Coming Soon: ಎರಡಲ್ಲ ಒಟ್ಟು 4 ಹೊಸ ಕಾರು ಬಿಡುಗಡೆಗೆ ಸಿದ್ಧವಾಗಿದೆ ಈ ಭಾರತೀಯ ಕಂಪನಿ!

Upcoming Maruti Cars: ಖ್ಯಾತ ಭಾರತೀಯ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ 2023 ರ ವರ್ಷಕ್ಕೆ ತನ್ನ ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆಟೋ ಎಕ್ಸ್‌ಪೋ 2023 ರಲ್ಲಿ ಇದರ ಒಂದು ಝಲಕ್ ನೋಡಲು ಸಿಕ್ಕಿದೆ. ಹೊಸ ಆಫ್‌ರೋಡಿಂಗ್ ಎಸ್‌ಯುವಿ ಮತ್ತು ಕೈಗೆಟುಕುವ ಎಸ್‌ಯುವಿಗಳ ಜೊತೆಗೆ, ಕಂಪನಿಯು ಸಿಎನ್‌ಜಿಯೊಂದಿಗೆ ಎಸ್‌ಯುವಿಯನ್ನು ಸಹ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ.  

Written by - Nitin Tabib | Last Updated : Feb 19, 2023, 09:56 PM IST
  • ಹೊಸ ಆಫ್‌ರೋಡಿಂಗ್ ಎಸ್‌ಯುವಿ ಮತ್ತು ಕೈಗೆಟುಕುವ ಎಸ್‌ಯುವಿಯ ಹೊರತಾಗಿ,
  • ಕಂಪನಿಯು ಸಿಎನ್‌ಜಿಯೊಂದಿಗೆ ಎಸ್‌ಯುವಿಯನ್ನು ಸಹ ಬಿಡುಗಡೆ ಮಾಡಲಿದೆ.
  • ಇಲ್ಲಿ ನಾವು ಮಾರುತಿ ಸುಜುಕಿಯ ಮುಂಬರುವ 4 ಕಾರುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
Coming Soon: ಎರಡಲ್ಲ ಒಟ್ಟು 4 ಹೊಸ ಕಾರು ಬಿಡುಗಡೆಗೆ ಸಿದ್ಧವಾಗಿದೆ ಈ ಭಾರತೀಯ ಕಂಪನಿ! title=
ಮುಂಬರುವ ಮಾರುತಿ ಸುಜುಕಿ ಕಾರುಗಳು ಇಲ್ಲಿವೆ

Maruti Upcoming Cars:  ದೇಶದ ಅತಿದೊಡ್ಡ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ ನಿರಂತರವಾಗಿ ತನ್ನ ಪೋರ್ಟ್‌ಫೋಲಿಯೊವನ್ನು ಅಪ್ಡೇಟ್ ಮಾಡುತ್ತಲೇ ಇದೆ. ಕಂಪನಿಯು ಕಳೆದ ವರ್ಷ ಮಾರುತಿ ಸುಜುಕಿ ಬಲೆನೊ, ಬ್ರೆಝಾ ಮತ್ತು XL6 ಅನ್ನು ಅಪ್ಗ್ರೇಡ್ ಮಾಡಿದೆ. ಮಾರುತಿ ಗ್ರ್ಯಾಂಡ್ ವಿಟಾರಾ ರೂಪದಲ್ಲಿ ಹೊಸ ಉತ್ಪನ್ನವನ್ನು ಕೂಡ ಪರಿಚಯಿಸಿದೆ. ಕಂಪನಿಯು 2023 ರ ವರ್ಷಕ್ಕೂ ಕೂಡ ಹೊಸ ಕಾರುಗಳ ಬಿಡುಗಡೆಗೆ ಸಜ್ಜಾಗಿದೆ. ಆಟೋ ಎಕ್ಸ್‌ಪೋ 2023 ರಲ್ಲಿ ಇದರ ಒಂದು ಝಲಕ್ ನೋಡಲು ಸಿಕ್ಕಿದೆ.  ಹೊಸ ಆಫ್‌ರೋಡಿಂಗ್ ಎಸ್‌ಯುವಿ ಮತ್ತು ಕೈಗೆಟುಕುವ ಎಸ್‌ಯುವಿಯ ಹೊರತಾಗಿ, ಕಂಪನಿಯು ಸಿಎನ್‌ಜಿಯೊಂದಿಗೆ ಎಸ್‌ಯುವಿಯನ್ನು ಸಹ ಬಿಡುಗಡೆ ಮಾಡಲಿದೆ. ಇಲ್ಲಿ ನಾವು ಮಾರುತಿ ಸುಜುಕಿಯ ಮುಂಬರುವ 4 ಕಾರುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.

