ಚಳಿಗಾಲದಲ್ಲಿ ಇಷ್ಟೇ ಇರಬೇಕು ಫ್ರಿಜ್ ಟೆಂಪರೇಚರ್ ? ಬಹುತೇಕರಿಗೆ ತಿಳಿದಿಲ್ಲ ಈ ಮಾಹಿತಿ

ಒಂದು ವೇಳೆ ರೆಫ್ರಿಜರೇಟರ್ ಸೆಟ್ಟಿಂಗ್ ಬದಲಾಯಿಸದಿದ್ದರೆ, ರೆಫ್ರಿಜರೇಟರ್ ಕಂಪ್ರೆಸರ್  ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಹೀಗಾದಾಗ ಫ್ರಿಜ್ ಬೇಗ ಹಾನಿಗೊಳಗಾಗಬಹುದು.  

Written by - Ranjitha R K | Last Updated : Nov 21, 2023, 02:07 PM IST
  • ಟೆಂಪರೇಚರ್ ಸೇಟ್ ಮಾಡಿಕೊಳ್ಳಿ
  • ಸಮಯಕ್ಕೆ ಸರಿಯಾಗಿ ಡಿ-ಫ್ರಾಸ್ಟ್ ಮಾಡಿ
  • ಚೇಂಬರ್ ಸೆಟ್ಟಿಂಗ್ ಎಷ್ಟಿರಬೇಕು
ಚಳಿಗಾಲದಲ್ಲಿ ಇಷ್ಟೇ ಇರಬೇಕು ಫ್ರಿಜ್ ಟೆಂಪರೇಚರ್ ? ಬಹುತೇಕರಿಗೆ ತಿಳಿದಿಲ್ಲ ಈ ಮಾಹಿತಿ  title=

ಬೆಂಗಳೂರು : ಚಳಿಗಾಲದಲ್ಲಿ ಫ್ರಿಜ್‌ನ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಅವಶ್ಯಕತೆಯಿರುತ್ತದೆ. ಚಳಿಗಾಲದಲ್ಲಿ ಹೊರಗಿನ ತಾಪಮಾನ ಕಡಿಮೆಯಿರುತ್ತದೆ. ಆದ್ದರಿಂದ  ಬೇಸಿಗೆಯಲ್ಲಿಟ್ಟಿರುವ ತಾಪಮಾನವನ್ನು ಬದಲಾಯಿಸಲೇಬೇಕು. ಒಂದು ವೇಳೆ ರೆಫ್ರಿಜರೇಟರ್ ಸೆಟ್ಟಿಂಗ್ ಬದಲಾಯಿಸದಿದ್ದರೆ, ರೆಫ್ರಿಜರೇಟರ್ ಕಂಪ್ರೆಸರ್  ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಹೀಗಾದಾಗ ಫ್ರಿಜ್ ಬೇಗ ಹಾನಿಗೊಳಗಾಗಬಹುದು.

ಟೆಂಪರೇಚರ್ ಸೇಟ್ ಮಾಡಿಕೊಳ್ಳಿ : 
ಚಳಿಗಾಲದಲ್ಲಿ ತಾಪಮಾನವು ಮೊದಲೇ ಸಾಕಷ್ಟು ಕಡಿಮೆಯಾಗಿರುತ್ತದೆ. ಅದಕ್ಕೆ ತಕ್ಕಂತೆ ರೆಫ್ರಿಜರೇಟರ್‌ನ ತಾಪಮಾನವನ್ನು ಹೊಂದಿಸದಿದ್ದರೆ ಆಹಾರ ಪದಾರ್ಥಗಳು ಹೆಪ್ಪುಗಟ್ಟಬಹುದು. ಪರಿಣಾಮವಾಗಿ, ಅವು ಕೆಲವೊಮ್ಮೆ ಹಾಳಾಗಬಹುದು. ಈ ಸಮಸ್ಯೆಯನ್ನು ತಪ್ಪಿಸಲು, ರೆಫ್ರಿಜರೇಟರ್‌ನ ತಾಪಮಾನವನ್ನು ಕೆಲವು ಡಿಗ್ರಿಗಳಷ್ಟು ಹೆಚ್ಚಿಸುವಂತೆ ಸಲಹೆ ನೀಡಲಾಗುತ್ತದೆ. ಇದರಿಂದಾಗಿ ಆಹಾರ ಪದಾರ್ಥಗಳು ಕೆಡುವುದಿಲ್ಲ . 

