JIOPHONE 2021 - ಟೆಲಿಕಾಂ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಮುಂದಾದ Reliance Jio

JIOPHONE 2021 - JioPhone ಫೀಚರ್ ಫೋನ್ ಸೆಗ್ಮೆಂಟ್ ನಲ್ಲಿ ತನ್ನದೇ ಆದ ಸ್ಥಾನ ನಿರ್ಮಿಸಿದೆ. ದೇಶವನ್ನು 2G ಮುಕ್ತಗೊಳಿಸಲು Jio, ಜಿಯೋ ಫೋನ್ ಬಳಕೆದಾರರಿಗೆ ವಿಶಿಷ್ಟ ಕೊಡುಗೆಯೊಂದನ್ನು ಹೊತ್ತು ತಂದಿದೆ. 

Written by - Nitin Tabib | Last Updated : Feb 26, 2021, 10:14 PM IST
  • ಟೆಲಿಕಾಂ ಮಾರುಕಟ್ಟೆಯಲ್ಲಿ ಮತ್ತೊಂದು ಧೂಳೆಬ್ಬಿಸುವ ಕೊಡುಗೆ ಬಿಡುಗಡೆ ಮಾಡಲು ಮುಂದಾದ ರಿಲಯನ್ಸ್ ಜಿಯೋ.
  • ಕೇವಲ ರೂ.1999 ರಲ್ಲಿ JioPhone + 24 ತಿಂಗಳು ಉಚಿತ ಸೇವೆ.
  • ರೂ.1499 ಬೆಲೆಗೆ ಈ ಪ್ಲಾನ್ ಖರೀದಿಸಲು ಬಯಸುತ್ತಿದ್ದರೆ, JioPhone + 12 ತಿಂಗಳು ಉಚಿತ ಸೇವೆ.
JIOPHONE 2021 - ಟೆಲಿಕಾಂ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಮುಂದಾದ Reliance Jio title=
JIOPHONE 2021 (File Photo)

ನವದೆಹಲಿ:  JIOPHONE 2021 - JioPhone ಫೀಚರ್ ಫೋನ್ ಸೆಗ್ಮೆಂಟ್ ನಲ್ಲಿ ತನ್ನದೇ ಆದ ಸ್ಥಾನ ನಿರ್ಮಿಸಿದೆ. ದೇಶವನ್ನು 2G ಮುಕ್ತಗೊಳಿಸಲು Jio, ಜಿಯೋ ಫೋನ್ ಬಳಕೆದಾರರಿಗೆ ವಿಶಿಷ್ಟ ಕೊಡುಗೆಯೊಂದನ್ನು ಹೊತ್ತು ತಂದಿದೆ.  ಇನ್ನೂ 2G ಫೋನ್ ಬಳಸುವ ಮತ್ತು 4G ಸೇವೆಗೆ ವರ್ಗಾವಣೆಗೊಳ್ಳಲು ಬಯಸುವ ಬಳಕೆದಾರರಿಗೆ ಜಿಯೋ ಈ ವಿಶಿಷ್ಠ ಕೊಡುಗೆ ಜಾರಿಗೆ ತಂದಿದೆ. ಜಿಯೋನ ಈ ಹೊಸ ಯೋಜನೆ ಮಾರ್ಚ್ 1, 2021ರಿಂದ ಆರಂಭಗೊಳ್ಳುತ್ತಿದ್ದು, ಜಿಯೋ ಫೋನ್ ಜೊತೆಗೆಯೇ ಈ ಕೊಡುಗೆ ಗ್ರಾಹಕರಿಗೆ ಸಿಗಲಿದೆ. ಈ ಕೊಡುಗೆ ದೇಶಾದ್ಯಂತದ ರಿಲಯನ್ಸ್ ರಿಟೇಲ್ ಹಾಗೂ ಜಿಯೋ ಚಿಲ್ಲರೆ ವ್ಯಾಪಾರಿಗಳ ಬಳಿ ಲಭ್ಯವಿರಲಿದೆ. ಹಾಗಾದರೆ ಬನ್ನಿ ಈ ಕೊಡುಗೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ. 

