ಕೇವಲ ಒಂದೇ ನಿಮಿಷದ ರೈಲು ಸಂಚಾರ ! 90 ಮೀಟರ್ ದೂರ ಕ್ರಮಿಸಲು ಈ ರೈಲು ಪ್ರಯಾಣ ಅನಿವಾರ್ಯ !

ಈ ರೈಲಿನಲ್ಲಿ ಹತ್ತಿ ಸರಿಯಾಗಿ ನಿಲ್ಲಬೇಕು ಎನ್ನುವಷ್ಟರಲ್ಲಿ ನೀವು ಯಾಲಿಯುವ ಸಮಯ ಕೂಡಾ ಬಂದಾಗಿರುತ್ತದೆ. ಈ ರೈಲಿನಲ್ಲಿ ಕೇವಲ 1 ನಿಮಿಷದಲ್ಲಿ ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪುತ್ತೀರಿ. 

Written by - Ranjitha R K | Last Updated : Aug 29, 2024, 11:08 AM IST
  • ನೀವು ಒಮ್ಮೆಯಾದರೂ ರೈಲಿನಲ್ಲಿ ಪ್ರಯಾಣ ಬೆಳೆಸಿರಬಹುದು.
  • ದೂರದ ಪ್ರಯಾಣಕ್ಕಾಗಿ ಹೆಚ್ಚಿನವರು ನೆಚ್ಚಿಕೊಳ್ಳುವುದೇ ರೈಲು ಪ್ರಯಾಣವನ್ನು.
  • ವಯಸ್ಸಾದವರು ಮಕ್ಕಳು ಜೊತೆಯಲ್ಲಿದ್ದರೆ ರೈಲು ಪ್ರಯಾಣ ಅತ್ಯಂತ ಸುಖದಾಯಕ
ಕೇವಲ ಒಂದೇ ನಿಮಿಷದ ರೈಲು ಸಂಚಾರ ! 90  ಮೀಟರ್ ದೂರ ಕ್ರಮಿಸಲು ಈ ರೈಲು ಪ್ರಯಾಣ ಅನಿವಾರ್ಯ !  title=

World Shortest Train : ನೀವು ಒಮ್ಮೆಯಾದರೂ ರೈಲಿನಲ್ಲಿ ಪ್ರಯಾಣ ಬೆಳೆಸಿರಬಹುದು.ದೂರದ ಪ್ರಯಾಣಕ್ಕಾಗಿ ಹೆಚ್ಚಿನವರು ನೆಚ್ಚಿಕೊಳ್ಳುವುದೇ ರೈಲು ಪ್ರಯಾಣವನ್ನು. ವಯಸ್ಸಾದವರು ಮಕ್ಕಳು ಜೊತೆಯಲ್ಲಿದ್ದರೆ ರೈಲು ಪ್ರಯಾಣ ಅತ್ಯಂತ ಸುಖದಾಯಕ. ಸಾಮಾನ್ಯವಾಗಿ ರೈಲು ಸಂಚಾರ ಎಂದರೆ ದೂರದ ಪ್ರಯಾಣ ಎನ್ನುವ ಲೆಕ್ಕಾಚಾರವೇ ಇರುವುದು. ಗಮ್ಯಸ್ಥಾನವನ್ನು ಅವಲಂಬಿಸಿ, ರೈಲು ಪ್ರಯಾಣವು ಕೆಲವು ದಿನಗಳು ಅಥವಾ ಕೆಲವು ಗಂಟೆಗಳನ್ನು ತೆಗೆದುಕೊಳ್ಳಬಹುದು.ಆದರೆ ನಾವು ಇಂದು ನಿಮಗೆ ಹೇಳಲಿರುವ ರೈಲು ಪ್ರಯಾಣ ಕೇವಲ 1 ನಿಮಿಷದಲ್ಲಿ ಕೊನೆಗೊಳ್ಳುತ್ತದೆ.ಕಣ್ಣ ರೆಪ್ಪೆ ಮಿಟುಕಿಸುವುದರ ಒಳಗೆ    ನೀವು ತಪುಪಬೇಕಾದ ನಿಲ್ದಾಣ ಬಂದೂ ಆಗುತ್ತದೆ. 

ವಿಶ್ವದ ಅತಿ ಕಡಿಮೆ ಅವಧಿಯ ರೈಲು ಪ್ರಯಾಣ :      
ವಿಶ್ವದ ಅತ್ಯಂತ ಕಡಿಮೆ ಅವಧಿಯ ರೈಲು ಪ್ರಯಾಣ ಇದು.ಇಲ್ಲಿ ಕ್ರಮಿಸಬೇಕಾಗಿರುವ ದೂರ ಕೇವಲ 90 ಮೀಟರ್. ಹೌದು,ವಿಶ್ವದ ಅತ್ಯಂತ ಕಡಿಮೆ ಅವಧಿಯ ರೈಲು ಪ್ರಯಾಣದ ಅನುಭವವನ್ನು ಇದು ನೀಡುತ್ತದೆ.ಇಲ್ಲಿ ನಿಲ್ದಾಣ  ತಲುಪಲು ಕೇವಲ 1 ನಿಮಿಷ ಸಾಕು. 

