Paytm ನಿಂದ ಬಂಬಾಟ್ ಕೊಡುಗೆ! ಈ ಚಿಕ್ಕ ಕೆಲಸ ಮಾಡಿ ಶೇ.100ರಷ್ಟು ಕ್ಯಾಶ್ ಬ್ಯಾಕ್ ಪಡೆಯಿರಿ

Paytm 100 Percent Cashback Offer: ಆನ್ಲೈನ್ ಪಾವತಿ ಸೇವೆ ಒದಗಿಸುವ ಪೇಟಿಎಂನಲ್ಲಿ ಶೇ.100 ರಷ್ಟು ಕ್ಯಾಶ್ ಬ್ಯಾಕ್ ಪಡೆಯುವ ಕೊಡುಗೆಯೊಂದರ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

Written by - Nitin Tabib | Last Updated : May 2, 2022, 10:54 PM IST
  • ಪೇಟಿಎಂ ನಿಂದ ಜಬರ್ದಸ್ತ್ ಕೊಡುಗೆ
  • ಶೇ.100 ರಷ್ಟು ಕ್ಯಾಶ್ ಬ್ಯಾಕ್ ಪಡೆಯುವ ಸುವರ್ಣಾವಕಾಶ
  • ಪಡೆದುಕೊಳ್ಳುವ ವಿಧಾನ ಇಲ್ಲಿದೆ
Paytm ನಿಂದ ಬಂಬಾಟ್ ಕೊಡುಗೆ! ಈ ಚಿಕ್ಕ ಕೆಲಸ ಮಾಡಿ ಶೇ.100ರಷ್ಟು ಕ್ಯಾಶ್ ಬ್ಯಾಕ್ ಪಡೆಯಿರಿ title=
Paytm Cashback Offere

Paytm 100 Percent Cashback Offer on Mobile Recharge: ಇಂದಿನ ಯುಗದಲ್ಲಿ, ಬಹುತೇಕ ಎಲ್ಲಾ ಕೆಲಸಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿದೆ ಮತ್ತು ಈ ಕೆಲಸಗಳಲ್ಲಿ ಆನ್ಲೈನ್ ಹಣ ಪಾವತಿ ಕೂಡ ಶಾಮೀಲಾಗಿದೆ. ಇಂದು ನಾವು ಹಲವಾರು ಆನ್‌ಲೈನ್ ಪಾವತಿ ಅಪ್ಲಿಕೇಶನ್‌ಗಳ ಆಯ್ಕೆಗಳನ್ನು ಹೊಂದಿದ್ದೇವೆ ಮತ್ತು ಅವುಗಳನ್ನು ನಾವು ಪ್ರತಿಯೊಂದು ಸಣ್ಣ-ಪುಟ್ಟ ಕೆಲಸಗಳಿಗೆ ಬಳಸುತ್ತೇವೆ. ಈ ಅಪ್ಲಿಕೇಶನ್‌ಗಳ ಕುರಿತು ಮಾತನಾಡಲು ಹೋದರೆ, ಬಹುಶಃ  Paytm ಹೆಸರನ್ನು ಜನರು ಮೊದಲು ಹೇಳುತ್ತಾರೆ. Paytm ನಲ್ಲಿ ಸಣ್ಣ ಕೆಲಸವನ್ನು ಮಾಡುವ ಮೂಲಕ ನೀವು 100% ಕ್ಯಾಶ್‌ಬ್ಯಾಕ್ ಅನ್ನು ಹೇಗೆ ಪಡೆಯಬಹುದು ಎಂಬುದನ್ನು ಇಂದು ನಾವು ನಿಮಗೆ ಹೇಳಲಿದ್ದೇವೆ.

