PM Kusum Yojana 2022 ಹೆಸರಿನಲ್ಲಿ ವಂಚನೆ, ರೈತರಿಗೆ ಅಲರ್ಟ್ ಜಾರಿಗೊಳಿಸಿದ ಕೇಂದ್ರ ಸರ್ಕಾರ

PM Kusum Yojana 2022 Latest News: ಯೋಜನೆಯ ಅಡಿ ಸೋಲಾರ್ ಪಂಪ್ ಸಬ್ಸಿಡಿ ಪಡೆಯಲು ರೈತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Written by - Nitin Tabib | Last Updated : May 16, 2022, 09:20 PM IST
  • ಪಿಎಂ ಕುಸುಮ ಯೋಜನೆಯ ಕುರಿತು ರೈತರಿಗೆ ಎಚ್ಚರಿಕೆ ನೀಡಿದ ಸರ್ಕಾರ.
  • ಹಲವು ರೈತರು ವಂಚಕರ ಬಲೆಗೆ ಬೀಳುತ್ತಿದ್ದಾರೆ.
  • ಯೋಜನೆಗೆ ಸಂಬಂಧಿಸಿದಂತೆ ಇತರ ಯಾರರನ್ನು ಕೂಡ ಸಂಪರ್ಕಿಸದಂತೆ ಮನವಿ ಮಾಡಿದ ಸರ್ಕಾರ
PM Kusum Yojana 2022 ಹೆಸರಿನಲ್ಲಿ ವಂಚನೆ, ರೈತರಿಗೆ ಅಲರ್ಟ್ ಜಾರಿಗೊಳಿಸಿದ ಕೇಂದ್ರ ಸರ್ಕಾರ title=
PM Kusum Yojana 2022 Latest News

PM Kusum Yojana 2022 Latest News: ದೇಶದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಸರ್ಕಾರಿ ಯೋಜನೆಗಳನ್ನು ನಡೆಸುತ್ತಿದೆ. ಪ್ರಧಾನ ಮಂತ್ರಿ ಕುಸುಮ್ ಯೋಜನೆಯು ಕೂಡ ರೈತರಿಗೆ ಪ್ರಯೋಜನ ನೀಡುವ ಒಂದು ಯೋಜನೆಯಾಗಿದೆ. ಈ ಯೋಜನೆಯ ನೆರವಿನಿಂದ ಈಗಾಗಲೆ  ರೈತರು  ಅಪಾರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಡಿಯಲ್ಲಿ ಸೋಲಾರ್ ಪಂಪ್ ಸಬ್ಸಿಡಿಗಾಗಿ ರೈತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಆದರೆ, ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಅನೇಕ ರೈತರು ವಂಚಕರ ವಂಚನೆಗೆ ಗುರಿಯಾಗುತ್ತಿದ್ದಾರೆ.  ಸೋಲಾರ್ ಪಂಪ್ ಗೆ ಸಬ್ಸಿಡಿ   ಕೊಡಿಸುವುದಾಗಿ ಹೇಳಿ  ರೈತರಿಂದ ವಂಚಕರು ಹಣವನ್ನು ಪಡೆಯುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಈ ಯೋಜನೆಗೆ ಸಂಬಂಧಿಸಿದ ಯಾವುದೇ ಕೆಲಸಗಳಿಗೆ ಹೊರಗಿನವರನ್ನು ಸಂಪರ್ಕಿಸದಂತೆ ಸರ್ಕಾರ ರೈತರಿಗೆ ಮನವಿ ಮಾಡಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸರಿಯಾದ ಮಾಹಿತಿ ಇಲ್ಲದ ರೈತರಿಗೆ ವಂಚಕರು ಸುಳ್ಳು ಹೇಳಿ ಅವರಿಂದ ಸಾಕಷ್ಟು ಹಣ ಲಪಟಾಯಿಸುತ್ತಿದ್ದಾರೆ. 

