WhatsApp ಹೊಸ ವೈಶಿಷ್ಟ್ಯ ಬಿಡುಗಡೆ, ಇನ್ಮುಂದೆ ನೀವು ಏಕಕಾಲಕ್ಕೆ 32 ಜನರಿಗೆ ವಿಡಿಯೋ ಕಾಲ್ ಮಾಡಬಹುದು!

WABetaInfo ವರದಿಯ ಪ್ರಕಾರ, WhatsApp ಏಕಕಾಲದಲ್ಲಿ 32 ಜನರಿಗೆ ವೀಡಿಯೊ ಕರೆ ಮಾಡುವ ಮೂಲಕ ಸಂಪರ್ಕಿಸಲು ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಈ ವೈಶಿಷ್ಟ್ಯವು ಪ್ರಸ್ತುತ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ಈ ವೈಶಿಷ್ಟ್ಯವನ್ನು ಪ್ರವೇಶಿಸಲು ಬಳಕೆದಾರರು ಬೀಟಾ ಅಪ್‌ಡೇಟ್ 2.23.24.1.0 ಅನ್ನು ಇನ್ಸ್ಟಾಲ್ ಮಾಡಬೇಕು.  

Written by - Nitin Tabib | Last Updated : Jun 29, 2023, 05:52 PM IST
  • ವಾಟ್ಸಾಪ್ 'ಮೆಸೇಜ್ ಪಿನ್ ಅವಧಿ' ಎಂಬ ಹೊಸ ವೈಶಿಷ್ಟ್ಯದ ಮೇಲೂ ಕೂಡ ಕಾರ್ಯನಿರ್ವಹಿಸುತ್ತಿದೆ.
  • WhatsApp ನಲ್ಲಿ ಮುಂಬರುವ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮ ಸಂಭಾಷಣೆಯ ಸಮಯದಲ್ಲಿ
  • ತಾವು ಪಿನ್ ಮಾಡಿದ ಸಂದೇಶಗಳನ್ನು ಸಕ್ರಿಯವಾಗಿಡಲು ಸಮಯ ಮಿತಿಯನ್ನು ಹೊಂದಿಸುವ ಆಯ್ಕೆಯನ್ನು ಇದು ನೀಡಲಿದೆ.
WhatsApp ಹೊಸ ವೈಶಿಷ್ಟ್ಯ ಬಿಡುಗಡೆ, ಇನ್ಮುಂದೆ ನೀವು ಏಕಕಾಲಕ್ಕೆ 32 ಜನರಿಗೆ ವಿಡಿಯೋ ಕಾಲ್ ಮಾಡಬಹುದು! title=

Whatsapp ಕರೆ ಮಾಡುವ ಹೊಸ ವೈಶಿಷ್ಟ್ಯವನ್ನು ಆರಂಭಿಸಿದೆ. ಈ ವೈಶಿಷ್ಟ್ಯದ ಅಡಿಯಲ್ಲಿ, ವಿಂಡೋಸ್ ಅಥವಾ ಡೆಸ್ಕ್‌ಟಾಪ್ ಬಳಸುವ ಜನರು 32 ಜನರೊಂದಿಗೆ ವೀಡಿಯೊ ಮತ್ತು ಆಡಿಯೊ ಕರೆಗಳನ್ನು ಮಾಡಲು ಸಾಧ್ಯವಾಗಲಿದೆ. ಈ ಹಿಂದೆ, WhatsApp ನ ಡೆಸ್ಕ್‌ಟಾಪ್ ಅಪ್ಲಿಕೇಶನ್ 8 ಜನರ ಗುಂಪು ವೀಡಿಯೊ ಕರೆಗಳನ್ನು ಮತ್ತು 32 ಜನರವರೆಗಿನ ಗುಂಪು ಆಡಿಯೊ ಕರೆಗಳನ್ನು ಬೆಂಬಲಿಸುತ್ತಿತ್ತು. ಆದರೆ ಇದೀಗ ಮೇಟಾ-ಮಾಲೀಕತ್ವದ ಪ್ಲಾಟ್‌ಫಾರ್ಮ್ ಗುಂಪು ವೀಡಿಯೊ ಕರೆಗಳ ಮಿತಿಯನ್ನು ಹೆಚ್ಚಿಸಿದೆ.

WABetaInfo ವರದಿಯ ಪ್ರಕಾರ, WhatsApp ಏಕಕಾಲದಲ್ಲಿ 32 ಜನರಿಗೆ ವೀಡಿಯೊ ಕರೆ ಮಾಡುವ ಸೌಲಭ್ಯವನ್ನು ಆರಂಭಿಸಿದೆ. ಈ ವೈಶಿಷ್ಟ್ಯವು ಪ್ರಸ್ತುತ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ಈ ವೈಶಿಷ್ಟ್ಯವನ್ನು ಪ್ರವೇಶಿಸಲು ಬಳಕೆದಾರರು ಬೀಟಾ ಅಪ್‌ಡೇಟ್ 2.23.24.1.0 ಅನ್ನು ಇನ್ಸ್ಟಾಲ್ ಮಾಡಬೇಕು.