ಈ ಸಣ್ಣ ಕೆಲಸ ಮಾಡಿ ಶೇ.100 ರಷ್ಟು ಕ್ಯಾಶ್ ಬ್ಯಾಕ್ ಪಡೆಯಿರಿ
Paytm ನಲ್ಲಿ ನೀವು 100% ಕ್ಯಾಶ್‌ಬ್ಯಾಕ್ ಪಡೆಯಲು ಮೊದಲನೆಯದಾಗಿ, ನೀವು ನಿಮ್ಮ ಫೋನ್‌ನಲ್ಲಿ Paytm ಅಪ್ಲಿಕೇಶನ್ ಅನ್ನು ತೆರೆಯಬೇಕು ಮತ್ತು ನಂತರ ಮೊಬೈಲ್ ರೀಚಾರ್ಜ್ ವಿಭಾಗಕ್ಕೆ ಹೋಗಬೇಕು. ಅಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ನಂತರ ಮುಂದುವರಿಯುವ ಮೊದಲು, ನೆಟ್‌ವರ್ಕ್ ಪ್ರೋವೈಡರ್ ಹೆಸರು ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ.  ಏಕೆಂದರೆ ಅದು ತಪ್ಪಾಗಿದ್ದರೆ ರೀಚಾರ್ಜ್ ಅನ್ನು ನೀವು ರದ್ದುಗೊಳಿಸಬಹುದು.

ಇದನ್ನೂ ಓದಿ-ಪರಸ್ಪರರ ಜೀವ ತೆಗೆಯಲು ಮುಂದಾದ ಹಾವು-ಮುಂಗುಸಿ, ರಕ್ತಸಿಕ್ತ ಕಾಳಗ ನೋಡಿ ಎದೆ ಝಲ್ಲೇನ್ನುತ್ತದೆ

ಪಾವತಿ ಮಾಡುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ
ನೆಟ್‌ವರ್ಕ್ ಪೂರೈಕೆದಾರರನ್ನು ಆಯ್ಕೆ ಮಾಡಿದ ನಂತರ, ಮುಂದಿನ ಪುಟಕ್ಕೆ ಹೋಗಿ ಮತ್ತು ಪಾವತಿ ಪುಟಕ್ಕೆ ಹೋಗುವ ಮೊದಲು, 'ಪ್ರೋಮೋಕೋಡ್ ಅನ್ವಯಿಸು' ಆಯ್ಕೆಯನ್ನು ಆರಿಸಿ. ಇಲ್ಲಿ ನೀವು 'ಫಾಸ್ಟ್ ಫಾರ್ವರ್ಡ್' ಆಯ್ಕೆಯನ್ನು ಆಯ್ದುಕೊಳ್ಳಬಾರದು ಎಂಬುದನ್ನು ನೆನಪಿನಲ್ಲಿಡಿ. 'ಅಪ್ಲೈ ಪ್ರೊಮೊಕೋಡ್' ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, 'CRORECLUB' ಪ್ರೊಮೊಕೋಡ್ ಟೈಪ್ ಮಾಡಿ.

ಇದನ್ನೂ ಓದಿ-Diabetes Treatment: ಡಯಾಬಿಟಿಸ್ ರೋಗಿಗಳ ಚಿಕಿತ್ಸೆ ಇನ್ಮುಂದೆ ಮತ್ತಷ್ಟು ಸುಲಭವಾಗಲಿದೆ

ಒಂದು ವೇಳೆ ನೀವು ಅದಕ್ಕೆ ಅರ್ಹತೆ ಪಡೆದರೆ, ಮೊಬೈಲ್ ರೀಚಾರ್ಜ್‌ನಲ್ಲಿ 100% ಕ್ಯಾಶ್‌ಬ್ಯಾಕ್ ಪಡೆಯುವ ಅದೃಷ್ಟವಂತರಲ್ಲಿ ನಿಮ್ಮ ಹೆಸರೂ ಕೂಡ ಶಾಮೀಲಾಗಲಿದೆ. ಗರಿಷ್ಠ ಕ್ಯಾಶ್‌ಬ್ಯಾಕ್ ಒಂದು ಸಾವಿರ ರೂಪಾಯಿಗಳವರೆಗೆ ಪಡೆಯಬಹುದು  ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News