Robotics: ಶೇ.96ರಷ್ಟು ನಿಖರತೆಯೊಂದಿಗೆ ಮಾನವನ ಮೆದುಳು ಓದಿದ ರೋಬೋಟ್, ಯಾವ ದೇಶದ ಸಾಧನೆ ಗೊತ್ತಾ?

Robotics - ಕೃತಕ ಬುದ್ಧಿಮತ್ತೆಯ (Artificial Intelligence) ವಿಷಯದಲ್ಲಿ ಚೀನಾ (China) ಭಾರಿ ಮುಂಚೂಣಿಯಲ್ಲಿದೆ. ಈ ಕ್ಷೇತ್ರದಲ್ಲಿ ಇದೀಗ ಅದು ಮತ್ತೊಂದು ಹೆಜ್ಜೆ ಮುಂದಕ್ಕಿಟ್ಟಿದ್ದು, ಮಾನವನ ಮೆದುಳಿನಲ್ಲಿ ನಡೆಯುವ ವಿಚಾರಗಳನ್ನು ಶೇ.96ರಷ್ಟು ಖಚಿತವಾಗಿ ಅಥವಾ ಸರಿಯಾಗಿ ಓದಬಲ್ಲ ರೋಬೋಟ್ (Robotics) ವೊಂದನ್ನು ತಯಾರಿಸಿದೆ. ಅಷ್ಟೇ ಅಲ್ಲ ಆ ವಿಚಾರಗಳಿಗೆ ಪ್ರತಿಕ್ರಿಯೆ ಕೂಡ ಅದು ನೀಡಬಲ್ಲದು.

Written by - Nitin Tabib | Last Updated : Jan 8, 2022, 06:58 PM IST
  • ವಿಶಿಷ್ಠ ರೀತಿಯ ರೋಬೋಟ್ ತಯಾರಿಸಿದ ಚೀನಾ.
  • ಇದು ಶೇ.96ರಷ್ಟು ಮಾನವನ ಮೆದುಳನ್ನು ಓದಬಲ್ಲದು
  • ಮಾನವರ ಚಟುವಟಿಕೆಗಳನ್ನೂ ಕೂಡ ಗ್ರಹಿಸಿ ಕೆಲಸದ ಅನುಮಾನ ಪತ್ತೆಹಚ್ಚಬಲ್ಲದು.
Robotics: ಶೇ.96ರಷ್ಟು ನಿಖರತೆಯೊಂದಿಗೆ ಮಾನವನ ಮೆದುಳು ಓದಿದ ರೋಬೋಟ್, ಯಾವ ದೇಶದ ಸಾಧನೆ ಗೊತ್ತಾ? title=
Robot Can Read Mind With 96% Accuracy (Representational Image)

ನವದೆಹಲಿ: Artificial Intelligence - ಶೇ.96ರಷ್ಟು ನಿಖರತೆಯೊಂದಿಗೆ ಮಾನವನ ಮನಸ್ಸನ್ನು (Robot Can Read Mind With 96% Accuracy) ಓದಬಲ್ಲ ರೋಬೋಟ್ (Robot) ಅನ್ನು ತಯಾರಿಸಿರುವುದಾಗಿ ವಿಜ್ಞಾನಿಗಳ ಗುಂಪೊಂದು ಹೇಳಿಕೊಂಡಿದ್ದು, ಚೀನಾ ರೋಬೋಟಿಕ್ಸ್‌ನಲ್ಲಿ ದೈತ್ಯ ಹೆಜ್ಜೆ ಇಟ್ಟಂತಿದೆ.

ಈ ರೋಬೋಟ್ ಮೆದುಳಿನ ತರಂಗಗಳನ್ನೂ ಸರಿಯಾಗಿ ಓದುತ್ತದೆ
ನಮ್ಮ ಪಾಲುದಾರ ವೆಬ್‌ಸೈಟ್ WION ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಚೀನಾ ತ್ರೀ ಗೋರ್ಜಸ್ ವಿಶ್ವವಿದ್ಯಾಲಯದ ಇಂಟೆಲಿಜೆಂಟ್ ಮ್ಯಾನುಫ್ಯಾಕ್ಚರಿಂಗ್ ಇನ್ನೋವೇಶನ್ ಟೆಕ್ನಾಲಜಿ ಸೆಂಟರ್‌ನ ಡೆವಲಪರ್‌ಗಳು (Chinese Scientists) ಈ ರೋಬೋಟ್ ಅನ್ನು ಅಸೆಂಬ್ಲಿ ಫ್ಯಾಕ್ಟರಿಯಲ್ಲಿ ಪರೀಕ್ಷಿಸಿದ್ದಾರೆ. ರೋಬೋಟ್ ಉದ್ಯೋಗಿಗಳ ಮೆದುಳಿನ ತರಂಗಗಳನ್ನು ಮೇಲ್ವಿಚಾರಣೆ (Human Mind Read) ಮಾಡುವುದಲ್ಲದೆ ಸ್ನಾಯುಗಳಿಂದ ವಿದ್ಯುತ್ ಸಂಕೇತಗಳನ್ನು ಸಂಗ್ರಹಿಸುತ್ತದೆ ಎಂದು ಡೆವಲಪರ್‌ಗಳು ಹೇಳಿದ್ದಾರೆ, ಏಕೆಂದರೆ ಇದು ಭಾರೀ ಪ್ರಮಾಣದ ಡೇಟಾವನ್ನು ಸಂಗ್ರಹಿಸಲು ಒಟ್ಟಾಗಿ ಕೆಲಸ ಮಾಡಿದೆ.

