ಬೆಂಗಳೂರು: ವಾಟ್ಸಾಪ್ ವಿಶ್ವಾದ್ಯಂತ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಈ ಜನಪ್ರಿಯತೆಯಿಂದಾಗಿ ಹ್ಯಾಕರ್‌ಗಳು ಸಹ ಇದರ ಮೇಲೆ ನಿಗಾ ಇಡುತ್ತಾರೆ. ವಾಟ್ಸಾಪ್ ಒಟಿಪಿ ಹಗರಣ ಈ ದಿನಗಳಲ್ಲಿ ಸುದ್ದಿಯಲ್ಲಿದೆ. ಕೇವಲ ಒಂದು ಒಟಿಪಿ ಮೂಲಕ ಹ್ಯಾಕರ್‌ಗಳು ನಿಮ್ಮ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಲು ಸಾಧ್ಯವಾಗುತ್ತದೆ. ವಾಟ್ಸಾಪ್ ಒಟಿಪಿ ಹಗರಣ (WhatsApp OTP Scam) ಎಂದರೇನು ಮತ್ತು ಅದನ್ನು ಹೇಗೆ ತಪ್ಪಿಸಬೇಕು ಎಂದು ಈ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.
ವಾಟ್ಸಾಪ್ ಒಟಿಪಿ ಹಗರಣ ಎಂದರೇನು? (What is WhatsApp OTP Scam)
ಹೊಸ ವಾಟ್ಸಾಪ್ ಖಾತೆಯನ್ನು ರಚಿಸುವಾಗ ಅಥವಾ ಹೊಸ ಸಾಧನದಲ್ಲಿ ವಾಟ್ಸಾಪ್ ಅನ್ನು ಹೊಂದಿಸುವಾಗ ವಾಟ್ಸಾಪ್ (Whatsapp) ಆ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸುತ್ತದೆ. ಈ ಒಟಿಪಿಯನ್ನು ಭರ್ತಿ ಮಾಡಿದ ನಂತರವೇ ಹೊಸ ಸಾಧನದಲ್ಲಿ ವಾಟ್ಸಾಪ್ ಖಾತೆಯನ್ನು ತೆರೆಯಲಾಗುತ್ತದೆ. ಬಳಕೆದಾರರ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಲು ಹ್ಯಾಕರ್ಸ್ (Hackers) ಈ ಒಟಿಪಿ ವೈಶಿಷ್ಟ್ಯದ ಸಹಾಯವನ್ನು ತೆಗೆದುಕೊಳ್ಳುತ್ತಿದ್ದಾರೆ.
ಅವರು ಗುರಿಯಿಡುವ ಬಳಕೆದಾರರಿಗೆ ಹ್ಯಾಕರ್‌ಗಳು ಸಂದೇಶ ಕಳುಹಿಸುತ್ತಾರೆ, ಅವನು (ಹ್ಯಾಕರ್) ನಿಮ್ಮ ಸ್ನೇಹಿತ ಅಥವಾ ಪರಿಚಯಸ್ಥ ಎಂದು ಹೇಳಿಕೊಳ್ಳುತ್ತಾನೆ. ಈ ಸಂದೇಶವು ನಿಮಗೆ ತಿಳಿದಿರುವ ಯಾರೊಬ್ಬರ ಸಂಖ್ಯೆಯಿಂದಾದರೂ ಬರಬಹುದು. ಸ್ವಲ್ಪ ತುರ್ತು ಪರಿಸ್ಥಿತಿ ಇದೆ. ಸದ್ಯ ನನ್ನ ವಾಟ್ಸಾಪ್ ಖಾತೆ ಲಾಕ್ ಆಗಿದೆ. ಹಾಗಾಗಿ ನನ್ನ ಮೊಬೈಲ್ ನಲ್ಲಿ ಒಟಿಪಿ ಬರುತ್ತಿಲ್ಲ. ದಯವಿಟ್ಟು ಸಹಾಯಮಾಡಿ ಎಂದು ಗ್ರಾಹಕರನ್ನು ಯಾಮಾರಿಸಿ ಅವರ ಸಂಖ್ಯೆಗೆ ಬರುವ ಒಟಿಪಿಯನ್ನು ಹಂಚಿಕೊಳ್ಳುವಂತೆ ಕೇಳಲಾಗುತ್ತದೆ.