ಇದನ್ನೂ ಓದಿ : ಜಿಯೋ ಬಳಕೆದಾರರಿಗೊಂದು ಗುಡ್ ನ್ಯೂಸ್, 30 ದಿನಗಳವರೆಗೆ ಉಚಿತ ಡೇಟಾ, ಕಾಲಿಂಗ್ ಹಾಗೂ ಓಟಿಟಿ ಲಾಭ!

ಸಮಯಕ್ಕೆ ಸರಿಯಾಗಿ ಡಿ-ಫ್ರಾಸ್ಟ್ ಮಾಡಿ : 
ಸಮಯಕ್ಕೆ ಸರಿಯಾಗಿ ಫ್ರಿಡ್ಜ್ ಅನ್ನು ಡಿಫ್ರಾಸ್ಟ್ ಮಾಡದಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಇದರಿಂದಾಗಿ ಫ್ರಿಡ್ಜ್‌ನೊಳಗೆ ಮಂಜುಗಡ್ಡೆ ಸಂಗ್ರಹವಾಗುತ್ತದೆ. ಇದರಿಂದ ಫ್ರಿಡ್ಜ್‌ನ ಉಷ್ಣತೆಯು ಕಡಿಮೆಯಾಗಿ ಆಹಾರ ಪದಾರ್ಥಗಳು ಹಾಳಾಗಬಹುದು. ಇದಲ್ಲದೇ ಫ್ರಿಡ್ಜ್ ನ ಕಂಪ್ರೆಸರ್ ಹೆಚ್ಚು ಕೆಲಸ ಮಾಡುವುದರಿಂದ ಫ್ರಿಡ್ಜ್ ಬೇಗ ಹಾಳಾಗುತ್ತದೆ. ದೊಡ್ಡ ಸಮಸ್ಯೆ ಎಂದರೆ ಮಂಜುಗಡ್ಡೆಯ ಶೇಖರಣೆಯಿಂದಾಗಿ ರೆಫ್ರಿಜರೇಟರ್ ಬಾಗಿಲು ತೆರೆಯಲು ಕಷ್ಟವಾಗುತ್ತದೆ. ಇದು ಆಹಾರ ಪದಾರ್ಥಗಳು ಹಾಳಾಗಲು ಕಾರಣವಾಗಬಹುದು. 
ಫ್ರಿಜ್ ಹಾಳಾಗುವ ಅಪಾಯ ಕೂಡಾ ಇರುತ್ತದೆ. 

ಚೇಂಬರ್ ಸೆಟ್ಟಿಂಗ್ : 
ನಿಮ್ಮ ರೆಫ್ರಿಜರೇಟರ್ ನಲ್ಲಿ ತರಕಾರಿ ಚೇಂಬರ್ ಹೊಂದಿದ್ದರೆ, ಯಾವುದೇ ಸಮಸ್ಯೆ ಇಲ್ಲ. ತರಕಾರಿ ಚೇಂಬರ್ ವೇರಿಯಬಲ್ ತಾಪಮಾನವನ್ನು ಹೊಂದಿದೆ. ಇದು ದೀರ್ಘಕಾಲದವರೆಗೆ ತರಕಾರಿಗಳನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ, ತರಕಾರಿ ಚೇಂಬರ್ ತಾಪಮಾನವು 5 ರಿಂದ 7 ಡಿಗ್ರಿ ಸೆಲ್ಸಿಯಸ್ ನಡುವೆ ಇಡಬೇಕು. ಇದರೊಂದಿಗೆ, ತರಕಾರಿಗಳು 10 ರಿಂದ 15 ದಿನಗಳವರೆಗೆ ತಾಜಾವಾಗಿರುತ್ತವೆ.

ಇದನ್ನೂ ಓದಿ : ಚಳಿಗಾಲದಲ್ಲಿ ಮನೆಯಲ್ಲಿ ಇರಲೇಬೇಕು ಈ 5 ಗ್ಯಾಜೆಟ್‌ಗಳು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News