Tips For Safety Driving: ನೀವೂ ಚಪ್ಪಲ್ ಧರಿಸಿ ಕಾರು ಒಡಸ್ತಿರಾ? ಎಚ್ಚರ..! ಕಾರಣ ಇಲ್ಲಿದೆ

Driving Tips: ಸಾಮಾನ್ಯವಾಗಿ ಚಪ್ಪಲ್ ಧರಿಸಿ ವಾಹನ ಚಲಾಯಿಸದಿರಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಅದರಿಂದ ನಿಮಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. (Auto News In Kananda)  

Written by - Nitin Tabib | Last Updated : Mar 4, 2024, 03:57 PM IST
  • ಈ ಅಪಾಯಗಳ ಕಾರಣದಿಂದಾಗಿ, ಚಪ್ಪಲಿ ಧರಿಸಿ ಕಾರನ್ನು ಓಡಿಸುವುದನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ.
  • ಕಾರನ್ನು ಓಡಿಸಲು ಶೂಗಳು ಉತ್ತಮಆಯ್ಕೆಗಳಾಗಿವೆ. ಇವು ಪೆಡಲ್‌ಗಳ ಮೇಲೆ ಉತ್ತಮ ಹಿಡಿತವನ್ನು ನೀಡುತ್ತವೆ
  • ಮತ್ತು ಪೆಡಲ್‌ಗಳ ಮೇಲೆ ಪಾದವನ್ನು ಬದಲಾಯಿಸುವುದು ಕೂಡ ಅದರಿಂದ ಸುಲಭವಾಗುತ್ತದೆ.
Tips For Safety Driving: ನೀವೂ ಚಪ್ಪಲ್ ಧರಿಸಿ ಕಾರು ಒಡಸ್ತಿರಾ? ಎಚ್ಚರ..! ಕಾರಣ ಇಲ್ಲಿದೆ title=

Vehicle Driving Tips: ಚಪ್ಪಲಿ ಧರಿಸಿ ಕಾರನ್ನು ಓಡಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಪ್ರತಿಯೊಬ್ಬರು ಸ್ವತಂತ್ರರಾಗಿರುತ್ತಾರೆ. ಏಕೆಂದರೆ ಕಾನೂನಿನ ಪ್ರಕಾರ ಅದು ನಿಮ್ಮ ಆಯ್ಕೆಯಾಗಿದೆ. ಆದರೆ, ಸಾಮಾನ್ಯವಾಗಿ ಚಪ್ಪಲಿ ಧರಿಸಿ ಕಾರನ್ನು ಓಡಿಸದಿರಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಅದರಿಂದ ನಿಮಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಆದರೆ ಬಹುತೇಕರು ಇದನ್ನು ಅರ್ಥಮಾಡಿಕೊಳ್ಳದೆ ಚಪ್ಪಲಿ ಧರಿಸಿಯೇ ಕಾರನ್ನು ಓಡಿಸಲು ಇಷ್ಟಪಡುತ್ತಾರೆ. ಚಪ್ಪಲಿ ಧರಿಸಿ ಚಾಲನೆ ಮಾಡುವುದು ಅಪಾಯಕಾರಿ ಮತ್ತು ಅದು ಅಪಘಾತದ ಅಪಾಯ ಹೆಚ್ಚಿಸುತ್ತದೆ. (Technology News In Kannada)

ಹೀಗಾಗಿ ಸಾಧ್ಯವಾದಷ್ಟು ಚಪ್ಪಲಿಧ ಧರಿಸಿ ವಾಹನ ಚಲಿಸದಿರುವುದು ಉತ್ತಮ. ವಾಸ್ತವದಲ್ಲಿ, ಚಪ್ಪಲಿಯಿಂದ ಪೆಡಲ್ ಗಳ ಮೇಲೆ ಸರಿಯಾಗಿ ಗ್ರಿಪ್ ಸಿಗುವುದಿಲ್ಲ. ಇದರಿಂದಾಗಿ ಬ್ರೇಕ್, ಕ್ಲಚ್ ಅಥವಾ ಎಕ್ಸಲೆಟರ್ ಗಳ ಮೇಲೆ ಕಾಲು ಜಾರಿ ಬೀಳುವ ಸಾಧ್ಯತೆ ಇರುತ್ತದೆ. ಹಠಾತ್ ಬ್ರೇಕಿಂಗ್ ಸಂದರ್ಭದಲ್ಲಿ, ಚಪ್ಪಲಿಗಳು ಪೆಡಲ್ ಮೇಲೆ ಸುಲಭವಾಗಿ ಜಾರುತ್ತವೆ. ಏಕೆಂದರೆ ಅವುಗಳ ಹಿಡಿತ ಬಹುತೇಕ ಶೂಗಳ ಹಿಡಿತದಷ್ಟು ಉತ್ತಮವಾಗಿರುವುದಿಲ್ಲ. ಇದರಿಂದ ಕಾರು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಬಹುದು. (Auto News In Kananda)

