ಈ ಒಂದು ಸಾಧನವನ್ನು ಹೊರ ಹಾಕಿದರೆ ಮೂರು ಸಾವಿರದಷ್ಟು ಕಡಿಮೆಯಾಗುತ್ತದೆ ವಿದ್ಯುತ್ ಬಿಲ್

How To Save Electricity Bill:ಹೆಚ್ಚಿನ ವಿದ್ಯುತ್ ಬಿಲ್ ಗೆ ಎಸಿ ಪ್ರಮುಖ ಕಾರಣವಾಗಿರುತ್ತದೆ. ದಿನವಿಡೀ ಎಸಿ ಹಾಕುವುದರಿಂದ ವಿದ್ಯುತ್ ಬಿಲ್ ಹೆಚ್ಚು ಬರುತ್ತದೆ. ಅದರಲ್ಲೂ ಸಾಮಾನ್ಯ ಎಸಿ ಬಳಸುತ್ತಿದ್ದರೆ ಅಧಿಕ ವಿದ್ಯುತ್ ಬಿಲ್ ಬರುವುದನ್ನು ಯಾರಿಗೂ ತಡೆಯುವುದು ಸಾಧ್ಯವಾಗುವುದಿಲ್ಲ.   

Written by - Ranjitha R K | Last Updated : Jul 18, 2022, 08:59 AM IST
  • ಬೇಸಿಗೆಯಲ್ಲಿ ಎಸಿ ಬಳಕೆ ಹೆಚ್ಚಿರುತ್ತದೆ
  • ಎಸಿಯಿಂದ ಹೆಚ್ಚುತ್ತದೆ ವಿದ್ಯುತ್ ಬಿಲ್
  • ಎಸಿ ಬಳಕೆ ಹೆಚ್ಚಾದಂತೆ ವಿದ್ಯುತ್ ಬಿಲ್ ಕೂಡಾ ಏರುತ್ತಲೇ ಹೋಗುತ್ತದೆ.
ಈ ಒಂದು ಸಾಧನವನ್ನು ಹೊರ ಹಾಕಿದರೆ ಮೂರು ಸಾವಿರದಷ್ಟು ಕಡಿಮೆಯಾಗುತ್ತದೆ ವಿದ್ಯುತ್ ಬಿಲ್   title=
How to Save Electricity (file photo)

How To Save Electricity Bill : ಬೇಸಿಗೆಯಲ್ಲಿ ಎಸಿ ಬಳಕೆ ಹೆಚ್ಚಿರುತ್ತದೆ. ಎಸಿ ಬಳಕೆ ಹೆಚ್ಚಾದಂತೆ ವಿದ್ಯುತ್ ಬಿಲ್ ಕೂಡಾ ಏರುತ್ತಲೇ ಹೋಗುತ್ತದೆ. ಎಸಿ ಸೇರಿದಂತೆ ಕೆಲವು ಎಲೆಕ್ಟ್ರಾನಿಕ್ ಸಾಧನಗಳು ದಿನವಿಡೀ ಕಾರ್ಯನಿರ್ವಹಿಸುತ್ತವೆ. ಹೀಗಿರುವಾಗ ಅತಿಯಾದ ವಿದ್ಯುತ್ ಬಿಲ್ ನ ಭಾರವನ್ನು ಕೂಡಾ ಹೊರ ಬೇಕಾಗುತ್ತದೆ.  ಆದರೆ ಕೆಲವೊಂದು ವಿಷಯಗಳ ಬಗ್ಗೆ ಎಚ್ಚರ ವಹಿಸುವ ಮೂಲಕ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು. ಸಾವಿರಾರು ರೂಪಾಯಿ ಬರುವ ವಿದ್ಯುತ್ ಬಿಲ್ ನಲ್ಲಿ ಮೂರು ಸಾವಿರದಷ್ಟು ಬಿಲ್ ಕಡಿಮೆ ಮಾಡಬಹುದು. 

