ಮೊಬೈಲ್ ಬಳಕೆದಾರರಿಗೆ ಸೆಪ್ಟೆಂಬರ್ ಒಂದರಿಂದ ಬದಲಾಗಲಿದೆ ನಿಯಮ, ನಿಮ್ಮ ಮೇಲಾಗುವ ಪರಿಣಾಮ ತಿಳಿಯಿರಿ

ಸೆಪ್ಟೆಂಬರ್ 1 ರಿಂದ, OTT ಪ್ಲಾಟ್‌ಫಾರ್ಮ್‌ನಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ದುಬಾರಿಯಾಗಲಿದೆ. 

Written by - Ranjitha R K | Last Updated : Aug 26, 2021, 03:08 PM IST
  • ಡಿಸ್ನಿ + ಹಾಟ್‌ಸ್ಟಾರ್ ತನ್ನ ಪ್ಲಾನ್ ಅನ್ನು ಸೆಪ್ಟೆಂಬರ್ 1 ರಿಂದ ದುಬಾರಿ ಮಾಡಲಿದೆ.
  • ಸೆಪ್ಟೆಂಬರ್ 1 ರಿಂದ ಅಮೆಜಾನ್‌ನಿಂದ ಖರೀದಿ ಕೂಡಾ ದುಬಾರಿಯಾಗಲಿದೆ.
  • ಫೇಕ್ ಕಂಟೆಂಟ್ ಪ್ರಚಾರ ಮಾಡುವ ಅಪ್ಲಿಕೇಶನ್‌ಗಳಿಗೂ ಸೆಪ್ಟೆಂಬರ್ 1 ರಿಂದ ನಿಷೇಧ
ಮೊಬೈಲ್ ಬಳಕೆದಾರರಿಗೆ  ಸೆಪ್ಟೆಂಬರ್ ಒಂದರಿಂದ ಬದಲಾಗಲಿದೆ ನಿಯಮ, ನಿಮ್ಮ ಮೇಲಾಗುವ ಪರಿಣಾಮ ತಿಳಿಯಿರಿ   title=
ಸೆಪ್ಟೆಂಬರ್ ಒಂದರಿಂದ ಬದಲಾಗಲಿದೆ ನಿಯಮ(file photo)

ನವದೆಹಲಿ : ಈಗ ಬಹುತೇಕ ಎಲ್ಲರೂ ಸ್ಮಾರ್ಟ್‌ಫೋನ್ ಬಳಸುತ್ತಾರೆ. ಸ್ಮಾರ್ಟ್ ಫೋನಿನಲ್ಲಿ ಡಿಸ್ನಿ + ಹಾಟ್‌ಸ್ಟಾರ್‌ನಂತಹ OTT ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿದ್ದರೆ, ಈ ಸುದ್ದಿಯು ಉಪಯೋಗಕ್ಕೆ ಬರುತ್ತದೆ. ಡಿಸ್ನಿ + ಹಾಟ್‌ಸ್ಟಾರ್ (Disney+ Hotstar) ತನ್ನ ಪ್ಲಾನ್ ಗಳನ್ನು ದುಬಾರಿ ಮಾಡಲಿದೆ. ಇದರೊಂದಿಗೆ, ಅಮೆಜಾನ್, ಗೂಗಲ್, ಗೂಗಲ್ ಡ್ರೈವ್ ಕೂಡಾ ತಮ್ಮ ಸೇವಾ ನಿಯಮಗಳನ್ನು ಬದಲಾಯಿಸಿದೆ. ಈ ಬದಲಾವಣೆಗಳು ಸೆಪ್ಟೆಂಬರ್ 1 ಮತ್ತು ಸೆಪ್ಟೆಂಬರ್ 15 ರಿಂದ ಅನ್ವಯವಾಗಲಿದೆ. 

ದುಬಾರಿಯಾಗಲಿದೆ ಡಿಸ್ನಿ + ಹಾಟ್‌ಸ್ಟಾರ್‌ ಪ್ಲಾನ್ :  
ಸೆಪ್ಟೆಂಬರ್ 1 ರಿಂದ, OTT ಪ್ಲಾಟ್‌ಫಾರ್ಮ್‌ನಲ್ಲಿ ಡಿಸ್ನಿ + ಹಾಟ್‌ಸ್ಟಾರ್ (Disney+ Hotstar) ಚಂದಾದಾರಿಕೆ ದುಬಾರಿಯಾಗಲಿದೆ. ಇನ್ನು ಮುಂದೆ ಬಳಕೆದಾರರು 399 ರೂ. ಬದಲಿಗೆ 499 ರೂಪಾಯಿ  ಪಾವತಿಸಬೇಕಾಗುತ್ತದೆ. ಅಂದರೆ ಬಳಕೆದಾರರು ಹೆಚ್ಚಿಗೆ 100 ರೂ.ಗಳನ್ನು ಹೆಚ್ಚಿಗೆ ಪಾವತಿಸಬೇಕಾಗುತ್ತದೆ. ಅದೇ ರೀತಿ, 899ರು ಪಾತಿಸಿದರೆ ಗ್ರಾಹಕರು ಡಿಸ್ನಿ + ಹಾಟ್‌ಸ್ಟಾರ್ ಅಪ್ಲಿಕೇಶನ್ ಅನ್ನು ಎರಡು ಫೋನ್‌ಗಳಲ್ಲಿ ಚಲಾಯಿಸಬಹುದು. ಅಲ್ಲದೆ, ಈ ಚಂದಾದಾರಿಕೆ ಯೋಜನೆಯಲ್ಲಿ HD ಗುಣಮಟ್ಟವೂ ಲಭ್ಯವಿರುತ್ತದೆ. 