ಇದಲ್ಲದೆ, ಪೆಡಲ್ ನಡುವೆ ಚಪ್ಪಲಿ ಸಿಲುಕಿಕೊಳ್ಳುವ ಅಪಾಯವೂ ಇರುತ್ತದೆ. ಹಸ್ತಚಾಲಿತ ಕಾರುಗಳು ಮೂರು ಪೆಡಲ್ಗಳನ್ನು ಹೊಂದಿರುತ್ತವೆ - ಎಕ್ಸಲೆಟರ್ ಪೆಡಲ್, ಬ್ರೇಕ್ ಪೆಡಲ್ ಮತ್ತು ಕ್ಲಚ್ ಪೆಡಲ್. ನಿಮ್ಮ ಬಲಗಾಲು ಎಕ್ಸಲೆಟರ್  ಪೆಡಲ್ ಮತ್ತು ಬ್ರೇಕ್ ಪೆಡಲ್ ಮೇಲೆ ಚಲಿಸುತ್ತಲೇ ಇರುತ್ತದೆ (Tips For Safety Driving).

ಇದನ್ನೂ ಓದಿ-Paytm ಸಂಕಷ್ಟದ ನಡುವೆ UPI ಹ್ಯಾಂಡಲ್ ಬಿಡುಗಡೆ ಮಾಡಿದ Flipkart! ಹೇಗೆ ಕಾರ್ಯನಿರ್ವಹಿಸುತ್ತೆ ಇಲ್ಲಿ ತಿಳಿಯಿರಿ!

ನಿಮ್ಮ ಪಾದವನ್ನು ಎಕ್ಸಿಲೆಟರ್ ಪೆಡಲ್‌ನಿಂದ ಬ್ರೇಕ್ ಪೆಡಲ್‌ಗೆ ಅಥವಾ ಬ್ರೇಕ್ ಪೆಡಲ್‌ನಿಂದ ಎಕ್ಸಿಲೆಟರ್ ಪೆಡಲ್‌ಗೆ ಬದಲಾಯಿಸುವಾಗ, ಚಪ್ಪಲಿ ಪೆಡಲ್‌ಗಳ ಮಧ್ಯೆ ಸಿಲುಕಿಕೊಳ್ಳಬಹುದು. ಇದು ಗಂಭೀರ ಪರಿಸ್ಥಿತಿಗೆ ಕಾರಣವಾಗಬಹುದು. ಇಂತಹ ಸನ್ನಿವೇಶದಲ್ಲಿ, ಚಪ್ಪಲಿ ತೆಗೆಯಲು ಯತ್ನಿಸುತ್ತಿರುವಾಗ, ಆಕಸ್ಮಿಕವಾಗಿ ಕಾಲು ಎಕ್ಸಿಲೆಟರ್ ಅಥವಾ ಬ್ರೇಕ್ ಪೆಡಲ್ ಅನ್ನು ಗಟ್ಟಿಯಾಗಿ ಒತ್ತಬಹುದು.

ಇದನ್ನೂ ಓದಿ-World Dosa Day 2024: ವರ್ಷದಲ್ಲಿ 2.9 ಕೋಟಿ ದೋಸೆ ಆರ್ಡರ್, ನಮ್ಮ ಬೆಂಗಳೂರು ದೋಸೆ ರಾಜಧಾನಿ, ಚಾಂಪಿಯನ್ ಯಾರು ಗೊತ್ತಾ?

ಈ ಅಪಾಯಗಳ ಕಾರಣದಿಂದಾಗಿ, ಚಪ್ಪಲಿ ಧರಿಸಿ ಕಾರನ್ನು ಓಡಿಸುವುದನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ. ಕಾರನ್ನು ಓಡಿಸಲು ಶೂಗಳು ಉತ್ತಮಆಯ್ಕೆಗಳಾಗಿವೆ. ಇವು ಪೆಡಲ್‌ಗಳ ಮೇಲೆ ಉತ್ತಮ ಹಿಡಿತವನ್ನು ನೀಡುತ್ತವೆ ಮತ್ತು ಪೆಡಲ್‌ಗಳ ಮೇಲೆ ಪಾದವನ್ನು ಬದಲಾಯಿಸುವುದು ಕೂಡ ಅದರಿಂದ ಸುಲಭವಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News