ಈ ಕುರಿತು ಪಿಎಂ ಕುಸುಮ ಯೋಜನೆಯ ಅಧಿಕೃತ ವೆಬ್ಸೈಟ್ ಮೇಲೆ ಸರ್ಕಾರ ಈ  ಕುರಿತು ಎಚ್ಚರಿಕೆಯ ಸಂದೇಶವನ್ನು ಪ್ರಕಟಿಸಿದೆ. ಇನ್ನೊಂದೆಡೆ, ವಂಚನೆಯ ಪ್ರಕರಣಗಳ ಹಿನ್ನೆಲೆ ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದ ಪಿಐಬಿಯ ಪ್ಯಾಕ್ಟ್ ಚೆಕ್ ತಂಡ, ಪ್ರಧಾನ ಮಂತ್ರಿ ಕುಸುಮ ಯೋಜನೆಯ ಅಡಿ ನೀಡಲಾಗಿರುವ ಒಂದು ಅನುಮೋದನೆ ಪಾತ್ರದಲ್ಲಿ ಸೋಲಾರ್ ಪಂಪ್ ಸ್ಥಾಪಿಸಲು ರೂ.5600 ಕಾನೂನು ಶುಲ್ಕ ಮತ್ತು ರೂ. 5000 ಹೆಚ್ಚುವರಿ ನೊಂದಣಿ ಶುಲ್ಕವನ್ನು ಕೊರಲಾಗಿತ್ತು. ಇದೊಂದು ನಕಲಿ ಅನುಮೋದನೆ ಪತ್ರವಾಗಿದ್ದು, ಸರ್ಕಾರ ಇಂತಹ ಯಾವುದೇ ಅನುಮೋದನೆ ಪತ್ರ ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು.

ಇದನ್ನೂ ಓದಿ-Smartphone ಬಳಕೆದಾರರೆ ಎಚ್ಚರ, ಹೊಸ ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ

ಪಿಎಂ ಕುಸುಮ ಯೋಜನೆಯ ಹೆಸರಿನಲ್ಲಿ ರೈತರಿಗೆ ವಂಚನೆ
'ಪ್ರಧಾನ ಮಂತ್ರಿ ಕುಸುಮ್ ಯೋಜನೆ' ಅಡಿಯಲ್ಲಿ, ಸೋಲಾರ್ ಪವರ್ ಪಂಪ್‌ಗಳನ್ನು ನೀಡುವ ಕುರಿತು ಅನೇಕ ನಕಲಿ ಸಂದೇಶಗಳನ್ನು ಸಹ ರವಾಣಿಸಲಾಗುತ್ತಿದೆ.  ಇಂತಹ ಆಕರ್ಷಕ ಕೊಡುಗೆಗಳ ಬಗ್ಗೆ ರೈತರು ಜಾಗರೂಕರಾಗಿರಬೇಕು ಎಂದು ಸರ್ಕಾರ ಹೇಳಿದೆ. ನಿಮ್ಮ ಸಣ್ಣ ಅಜಾಗರೂಕತೆ ನೀವು ಕಷ್ಟಪಟ್ಟು ಸಂಪಾದಿಸಿದ ಹಣ ವಂಚಕರ ಕೈಸೇರಬಹುದು ಎಂದು ಸರ್ಕಾರ ಎಚ್ಚರಿಸಿದೆ. ಸರಕಾರವೂ ಕೂಡ ತನ್ನ ಯೋಜನೆಗಳ ಬಗ್ಗೆ ಆಗಾಗ ಜನರನ್ನು ಎಚ್ಚರಿಸುತ್ತಲೇ ಇರುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ. 

ಇದನ್ನೂ ಓದಿ-Google's Action: ಸುಮಾರು 9 ಲಕ್ಷ ಆ್ಯಪ್‌ಗಳನ್ನು ತೆಗೆದುಹಾಕಲು ಗೂಗಲ್ ನಿರ್ಧಾರ, ನೀವೂ ಇನ್‌ಸ್ಟಾಲ್ ಮಾಡಿದ್ದರೆ ಹುಷಾರ್

ನಕಲಿ ವೆಬ್ಸೈಟ್ ಗಳ ಕುರಿತು ಎಚ್ಚರಿಕೆವಹಿಸಿ
ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಮತ್ತು ಉತ್ಥಾನ್ ಮಹಾಭಿಯಾನ್ ಹೆಸರಿನಲ್ಲಿ ಹಲವು ನಕಲಿ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಗಳ ಮೂಲಕ ಹಲವು ರೈತರು ವಂಚನೆಗೆ ಒಳಗಾಗುತ್ತಿರುವುದು ಸಚಿವಾಲಯದ ಗಮನಕ್ಕೆ ಬಂದಿದೆ. ಇದರಲ್ಲಿ ರೈತರಿಗೆ ನೋಂದಣಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಲು ತಿಳಿಸಲಾಗಿದೆ. ನಕಲಿ ವೆಬ್‌ಸೈಟ್‌ ಮೂಲಕ ಮೂಲ ವೆಬ್‌ಸೈಟ್‌ನಂತೆ ಡೊಮೈನ್ ಸೃಷ್ಟಿಸಿ ಅದರಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿ ವಂಚಕರು ರೈತರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News