ಇದನ್ನೂ ಓದಿWhatsApp ಬಳಕೆದಾರರೇ ಎಚ್ಚರ! ಮಿಸ್ ಆಗಿ ಕೂಡ ಈ ಆವೃತ್ತಿಯನ್ನು ಡೌನ್‌ಲೋಡ್ ಮಾಡಬೇಡಿ

ಅಮೆಜಾನ್‌ನಿಂದ ಖರೀದಿ ದುಬಾರಿಯಾಗಲಿದೆ : 
ಸೆಪ್ಟೆಂಬರ್ 1 ರಿಂದ, ಅಮೆಜಾನ್‌ನಿಂದ (Amazon) ಆರ್ಡರ್ ಮಾಡುವುದು ದುಬಾರಿಯಾಗಬಹುದು. ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯ ಹೆಚ್ಚಳದಿಂದ, ಕಂಪನಿಯು ಲಾಜಿಸ್ಟಿಕ್ಸ್ ವೆಚ್ಚವನ್ನು ಹೆಚ್ಚಿಸಬಹುದು. ಹಾಗಾದಾಗ 500 ಗ್ರಾಂ ಪ್ಯಾಕೇಜ್‌ಗೆ ರೂ 58 ಪಾವತಿಸಬೇಕಾಗಬಹುದು. 

ಪರ್ಸನಲ್ ಲೋನ್ ಅಪ್ಲಿಕೇಶನ್ : 
15 ಸೆಪ್ಟೆಂಬರ್ ರಿಂದ Google Play Storeಗೂ ಹೊಸ ನಿಯಮಗಳು ಜಾರಿಗೆ ಬರಲಿವೆ. ಸಾಲದ ಹೆಸರಿನಲ್ಲಿ ಮೋಸ ಮಾಡುವ ಮೂಲಕ ಸಾಲಗಾರರಿಗೆ ಕಿರುಕುಳ ನೀಡುವ, ಶಾರ್ಟ್ ಪರ್ಸನಲ್ ಲೋನ್ ಅಪ್ಲಿಕೇಶನ್‌ಗಳನ್ನು ಸೆಪ್ಟೆಂಬರ್ 15ರಿಂದ ನಿಷೇಧಿಸಲಾಗುವುದು. ಇಂತಹ ಸುಮಾರು 100 ಕಿರು ಸಾಲದ ಆಪ್‌ಗಳ ಬಗ್ಗೆ ದೂರು ನೀಡಲಾಗಿತ್ತು. ಅದಾದ ನಂತರ Google ನಿಂದ ಹೊಸ ನಿಯಮಗಳನ್ನು ತರಲಾಗಿದೆ. ಹೊಸ ನಿಯಮಗಳಪ್ರಕಾರ, ಆಪ್ ಡೆವಲಪರ್‌ಗಳು ಕಿರು ಸಾಲದ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಇದನ್ನೂ ಓದಿ : Alert! WhatsApp ಬಳಕೆದಾರರಿಗೆ ಅಪಾಯಕಾರಿ ಸಾಬೀತಾಗುತ್ತಿದೆ ಈ ಆಪ್

ಫೇಕ್ ಕಂಟೆಂಟ್ ಪ್ರಚಾರ ಮಾಡುವವರ ಮೇಲೆ ನಿಷೇಧ : 
Google ನ ಹೊಸ ನೀತಿಯು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದ್ದು, ಇದರ ಅಡಿಯಲ್ಲಿ ಸುಳ್ಳು ಮತ್ತು ನಕಲಿ  ಕಂಟೆಂಟ್ ಗಳನ್ನು ಉತ್ತೇಜಿಸುವ ಆಪ್‌ಗಳನ್ನು ಸೆಪ್ಟೆಂಬರ್ 1 ರಿಂದ ನಿಷೇಧಿಸಲಾಗುತ್ತಿದೆ. ದೀರ್ಘಾವಧಿಯ ಆಪ್‌ಗಳನ್ನು ಡೆವಲಪರ್‌ಗಳ ಮೂಲಕ ಬ್ಲಾಕ್ ಮಾಡಲಾಗುವುದು ಎಂದು ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ. 

Google ಡ್ರೈವ್‌ ನಲ್ಲಿಯೂ ಬದಲಾವಣೆ : 
ಗೂಗಲ್ ಡ್ರೈವ್ (Google drive) ಬಳಕೆದಾರರಿಗೆ ಸೆಪ್ಟೆಂಬರ್ 13 ರಂದು ಹೊಸ ಸೆಕ್ಯೂರಿಟಿ ಅಪ್‌ಡೇಟ್ ಸಿಗಲಿದೆ. ಈ ಕಾರಣದಿಂದಾಗಿ ಗೂಗಲ್ ಡ್ರೈವ್ ಬಳಕೆ ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News