ತಂಪಾದ ಹವಾ ಜೊತೆಗೆ ವಿದ್ಯುತ್ ಬಿಲ್ ಉಳಿತಾಯಕ್ಕಾಗಿ ಎಸಿಯನ್ನು ಇಷ್ಟು ತಾಪಮಾನದಲ್ಲಿ ಚಲಾಯಿಸಿ!

ಈ ಬಿರು ಬಿಸಿಲಿನ ಬೇಗೆಯಿಂದ ಪರಿಹಾರ ಪಡೆಯಲು ಕೇವಲ ಫ್ಯಾನ್ ಹವಾ ಸಾಕಾಗುವುದೇ ಇಲ್ಲ. ಅದಕ್ಕಾಗಿಯೇ, ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಕೂಲರ್, ಇಲ್ಲವೇ ಎಸಿ ಮೊರೆಹೋಗುತ್ತಿದ್ದಾರೆ. ಆದರೆ, ಇವುಗಳ ಬಳಕೆಯಿಂದ ವಿದ್ಯುತ್ ಬಿಲ್ ಕೂಡ ಯತೇಚ್ಛವಾಗಿ ಬರಲಿದ್ದು ಇದು ತಿಂಗಳ ಬಜೆಟ್ ಅನ್ನು ಹಾಳು ಮಾಡಬಹುದು. 

Written by - Yashaswini V | Last Updated : Apr 12, 2023, 01:07 PM IST
  • ಎಸಿಯನ್ನು 24 ಡಿಗ್ರಿ ಸೆಲ್ಸಿಯಸ್‌ನಲ್ಲಿ ಹೊಂದಿಸುವುದು ದೀರ್ಘ ಕಾಲದವರೆಗೆ ನಿಮ್ಮ ಎಸಿ ಬಾಳಿಕೆ ಬರುವಂತೆ ಮಾಡುತ್ತದೆ.
  • 24 ಡಿಗ್ರಿ ಸೆಲ್ಸಿಯಸ್‌ನಲ್ಲಿ ಎಸಿ ಹೊಂದಿಸುವುದರಿಂದ ಹಲವು ಪ್ರಯೋಜನಗಳಿವೆ.
  • ಹಾಗಿದ್ದರೆ, ಎಸಿಯನ್ನು 24 ಡಿಗ್ರಿ ಸೆಲ್ಸಿಯಸ್‌ನಲ್ಲಿ ಚಲಾಯಿಸುವುದರಿಂದ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ಎಂದು ತಿಳಿಯಿರಿ
ತಂಪಾದ ಹವಾ ಜೊತೆಗೆ ವಿದ್ಯುತ್ ಬಿಲ್ ಉಳಿತಾಯಕ್ಕಾಗಿ ಎಸಿಯನ್ನು ಇಷ್ಟು ತಾಪಮಾನದಲ್ಲಿ ಚಲಾಯಿಸಿ! title=

AC Using Tips: ಬೇಸಿಗೆಯಲ್ಲಿ ಹವಾನಿಯಂತ್ರಣ ಎಂದರೆ ಎಸಿ ಬಳಕೆ ಅವಶ್ಯಕತೆ ಮಾತ್ರವಲ್ಲ ಒಂದರ್ಥದಲ್ಲಿ ಅನಿವಾರ್ಯವಾಗಿಬಿಟ್ಟಿದೆ. ಹಾಗಂತ ಹೆಚ್ಚು ಎಸಿ ಬಳಸುವುದರಿಂದ ವಿದ್ಯುತ್ ಬಿಲ್ ಹೊರೆ ಅಧಿಕವಾಗಿ ಬಜೆಟ್ ಹಾಳಾಗುತ್ತದೆ. ಇದನ್ನು ತಪ್ಪಿಸಲು ಎಸಿ ಬಲಸುವಾಗ ಕೆಲವು ಸಲಹೆಗಳನ್ನು ಅನುಸರಿಸುವುದು ತುಂಬಾ ಮುಖ್ಯ. ನೀವು ಮನೆಯಲ್ಲಿ ಎಸಿಯನ್ನು 24 ಡಿಗ್ರಿ ಸೆಲ್ಸಿಯಸ್‌ನಲ್ಲಿ  ಚಲಾಯಿಸುವುದರಿಂದ ಹಲವು  ಪ್ರಯೋಜನಗಳಿವೆ. 