ಮಾರುತಿ ಸುಜುಕಿ ಫ್ರಾಂಕ್ಸ್
ಇದು ಕಂಪನಿಯ ಹೊಸ ಕಾಂಪ್ಯಾಕ್ಟ್ ಕ್ರಾಸ್ಒವರ್ ಆಗಿದ್ದು, ಬ್ರೆಝಾ ಮತ್ತು ಬಲೆನೊ ನಡುವಿನ ಆವೃತ್ತಿಯಾಗಿದೆ. ಇದು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ - 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.0-ಲೀಟರ್ K-ಸರಣಿಯ ಟರ್ಬೊ ಪೆಟ್ರೋಲ್ ಎಂಜಿನ್ ಸೌಮ್ಯ-ಹೈಬ್ರಿಡ್ ತಂತ್ರಜ್ಞಾನದೊಂದಿಗೆ. ಇದರ ಮುಂಭಾಗದ ವಿನ್ಯಾಸವು ಗ್ರ್ಯಾಂಡ್ ವಿಟಾರಾವನ್ನು ಹೋಲುತ್ತದೆ ಮತ್ತು ಉಳಿದ ಅಂಶಗಳು ಮಾರುತಿ ಬಲೆನೊವನ್ನು ಹೋಲುತ್ತವೆ. ಇದು ಫ್ಲೋಟಿಂಗ್ 9.0-ಇಂಚಿನ SmartPlay Pro+ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದ್ದು , ಅದು Apple CarPlay ಮತ್ತು Android Auto ಅನ್ನು ಬೆಂಬಲಿಸುತ್ತದೆ.

ಈ ಕಾರು ಸಿಎನ್‌ಜಿಯೊಂದಿಗೆ ಬಿಡುಗಡೆಯಾಗಲಿದೆ. CNG ಮೋಡ್‌ನಲ್ಲಿ, ಇದು 76bhp ಮತ್ತು 98Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 5 ರೂಪಾಂತರಗಳಲ್ಲಿ ತರಲಾಗುವುದು - ಸಿಗ್ಮಾ, ಡೆಲ್ಟಾ, ಡೆಲ್ಟಾ +, ಝೀಟಾ ಮತ್ತು ಆಲ್ಫಾ. ಬೆಲೆಗಳು ರೂ 8 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ರೂ 12 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇರಲಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ-Alert! ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ನಕಲಿ ಆಲೂಗಡ್ಡೆ! ವಂಚನೆಗೆ ಗುರಿಯಾಗುವ ಮೊದಲು ಈ ಸುದ್ದಿ ಓದಿ

