Injuction Phobia: ನಿಮಗೂ ಇಂಜೆಕ್ಷನ್ ಅಂದ್ರೆ ಭಯಾನಾ? ಇದರ ಹಿಂದಿನ Science ಏನು ಗೊತ್ತಾ

Vaccine Phobia: ಕೆಲವರಿಗೆ ಇಂಜೆಕ್ಷನ್ ಅಂದರೆ ಸಾಕು, ಭಯಪಡುತ್ತಾರೆ, ಬೆವರುತ್ತಾರೆ. ತಲೆ ಸುತ್ತಿದ ಅನುಭವ ಅವರಿಗಾಗುತ್ತದೆ. ಆದರೆ ಕೆಲ ವಿಧಾನಗಳನ್ನು ಅನುಸರಿಸುವ ಮೂಲಕ ಈ ಭಯವನ್ನು ಅವರು ಕಡಿಮೆ ಮಾಡಿಕೊಳ್ಳಬಹುದು.

Written by - Nitin Tabib | Last Updated : Dec 5, 2021, 05:14 PM IST
  • ವ್ಯಾಕ್ಸಿನೇಷನ್ ನಕಾರಾತ್ಮಕ ಅನುಭವವನ್ನು ಕಡಿಮೆ ಮಾಡಿ
  • ಲಸಿಕೆ ಫೋಬಿಯಾ ಎಂದರೇನು?
  • ಸೂಜಿಯ ಭಯ ಅಪಾಯಕಾರಿ
Injuction Phobia: ನಿಮಗೂ ಇಂಜೆಕ್ಷನ್ ಅಂದ್ರೆ ಭಯಾನಾ? ಇದರ ಹಿಂದಿನ  Science ಏನು ಗೊತ್ತಾ title=
Vaccine Phobia (File Photo)

ಗೀಲಾಂಗ್: Trending News - ನಿಮ್ಮ ಮಗುವಿನ ಆರಂಭಿಕ ವರ್ಷಗಳಲ್ಲಿ ಚುಚ್ಚುಮದ್ದಿನ ಅನುಭವವು ನಂತರದ ವರ್ಷಗಳಲ್ಲಿ ಅವರು ಲಸಿಕೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ನಕಾರಾತ್ಮಕ ಅನುಭವದ ಸಾಧ್ಯತೆಯನ್ನು ಕಡಿಮೆ ಮಾಡುವುದು ಅವಶ್ಯಕ. COVID-19 ಲಸಿಕೆ (Vaccine) ಅಥವಾ ಇತರ ಚುಚ್ಚುಮದ್ದುಗಳಿಗೆ (Needle) ತಮ್ಮ ಮಗುವನ್ನು ತಯಾರಿಸಲು ಸಹಾಯ ಮಾಡಲು ಪೋಷಕರು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ಸೂಜಿಗಳ ಭಯ ಅಥವಾ ಫೋಬಿಯಾ? (Viral News)
ಹೆಚ್ಚಿನ ಮಕ್ಕಳು ಸೂಜಿಗಳಿಗೆ ಹೆದರುತ್ತಾರೆ. ಆದರೆ ಕೆಲವು ಮಕ್ಕಳಿಗೆ, ಈ ಭಯವು ಹೆಚ್ಚು ತೀವ್ರವಾಗಿರುತ್ತದೆ ಮತ್ತು ಇದನ್ನು ವ್ಯಾಕ್ಸಿನ್ ಫೋಬಿಯಾ ಎಂದು ವ್ಯಾಖ್ಯಾನಿಸಬಹುದು. ಲಸಿಕೆ ಫೋಬಿಯಾ ಸೂಜಿಯನ್ನು ನೋಡಿದಾಗ ಅಥವಾ ಅದನ್ನು ಚುಚ್ಚಿಸಿಕೊಳ್ಳುವಾಗ ತುಂಬಾ ಭಯಾನಕ ಅಥವಾ ಗೊಂದಲದ ಪ್ರತಿಕ್ರಿಯೆಯಾಗಿದೆ. ಉದಾಹರಣೆಗೆ- ರಕ್ತದ ಸ್ಯಾಂಪಲ್ ಪಡೆಯುವಾಗ ಅಥವಾ ಚುಚ್ಚು ಮದ್ದು ಹಾಕಿಸಿಕೊಳ್ಳುವುದು ಇತ್ಯಾದಿ. ಆತಂಕ ಮತ್ತು ಭಯವು ಅಪಾಯಕ್ಕಿಂತ ಹೆಚ್ಚು. ಅಂತಹ ಜನರು ಸಾಧ್ಯವಾದಷ್ಟು ಸೂಜಿಗಳನ್ನು ಪಡೆಯುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. ತೀವ್ರತರವಾದ ಪ್ರಕರಣಗಳಲ್ಲಿ, ಕೇವಲ ಸೂಜಿಯನ್ನು ನೋಡುವುದರಿಂದ ಉಂಟಾಗುವ ಆತಂಕವು ತಲೆತಿರುಗುವಿಕೆ, ಬೆವರುವಿಕೆ  ಮತ್ತು ಮೂರ್ಛೆ ಭಾವನೆಗಳನ್ನು ಉಂಟುಮಾಡುವ ಮಟ್ಟಿಗೆ ಹೆಚ್ಚಾಗುತ್ತದೆ.

