Vastu Tips: ಮನೆಯಲ್ಲಿ ಗಾಜಿನ & ಲೋಹದ ಆಮೆ ಇಟ್ಟರೆ ಶುಭವೋ ಅಥವಾ ಅಶುಭವೋ?

Tortoise Vastu Tips: ವಾಸ್ತುದೋಷವಿದ್ದಲ್ಲಿ ಅದನ್ನು ಸೂಕ್ಷ್ಮವಾಗಿ ಗಮನಿಸಿ ಸಮಸ್ಯೆಗಳು ಯಾವ ಭಾಗದಿಂದ? ಯಾವ ಮೂಲೆಯಿಂದ ಎಂಬುದನ್ನು ಪರಿಶೀಲಿಸಬೇಕು. ಬಳಿಕ ಸ್ಥಳೀಯ ಅಥವಾ ತಿಳಿದ ವಾಸ್ತು ತಜ್ಞರ ಸಲಹೆ ಪಡೆದು ಅದನ್ನು ಸೂಕ್ತ ಸಮಯದಲ್ಲಿ ಬದಲಾಯಿಸಿಕೊಂಡು ಉತ್ತಮ ಬದುಕು ತಮ್ಮದಾಗಿಸಿಕೊಳ್ಳಬೇಕು. ​

Written by - Puttaraj K Alur | Last Updated : Jun 27, 2024, 08:51 PM IST
  • ಮನೆಯಲ್ಲಿ ಗಾಜಿನ-ಲೋಹಗಳ ಆಮೆ ಬಳಕೆ ಶುಭವೋ ಅಥವಾ ಅಶುಭವೋ?
  • ಮನೆಯ ವಾಸ್ತು ವಿಚಾರದಲ್ಲಿ ಪ್ರತಿಯೊಬ್ಬರೂ ತಜ್ಞರ ಸಲಹೆ ಪಡೆಯಬೇಕು
  • ವಾಸ್ತುದೋಷವಿದ್ದಲ್ಲಿ ಅದಕ್ಕೆ ಸೂಕ್ತ ಪರಿಹಾರವನ್ನು ಪಡೆದುಕೊಳ್ಳಬೇಕು
Vastu Tips: ಮನೆಯಲ್ಲಿ ಗಾಜಿನ & ಲೋಹದ ಆಮೆ ಇಟ್ಟರೆ ಶುಭವೋ ಅಥವಾ ಅಶುಭವೋ?  title=
ವಾಸ್ತುದೋಷಕ್ಕೆ ಪರಿಹಾರಗಳು

Glass & Metal Tortoise Vastu Tips: ಸಾಮಾನ್ಯವಾಗಿ ವಾಸ್ತು ವಿಚಾರ ಬಂದಾಗ ಜನರು ಮನೆಯ ಒಳಭಾಗದ ವಾಸ್ತು ದೋಷಗಳಿದ್ದಲ್ಲಿ ಕೆಲವೊಂದು ಸ್ಥಾನದ ಮನೆಯ ಸೂಚನೆಗಳಿರಬಹುದು, ಪೂಜಾ ಕೋಣೆ, ಬೆಡ್ರೂಮ್‌ಗಳು, ಬಾಗಿಲುಗಳಿರಬಹುದು ಬದಲಾಯಿಸಿಕೊಳ್ಳಲು ಮುಂದಾಗುತ್ತಾರೆ. ವಾಸ್ತವವಾಗಿ ಅದರ ಜೊತೆಗೆ ಕೆಲವು ಜನರು ತಾವು ವಾಸಮಾಡುವ ಕಟ್ಟಡ ಅಥವಾ ಮನೆಗಳಲ್ಲಿ ವಾಸ್ತು ದೋಷವಿದ್ದಲ್ಲಿ ಅವುಗಳನ್ನು ಬದಲಾಯಿಸಿಕೊಳ್ಳದೆ ಕಡಿಮೆ ಖರ್ಚಿನಲ್ಲಿ ಸುಲಭ & ಸರಳ ರೀತಿಯಿಂದ ಫಲಿತಾಂಶ ಪಡೆಯಲು ವಿವಿಧ ಮಾಹಿತಿ ಆಧರಿಸಿ ಕಡಿಮೆ ಖರ್ಚಿನಲ್ಲಿ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಾರೆ.