ಎಸಿಯಿಂದ ಹೆಚ್ಚುತ್ತದೆ ವಿದ್ಯುತ್ ಬಿಲ್ : 
ಹೆಚ್ಚಿನ ವಿದ್ಯುತ್ ಬಿಲ್ ಗೆ ಎಸಿ ಪ್ರಮುಖ ಕಾರಣವಾಗಿರುತ್ತದೆ. ದಿನವಿಡೀ ಎಸಿ ಹಾಕುವುದರಿಂದ ವಿದ್ಯುತ್ ಬಿಲ್ ಹೆಚ್ಚು ಬರುತ್ತದೆ. ಅದರಲ್ಲೂ ಸಾಮಾನ್ಯ ಎಸಿ ಬಳಸುತ್ತಿದ್ದರೆ ಅಧಿಕ ವಿದ್ಯುತ್ ಬಿಲ್ ಬರುವುದನ್ನುಯಾರಿಗೂ ತಡೆಯುವುದು ಸಾಧ್ಯವಾಗುವುದಿಲ್ಲ. ವಿದ್ಯುತ್ ಉಳಿಸಲು ಇನ್ವರ್ಟರ್ ಎಸಿ ಹಾಕಬಹುದು. ಇದು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ : Vegetable Price: ತರಕಾರಿಗಳ ಮೇಲೂ ಜಿಎಸ್‌ಟಿ ಕಣ್ಣು! ಹೀಗಿದೆ ನೋಡಿ ಇಂದಿನ ಬೆಲೆ

ಇನ್ವರ್ಟರ್ ಎಸಿ ಅಳವಡಿಸುವುದರಿಂದ 3 ಸಾವಿರ ರೂಪಾಯಿ ಬಿಲ್ ಕಡಿಮೆಯಾಗುತ್ತದೆ. ಇದಕ್ಕಾಗಿ ತಕ್ಷಣ ಎಸಿಯನ್ನು ಬದಲಾಯಿಸಬೇಕು. ಕಂಪನಿಗಳು PCB ವಾರಂಟಿಯನ್ನು ಸಹ ನೀಡುತ್ತವೆ. ನೀವು ಕನಿಷ್ಟ 5 ವರ್ಷಗಳವರೆಗೆ ಪಿಸಿಬಿಯ ಚಿಂತೆ ಇರುವುದಿಲ್ಲ. 

ಅಡುಗೆಮನೆಯಲ್ಲಿ ಬಳಸುವ ಚಿಮಣಿ ಕೂಡ ಮುಖ್ಯ : 
ಅಡುಗೆ ಮಾಡುವಾಗ ಅಂದರೆ ಒಗ್ಗರಣೆ ಹಾಕುವಾಗ, ಕರಿದ  ತಿನಿಸುಗಳನ್ನು ತಯಾರಿಸುವಾಗ, ಎಣ್ಣೆಯಲ್ಲಿ ಹುರಿಯುವಾಗ ಚಿಮಣಿಯನ್ನು ಬಳಸಲಾಗುತ್ತದೆ.   ಚಿಮಣಿಯನ್ನು ನಿರಂತರವಾಗಿ ಬಳಸುವುದರಿಂದ ವಿದ್ಯುತ್ ಬಿಲ್ ಕೂಡ ಹೆಚ್ಚಾಗುತ್ತದೆ.  ಹೀಗಿದ್ದಾಗ ಚಿಮಣಿಯನ್ನು ಬೇರೆ ಸಾಧನದೊಂದಿಗೆ ಬದಲಾಯಿಸಬಹುದು. ಇದಕ್ಕಾಗಿ ಎಂಜಿನಿಯರ್ ಅನ್ನು ಸಂಪರ್ಕಿಸಬೇಕಾಗುತ್ತದೆ. 

ಇದನ್ನೂ ಓದಿ : Gold Price Today : ಇಂದು ಚಿನ್ನ ಬೆಳ್ಳಿ ಅಗ್ಗವೋ ದುಬಾರಿಯೋ ? ಎಷ್ಟಿದೆ ಇಂದಿನ ದರ ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News