ಖ್ಯಾತ ಸ್ಮಾರ್ಟ್ ಫೋನ್ ಬ್ರಾಂಡ್ Xiaomi ಮಾಡಿರುವ ತಪ್ಪೇನು ಗೊತ್ತಾ?

ಚೀನಾದಲ್ಲಿ ಸುಳ್ಳು ಜಾಹೀರಾತುಗಳನ್ನು ನೀಡಿರುವುದು Xiaomiಗೆ ದೊಡ್ಡ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಖ್ಯಾತ ಸ್ಮಾರ್ಟ್‌ಫೋನ್ ಬ್ರಾಂಡ್ Xiaomiಗೆ ಚೀನಾ ಸರ್ಕಾರವು $ 3,141 ದಂಡ ವಿಧಿಸಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

Written by - Puttaraj K Alur | Last Updated : Dec 25, 2021, 02:46 PM IST
  • Xiaomi ಕಂಪನಿಯಿಂದ ಚೀನಾದಲ್ಲಿ ಸುಳ್ಳು ಜಾಹೀರಾತು ಪ್ರಸಾರ
  • ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಜಾಹೀರಾತು ಕಾನೂನು’ ಉಲ್ಲಂಘನೆ
  • ಗ್ರಾಹಕರಿಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕೆ Xiaomiಗೆ $3,141 ದಂಡ
ಖ್ಯಾತ ಸ್ಮಾರ್ಟ್ ಫೋನ್ ಬ್ರಾಂಡ್ Xiaomi ಮಾಡಿರುವ ತಪ್ಪೇನು ಗೊತ್ತಾ? title=
ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕೆ Xiaomiಗೆ ದಂಡ

ಬೀಜಿಂಗ್: ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಜಾಹೀರಾತು ಕಾನೂನು’ ಉಲ್ಲಂಘಿಸಿದ್ದಕ್ಕಾಗಿ ಖ್ಯಾತ ಸ್ಮಾರ್ಟ್ ಫೋನ್ ಬ್ರಾಂಡ್ Xiaomiಗೆ ದೊಡ್ಡ ಮೊತ್ತದ ದಂಡ(Heavy Fine) ವಿಧಿಸಲಾಗಿದೆ ಎಂದು ವರದಿಯಾಗಿದೆ.

Xiaomiಯಿಂದ ಸುಳ್ಳಿ ಜಾಹೀರಾತು ಪ್ರಸಾರ

ಸ್ಮಾರ್ಟ್‌ಫೋನ್ ಬ್ರ್ಯಾಂಡ್ Xiaomi ತನ್ನ ತಾಯ್ನಾಡು ಚೀನಾ(China)ದಲ್ಲಿ ಸುಳ್ಳು ಜಾಹೀರಾತು(Fake Advertisement)ಗಳನ್ನು ಪ್ರಸಾರ ಮಾಡಿದ ತಪ್ಪಿಗೆ ಬರೋಬ್ಬರಿ $3,141 (20,000 ಯುವಾನ್) ದಂಡವನ್ನು ವಿಧಿಸಲಾಗಿದೆ. ಈ ಮಾಹಿತಿಯನ್ನು ಮಾಧ್ಯಮ ವರದಿಗಳಲ್ಲಿ ನೀಡಲಾಗಿದೆ ಎಂದು ತಿಳಿದುಬಂದಿದೆ. ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಜಾಹೀರಾತು ಕಾನೂನು’ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚೀನಾ ಸರ್ಕಾರದ ಮಾರುಕಟ್ಟೆ ಮೇಲ್ವಿಚಾರಣಾ ವಿಭಾಗವು ಈ ದಂಡವನ್ನು ವಿಧಿಸಿದೆ.

ಇದನ್ನೂ ಓದಿ: Jio-Airtel-Vi ನ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳು!

ಬ್ಯಾನರ್ ಜಾಹೀರಾತಿನಲ್ಲಿ ತಪ್ಪು!

