApp New Update - ನವದೆಹಲಿ: ವಾಟ್ಸಾಪ್ ಇಂದು ವಿಶ್ವದಲ್ಲಿಯೇ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆಪ್‌ಗಳಲ್ಲಿ ಒಂದಾಗಿದೆ. ವಾಟ್ಸಾಪ್ ಪ್ರತಿ ಅಪ್‌ಡೇಟ್‌ನಲ್ಲೂ ಆಪ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಇದರಿಂದ ಅದ್ರ ಜನಪ್ರಿಯತೆಯಲ್ಲಿ ಯಾವುದೇ  ರೀತಿಯ ಕೊರತೆ ಎದುರಾಗುತ್ತಿಲ್ಲ, ವಾಟ್ಸಾಪ್ ಮೂಲಕ ಪಾವತಿ ಮಾಡುವ ಸೌಲಭ್ಯ ಮತ್ತು ನಿಮ್ಮದೇ ಆದ ವೀಡಿಯೊ ಕರೆಗಳಿಗೆ ಸೇರಿಕೊಳ್ಳುವುದು ವಾಟ್ಸಾಪ್‌ನ ಕೆಲವು ಹೊಸ ವೈಶಿಷ್ಟ್ಯಗಳಾಗಿವೆ. ಇತ್ತೀಚಿನ ಸುದ್ದಿಗಳ ಪ್ರಕಾರ, ಇದೀಗ WhatsApp ತನ್ನ ನವೀಕರಣಗಳ ಪಟ್ಟಿಗೆ ಮತ್ತೊಂದು ಹೊಸ ವೈಶಿಷ್ಟ್ಯವನ್ನು ಸೇರಿಸಲು ಹೊರಟಿದೆ. ಹಾಗಾದರೆ ಬನ್ನಿ ವಾಟ್ಸ್ ಆಪ್ ನಲ್ಲಿ ನಮಗೆ ಹೊಸದಾಗಿ ಏನು ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ. 

Emoji Reation On WhatsApp - ಇನ್ಮುಂದೆ ನೀವು ಸಂದೇಶಗಳಿಗೆ ಇಮೊಜಿ ಮೂಲಕ ಪ್ರತಿಕ್ರಿಯಿಸಬಹುದು
ಇನ್‌ಸ್ಟಾಗ್ರಾಮ್, ಟ್ವಿಟರ್ ಮತ್ತು ಐ-ಮೆಸೇಜ್‌ನಂತೆ, ಇದೀಗ ವಾಟ್ಸಾಪ್‌ನಲ್ಲಿ ಕೂಡ ಬಳಕೆದಾರರು ಸಂದೇಶಗಳಿಗೆ  ಎಮೋಜಿಯ ಮೂಲಕ ಪ್ರತಿಕ್ರಿಯಿಸಲು ಸಾಧ್ಯವಾಗಲಿದೆ. ಆ ವೇದಿಕೆಗಳಲ್ಲಿ ಸಂದೇಶವನ್ನು ದೀರ್ಘವಾಗಿ ಒತ್ತುವ ಮೂಲಕ ನೀವು ಎಮೋಜಿಯೊಂದಿಗೆ ಪ್ರತಿಕ್ರಿಯಿಸುವ ವಿಧಾನ ಅಸ್ತಿತ್ವದಲ್ಲಿದ್ದು, ಇದೀಗ ಈ ಕೆಲಸವನ್ನು ವಾಟ್ಸಾಪ್‌ನಲ್ಲಿಯೂ ಮಾಡಬಹುದು. ಈ ವೈಶಿಷ್ಟ್ಯವು ಸಂದೇಶವನ್ನು ಉಲ್ಲೇಖಿಸುವ ಮೂಲಕ ಉತ್ತರಿಸುವ ಆಯ್ಕೆಯಾಗಿದೆ. WABetaInfo ವರದಿಯಿಂದ ವೈಶಿಷ್ಟ್ಯ  ಮತ್ತು ಅಪ್‌ಡೇಟ್ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ-ಅತ್ಯಂತ ಕಡಿಮೆ ದರದ smartphone ಖರೀದಿಸಬೇಕೇ ? ಈ ದಿನದಿಂದ ಆರಂಭವಾಗಲಿದೆ jioPhone Next ಪ್ರಿ ಬುಕಿಂಗ್

