5,000mAh ಬ್ಯಾಟರಿಯೊಂದಿಗೆ ಲಾಂಚ್ ಆಗಿದೆ Oppo A53s, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ

ಇದರಲ್ಲಿ ಡ್ಯುಯೆಲ್ ಸಿಮ್  ಇದೆ. ColorOS 11.1 ಮೇಲೆ ಕಾರ್ಯ ನಿರ್ವಹಿಸುತ್ತದೆ. 6.52- ಇಂಚಿನ ಹೆಚ್ ಡಿ + (720x1,600 ಪಿಕ್ಸೆಲ್) ಹೆಚ್ ಡಿ ಡಿಸ್ ಪ್ಲೆ ಇದೆ. ಮಿಡಿಯಾಟೆಕ್ ಡಯಮೆಂಸಿಟಿ 700 ಪ್ರೊಸೆಸರ್ ಇದೆ.

Written by - Ranjitha R K | Last Updated : Apr 28, 2021, 11:28 AM IST
  • ಭಾರತದಲ್ಲಿ Oppo A53s, 5 ಜಿಯನ್ನು ಬಿಡುಗಡೆ ಮಾಡಿದ ಒಪ್ಪೋ
  • ಈ ಫೋನ್‌ನಲ್ಲಿ ಪವರ್ ಫುಲ್ ಬ್ಯಾಟರಿ ಇದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ.
  • ಈ ಫೋನ್‌ನಲ್ಲಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕೂಡಾ ನೀಡಲಾಗಿದೆ.
5,000mAh ಬ್ಯಾಟರಿಯೊಂದಿಗೆ ಲಾಂಚ್ ಆಗಿದೆ Oppo A53s, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ title=
ಭಾರತದಲ್ಲಿ Oppo A53s, 5 ಜಿಯನ್ನು ಬಿಡುಗಡೆ ಮಾಡಿದ ಒಪ್ಪೋ (file photo)

ನವದೆಹಲಿ: ಒಪ್ಪೋ ತನ್ನ ಹೊಸ ಸ್ಮಾರ್ಟ್‌ಫೋನ್ Oppo A53s, 5 Gಯನ್ನು ಬಿಡುಗಡೆ ಮಾಡಿದೆ.  ಒಪ್ಪೊ ಮೊದಲು ಒಪ್ಪೊ A 53 5Gಜಿ ಯನ್ನು ಕಳೆದ ಡಿಸೆಂಬರ್‌ನಲ್ಲಿ ದೇಶದಲ್ಲಿ ಬಿಡುಗಡೆ ಮಾಡಿತ್ತು. ಈ ಫೋನ್‌ನಲ್ಲಿ ಪವರ್ ಫುಲ್ ಬ್ಯಾಟರಿ ಇದೆ.  ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್  ಇದೆ.  ಈ ಫೋನ್‌ನಲ್ಲಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕೂಡಾ ನೀಡಲಾಗಿದೆ.

ಒಪ್ಪೋ ಎ 53 ಎಸ್ 5 ಜಿ  ಸ್ಮಾರ್ಟ್ ಫೋನಿನ ಸ್ಪೆಸಿಫಿಕೇಶನ್ :
ಇದರಲ್ಲಿ ಡ್ಯುಯೆಲ್ ಸಿಮ್ (Dual SIM) ಇದೆ. ColorOS 11.1 ಮೇಲೆ ಕಾರ್ಯ ನಿರ್ವಹಿಸುತ್ತದೆ. 6.52- ಇಂಚಿನ ಹೆಚ್ ಡಿ + (720x1,600 ಪಿಕ್ಸೆಲ್) ಹೆಚ್ ಡಿ ಡಿಸ್ ಪ್ಲೆ ಇದೆ. ಮಿಡಿಯಾಟೆಕ್ ಡಯಮೆಂಸಿಟಿ 700 ಪ್ರೊಸೆಸರ್ ಇದೆ.  ಇದರೊಂದಿಗೆ Mali-G57 MC2 ಜಿಪಿಯು ಇದೆ. 8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಸಿಗುತ್ತದೆ. ಇದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 1 ಟಿಬಿ ತನಕ ವಿಸ್ತರಿಸಬಹುದಾಗಿದೆ. 

