ಶರೀರದ ಈ 6 ಅಂಗಗಳಲ್ಲಿನ ದುರ್ವಾಸನೆ ಗಂಭೀರ ಕಾಯಿಲೆಯ ಎಚ್ಚರಿಕೆಯ ಗಂಟೆ!

Body Smell: ಅತಿಯಾದ ಮತ್ತು ನಿರಂತರವಾದ  ಬೆವರಿನ ದುರ್ವಾಸನೆಯು ಅದರಲ್ಲೂ ದೇಹದ ಕೆಲವು ಅಂಗಗಳಲ್ಲಿನ ದುರ್ವಾಸನೆಯು ಗಂಭೀರ ಕಾಯಿಲೆಗಳ ಲಕ್ಷಣವೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Jun 18, 2024, 10:38 AM IST
  • ಬೇಸಿಗೆ ಕಾಲದಲ್ಲಿ ಅತಿಯಾಗಿ ಬೆವರುವುದರಿಂದ ಬೆವರಿನ ವಾಸನೆ ಬರುವುದು ಸಹಜ.
  • ಆದರೆ, ದೇಹದ ಆರು ಅಂಗಗಳಿಂದ ಬರುವ ದುರ್ವಾಸನೆಯು ಗಂಭೀರ ಕಾಯಿಲೆಯ ಎಚ್ಚರಿಕೆಯ ಗಂಟೆಯೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ?
  • ಹಾಗಿದ್ದರೆ, ದೇಹದ ಯಾವ ಅಂಗದಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಅದು ಯಾವ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ ಎಂದು ತಿಳಿಯೋಣ...
ಶರೀರದ ಈ 6 ಅಂಗಗಳಲ್ಲಿನ ದುರ್ವಾಸನೆ ಗಂಭೀರ ಕಾಯಿಲೆಯ ಎಚ್ಚರಿಕೆಯ ಗಂಟೆ!  title=

Body Smell Warning Signs: ವ್ಯಾಯಾಮ,  ದೈಹಿಕ ಚಟುವಟಿಕೆ, ಬಿಸಿಲು ಈ ರೀತಿ ಬೆವರುವಿಕೆಗೆ ಹಲವು ಕಾರಣಗಳಿವೆ. ಬೆವರು ಯಾವುದೇ ವಾಸನೆಯನ್ನು ಹೊಂದಿರದಿದ್ದರೂ, ಇದು ಚರ್ಮದ ಮೇಲೆ ಬ್ಯಾಕ್ಟೀರಿಯಾದೊಂದಿಗೆ ಬೆರೆತಾಗ ಅದು ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ.  ಆದರೆ, ಶರೀರದ ನಿರ್ದಿಷ್ಟ ಅಂಗದಿಂದ ಅಸಾಮಾನ್ಯವಾದ ಕೆಟ್ಟ ದುರ್ವಾಸನೆ (Bad Smell) ಬರುವುದನ್ನು ಎಂದಿಗೂ ನಿರ್ಲಕ್ಷಿಸಬೇಡಿ. 

ಬೇಸಿಗೆ ಕಾಲದಲ್ಲಿ ಅತಿಯಾಗಿ ಬೆವರುವುದರಿಂದ ಬೆವರಿನ ವಾಸನೆ ಬರುವುದು ಸಹಜ. ಆದರೆ, ದೇಹದ ಆರು ಅಂಗಗಳಿಂದ ಬರುವ ದುರ್ವಾಸನೆಯು ಗಂಭೀರ ಕಾಯಿಲೆಯ (Serious Illness) ಎಚ್ಚರಿಕೆಯ ಗಂಟೆಯೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ? ಹಾಗಿದ್ದರೆ, ದೇಹದ ಯಾವ ಅಂಗದಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಅದು ಯಾವ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ ಎಂದು ತಿಳಿಯೋಣ... 

ಶರೀರದ ಈ 6 ಅಂಗಗಳಲ್ಲಿನ ದುರ್ವಾಸನೆ ಗಂಭೀರ ಕಾಯಿಲೆಯ ಎಚ್ಚರಿಕೆಯ ಗಂಟೆ! 
ಬಾಯಿಯಿಂದ ವಾಸನೆ: 

ಕೆಲವೊಮ್ಮೆ ಬ್ರೆಶ್ ಮಾಡಿದ ಬಳಿಕವೂ ಬಾಯಿಯಿಂದ ವಾಸನೆ (Bad Breath) ಬರುತ್ತದೆ. ಇದು ಪರಿದಂತದ ಕಾಯಿಲೆ, ಹೊಟ್ಟೆ ಸಮಸ್ಯೆಗಳು, ಮಧುಮೇಹ, ಮೂತ್ರಪಿಂಡದ ಕಾಯಿಲೆ (Kidney Disease) ಅಥವಾ ಉಸಿರಾಟದ ಪ್ರದೇಶದ ಸೋಂಕಿನ ಲಕ್ಷಣಗಳನ್ನು ಸೂಚಿಸುತ್ತದೆ. 