ಫೋನ್ ನಲ್ಲಿ ಈ ವೈಶಿಷ್ಟ್ಯ ಹೇಗೆ ಸಿಗಲಿದೆ?
WhatsApp Message Reaction Feature -
ಪ್ರಸ್ತುತ, ಈ ವೈಶಿಷ್ಟ್ಯವು ಅಭಿವೃದ್ಧಿಯ ಹಂತದಲ್ಲಿದೆ, ಆದರೆ ವಾಟ್ಸಾಪ್ ಒಂದೊಮ್ಮೆ ಅದನ್ನು ಬಿಡುಗಡೆ ಗೊಳಿಸಿದರೆ, ಬಳಕೆದಾರರು ಅದರ ಲಾಭವನ್ನು ಪಡೆಯಲು ತಮ್ಮ ಫೋನ್‌ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಅನ್ನು ನವೀಕರಿಸಬೇಕಾಗುತ್ತದೆ. ಬಳಕೆದಾರರು ಈ ವೈಶಿಷ್ಟ್ಯವನ್ನು ಇನ್ನೊಬ್ಬ ಬಳಕೆದಾರರೊಂದಿಗೆ ಬಳಸಿದರೆ ಮತ್ತು ಅವರ ವಾಟ್ಸಾಪ್ ಅಪ್‌ಡೇಟ್ ಆಗದಿದ್ದರೆ, ಆತ ಈ ಪ್ರತಿಕ್ರಿಯೆಯನ್ನು ನೋಡಲು ಸಾಧ್ಯವಾಗುವುದಿಲ್ಲ. ಅವರಿಗೆ ಆಪ್ ಅಪ್ಡೇಟ್ ಅಧಿಸೂಚನೆ ಹೋಗಲಿದೆ.

ಇದನ್ನೂ ಓದಿ-BharatCaller Launched: TrueCallerಗೆ ಪೈಪೋಟಿ ನೀಡಲು ಬಂದಿದೆ ದೇಸಿ ಆಪ್ BharatCaller

ಅಂಡ್ರಾಯಿಡ್ ಬಳಕೆದಾರರಿಗೆ ಮೊದಲು ಸಿಗಲಿದೆ ಈ ವೈಶಿಷ್ಟ್ಯ
ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಈ ವೈಶಿಷ್ಟ್ಯ ಮೊದಲು ಅಂಡ್ರಾಯಿಡ್ ಬಳಕೆದಾರರಿಗೆ ಸಿಗಲಿದೆ. ಕೆಲವೇ ಸಮಯದ ಬಳಿಕ ಇದನ್ನು iOSಬಳಕೆದಾರರೂ ಕೂಡ ಬಳಸಬಹುದು

WhatsApp Updated Feature - ಪ್ರಸ್ತುತ, ಈ ವೈಶಿಷ್ಟ್ಯದ ಮೇಲೆ ಕೆಲಸ ನಡೆಯುತ್ತಿದೆ ಮತ್ತು ಅದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಸಂದೇಶ ಪ್ರತಿಕ್ರಿಯೆಗಳಿಗಾಗಿ ವಾಟ್ಸಾಪ್ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತೆಯೇ ಅದೇ ಎಮೋಜಿಯ ಪಟ್ಟಿಯನ್ನು ಬಳಸುತ್ತದೆಯೇ ಅಥವಾ ತನ್ನದೇ ಆದ ಪ್ರತ್ಯೇಕ ಪಟ್ಟಿಯನ್ನು ರಚಿಸುತ್ತದೆಯೇ ಎಂಬುದು ಇನ್ನೂ ತಿಳಿದಿಲ್ಲ. WhatsApp ತನ್ನ ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ಎಷ್ಟು ಸಮಯದವರೆಗೆ ಬಿಡುಗಡೆ ಮಾಡುತ್ತದೆ ಎಂಬುದು ಕಾದುನೋಡಬೇಕು .

ಇದನ್ನೂ ಓದಿ-Smartphone: ಸ್ಮಾರ್ಟ್‌ಫೋನ್‌ನಲ್ಲಿ ಬೆಂಕಿಗೆ ಕಾರಣವಾಗುವ ಈ 10 ತಪ್ಪುಗಳ ಬಗ್ಗೆ ಇರಲಿ ಎಚ್ಚರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News