ಫೋನ್ ಚಾರ್ಜರ್ ಬಿಳಿ ಅಥವಾ ಕಪ್ಪು ಬಣ್ಣದ್ದೇ ಯಾಕಿರುತ್ತದೆ ? ಇಲ್ಲಿದೆ ಉತ್ತರ

Why Charger Is Only White And Black:ಬಿಳಿ ಅಥವಾ ಕಪ್ಪು ಬಣ್ಣವನ್ನು ಬಿಟ್ಟು ಬೇರೆ ಬಣ್ಣಗಳಲ್ಲಿ ಚಾರ್ಜರ್ ಬರುವುದಿಲ್ಲ. ಇದರ ಹಿಂದಿನ ಕಾರಣವನ್ನು ನಾವಿಲ್ಲಿ ಹೇಳಲಿದ್ದೇವೆ. 

Written by - Ranjitha R K | Last Updated : Jan 15, 2024, 05:12 PM IST
  • ಬಹುತೇಕ ಎಲ್ಲರೂ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಬಳಸುತ್ತಾರೆ.
  • ಈ ಎರಡೂ ಸಾಧನಗಳು ಚಾರ್ಜ್ ಮಾಡದೆ ಕಾರ್ಯನಿರ್ವಹಿಸುವುದಿಲ್ಲ.
  • ಚಾರ್ಜ್ ಮಾಡಬೇಕಾದರೆ ನಮಗೆ ಚಾರ್ಜರ್ ಅಗತ್ಯವಿರುತ್ತದೆ.
ಫೋನ್ ಚಾರ್ಜರ್ ಬಿಳಿ ಅಥವಾ ಕಪ್ಪು ಬಣ್ಣದ್ದೇ ಯಾಕಿರುತ್ತದೆ ? ಇಲ್ಲಿದೆ ಉತ್ತರ  title=

Why Charger Is Only White And Black : ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಬಳಸುತ್ತಾರೆ. ಈ ಎರಡೂ ಸಾಧನಗಳು ಚಾರ್ಜ್ ಮಾಡದೆ ಕಾರ್ಯನಿರ್ವಹಿಸುವುದಿಲ್ಲ. ಚಾರ್ಜ್ ಮಾಡಬೇಕಾದರೆ ನಮಗೆ ಚಾರ್ಜರ್ ಅಗತ್ಯವಿರುತ್ತದೆ. ಚಾರ್ಜರ್ ಯಾವಾಗಲೂ ಕಪ್ಪು ಅಥವಾ ಬಿಳಿದ್ದೇ ಆಗಿರುತ್ತದೆ. ಈ ಎರಡು ಬಣ್ಣವನ್ನು ಬಿಟ್ಟು ಬೇರೆ ಬಣ್ಣಗಳಲ್ಲಿ ಚಾರ್ಜರ್ ಬರುವುದಿಲ್ಲ. ಇದರ ಹಿಂದಿನ ಕಾರಣವನ್ನು ನಾವಿಲ್ಲಿ ಹೇಳಲಿದ್ದೇವೆ. 

OnePlus ನ ಚಾರ್ಜರ್ ಕೇಬಲ್ ಕೆಂಪು ಬಣ್ಣದ್ದು : 
OnePlus ನ ಚಾರ್ಜರ್  ಕೇಬಲ್ ಕೆಂಪು ಬಣ್ಣದ್ದಾಗಿರುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕೇವಲ ಕೇಬಲ್ ಮಾತ್ರ ಕೆಂಪು ಬಣ್ಣದ್ದಾಗಿರುತ್ತದೆ. ಆದರೆ, ಚಾರ್ಜರ್ ಬಿಳಿ ಬಣ್ಣದ್ದೇ ಆಗಿರುತ್ತದೆ. 

ಇದನ್ನೂ ಓದಿ :  Google Kids App: ಮಕ್ಕಳ ಓದಿನಲ್ಲಿ ತುಂಬಾ ಸಹಕಾರಿಯಾಗಿದೆ ಈ ಅದ್ಭುತ ಆಪ್, ಇಂದೇ ಡೌನ್ ಲೋಡ್ ಮಾಡಿ!