ಕಳೆದ ವರ್ಷ ಕಂಪನಿಯು Redmi 30 5G ನ ಬ್ಯಾನರ್ ಜಾಹೀರಾತಿನಲ್ಲಿ ತಪ್ಪು ಮಾಡಿದೆ ಎಂದು ವರದಿ ಉಲ್ಲೇಖಿಸಲಾಗಿದೆ. ಈ ಫೋನಿನ ಪ್ರಚಾರದ ಚಿತ್ರದಲ್ಲಿ ‘Samsung AMOLED ಡಿಸ್ಪ್ಲೇ’ ಅನ್ನು ಒಳಗೊಂಡಿರುವ ಸ್ಮಾರ್ಟ್ಫೋನ್ ಎಂದು ಉಲ್ಲೇಖಿಸಲಾಗಿತ್ತು. ಆದರೆ ವಾಸ್ತವವಾಗಿ ಈ ಹ್ಯಾಂಡ್ಸೆಟ್ LCD ಪ್ಯಾನೆಲ್ ಅನ್ನು ಬೆಂಬಲಿಸುತ್ತದೆ. ಕಂಪನಿ(Smart Phone Brand)ಯ ಈ ತಪ್ಪನಿಂದ ಗ್ರಾಹಕರು Redmi 30 Pro 5Gಯ ​​ವೈಶಿಷ್ಟ್ಯಗಳ ಬಗ್ಗೆ ತುಂಬಾ ಗೊಂದಲಕ್ಕೊಳಗಾಗಿದ್ದರು. ಇದು ವಾಸ್ತವವಾಗಿ Samsung ಡಿಸ್ಪ್ಲೇ ಒದಗಿಸಿರುವ AMOLED ಪ್ಯಾನೆಲ್ ಅನ್ನು ಹೊಂದಿದೆ ಎಂದು ವರದಿಗಳು ತಿಳಿಸಿವೆ.

4 ರೂಪಾಂತರಗಳಲ್ಲಿ ಫೋನ್ ಬಿಡುಗಡೆ

Redmi K30 Pro 5G ಅನ್ನು ಡಿಸೆಂಬರ್ 2019ರಲ್ಲಿ ಚೀನಾದಲ್ಲಿ 4 ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು 6GB RAM ಮತ್ತು 64GB ಸ್ಟೋರೇಜ್ ಹೊಂದಿರುವುಕ್ಕೆ 23,669 ರೂ.ನಿಂದ (1,999 ಯುವಾನ್‌) ಪ್ರಾರಂಭವಾಗುತ್ತದೆ. 6 GB RAM ಮತ್ತು 128 GB ಸ್ಟೋರೇಜ್ ರೂಪಾಂತರದ ಬೆಲೆ 27,221 ರೂ. (2,299 ಯುವಾನ್) ಆಗಿದೆ.

ಇದನ್ನೂ ಓದಿ: Prototype Lickable TV:ಟಿವಿ ಪರದೆಯ ಮೇಲೆ ನೀವು ವಿಕ್ಷೀಸುವ ಆಹಾರದ ಟೇಸ್ಟ್ ಮಾಡಿಸುತ್ತಂತೆ ಈ TV

8 GB RAM ಮತ್ತು 128 GB ಸ್ಟೋರೇಜ್ ನೊಂದಿಗೆ ಮತ್ತೊಂದು ರೂಪಾಂತರವಿದ್ದು, ಇದರ ಬೆಲೆ 30,774 (2,599 ಯುವಾನ್) ಆಗಿದೆ. 8 GB RAM ಮತ್ತು 256 GB ಸ್ಟೋರೇಜ್ ಇರುವ ಉನ್ನತ-ಮಟ್ಟದ ರೂಪಾಂತರದ ಮೊಬೈಲ್ ಫೋನಿಗೆ 34,325 ರೂ. (2,899 ಯುವಾನ್) ಬೆಲೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News