ಮಾನವನನ್ನು ಕೇಳದೆ ರೋಬೋಟ್ ಕೆಲಸ ಮಾಡಿದೆ
ಡೆವಲಪರ್‌ಗಳ ಪ್ರಕಾರ, ರೋಬೋಟ್ ಏನನ್ನೂ ಹೇಳದೆ ಸಹೋದ್ಯೋಗಿಯ ಮೆದುಳಿನ ಅಲೆಗಳನ್ನು ತಕ್ಷಣ ಓದಬಲ್ಲದು ಮತ್ತು ಮಾನವನು ರೋಬೋಟ್‌ನಿಂದ ತೆಗೆದುಕೊಳ್ಳಲು ಯೋಚಿಸುತ್ತಿದ್ದ ಸಾಧನವನ್ನು ರೋಬೋಟ್ ಸಹ ಏನನ್ನೂ ಹೇಳದೆ ಆ ಸಾಧನವನ್ನು ನೀಡಿದೆ.

ಇದನ್ನೂ ಓದಿ-Ulefone Durability Test: ಬಿಲ್ಡಿಂಗ್ ನಿಂದ ಕೆಳಕ್ಕೆ ಎಸೆದು ನಂತರ 24 ಗಂಟೆ ಫ್ರೀಜರ್ ನಲ್ಲಿಟ್ರು, ಎಲ್ಲಾ ಟೆಸ್ಟ್ ನಲ್ಲೂ ಸೈ ಎನಿಸಿಕೊಂಡ ಸ್ಮಾರ್ಟ್ ಫೋನ್

ಅಸೆಂಬಲ್ ಕೆಲಸ ವೇಗಪಡೆದುಕೊಳ್ಳಲಿದೆ
ಈ ರೀತಿಯ ರೋಬೋಟ್‌ಗಳು ಹೆಚ್ಚಿನ ವೇಗದಲ್ಲಿ ಬಿಡಿಭಾಗಗಳನ್ನು ಜೋಡಿಸುವ ಕೆಲಸವನ್ನು ಮಾಡಬಹುದು, ಆದರೆ ಅದು ಸೀಮಿತ ವ್ಯಾಪ್ತಿಯಲ್ಲಿರಬಹುದು. ಏಕೆಂದರೆ ಮಾನವ ಉದ್ದೇಶಗಳನ್ನು ಗುರುತಿಸುವ ರೋಬೋಟ್‌ನ ಸಾಮರ್ಥ್ಯವು ನಿಖರವಾಗಿಲ್ಲ ಮತ್ತು ಅಸ್ಥಿರವಾಗಿರುತ್ತದೆ.

ಇದನ್ನೂ ಓದಿ-Airtel Latest News: ಕೇವಲ ರೂ.99 ಗಳಲ್ಲಿ ನಿಮ್ಮ ಮನೆ ಕಣ್ಗಾವಲು ಮಾಡಲಿದೆ Airtel, ಹೇಗೆ ತಿಳಿಯಲು ಸುದ್ದಿ ಓದಿ

ಕಾರ್ಮಿಕರ ಮನಸ್ಸನ್ನು ಓದಿ ಶೇ.70 ರಷ್ಟು ಸರಿಯಾದ ಸಮಯಕ್ಕೆ ಕಾರ್ಯನಿರ್ವಹಿಸಿದೆ
ಈ ರೋಬೋಟ್ ಅನ್ನು ಸ್ವಯಂಸೇವಕರ ರೂಪದಲ್ಲಿ  ಕಾರ್ಮಿಕರ ಬಳಿ ಇರಿಸಿ  ಅಸೆಂಬ್ಲಿ ಲೈನ್ ಕೆಲಸ ನಡೆಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ರೋಬೋಟ್ ಶೇ.70 ರಷ್ಟು ಸಮಯದಲ್ಲಿ ಕಾರ್ಮಿಕರ ಮನಸ್ಸನ್ನು ಓದುವ ಮೂಲಕ ತನ್ನ ಕಾರ್ಯ ನಿರ್ವಹಿಸಿದೆ. ಈ ಪ್ರಯೋಗಗಳನ್ನು ಈಗಷ್ಟೇ ಪ್ರಯೋಗಾಲಯದಲ್ಲಿ ನಡೆಸಲಾಗಿದೆ. ಆದರೆ ಇನ್ಮುಂದೆ ಈ ರೋಬೋಟ್‌ಗಳು ನಿಜವಾದ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಅವುಗಳ ಯಶಸ್ಸನ್ನು ಸರಿಯಾಗಿ ನಿರ್ಧರಿಸಲಾಗುವುದು ಎಂದು ಸಂಶೋಧಕರು ಹೇಳಿದ್ದಾರೆ. 

ಇದನ್ನೂ ಓದಿ-ಎಲೆಕ್ಟ್ರಿಕ್ ವಾಹನಗಳ ಅನುಕೂಲತೆಗಳು ನಿಮಗೆ ಗೊತ್ತಾ ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News