ಆನ್ಲೈನ್ ಶಾಪಿಂಗ್ ಸೇರಿದಂತೆ ಇತ್ತೀಚೆಗೆ 5 ಉತ್ತಮ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದ WhatsApp
ನೀವು ಒಟಿಪಿಯನ್ನು ಹ್ಯಾಕರ್‌ನೊಂದಿಗೆ ಹಂಚಿಕೊಂಡ ತಕ್ಷಣ ನಿಮ್ಮ ಸಾಧನದಿಂದ ನಿಮ್ಮ ವಾಟ್ಸಾಪ್ ಖಾತೆ ಲಾಗ್ ಔಟ್ ಆಗುತ್ತದೆ. ಅಲ್ಲದೆ ನಿಮ್ಮ ಸಾಧನದಲ್ಲಿನ ಖಾತೆಯಿಂದ ನೀವು ಲಾಗ್ ಔಟ್ ಆಗಿದ್ದೀರಿ ಮತ್ತು ಇನ್ನೊಂದು ಸಾಧನದಲ್ಲಿ ನಿಮ್ಮ ಸಂಖ್ಯೆಯಿಂದ ವಾಟ್ಸಾಪ್ ಅನ್ನು ಬಳಸಲಾಗುತ್ತಿದೆ ಎಂಬ ಸಂದೇಶವನ್ನು ನೀವು ಅಪ್ಲಿಕೇಶನ್‌ನಲ್ಲಿ ಪಡೆಯುತ್ತೀರಿ.
ಒಟಿಪಿ ಹ್ಯಾಕ್ ವಾಟ್ಸಾಪ್‌ಗೆ ಯಾವ ಸಂಪರ್ಕವಿದೆ?
ವಾಸ್ತವವಾಗಿ ಬಳಕೆದಾರರು ವಾಟ್ಸಾಪ್ ಖಾತೆಯನ್ನು ಪ್ರಾರಂಭಿಸಿದಂತೆಯೇ ಹ್ಯಾಕರ್ ಬಳಕೆದಾರರ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಲು ಅದೇ ರೀತಿ ಮಾಡುತ್ತಾರೆ. ಹ್ಯಾಕರ್ ನಿಮ್ಮ ಮೊಬೈಲ್ ಸಂಖ್ಯೆಯನ್ನು ಇನ್ನೊಂದು ಸಾಧನದಲ್ಲಿ ಅಂದರೆ ಮೊಬೈಲ್ ನಲ್ಲಿನ ವಾಟ್ಸಾಪ್‌ನಲ್ಲಿ ಬಳಸುತ್ತಾರೆ. ನಂತರ ನೀವು ಒಟಿಪಿ ಪಡೆಯುತ್ತೀರಿ. ಇದರ ನಂತರ ಅವರು ನಿಮ್ಮ ಸಹಾಯವನ್ನು ಕೇಳುತ್ತಾರೆ. ನೀವು ತಿಳಿಯದೇ ಯಾರೊಂದಿಗಾದರೂ ಒಟಿಪಿಯನ್ನು ಹಂಚಿಕೊಂಡಿದ್ದರೆ, ನಿಮ್ಮ ಸಂಖ್ಯೆಯಿಂದ ಹ್ಯಾಕರ್ ನಿಮ್ಮ ವಾಟ್ಸಾಪ್ ಅನ್ನು ಬಳಸಲು ಪ್ರಾರಂಭಿಸುತ್ತಾರೆ.
ವಾಟ್ಸಾಪ್ ಹ್ಯಾಕ್ ಆಗಿದ್ದರೆ ಏನು ಮಾಡಬೇಕು?
ಒಂದೊಮ್ಮೆ ಹ್ಯಾಕರ್ ನಿಮ್ಮ ವಾಟ್ಸಾಪ್ ಖಾತೆಗೆ ಪ್ರವೇಶ ಪಡೆದರೆ, ನೀವು ತಕ್ಷಣ ನಿಮ್ಮ ವಾಟ್ಸಾಪ್ ಅನ್ನು ಮರುಹೊಂದಿಸಬೇಕು. ಖಾತೆಯನ್ನು ರಚಿಸುವಾಗ ನೀವು ಮೊದಲ ಬಾರಿಗೆ ಲಾಗ್ ಇನ್ ಆಗಿರುವಂತೆಯೇ ನೀವು ಮತ್ತೆ ವಾಟ್ಸಾಪ್‌ಗೆ ಲಾಗ್ ಇನ್ ಆಗಬೇಕಾಗುತ್ತದೆ. ಇದು ಒಟಿಪಿಯನ್ನು ಮತ್ತೆ ನಿಮ್ಮ ಸಂಖ್ಯೆಗೆ ತರುತ್ತದೆ ಮತ್ತು ನಿಮ್ಮ ಸಾಧನದಲ್ಲಿ ನೀವು ವಾಟ್ಸಾಪ್‌ಗೆ ಪ್ರವೇಶ ಪಡೆಯುತ್ತೀರಿ. ಅದೇ ಸಮಯದಲ್ಲಿ ನಿಮ್ಮ ವಾಟ್ಸಾಪ್ ಖಾತೆಯನ್ನು ಹ್ಯಾಕರ್ ಸಾಧನದಿಂದ ಲಾಗ್ ಔಟ್ ಮಾಡಲಾಗುತ್ತದೆ.
