iPhone 14 Deal: ಐಫೋನ್ 14 ಬೆಲೆಯಲ್ಲಿ ತೀವ್ರ ಕುಸಿತ, ಖರೀದಿಗೆ ಮುಗಿಬಿದ್ದ ಜನರು!

iPhone 14 Discount: iPhone 14 ಖರೀದಿಯ ಮೇಲೆ ಅದ್ಭುತ ಕೊಡಗೆಯನ್ನು ನೀಡಲಾಗುತ್ತಿದೆ. ಶೇ.12ರಷ್ಟು ರಿಯಾಯಿತಿ ಜೊತೆಗೆ ವಿನಿಮಯ ಕೊಡಗೆಯೂ ಲಭ್ಯವಿದ್ದು, ಅತ್ಯಂತ ಕಡಿಮೆ ಬೆಲೆಗೆ ನೀವು ಐಫೋನ್ 14 ಖರೀದಿಸಬಹುದು.  

Written by - Puttaraj K Alur | Last Updated : Nov 24, 2023, 08:25 PM IST
  • iPhone 14 ಖರೀದಿಯ ಮೇಲೆ ಅದ್ಭುತ ಕೊಡಗೆಯನ್ನು ನೀಡಲಾಗುತ್ತಿದೆ
  • ಶೇ.12ರಷ್ಟು ರಿಯಾಯಿತಿ ಜೊತೆಗೆ ವಿನಿಮಯ ಕೊಡಗೆಯಲ್ಲಿ ಐಫೋನ್ ಖರೀದಿಸಿ
  • ಫ್ಲಿಪ್‌ಕಾರ್ಟ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ನೀವು ಐಫೋನ್ 14 ಖರೀದಿಸಬಹುದು
iPhone 14 Deal: ಐಫೋನ್ 14 ಬೆಲೆಯಲ್ಲಿ ತೀವ್ರ ಕುಸಿತ, ಖರೀದಿಗೆ ಮುಗಿಬಿದ್ದ ಜನರು!  title=
ಕಡಿಮೆ ಬೆಲೆಗೆ ಐಫೋನ್ 14 ಖರೀದಿಸಿ

ನವದೆಹಲಿ: iPhone 14 ಮಾದರಿಗೆ ಸಾಕಷ್ಟು ಬೇಡಿಕೆಯಿದೆ. ಇದು ಎಲ್ಲರೂ ಇಷ್ಟಪಡುವ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ನೀವು iPhone 14 ಖರೀದಿಸುವ ಮನಸ್ಸು ಹೊಂದಿದ್ದರೆ ಇಲ್ಲಿದೆ ಸುವರ್ಣಾವಕಾಶ. ಈ ಮಾದರಿಯನ್ನು ನೀವು ರಿಯಾಯಿತಿಯಲ್ಲಿ ಖರೀದಿಸಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.  

ಇದನ್ನೂ ಓದಿ: ರೈಲ್ವೆಯಿಂದ ವಿಶೇಷ ಸೌಲಭ್ಯ! ಹಿರಿಯ ನಾಗರಿಕರಿಗೆ ಹೆಚ್ಚು ಅನುಕೂಲ

ರಿಯಾಯಿತಿ ಕೊಡುಗೆ ಎಲ್ಲಿ ಲಭ್ಯವಿದೆ?

ಈ ರಿಯಾಯಿತಿ ಕೊಡುಗೆಯನ್ನು ಫ್ಲಿಪ್‌ಕಾರ್ಟ್‌ನಲ್ಲಿ ನೀಡಲಾಗುತ್ತಿದೆ. ಈ ಕೊಡುಗೆಯಲ್ಲಿ ದೊಡ್ಡ ಉಳಿತಾಯ ಮಾಡಬಹುದು. ಫ್ಲಿಪ್‌ಕಾರ್ಟ್‌ನಲ್ಲಿ APPLE iPhone 14 (Blue, 128 GB) 69,900 ರೂ.ಗಳ ಮೂಲ ಬೆಲೆಯಲ್ಲಿ ಸಿಗುತ್ತಿದೆ. ನಿಸ್ಸಂಶಯವಾಗಿ ಈ ಬೆಲೆ ಪ್ರತಿಯೊಬ್ಬರ ಬಜೆಟ್‌ಗೆ ಹೊಂದಿಕೆಯಾಗುವುದಿಲ್ಲ. ಆದರೆ ಐಫೋನ್ 14 ಮೇಲೆ ಭರ್ಜರಿ ರಿಯಾಯಿತಿ ಕೊಡುಗೆಯನ್ನು ನೀಡಲಾಗುತ್ತಿದೆ. ಈ ಅದ್ಭುತ ಕೊಡುಗೆಯಿಂದ ನೀವು ಬಹಳಷ್ಟು ಹಣ ಉಳಿಸಬಹುದು.

ಇದನ್ನೂ ಓದಿ: ನೀವೂ ಕಾಲೇಜು ವಿದ್ಯಾರ್ಥಿಗಳೇ? ನಿಮಗಾಗಿ ಲಾಂಚ್ ಆಗಿವೆ ಎರಡು ಹೊಸ ಇ-ಸ್ಕೂಟರ್ ಗಳು, ಬೆಲೆ ಜಸ್ಟ್ 55 ಸಾವಿರ!

ರಿಯಾಯಿತಿ ಕೊಡುಗೆಯ ಲಾಭ 

ಐಫೋನ್ 14 (Blue, 128 GB) ಮಾದರಿಗೆ ಗ್ರಾಹಕರು 69,900 ರೂ.  ಪಾವತಿಸಬೇಕಾಗುತ್ತದೆ. ಆದರೆ ನೀವು ವಿನಿಮಯ ಕೊಡುಗೆಯಲ್ಲಿ ಇದನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಮಾದರಿಯ ಖರೀದಿಯ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ಶೇ.12ರಷ್ಟು ಅಂದರೆ 8,901 ರೂ.ಗಳ ಸಂಪೂರ್ಣ ರಿಯಾಯಿತಿ ನೀಡಲಾಗುತ್ತಿದೆ. ಈ ರಿಯಾಯಿತಿ ಪಡೆದ ಬಳಿಕ ಗ್ರಾಹಕರಿಗೆ ಕೇವಲ 60,999 ರೂ.ಗೆ ಐಫೋನ್ 14 ಸಿಗಲಿದೆ. ಇದರೊಂದಿಗೆ ವಿನಿಮಯ ಕೊಡುಗೆಯಡಿ ಅತ್ಯಂತ ಕಡಿಮೆ ಬೆಲಗೆ ಐಫೋನ್ 14 ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News