ಎಸಿಯನ್ನು 24 ಡಿಗ್ರಿ ಸೆಲ್ಸಿಯಸ್‌ನಲ್ಲಿ  ಚಲಾಯಿಸುವುದರಿಂದಾಗುವ ಲಾಭಗಳೇನು?
ತಂಪಾದ ಹವಾ:

24 ಡಿಗ್ರಿ ಸೆಲ್ಸಿಯಸ್‌ನಲ್ಲಿ ಎಸಿ ಹೊಂದಿಸುವುದರಿಂದ ಇದು ಕೋಣೆಯಲ್ಲಿ ಆರಾಮದಾಯಕ ತಾಪಮಾನವನ್ನು ಪಸರಿಸುತ್ತದೆ. ಇದರಿಂದ ಕೋಣೆಯಲ್ಲಿ ತಂಪಾದ ಹವಾದಿಂದ ದೇಹವೂ ತಂಪಾಗಿರುತ್ತದೆ. 

ಇದನ್ನೂ ಓದಿ- ಮಾಧ್ಯಮ ಲೋಕದಲ್ಲಿ ಮತ್ತೊಂದು ಮೈಲಿಗಲ್ಲು: ಜೀ ಕನ್ನಡ ನ್ಯೂಸ್‌ ಚಾನೆಲ್‌ ಅದ್ದೂರಿ ಲೋಕಾರ್ಪಣೆ

ದೇಹದ ಉಷ್ಣತೆಯು ತ್ವರಿತವಾಗಿ ಬದಲಾಗುತ್ತದೆ:
ಎಸಿಯನ್ನು 24 ಡಿಗ್ರಿ ಸೆಲ್ಸಿಯಸ್‌ನಲ್ಲಿ ಚಲಾಯಿಸುವುದು ಮಧ್ಯಮ ಮಟ್ಟದ ತಾಪಮಾನವಾಗಿದ್ದು, ದೇಹದ ಉಷ್ಣತೆಯು ತ್ವರಿತವಾಗಿ ಬದಲಾಗಲು ಮತ್ತು ಎಸಿಯ ಹವಾಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ವಾಸ್ತವವಾಗಿ, ಕೋಣೆಯನ್ನು ಹೆಚ್ಚು ಕೂಲ್ ಮಾಡಲು ನೀವು ಎಸಿಯನ್ನು ಹೆಚ್ಚಿನ ತಾಪಮಾನದಲ್ಲಿ ಹೊಂದಿಸಿದಾದ ಇದರಿಂದ ದೇಹದ ಉಷ್ಣತೆಯೂ ಹೆಚ್ಚಾಗುತ್ತದೆ. ದೀರ್ಘ ಸಮಯದವರೆಗೆ ನೀವು ಈ ಅಭ್ಯಾಸವನ್ನು ಮುಂದುವರೆಸಿದರೆ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಕೂಡ ನಿಮ್ಮನ್ನು ಬಾಧಿಸಬಹುದು. 

ಇದನ್ನೂ ಓದಿ- ಅತಿ ಹೆಚ್ಚು ಮಾರಾಟವಾಗುತ್ತಿರುವ 7 ಸೀಟರ್ ಇದುವೇ! ಇದರ ಬೆಲೆ ಕೇವಲ 5.26 ಲಕ್ಷ

ಪವರ್ ಸೇವ್: 
24 ಡಿಗ್ರಿ ಸೆಲ್ಸಿಯಸ್‌ನಲ್ಲಿ ಎಸಿ ಚಲಾಯಿಸುವುದು ಆರೋಗ್ಯಕರ ತಾಪಮಾನವಾಗಿದೆ. ಮಾತ್ರವಲ್ಲ, ಇಷ್ಟು ತಾಪಮಾನದಲ್ಲಿ ಎಸಿಯನ್ನು ಚಲಾಯಿಸಿದಾಗ ಅದು ಕಡಿಮೆ ವಿದ್ಯುತ್ ಶಕ್ತಿಯನ್ನು ಬಳಸುತ್ತದೆ. ಇದರಿಂದ ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News