ಚಾರ್ಜರ್ ಕಪ್ಪು ಬಣ್ಣದಲ್ಲಿ ಏಕಿರುತ್ತದೆ ? :
ಕಪ್ಪು ಬಣ್ಣವು ಇತರ ಬಣ್ಣಗಳಿಗಿಂತ ಉತ್ತಮವಾಗಿ ಶಾಖವನ್ನು ಹೀರಿಕೊಳ್ಳುತ್ತದೆ.ಚಾರ್ಜ್ ಮಾಡುವಾಗ ಸಾಮಾನ್ಯವಾಗಿ ಚಾರ್ಜರ್ ಬಿಸಿಯಾಗುತ್ತದೆ. ಕಪ್ಪು ಬಣ್ಣದ ಚಾರ್ಜರ್ ಶಾಖವನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಚಾರ್ಜರ್ ಅನ್ನು ಹಾನಿಗೊಳಿಸುವುದಿಲ್ಲ.

ಬಿಳಿ ಚಾರ್ಜರ್‌ಗಳು : 
ಆದರೆ, ಸ್ವಲ್ಪ ಸಮಯದ ನಂತರ, ಕಂಪನಿಗಳು ಬಿಳಿ ಬಣ್ಣದ ಚಾರ್ಜರ್‌ಗಳನ್ನು ಹೊರ ತರಲು ಪ್ರಾರಂಭಿಸಿದವು. ಬಿಳಿ ಬಣ್ಣದ ಚಾರ್ಜರ್‌ಗಳು ಬೇಗನೆ ಬಿಸಿಯಾಗುವುದಿಲ್ಲ. ಈ ಕಾರಣದಿಂದ ಬಿಳಿ ಬಣ್ಣದ ಚಾರ್ಜರ್  ಆಯುಷ್ಯ ಕೂಡಾ ಹೆಚ್ಚಾಗಿರುತ್ತದೆ. ಹೀಗಾಗಿ ಕಂಪನಿಗಳು ಬಿಳಿ ಬಣ್ಣದ ಚಾರ್ಜರ್ ಗಳನ್ನೂ ಹೊರ ತಂದವು.  

ಬಿಳಿ ಬಣ್ಣದ ಚಾರ್ಜರ್ ಹುಟ್ಟಿಕೊಂಡಿರುವುದು ಯಾಕೆ ? : 
ಕಪ್ಪು ಬಣ್ಣದ ಚಾರ್ಜರ್‌ನಲ್ಲಿಯೂ ಸಮಸ್ಯೆ ಎದುರಾಗುವುದಕ್ಕೆ ಆರಂಭವಾಯಿತು.  ಚಾರ್ಜರ್ ಕತ್ತಲೆಯಲ್ಲಿದ್ದಾಗ ಅದನ್ನು ನೋಡುವುದು ಕಷ್ಟವಾಗುತ್ತದೆ.ಇದರಿಂದ  ಚಾರ್ಜರ್ ಹಾನಿಯಾಗುವ ಅಪಾಯ ಹೆಚ್ಚು. ಬಿಳಿ ಬಣ್ಣದ ಚಾರ್ಜರ್‌ಗಳು ಕತ್ತಲೆಯಲ್ಲಿಯೂ  ಹೆಚ್ಚು ಗೋಚರಿಸುತ್ತವೆ.ಇದು ಚಾರ್ಜರ್‌ಗೆ ಹಾನಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಬಿಳಿ ಬಣ್ಣವನ್ನು ಇತರ ಬಣ್ಣಗಳಿಗಿಂತ ಹೆಚ್ಚು ಫ್ಯಾಶನ್ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಅನೇಕ ಕಂಪನಿಗಳು ಈಗ ತಮ್ಮ ಚಾರ್ಜರ್‌ಗಳನ್ನು ಬಿಳಿ ಬಣ್ಣದಲ್ಲಿ ನೀಡುತ್ತಿವೆ.

ಇದನ್ನೂ ಓದಿ : Bad News: ಜಿಯೋ-ಏರ್ಟೆಲ್ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್, 4ಜಿ ಪ್ಲಾನ್ ನಲ್ಲಿ ಇನ್ಮುಂದೆ ಸಿಗಲ್ಲ ಈ ಸೇವೆ!

ಆಪಲ್ ವೈಟ್ ಚಾರ್ಜರ್ :
ಆಪಲ್ ಯಾವಾಗಲೂ ತನ್ನ ಎಲ್ಲಾ ಸಾಧನಗಳಿಗೆ ಬಿಳಿ ಬಣ್ಣದ ಚಾರ್ಜರ್‌ಗಳನ್ನು ಪರಿಚಯಿಸಿದೆ. ಬಿಳಿ ಹೆಚ್ಚು ಕ್ಲಾಸಿಕ್ ಮತ್ತು ಆಧುನಿಕವಾಗಿ ಕಾಣುತ್ತದೆ ಎನ್ನುವುದೇ ಇದರ ಹಿಂದಿನ ಕಾರಣ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News