ನವದೆಹಲಿ : Vivo Y76s ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಡೈಮೆನ್ಸಿಟಿ 810 ಚಿಪ್‌ಸೆಟ್‌ನೊಂದಿಗೆ ಬರುವ ಕಂಪನಿಯ ಮೊದಲ ಫೋನ್ ಇದಾಗಿದೆ. 50-ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾಗಳು ಮತ್ತು 44W ವೇಗದ ಚಾರ್ಜಿಂಗ್ ಈ ಫೋನಿನ ಇತರ ವೈಶಿಷ್ಟ್ಯಗಳಾಗಿವೆ. ಬಳಕೆದಾರರಿಗೆ ಅಗತ್ಯವಿರುವ ಎಲ್ಲಾ ವೈಶಿಷ್ಟ್ಯ ಗಳು ಈ ಫೋನ್ ನಲ್ಲಿ ಇರುವ ಕಾರಣ ಇದು ಸಾಕಷ್ಟು ಚರ್ಚೆಯಲ್ಲಿದೆ.
Vivo Y76s ಸ್ಪೆಸಿಫಿಕೆಶನ್ :
Vivo Y76s 6.58-ಇಂಚಿನ IPS LCD ಪ್ಯಾನೆಲ್ ಅನ್ನು ಹೊಂದಿದೆ. 2408 x 1080 ಪಿಕ್ಸೆಲ್‌ಗಳ ಫುಲ್ HD+ ರೆಸಲ್ಯೂಶನ್, 20: 9 ಆಸ್ಪೆಕ್ಟ್ ರೇಶಿಯೋ ಮತ್ತು 60Hz ರಿಫ್ರೆಶ್ ರೇಟ್ ಅನ್ನು ನೀಡುತ್ತದೆ. ಹ್ಯಾಂಡ್‌ಸೆಟ್‌ನ ದಪ್ಪ 7.79mm ಮತ್ತು ತೂಕ 175 ಗ್ರಾಂ. ಸೆಲ್ಫಿಗಾಗಿ, ಇದರಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. Y76s ನ ಹಿಂಭಾಗದಲ್ಲಿರುವ ವರ್ಟಿಕಲ್ ಕ್ಯಾಮೆರಾ ಮಾಡ್ಯೂಲ್ ನಲ್ಲಿ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು LED ಫ್ಲ್ಯಾಷ್ ಯುನಿಟ್ ಅನ್ನು ಹೊಂದಿದೆ.
ಇದನ್ನೂ ಓದಿ : Whatsapp: ದೊಡ್ಡ ಬದಲಾವಣೆಗೆ ಮುಂದಾದ ವಾಟ್ಸಾಪ್, ಇದು ನಿಮ್ಮ ಮೇಲೆ ಎಷ್ಟು ಪರಿಣಾಮ ಬೀರುತ್ತೆ!
Vivo Y76s ಡೈಮೆನ್ಸಿಟಿ 810 ಚಿಪ್‌ಸೆಟ್ ಮತ್ತು 8 GB RAM ನಿಂದ ಚಾಲಿತವಾಗಿದೆ. ಇದು 4GB ವರ್ಚುವಲ್ RAM ಮತ್ತು 256GB ವರೆಗಿನ ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ. ಹೆಚ್ಚುವರಿ ಸ್ಟೋರೇಜ್ ಗಾಗಿ ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಕೂಡಾ ನೀಡಲಾಗಿದೆ. ಈ ಸಾಧನವು OriginOS 1.0 ಆಧಾರಿತ Android 11 OS ನಲ್ಲಿ ಕಾರ್ಯನಿರ್ವಹಿಸುತ್ತದೆ.
Vivo Y76s 4,100mAh ಬ್ಯಾಟರಿಯನ್ನು ನೀಡಲಾಗಿದೆ. ಅದು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಫೇಸ್ ಅನ್‌ಲಾಕ್ ಮತ್ತು ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ನಂತಹ ಭದ್ರತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಫೋನ್‌ನ ಇತರ ವಿಶೇಷಣಗಳಲ್ಲಿ ಡ್ಯುಯಲ್ ಸಿಮ್, ವೈ-ಫೈ 802.11ac, ಬ್ಲೂಟೂತ್ 5.1, ಜಿಪಿಎಸ್, ಯುಎಸ್‌ಬಿ-ಸಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಸೇರಿವೆ.
ಇದನ್ನೂ ಓದಿ : ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ Xiaomiಯ ಸೂಪರ್ ಫಾಸ್ಟ್ Smartphone, ಹೊಂದಿದೆ ಅದ್ಬುತ ವೈಶಿಷ್ಟ್ಯ
Vivo Y76s ಬೆಲೆ :
Vivo Y76s ಎರಡು ಆಯ್ಕೆಗಳಲ್ಲಿ ಬರುತ್ತದೆ. 8GB RAM + 128GB ಸ್ಟೋರೇಜ್ ಬೆಲೆ 20,829 ರೂ . ಮತ್ತು 8GB RAM + 256GB ಸ್ಟೋರೇಜ್ ಬೆಲೆ 23,201 ರೂ. ಆಗಿದೆ. ಇದು Galaxy Blue, Star Diamond White ಮತ್ತು Starry Night Black ಬಣ್ಣಗಳಲ್ಲಿ ಲಭ್ಯವಿರಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