ಮಾರುತಿ ಸುಜುಕಿ ಜಿಮ್ನಿ 5 ಡೋರ್ 
ಆಟೋ ಎಕ್ಸ್‌ಪೋ 2023 ರಲ್ಲಿ, ಕಂಪನಿಯು ಮಾರುತಿ ಜಿಮ್ನಿ 5-ಡೋರ್ ಅನ್ನು ಪರಿಚಯಿಸಿದೆ. ಇದು 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಇದು 103bhp ಮತ್ತು 134Nm ಪೀಕ್ ಟಾರ್ಕ್ ಉತ್ಪಾದನ ಸಾಮರ್ಥ್ಯ ಹೊಂದಿರುವ ಸಾಧ್ಯತೆ ಇದೆ. ಇದು ಕಂಪನಿಯ ಆಫ್ರೋಡ್ SUV ಆಗಿರುತ್ತದೆ, ಇದು 4X4 ಸಿಸ್ಟಮ್ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹೆಡ್‌ಲ್ಯಾಂಪ್ ವಾಷರ್‌ಗಳು, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಫಾಗ್ ಲ್ಯಾಂಪ್‌ಗಳು, ಕ್ರೂಸ್ ಕಂಟ್ರೋಲ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಮತ್ತು 6 ಏರ್‌ಬ್ಯಾಗ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎನ್ನಲಾಗುತ್ತಿದೆ. 10 ಲಕ್ಷದಿಂದ 12 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದರ ಬೆಲೆ ಇರಬಹುದೆಂದು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ-ಇನ್ಮುಂದೆ ನೌಕರಿ ಕಳೆದುಕೊಂಡರೆ ನೀವು ಚಿಂತಿಸಬೇಕಾಗಿಲ್ಲ, ಆದಷ್ಟು ಬೇಗ ಈ ಪಾಲಸಿ ನಿಮ್ಮ ಬಳಿ ಇರಲಿ!

ಮಾರುತಿ ಬ್ರೆಝಾ CNG
ಕಂಪನಿಯು ತನ್ನ ಕಾಂಪ್ಯಾಕ್ಟ್ SUV ಮಾರುತಿ ಸುಜುಕಿ ಬ್ರೆಝಾವನ್ನು CNG ಅವತಾರದಲ್ಲಿ ಬಿಡುಗಡೆಗೊಳಿಸಲಿದೆ. ಇದು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ. ಈ ಎಂಜಿನ್ CNG ಮೋಡ್‌ನಲ್ಲಿ 87bhp ಮತ್ತು 121.5Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಹೊರ ಮತ್ತು ಒಳಭಾಗದಲ್ಲಿ ಯಾವುದೇ ಬದಲಾವಣೆ ಇರುವದಿಲ್ಲ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಎಲ್ಇಡಿ ಹೆಡ್ಲ್ಯಾಂಪ್ಗಳು, 16-ಇಂಚಿನ ಅಲಾಯ್ ಚಕ್ರಗಳು, ಕ್ರೂಸ್ ಕಂಟ್ರೋಲ್, 7.0-ಇಂಚಿನ ಟಚ್ಸ್ಕ್ರೀನ್ ಸಿಸ್ಟಮ್, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಇದರ ಬೆಲೆ ಪೆಟ್ರೋಲ್ ರೂಪಾಂತರಕ್ಕಿಂತ 60,000 ರಿಂದ 70,000 ರೂ. ಹೆಚ್ಚಾಗಿರುವ ಸಾಧ್ಯತೆ ಇದೆ

ಇದನ್ನೂ ಓದಿ-Double Ration: ಹೋಳಿ ಹಬ್ಬಕ್ಕೂ ಮುನ್ನ ಪಡಿತರ ಚೀಟಿಧಾರಕರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಸರ್ಕಾರ!

ಮಾರುತಿ ಸುಜುಕಿ MPV
ಮಾರುತಿ ಸುಜುಕಿ ಮತ್ತು ಟೊಯೊಟಾ ಪಾಲುದಾರಿಕೆಯಲ್ಲಿ ಮತ್ತೊಂದು ಕಾರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮಾರುತಿ ಈಗ ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತ MPV ಅನ್ನು ಬಿಡುಗಡೆ ಮಾಡಲಿದೆ. ಈ 7 ಆಸನಗಳ MPV ಅನ್ನು ಮಾರುತಿ XL6 ಮೇಲೆ ಹೈಕ್ರಾಸ್ ಆಗಲಿದೆ. ಇನ್ನೋವಾ ಹೈಕ್ರಾಸ್‌ನಂತೆ, ಇದು 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.0-ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News