WABetainfo ಹಂಚಿಕೊಂಡ ಸ್ಕ್ರೀನ್‌ಶಾಟ್ ಪ್ರಕಾರ, ಕೆಲವು ಬೀಟಾ ಪರೀಕ್ಷಕರಿಗೆ ಗುಂಪು ಕರೆ ಮಾಡಲು ಪ್ರಯತ್ನಿಸಲು ಆಹ್ವಾನದ ಸಂದೇಶ ಬರಲಿದೆ . ಈ ಸಂದೇಶವು 32 ಜನರಿಗೆ ವೀಡಿಯೊ ಕರೆ ಮಾಡುವ ಸೌಲಭ್ಯದ ಬಗ್ಗೆ ಇರುತ್ತದೆ.

ಕೆಲವು ಬಳಕೆದಾರರು 16 ಜನರಿಗೆ ವೀಡಿಯೊ ಕರೆಗಳಿಗೆ ಬೆಂಬಲವನ್ನು ಹೈಲೈಟ್ ಮಾಡುವ ಪರ್ಯಾಯ ಸಂದೇಶವನ್ನು ಪಡೆಯಬಹುದು ಎಂದು ವರದಿಯು ಹೇಳಿದೆ. ವಿಂಡೋಸ್ 2.2322.1.0 ಅಪ್‌ಡೇಟ್‌ಗಾಗಿ ಈ ಹಿಂದೆ WhatsApp ಬೀಟಾ ಆವೃತ್ತಿಗೆ ಲಭ್ಯವಿದ್ದ ವೀಡಿಯೊ ಕರೆಗಳ ಸಮಯದಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವ ಮತ್ತು ಹಂಚಿಕೊಳ್ಳುವ ಸೌಲಭ್ಯವನ್ನು ಈ ವೈಶಿಷ್ಟ್ಯವು ಹೊಂದಿರುತ್ತದೆ. ಇದಲ್ಲದೆ, ಅಪ್ಲಿಕೇಶನ್‌ನ ಇತ್ತೀಚಿನ ನವೀಕರಣವನ್ನು ಇನ್ಸ್ಟಾಲ್ ಮಾಡಿದ ಬಳಿಕ ಕೆಲವು ಬೀಟಾ ಪರೀಕ್ಷಕರು ಅಂತಿಮವಾಗಿ ವೀಡಿಯೊ ಕರೆಗಳನ್ನು ಮಾಡುವ ಆಯ್ಕೆಯನ್ನು ಹೊಂದಬಹುದು.

ಇದನ್ನೂ ಓದಿ-Chandrayaan-3 ಉಡಾವಣೆಗೆ ಮುಹೂರ್ತ ಫಿಕ್ಸ್

'ಮೆಸೇಜ್ ಪಿನ್ ಅವಧಿ' ವೈಶಿಷ್ಟ್ಯವೇನು?
ವಾಟ್ಸಾಪ್ 'ಮೆಸೇಜ್ ಪಿನ್ ಅವಧಿ' ಎಂಬ ಹೊಸ ವೈಶಿಷ್ಟ್ಯದ ಮೇಲೂ ಕೂಡ ಕಾರ್ಯನಿರ್ವಹಿಸುತ್ತಿದೆ. WhatsApp ನಲ್ಲಿ ಮುಂಬರುವ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮ ಸಂಭಾಷಣೆಯ ಸಮಯದಲ್ಲಿ ತಾವು ಪಿನ್ ಮಾಡಿದ ಸಂದೇಶಗಳನ್ನು ಸಕ್ರಿಯವಾಗಿಡಲು ಸಮಯ ಮಿತಿಯನ್ನು ಹೊಂದಿಸುವ ಆಯ್ಕೆಯನ್ನು ಇದು ನೀಡಲಿದೆ.

ಇದನ್ನೂ ಓದಿ-Passport Seva Programme: ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದಿಂದ 'ಪಾಸ್ಪೋರ್ಟ್ ಸೇವಾ ಪ್ರೋಗ್ರಾಮ್ 2.0' ಜಾರಿ

ಈ ವೈಶಿಷ್ಟ್ಯವು ಬಳಕೆದಾರರಿಗೆ ಸಮಯದ ಮಿತಿಯನ್ನು ಆಯ್ಕೆ ಮಾಡಲು ಅನುಮತಿಸುತ್ತದೆ, ಅದರ ನಂತರ ಪಿನ್ ಮಾಡಿದ ಸಂದೇಶವು ನಿರ್ದಿಷ್ಟ ಸಮಯದಲ್ಲಿ ಸ್ವಯಂಚಾಲಿತವಾಗಿ ಅನ್‌ಪಿನ್ ಆಗುತ್ತದೆ. ಬಳಕೆದಾರರು ತಮ್ಮ ಆಯ್ಕೆಯ ಪ್ರಕಾರ 24 ಗಂಟೆಗಳು, 7 ದಿನಗಳು ಅಥವಾ 30 ದಿನಗಳವರೆಗೆ ಚಾಟ್ ಅನ್ನು ಪಿನ್ ಮಾಡಲು ಇದರಿಂದ ಸಾಧ್ಯವಾಗಲಿದೆ. ಆಯ್ಕೆಮಾಡಿದ ಅವಧಿಯು ಮುಕ್ತಾಯಗೊಳ್ಳುವ ಮೊದಲು ಯಾವುದೇ ಸಮಯದಲ್ಲಿ ಪಿನ್ ಮಾಡಿದ ಸಂದೇಶವನ್ನು ಅನ್‌ಪಿನ್ ಮಾಡುವ ಸ್ವಾತಂತ್ರ್ಯವನ್ನು ಬಳಕೆದಾರರಿಗೆ ಇರಲಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News