ವಾಟ್ಸಾಪ್ ಒಟಿಪಿ ಹಗರಣವನ್ನು ತಪ್ಪಿಸುವುದು ಹೇಗೆ?
- ವಾಟ್ಸಾಪ್ ಎಂದಿಗೂ ಕೇಳದೆ ನಿಮಗೆ ಒಟಿಪಿ ಕಳುಹಿಸುವುದಿಲ್ಲ ಎಂಬುದನ್ನು ಯಾವಾಗಲೂ ನೆನಪಿಡಿ.
- ವಿನಂತಿಯಿಲ್ಲದೆ ನಿಮಗೆ ಒಟಿಪಿ ಬಂದರೆ, ಅದನ್ನು ನಿರ್ಲಕ್ಷಿಸಿ ಮತ್ತು ಅದನ್ನು ಯಾವುದೇ ಕಾರಣಕ್ಕೂ ಯಾರೊಂದಿಗೂ ಹಂಚಿಕೊಳ್ಳಬೇಡಿ.
ವಾಟ್ಸಾಪ್‌ನ ಈ 3 ಅತ್ಯಂತ ಅಪಾಯಕಾರಿ ಸೆಟ್ಟಿಂಗ್‌ಗಳನ್ನು ತಕ್ಷಣ ಬದಲಾಯಿಸಿ ಇಲ್ಲದಿದ್ದರೆ ...
- ಸ್ನೇಹಿತ, ಸಂಬಂಧಿ ಅಥವಾ ಕುಟುಂಬದ ಸದಸ್ಯರ ಹೆಸರಿನಲ್ಲಿ ಪಠ್ಯ ಸಂದೇಶದ ಮೂಲಕ ಒಟಿಪಿಯನ್ನು ಕೇಳಿದರೆ ಮೊದಲು ಆ ವ್ಯಕ್ತಿ ಯಾರೆಂದು ಪತ್ತೆ ಹಚ್ಚಿ. ಇದರ ನಂತರ ಅವರು ನಿಜವಾಗಿಯೂ ನಿಮ್ಮ ಕುಟುಂಬ (Family) ಸದಸ್ಯ ಅಥವಾ ಸ್ನೇಹಿತನಾಗಿದ್ದರೆ ಮತ್ತು ಅವನೊಂದಿಗೆ ಒಟಿಪಿ ಹಂಚಿಕೊಳ್ಳುವುದು ತೀರಾ ಅಗತ್ಯವಾಗಿದ್ದರೆ ಮಾತ್ರವೇ ಅವರೊಂದಿಗೆ ಒಟಿಪಿಯನ್ನು ಹಂಚಿಕೊಳ್ಳಿ.
- ವಾಟ್ಸಾಪ್ನಲ್ಲಿ ಹೆಚ್ಚುವರಿ ಸುರಕ್ಷತೆಗಾಗಿ ಎರಡು ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸಬೇಕು. ಇದಕ್ಕಾಗಿ ನೀವು ವಾಟ್ಸಾಪ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ, ನಂತರ ಸೆಟ್ಟಿಂಗ್‌ಗಳಿಗೆ ಹೋಗಿ ನಂತರ ಖಾತೆ ಆಯ್ಕೆಗಳಲ್ಲಿ ಎರಡು ಅಂಶಗಳ ದೃಢೀಕರಣ ಆಯ್ಕೆ ಕಂಡುಬರುತ್ತದೆ. ಇದನ್ನು ಸಕ್ರಿಯಗೊಳಿಸುವುದರಿಂದ ಯಾರೂ ಸಹ ನಿಮ್ಮನ್ನು ಸುಲಭವಾಗಿ ಮೋಸಗೊಳಿಸಲು ಸಾಧ್ಯವಾಗುವುದಿಲ್ಲ.