ಎಷ್ಟು ಮಕ್ಕಳು ಸೂಜಿಗಳಿಗೆ ಹೆದರುತ್ತಾರೆ?
ವರದಿಯ ಪ್ರಕಾರ, ನಾಲ್ಕರಿಂದ 6 ವರ್ಷದೊಳಗಿನ ಐದು ಮಕ್ಕಳಲ್ಲಿ ಒಬ್ಬರಿಗೆ (ಶೇ 19) ಸೂಜಿಗಳ ಫೋಬಿಯಾ ಇರುತ್ತದೆ ಮತ್ತು ಇದು 10-11 ವರ್ಷ ವಯಸ್ಸಿನೊಳಗೆ ಒಂಬತ್ತರಲ್ಲಿ ಒಬ್ಬರಿಗೆ (ಶೇ 11) ಕಡಿಮೆಯಾಗುತ್ತದೆ. ವಯಸ್ಕರಲ್ಲಿ ಸುಮಾರು 3.5 ರಿಂದ 10 ಪ್ರತಿಶತದಷ್ಟು ಜನರು ಸೂಜಿ ಫೋಬಿಯಾವನ್ನು ಹೊಂದಿರುತ್ತಾರೆ. ಮಕ್ಕಳಲ್ಲಿ ಈ ಭಯವು ಹಿಂದಿನ ರಕ್ತ ಪರೀಕ್ಷೆಗಳು, ಚುಚ್ಚುಮದ್ದು ಮತ್ತು ಇತರ ವೈದ್ಯಕೀಯ ಚಿಕಿತ್ಸೆಗಳ ಕಾರಣದಿಂದಾಗಿರಬಹುದು.

ಸೂಜಿಗಳ ಭಯವನ್ನು ಕಡಿಮೆ ಮಾಡುವುದು ಹೇಗೆ?
ಲಸಿಕೆಗಾಗಿ ಅಪಾಯಿಂಟ್‌ಮೆಂಟ್ ಪಡೆಯುವಾಗ, ಸಿದ್ಧತೆ ನಡೆಸಲು ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳುವಂತೆ ನೀವು ನರ್ಸ್‌ಗೆ ಕೇಳಿಕೊಳ್ಳಬಹುದು. ಮಕ್ಕಳು ವ್ಯಾಕ್ಸಿನೇಷನ್‌ಗಾಗಿ ಬಂದಾಗ, ಹೆಚ್ಚಿನ ದಾದಿಯರು ಮಗುವಿಗೆ ಆತಂಕಕ್ಕೊಳಗಾಗಿದೆ  ಮತ್ತು ನರ್ವಸ್ ಆಗಿದೆ ಅಥವಾ ಚುಚ್ಚುಮದ್ದಿನ ಬಗ್ಗೆ ತುಂಬಾ ಭಯಪಡುತ್ತಿದೆ ಎಂಬುದನ್ನು ಮೊದಲೇ ಗುರುತಿಸುತ್ತಾರೆ. 

ಇದನ್ನೂ ಓದಿ-11 ಬಾರಿ ಮದುವೆಯಾಗಿರುವ 52 ವರ್ಷದ ಮಹಿಳೆ 12ನೇ ಪತಿಗಾಗಿ ಸಿದ್ಧ..!

ಮೂರ್ಛೆಯನ್ನು ತಡೆಗಟ್ಟಲು, ದಾದಿಯರು ಮಗುವಿಗೆ ಸ್ನಾಯುಗಳನ್ನು ಬಿಗಿ ಹಿಡಿದು  ನಂತರ ಬಿಡುಗಡೆ ಮಾಡಲು ಕೇಳುವ ಮೂಲಕ ಸಹಾಯ ಮಾಡಬಹುದು. ಆಳವಾದ ಉಸಿರನ್ನು ತೆಗೆದುಕೊಂಡು, ಅದನ್ನು ಹಿಡಿದುಕೊಳ್ಳಿ ಮತ್ತು ನಿಧಾನವಾಗಿ ಬಿಡುವಂತೆ ಅವರು ಮಗುವಿಗೆ ಸೂಚಿಸಬಹುದು. ಮಗುವಿನ ಗಮನವನ್ನು ಸೂಜಿ ಮೇಲಿಂದ  ಬೇರೆಡೆಗೆ ತಿರುಗಿಸಲು ಅವರು ತಮ್ಮ ಕಾಲ್ಬೆರಳುಗಳನ್ನು ಅಲ್ಲಾಡಿಸಲು ಕೇಳಬಹುದು.

ಇದನ್ನೂ ಓದಿ-Bike Stunts Video: ಹುಡ್ಗಿಯರ ಮುಂದೆ ಡೌಲು ಹೊಡೆಯಲು ಹೋಗಿ ಬೈಕ್ ಮೇಲಿಂದ ಬಕ್ ಬಾರ್ ಬಿದ್ದ ಭೂಪ

ವ್ಯಾಕ್ಸಿನೇಷನ್ ಸಮಯದಲ್ಲಿ ನಿಮ್ಮ ಮಗುವಿಗೆ ಯಾವುದೇ ನಕಾರಾತ್ಮಕ ಅನುಭವವಿದ್ದರೆ ಮತ್ತು ನೀವು ವೃತ್ತಿಪರ ಸಹಾಯವನ್ನು ಪಡೆಯಲು ಬಯಸಿದರೆ, ನೀವು ನಿಮ್ಮ ಸಾಮಾನ್ಯ ವೈದ್ಯರು ಅಥವಾ ಚಿಕ್ಕ ಮಕ್ಕಳ ತಜ್ಞರನ್ನು ಸಂಪರ್ಕಿಸಬಹುದು.

ಇದನ್ನೂ ಓದಿ-Reason Behind Getting Hell: ಸತ್ತರೂ ಬೆನ್ ಬಿಡಲ್ಲ ಈ ಮಹಾಪಾಪಗಳು, ಇವುಗಳಿಂದ ಪಾರಾಗಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News