ಇದನ್ನೂ ಓದಿ : Reliance AGM 2024:ಅತೀ ಅಗ್ಗದ 5G Phone ಇಂದು ಬಿಡುಗಡೆ ಮಾಡಲಿದ್ದಾರೆ ಮುಖೇಶ್ ಅಂಬಾನಿ !

ರೈಲಿನ ಹೆಸರು  :
ಈ ರೈಲಿನ ಹೆಸರು ಏಂಜಲ್ಸ್ ಫ್ಲೈಟ್ ರೈಲ್ವೇ.ಈ ರೈಲು ಕ್ಯಾಲಿಫೋರ್ನಿಯಾದ ಡೌನ್‌ಟೌನ್ ಲಾಸ್ ಏಂಜಲೀಸ್‌ನಲ್ಲಿರುವ ಆಲಿವ್ ಸ್ಟ್ರೀಟ್‌ ನ ಥರ್ಡ್ ಸ್ಟ್ರೀಟ್ ಅನ್ನು ಸಂಪರ್ಕಿಸುತ್ತದೆ.ವರದಿಯ ಪ್ರಕಾರ,ಇದು ನ್ಯಾರೋ ಗೇಜ್ ಫ್ಯೂನಿಕ್ಯುಲರ್ ರೈಲ್ವೇ ಆಗಿ ಕಾರ್ಯನಿರ್ವಹಿಸುತ್ತದೆ.

ಒಂದೇ ನಿಮಿಷದ ಪ್ರಯಾಣ : 
ಏಂಜಲ್ಸ್ ಫ್ಲೈಟ್ ರೈಲು ಕೇವಲ ಒಂದು ನಿಮಿಷದಲ್ಲಿ ತನ್ನ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ.ಈ ರೈಲು ಕೇಬಲ್‌ನಿಂದ ನಿಯಂತ್ರಿಸಲ್ಪಡುತ್ತದೆ.33 ಡಿಗ್ರಿ ಇಳಿಜಾರಿನಲ್ಲಿ 315 ಅಡಿ ದೂರವನ್ನು ಈ ರೈಲು ಕ್ರಮಿಸುತ್ತದೆ. ಗುರುತ್ವಾಕರ್ಷಣೆಯಿಂದಾಗಿ, ಈ ರೈಲು ಸುಮಾರು ಒಂದು ನಿಮಿಷದಲ್ಲಿ ಈ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ.

ಒಂದು ಕೋಟಿ ಪ್ರಯಾಣಿಕರ ಸಂಚಾರ : 
ವರದಿಯ ಪ್ರಕಾರ, ಏಂಜಲ್ಸ್ ಫ್ಲೈಟ್ ಇದುವರೆಗಿನ ತನ್ನ ಪ್ರಯಾಣದಲ್ಲಿ ಒಂದು ಕೋಟಿಗೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ದಿದೆ. ಇದನ್ನು US ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಸ್ನೇಹಿತ, ವಕೀಲ, ಎಂಜಿನಿಯರ್, ಕರ್ನಲ್ JW ಎಡ್ಡಿ ಸಿದ್ಧಪಡಿಸಿದರು. 

ಇದನ್ನೂ ಓದಿ :  ಬಂದ್ ಆಗುತ್ತಾ ಅನ್ಲಿಮಿಟೆಡ್ ಕಾಲ್, ಡೇಟಾ ಪ್ಲಾನ್ಸ್: ಜಿಯೋ, ಏರ್‌ಟೆಲ್‌, ವಿಐ ಗ್ರಾಹಕರಿಗೆ ಹೆಚ್ಚಾಯ್ತು ಟೆನ್ಷನ್

ಹಲವಾರು ಬಾರಿ  ಸೇವೆ ಸ್ಥಗಿತ : 
ಎರಡು ಕೊಕ್ ಗಳಿರುವ ಈ ರೈಲಿನ ಸೇವೆಯನ್ನು ಅನೇಕ ಬಾರಿ ನಿಲ್ಲಿಸಲಾಗಿತ್ತು. 2001 ರಲ್ಲಿ ಮಾರಣಾಂತಿಕ ಅಪಘಾತದ ನಂತರ ಇದನ್ನು ಸ್ಥಗಿತಗೊಳಿಸಲಾಗಿತ್ತು.  ನಂತರ ಅದನ್ನು 2010 ರವರೆಗೆ ಮತ್ತೆ ಇದು ಸಂಚರಿಸಲಿಲ್ಲ. ಕೋಚ್ ಹಳಿತಪ್ಪಿದ ಕಾರಣಕ್ಕಾಗಿ ಇದರ ಸೇವೆಯನ್ನು ಮತ್ತೆ 2013ರಲ್ಲಿ ನಿಲ್ಲಿಸಲಾಗಿತ್ತು. ಇದೀಗ 2017ರಲ್ಲಿ ಈ ರೈಲು ಸೇವೆ ಮತ್ತೆ ಪ್ರಾರಂಭವಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News