JIOPHONE 2021 ಕೊಡುಗೆ ಏನು?
ಹೊಸ ಬಳಕೆದಾರರಿಗೆ ರೂ.1999ರ ಈ JioPhone ಪ್ಲಾನ್ ಅಡಿ 2 ವರ್ಷಗಳವರೆಗೆ ಹಲವು ಉಚಿತ ಸೌಲಭ್ಯಗಳು ಸಿಗಲಿವೆ. ಹೊಸ ಆಫರ್ ಅಡಿ ಇದೀಗ ಗ್ರಾಹಕರಿಗೆ 24 ತಿಂಗಳ ಅನಿಯಮಿತ ಕಾಲಿಂಗ್, ಅನ್ಲಿಮಿಟೆಡ್ ಡೇಟಾ (2GB ಹೈ ಸ್ಪೀಡ್ ಡೇಟಾ) ನೀಡಲಾಗುವುದು. ಈ ಪ್ಲಾನ್ ವಿಶೇಷತೆ ಎಂದರೆ ಒಮ್ಮೆ ಗ್ರಾಹಕರು ಈ ಯೋಜನೆಯನ್ನು ತನ್ನದಾಗಿಸಿಕೊಂಡರೆ ಅವರಿಗೆ ಯಾವುದೇ ರೀತಿಯ ರಿಚಾರ್ಚ್ ಮಾಡುವ ಅವಶ್ಯಕತೆ ಇಲ್ಲ. ಗ್ರಾಹಕರು ಬೇರೆ ನೆಟ್ವರ್ಕ್ ಗಳ ಮೇಲೆ ಇದೆ ಸೌಲಭ್ಯ ಪಡೆಯಲು ಸುಮಾರು 2.5ರಷ್ಟು ಹೆಚ್ಚು ಖರ್ಚು ಮಾಡಬೇಕಾಗಲಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ-OnePlus 9R : ಒನ್ ಪ್ಲಸ್ ಲಾಂಚ್ ಮಾಡುತ್ತಿದೆ ಅಗ್ಗದ ಸೂಪರ್ ಸ್ಮಾರ್ಟ್ ಫೋನ್..!

ಇನ್ನೊಂದೆಡೆ ಒಂದು ವೇಳೆ ಬಳಕೆದಾರ ರೂ.1999 ರೂ.ಗಳಿಗಿಂತ ಕಡಿಮೆ ಬೆಲೆಯ ರಿಚಾರ್ಜ್ ಮಾಡಿಸಲು ಬಯಸುತ್ತಿದ್ದರೆ, ಅವರು 1499 ರೂ. ರಿಚಾರ್ಜ್ ಅನ್ನು ಸಹ ಮಾಡಿಸಬಹುದು. JioPhone 2021 ಈ ಕೊಡುಗೆಯ ಅಡಿ ಜಿಯೋ ಫೋನ್ ಬಳಕೆದಾರರಿಗೆ  ಡಿವೈಸ್ ಹಾಗೂ 12 ತಿಂಗಳು ಅನಿಯಮಿತ ಉಚಿತ ಡೇಟಾ, ಉಚಿತ ಕರೆ ಸೌಲಭ್ಯ ಸಿಗಲಿದೆ. ಅಂದರೆ ನೀವು ಒಂದು ವರ್ಷದವರೆಗೆ ಯಾವುದೇ ರೀತಿಯ ರಿಚಾರ್ಜ್ ಮಾಡಿಸುವ ಅವಶ್ಯಕತೆ ಇಲ್ಲ. 

ಇದನ್ನೂ ಓದಿ- Vi WiFi calling Service : ಸಿಗ್ನಲ್ ಇಲ್ಲದೆಯೂ ಪೋನ್ ಮಾಡಬಹುದು..!

2017 ರಲ್ಲಿ ಮೊದಲ JioPhone ಬಿಡುಗಡೆ ಮಾಡಲಾಗಿತ್ತು
ಎಲ್ಲಕ್ಕಿಂತ ಮೊದಲು 2017 ರಲ್ಲಿ ಮೊಟ್ಟ ಮೊದಲ ಬಾರಿಗೆ JioPhone ಪರಿಚಯಿಸಲಾಗಿತ್ತು. ಬಳಿಕ ರಿಲಯನ್ಸ್ ಜಿಯೋ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿತ್ತು. ಭಾರತದಲ್ಲಿ ಜಿಯೋ ಫೋನ್ ಗಾಗಿ 100 ಮಿಲಿಯನ್ ಗೂ ಅಧಿಕ ಬಳಕೆದಾರರಿದ್ದಾರೆ. ಆದರೆ, ಇದುವರೆಗೂ ಭಾರತದಲ್ಲಿ ಸುಮಾರು 300 ಮಿಲಿಯನ್ ಜನರು 2ಜಿ ಫೋನ್ ಮಾತ್ರ ಬಳಸುತ್ತಾರೆ.

ಇದನ್ನೂ ಓದಿ-BSNL ಹೊಸ ಪ್ಲಾನ್ ; ಭರ್ಜರಿ ರಿಯಾಯಿತಿ ಜೊತೆಗೆ ಸಿಗಲಿದೆ ಫುಲ್ entertainment

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News