ಇದನ್ನೂ ಓದಿ : Google Phone: ಶೀಘ್ರದಲ್ಲೇ ಲಾಂಚ್ ಆಗಲಿದೆ ಗೂಗಲ್‌ನ ಫೋನ್

ಬೆಲೆ:
ಭಾರತೀಯ ಮಾರುಕಟ್ಟೆಯಲ್ಲಿ ಒಪ್ಪೊ ಎ 53 ಎಸ್ 5 G ಬೆಲೆ ತನ್ನ 6 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಮಾದರಿಗೆ 14,990 ರೂ.  8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಮಾದರಿಗೆ 16,990 ರೂಗಳಿಗೆ ಖರೀದಿಸಬಹುದು. ಭಾರತದಲ್ಲಿ ಫೋನ್ (Phone) ಮಾರಾಟ ಮೇ 2 ರಿಂದ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಮತ್ತು ಇದು ಫ್ಲಿಪ್‌ಕಾರ್ಟ್ (flipkart) ಮೂಲಕ ಖರೀದಿಗೆ ಲಭ್ಯವಿರುತ್ತದೆ.

ಒಪ್ಪೊ (Oppo) ಫೋನಿನಲ್ಲಿ ಒಪ್ಪೊ ಎ53 5 ಜಿಯಲ್ಲಿ ಟ್ರಿಪಲ್ ರಿಯರ್ ಕೆಮರಾ (Camera) ಸೆಟ್ ಅಪ್ ಇದೆ.  ಅದರಲ್ಲಿ 16 ಎಂಪಿ ಪ್ರೈಮೆರಿ ಸೆನ್ಸಾರ್ ಮತ್ತು ಎರಡನೆಯದ್ದು 2 ಎಂಪಿ ಮೈಕ್ರೋ ಲೆನ್ಸ್ ಮತ್ತು ಮೂರನೆಯದ್ದು 2 ಎಂಪಿ ಪ್ಯೇಟ್ರೇಟ್ ಲೆನ್ಸ್ ಇದೆ.  ಇದಲ್ಲದೆ ಫ್ರಂಟ್ ನಲ್ಲಿ 8 ಎಂಪಿ ಸೆಲ್ಫಿ ಕೆಮೆರಾ ಕೂಡಾ ಇದೆ. 

ಇದನ್ನೂ ಓದಿ : Googleನಲ್ಲಿ ಈ ವಿಷಯಗಳನ್ನು ಮರೆತೂ ಕೂಡ ಸರ್ಚ್ ಮಾಡದಿರಿ

ಬ್ಯಾಟರಿ :
ಕನೆಕ್ಟಿವಿಟಿಗಾಗಿ ಫೋನ್ ನಲ್ಲಿ 5 ಜಿ, 4ಜಿ, ವೈಫೈ, ಜಿಪಿಎಸ್, ಬ್ಲೂಟೂತ್ ವಿ5 ಮತ್ತು ಚಾರ್ಜಿಂಗ್ ಗಾಗಿ USB ಸಿಪೋರ್ಟ್ ಇದೆ. 5000 ಎಂಎಹೆಚ್ ಬ್ಯಾಟರಿ ಇದೆ. 17.74 ಗಂಟೆ ನಿರಂತರವಾಗಿ ವಿಡಿಯೋ ಬ್ಯಾಕಪ್ ಈ ಬ್ಯಾಟರಿ (battery) ನೀಡುತ್ತದೆ ಎಂದು ಕಂಪನಿ ಹೇಳುತ್ತದೆ. ಎರಡು ಬಣ್ಣದಲ್ಲಿ ಮತ್ತು ಎರಡು ಮಾದರಿಗಳಲ್ಲಿ ಈ ಫೋನ್ ಲಭ್ಯವಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News