ಇದನ್ನೂ ಓದಿ- Beauty Tips: ಮೊಡವೆ ಮುಕ್ತ, ಕಲೆರಹಿತ ತ್ವಚೆಗಾಗಿ ಒಂದೆರಡು ಹನಿ ರಸ ಸಾಕು!

ಮೂಗಿನಿಂದ ವಾಸನೆ: 
ಬಹುತೇಕ ಸಂದರ್ಭದಲ್ಲಿ ಮೂಗಿನ ನಾಳಗಳಿಂದಲೂ ದುರ್ವಾಸನೆಯ ಅನುಭವವಾಗುತ್ತದೆ. ಇದು ಸೈನಸ್ ಸೋಂಕು, ಮೂಗಿನಲ್ಲಿರುವ ಪಾಲಿಪ್ಸ್ ಅಥವಾ ಗೆಡ್ಡೆಗಳ ಸಂಕೇತವಾಗಿರಲೂ ಬಹುದು ಎಂದು ಹೇಳಲಾಗುತ್ತದೆ. 

ಕಿವಿಯಿಂದ ವಾಸನೆ: 
ಕಿವಿಗಳಲ್ಲಿ ಅತಿಯಾದ ತುರಿಕೆ, ನೋವಿನಿಂದಲ್ಲೂ ಕಿವಿಗಳಿಂದ ಕೆಟ್ಟ ವಾಸನೆ (Bad smell from the ears) ಬರಬಹುದು. ಇದು ಕಿವಿಯ ಸೋಂಕು, ಕಿವಿಯೋಲೆಯಲ್ಲಿ ರಂಧ್ರ ಅಥವಾ ಕಿವಿಯ ಗೆಡ್ಡೆಯ ಸಂಕೇತವನ್ನು ಸೂಚಿಸುತ್ತದೆ ಎನ್ನಲಾಗುತ್ತದೆ. 

ಅಂಡರ್ ಆರ್ಮ್ ವಾಸನೆ: 
ಬೆವರಿನಿಂದಾಗಿ ಕಂಕುಳಿನ ಕೆಳಗೆ ವಾಸನೆ ಬರಬಹುದು. ಆದರೆ, ಅಂಡರ್ ಆರ್ಮ್ (Under arm) ನಿಂದ ಬರುವ ಅತಿಯಾದ ವಾಸನೆಯು ಗಂಭೀರ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ. ಇದರಿಂದ ಪರಿಹಾರಕ್ಕಾಗಿ ನೀವು ನಿಮ್ಮ ಶರೀರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಅವಶ್ಯಕವಾಗಿದೆ. 

ಇದನ್ನೂ ಓದಿ- Beauty Tips: ಸದಾ ಯಂಗ್ ಆಗಿ ಕಾಣಲು ಮಲಗುವ ಮುನ್ನ ಈ ಟಿಪ್ಸ್ ಅನುಸರಿಸಿ

ಜನನಾಂಗದಲ್ಲಿ ವಾಸನೆ: 
ಮೂತ್ರದಲ್ಲಿ ಸ್ವಲ್ಪ ವಾಸನೆ ಬರುವುದು ನೈಸರ್ಗಿಕ. ಆದರೆ, ಜನನಾಂಗದಲ್ಲಿ ದುರ್ವಾಸನೆಯು ಆಂತರಿಕ ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತದೆ. ಇದು ಯುಟಿಐ, ಮೂತ್ರಕೋಶದಲ್ಲಿ ಉರಿಯೂತ, ಮಧುಮೇಹದಂತಹ ಆರೋಗ್ಯ ಸಮಸ್ಯೆಗಳ ಎಚ್ಚರಿಕೆಯ ಗಂಟೆಯೂ ಆಗಿರಬಹುದು. 

ಪಾದಗಳಲ್ಲಿ ವಾಸನೆ: 
ಬೇಸಿಗೆಯಲ್ಲಿ ಶೂ ಧರಿಸಿದಾಗ, ಇಲ್ಲವೇ ಒದ್ದೆ ಸಾಕ್ಸ್ ಧರಿಸಿ ಅದರ ಮೇಲೆ ಶೂ ಧರಿಸುವುದರಿಂದ ಪಾದಗಳಲ್ಲಿ ವಾಸನೆ ಬರಬಹುದು. ಆದರೆ, ಪಾದಗಳಲ್ಲಿ ಅತಿಯಾದ ದುರ್ವಾಸನೆಯು ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕಿನ ಸಂಕೇತವಾಗಿದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News