ನೇರವಾಗಿ ವಿಚಾರಕ್ಕೆ ಬರುವುದಾದರೆ ನಾವು ವಾಸ್ತು ವೀಕ್ಷಣೆಗೆಂದು ಕೆಲವು ಕಟ್ಟಡ ಅಥವಾ ಮನೆಗಳಿಗೆ ಹೋದಾಗ ವಾಸ್ತುವಿಗೆ ಸಂಬಂಧಪಟ್ಟ ಕೆಲವು ವಸ್ತುಗಳನ್ನು ಕಣ್ಣಾರೆ ನೋಡಿರುತ್ತೇವೆ. ಉದಾಹರಣೆಗೆ ಗಾಜಿನ ಅಥವಾ ಲೋಹದ ಆಮೆ ತಟ್ಟೆಗಳಿರಬಹುದು, ಕುದುರೆಗಳು ಓಡುವ ಚಿತ್ರಗಳು, ಹಣದ ಚಿತ್ರಗಳು, ಮನಿ ಪ್ಲಾಂಟ್‌, ಬಾಗಿಲಿಗೆ ತಗಲು ಹಾಕುವ ಅದೃಷ್ಟದ ಫೋಟೋಗಳು, ಸ್ನಾನದ ಮನೆ ಶೌಚಾಲಗಳಿಗೆ ಕನ್ನಡಿ, ವಾಸ್ತುದೋಷ ನಿವಾರಣೆಗೆ ಬಳಸುವ ಪಿರಮಿಡ್‌ಗಳು, ಬಾಗಿಲಿಗೆ ಅಂಟಿಸುವ ಸ್ಟಿಕರ್‌ಗಳು, ಬಾಗಿಲು ಚೌಕಟ್ಟಿನ ಮೇಲ್ಭಾಗದಲ್ಲಿರುವ ದೃಷ್ಟಿ ಕನ್ನಡಿ ಹೀಗೆ ಈ ಎಲ್ಲಾ ವಸ್ತುವಿಗೆ ಸಂಬಂಧಪಟ್ಟ ಸಾಮಗ್ರಿಗಳಿರಬಹುದು, ಚಿತ್ರಗಳಿರಬಹುದು... ಇವೆಲ್ಲಾ ಜನರನ್ನು ಮರಳು ಮಾಡುವ ಒಂದು ತಂತ್ರ ಕುತಂತ್ರ ಮತ್ತು ಆ ವಸ್ತುಗಳು ಮಾರಾಟವಾಗಬೇಕೆಂಬುವ ಒಂದು ವ್ಯಾಪಾರದ ಗಿಮಿಕ್ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: ಪ್ರತಿದಿನ ಒಣ ಕೊಬ್ಬರಿ ತಿಂದರೆ ಏನಾಗುತ್ತೆ ಗೊತ್ತಾ?

ಹಾಗೆಯೇ ಇದನ್ನು ದೇವರು ಮನೆಯಲ್ಲಿಡಿ, ಅದನ್ನು ಅಡಿಗೆ ಮನೆಯಲ್ಲಿರಿಸಿ, ಇದನ್ನು ನಿಮ್ಮ ದುಡ್ಡಿರುವ ಜಾಗದಲ್ಲಿಡಿ, ಅದನ್ನು ನಿಮ್ಮ ಜೇಬಿನಲ್ಲಿಟ್ಟುಕೊಳ್ಳಿ, ಇದನ್ನು ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ, ಅದನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಹಾಕಿ ಮುಂತಾದವುಗಳು.

ಕೊನೆಯ ವಿಚಾರ ವಾಸ್ತುದೋಷವಿದ್ದಲ್ಲಿ ಅದನ್ನು ಸೂಕ್ಷ್ಮವಾಗಿ ಗಮನಿಸಿ ಸಮಸ್ಯೆಗಳು ಯಾವ ಭಾಗದಿಂದ? ಯಾವ ಮೂಲೆಯಿಂದ ಎಂಬುದನ್ನು ಪರಿಶೀಲಿಸಬೇಕು. ಬಳಿಕ ಸ್ಥಳೀಯ ಅಥವಾ ತಿಳಿದ ವಾಸ್ತು ತಜ್ಞರ ಸಲಹೆ ಪಡೆದು ಅದನ್ನು ಸೂಕ್ತ ಸಮಯದಲ್ಲಿ ಬದಲಾಯಿಸಿಕೊಂಡು ಉತ್ತಮ ಬದುಕು ತಮ್ಮದಾಗಿಸಿಕೊಳ್ಳಬೇಕು. ವಾಸ್ತು ವಿಚಾರದಲ್ಲಿ ನಂಬಿಕೆ ಮುಖ್ಯ, ಆದರೆ ಮೂಢನಂಬಿಕೆಯಿಂದ ಅನೇಕರು ದುಡ್ಡು ಕಳೆದುಕೊಳ್ಳುತ್ತಾರೆ. ಸರಿಯಾಗಿಯೇ ಕಟ್ಟಿಸಿದ ಮನೆಯನ್ನು ವಾಸ್ತುದೋಷವಿದೆ ಅಂತಾ ಕೆಡವಿದವರು ಇದ್ದಾರೆ. ಹೀಗಾಗಿಯೇ ವಾಸ್ತು ವಿಚಾರದಲ್ಲಿ ತಜ್ಞರ ಸಲಹೆ ಪಡೆದುಕೊಂಡು ಅವುಗಳ ನಿಯಮಗಳನ್ನು ಪಾಲಿಸಬೇಕು.

ಇದನ್ನೂ ಓದಿ: ಈ ಹಣ್ಣಿನ ಫೇಸ್‌ ಪ್ಯಾಕ್‌ ನಿಮ್ಮ ತ್ವಚೆಯನ್ನು ಚಿನ್ನದಂತೆ ಹೊಳೆಯುವಂತೆ ಮಾಡುತ್ತೆ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News