OnePlus 9R : ಒನ್ ಪ್ಲಸ್ ಲಾಂಚ್ ಮಾಡುತ್ತಿದೆ ಅಗ್ಗದ ಸೂಪರ್ ಸ್ಮಾರ್ಟ್ ಫೋನ್..!

ಒನ್ ಪ್ಲಸ್   9ಆರ್ ಸ್ಮಾರ್ಟ್ ಫೋನ್  ರಿಲೀಸ್ ಮಾಡಲಿದೆ. ಒನ್ ಪ್ಲಸ್ ನ    ಅತ್ಯಂತ ಸಸ್ತಾ ಮೊಬೈಲ್  ಇದಾಗಿದೆ. ಇದರ ಬೆಲೆ ಇಲ್ಲಿಯವರೆಗೆ ಅಧಿಕೃತವಾಗಿ ಬಹಿರಂಗವಾಗಿಲ್ಲ.   

Written by - Ranjitha R K | Last Updated : Feb 26, 2021, 07:34 PM IST
  • ಒನ್ ಪ್ಲಸ್ ಫೋನ್ ಇಷ್ಟಪಡುತ್ತಿದ್ದರೆ ಈ ಸುದ್ದಿ ಖಂಡಿತಾ ಓದಿ
  • ಶೀಘ್ರದಲ್ಲೇ ರಿಲೀಸ್ ಆಗಲಿದೆ ಒನ್ ಪ್ಲಸ್ 9 ಆರ್ ಫೋನ್
  • ಒನ್ ಪ್ಲಸ್ ನ ಅತ್ಯಂತ ಸಸ್ತಾ ಮೊಬೈಲ್ ಇದಾಗಿದೆ.
OnePlus 9R : ಒನ್ ಪ್ಲಸ್  ಲಾಂಚ್ ಮಾಡುತ್ತಿದೆ ಅಗ್ಗದ ಸೂಪರ್ ಸ್ಮಾರ್ಟ್ ಫೋನ್..! title=
ಶೀಘ್ರದಲ್ಲೇ ರಿಲೀಸ್ ಆಗಲಿದೆ ಒನ್ ಪ್ಲಸ್ 9 ಆರ್ ಫೋನ್ (file photo)

ನವದೆಹಲಿ : ನಿಮಗೆ ಒನ್ ಪ್ಲಸ್  ಸ್ಮಾರ್ಟ್ ಫೋನ್ (Smartphone) ಇಷ್ಟ ಇದ್ದರೆ ಖಂಡಿತಾ ಈ ಸುದ್ದಿ ಓದಿ. ಒನ್ ಪ್ಲಸ್  9 (OnePlus 9 ) ಸಿರೀಸ್ನಲ್ಲಿ ಕಂಪನಿ ಅತ್ಯಂತ ಅಗ್ಗದ ಸ್ಮಾರ್ಟ್ ಫೋನ್ ಹೊರತರುತ್ತಿದೆ. ಅದರ ಪೀಚರ್ಸ್ ಒಂದನ್ನೊಂದು ಮೀರಿಸುವಂತಿದೆ. 

ಲಾಂಚ್ ಮಾಡಲಿದೆ ಒನ್ ಪ್ಲಸ್  9ಆರ್ (OnePlus 9R) :
ಬಿಜಿಆರ್.ಇನ್ ಪ್ರಕಾರ ಒನ್ ಪ್ಲಸ್   9ಆರ್ ಸ್ಮಾರ್ಟ್ ಫೋನ್ (Smart phone) ರಿಲೀಸ್ ಮಾಡಲಿದೆ. ಒನ್ ಪ್ಲಸ್ ನ    ಅತ್ಯಂತ ಸಸ್ತಾ ಮೊಬೈಲ್ (Mobile) ಇದಾಗಿದೆ. ಇದರ ಬೆಲೆ ಇಲ್ಲಿಯವರೆಗೆ ಅಧಿಕೃತವಾಗಿ ಬಹಿರಂಗವಾಗಿಲ್ಲ. ಆದರೂ, ತುಂಬಾ ಕಡಿಮೆ ಬೆಲೆಗೆ ಸಿಗಲಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ : Vi WiFi calling Service : ಸಿಗ್ನಲ್ ಇಲ್ಲದೆಯೂ ಪೋನ್ ಮಾಡಬಹುದು..!

ಜಬರ್ದ ಸ್ತ್ ಪ್ರೊಸೆಸರ್ : 
ಲಭ್ಯ ಮಾಹಿತಿಗಳ ಪ್ರಕಾರ, ಒನ್ ಪ್ಲಸ್ 9ಆರ್ ನಲ್ಲಿ ಕಂಪನಿ ಏಕ್ದಂ ಜಬರ್ದಸ್ತ್ ಪ್ರೊಸೆಸ್ಸರ್ ನೀಡಲಿದೆ.  Qualcomm Snapdragon 690 ಚಿಪ್‍ ಸೆಟ್ ಇದರಲ್ಲಿದೆ. 8GB RAM ಮತ್ತು 128 ಜಿಬಿ ಸ್ಟೋರೇಜ್ ಇದರಲ್ಲಿದೆ. 

ಮುಂದಿನ ತಿಂಗಳು ಲಾಂಚ್ : 
ಈ ಸೀರೀಸ್ನ ಸ್ಮಾರ್ಟ್ ಫೋನ್  ಇದುವರೆಗೂ ಲಾಂಚ್ ಆಗಿಲ್ಲ.  ಒನ್ ಪ್ಲಸ್  9 ಆರ್ ಮುಂದಿನ ತಿಂಗಳು ಲಾಂಚ್ ಆಗಲಿದೆ. ಕಂಪನಿ (Company) ಅದರ ತಯಾರಿಯಲ್ಲಿದೆ. 

ಇದನ್ನೂ ಓದಿ : BSNL ಹೊಸ ಪ್ಲಾನ್ ; ಭರ್ಜರಿ ರಿಯಾಯಿತಿ ಜೊತೆಗೆ ಸಿಗಲಿದೆ ಫುಲ್ entertainment

ಸ್ಪೆಸಿಫಿಕೇಶನ್ (Specification) ಏನಿರಲಿದೆ ನೋಡಿ :
1. 6.5 ಇಂಚಿನ 90Hz ಡಿಸ್ಪ್ಲೇ .
2. FHD+  ರೆಸೆಲ್ಯೂಶನ್ ಇರಲಿದೆ
3. 64MP ಪ್ರೈಮೆರಿ ಕೆಮೆರಾ ಮತ್ತು ಒಂದು 8ಎಂಪಿ ವೈಡ್ ಆಂಗಲ್ ಲೆನ್ಸ್ ಸಿಗಲಿದೆ. 
4. 5000mAh ಬ್ಯಾಟರಿ  ಇದರಲ್ಲಿದೆ.
5. 8GB RAM
6. ಮತ್ತು 128 ಜಿಬಿ ಸ್ಟೋರೇಜ್ 

ಸದ್ಯದಲ್ಲೇ ಬರಲಿದೆ ಈ ಸೂಪರ್ ಫೀಚರ್ (features)ಇರುವ ಒನ್ ಪ್ಲಸ್ 9ಆರ್ ಸೂಪರ್ ಸ್ಮಾರ್ಟ್ ಫೋನ್  .

ಇದನ್ನೂ ಓದಿ PUB-G New State Launched: ಗೂಗಲ್ ಪ್ಲೇ ಸ್ಟೋರ್‌ನಲ್ಲಿ PUB-G New State ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿವರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Trending News