ಹೊಸ ಅವತಾರದಲ್ಲಿ ರೋಡಿಗಿಳಿದ ಮಾರುತಿಯ ಈ Luxury ಕಾರು! ಬೆಲೆ ಎಷ್ಟು ಇಲ್ಲಿದೆ ಮಾಹಿತಿ

ಕಂಪನಿಯು ತನ್ನ ಜನಪ್ರಿಯ ಸೆಡಾನ್ ಮಾರುತಿ ಸಿಯಾಜ್ ಅನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ. ಹೊಸ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಡ್ಯುಯಲ್ ಟೋನ್  ಎಕ್ಸ್ ಟೀರಿಯರ್ ಬಣ್ಣವನ್ನು ಈ ಕಾರಿಗೆ ನೀಡಲಾಗಿದೆ. 

Written by - Ranjitha R K | Last Updated : Feb 15, 2023, 01:07 PM IST
  • ಮಾರುತಿ ಸುಜುಕಿ ತನ್ನ ವಾಹನಗಳನ್ನು ನಿರಂತರವಾಗಿ ಅಪ್ಗ್ರೇಡ್ ಮಾಡುತ್ತಲೇ ಇದೆ.
  • ಕಂಪನಿಯು ಇತ್ತೀಚೆಗೆ ತನ್ನ Baleno, Ertiga ಮತ್ತು XL6 ಅನ್ನು ಅಪ್ಗ್ರೇಡ್ ಮಾಡಿದೆ.
  • ಸೆಡಾನ್ ಮಾರುತಿ ಸಿಯಾಜ್ ಅನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ.
ಹೊಸ ಅವತಾರದಲ್ಲಿ ರೋಡಿಗಿಳಿದ ಮಾರುತಿಯ ಈ Luxury ಕಾರು! ಬೆಲೆ ಎಷ್ಟು ಇಲ್ಲಿದೆ ಮಾಹಿತಿ  title=

ಬೆಂಗಳೂರು : ಮಾರುತಿ ಸುಜುಕಿ ತನ್ನ ವಾಹನಗಳನ್ನು ನಿರಂತರವಾಗಿ  ಅಪ್ಗ್ರೇಡ್ ಮಾಡುತ್ತಲೇ ಇದೆ. ಕಂಪನಿಯು ಇತ್ತೀಚೆಗೆ ತನ್ನ Baleno, Ertiga ಮತ್ತು XL6 ಅನ್ನು ಅಪ್ಗ್ರೇಡ್ ಮಾಡಿದೆ. ಈಗ ಕಂಪನಿಯು ತನ್ನ ಜನಪ್ರಿಯ ಸೆಡಾನ್ ಮಾರುತಿ ಸಿಯಾಜ್ ಅನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ. ಹೊಸ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಡ್ಯುಯಲ್ ಟೋನ್  ಎಕ್ಸ್ ಟೀರಿಯರ್ ಬಣ್ಣವನ್ನು ಈ ಕಾರಿಗೆ ನೀಡಲಾಗಿದೆ. ಆದಾಗ್ಯೂ, ಅದರ ಎಂಜಿನ್ ಅಥವಾ ಸೌಕರ್ಯದ ವೈಶಿಷ್ಟ್ಯಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಒಟ್ಟಿನಲ್ಲಿ ಈಗ ಅದು ಮೊದಲಿಗಿಂತ ಹೆಚ್ಚು ಸುಂದರ ಮತ್ತು ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತಿದೆ. Ciazನ ಎಲ್ಲಾ ರೂಪಾಂತರಗಳಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು  ಸ್ಟ್ಯಾಂಡರ್ಡ್ ಫೀಚರ್ ಆಗಿ ನೀಡಲಾಗಿದೆ. ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS,ರಿಯರ್ ಪಾರ್ಕಿಂಗ್  ಸೆನ್ಸಾರ್ ಮತ್ತು ಸುರಕ್ಷತೆಗಾಗಿ ISOFIX ಚೈಲ್ಡ್-ಸೀಟ್ ನೊಂದಿಗೆ ಬರುತ್ತದೆ. 

ಎಕ್ಸ್ ಟೀರಿಯರ್ ನಲ್ಲಿ ಆಗಿರುವ ಬದಲಾವಣೆ ಏನು ? : 
ಸಿಯಾಜ್ ಅನ್ನು ಈಗ ಮೂರು ಬಣ್ಣಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ. ಪರ್ಲ್ ಮೆಟಾಲಿಕ್ ಒಪ್ಯುಲೆಂಟ್ ರೆಡ್, ಪರ್ಲ್ ಮೆಟಾಲಿಕ್ ಗ್ರ್ಯಾಂಡ್ಯುರ್ ಗ್ರೇ ಮತ್ತು ಡಿಗ್ನಿಟಿ ಬ್ರೌನ್ ಡ್ಯುಯಲ್ ಟೋನ್ ಫಿನಿಶ್ ನೊಂದಿಗೆ ಬ್ಲಾಕ್ ರೂಫ್ ಅನ್ನು ಒಳಗೊಂಡಿದೆ. ಇದು 7 ಮೊನೊಟೋನ್ ಬಣ್ಣಗಳನ್ನು ಒಳಗೊಂಡಂತೆ ಒಟ್ಟು 10 ಬಣ್ಣಗಳ  ಆಯ್ಕೆಗಳನ್ನು ಹೊಂದಿದೆ. ಡ್ಯುಯಲ್-ಟೋನ್ ಆಯ್ಕೆಯು ಟಾಪ್-ಸ್ಪೆಕ್ ಆಲ್ಫಾ ಟ್ರಿಮ್‌ಗಳಲ್ಲಿ ಮಾತ್ರ ಲಭ್ಯವಿದೆ. 

ಇದನ್ನೂ ಓದಿ : ಟ್ವಿಟ್ಟರ್ ಗೆ ಹೊಸ ಸಿಇಒ ಪರಿಚಯಿಸಿದ ಎಲೋನ್ ಮಸ್ಕ್ !

ವೈಶಿಷ್ಟ್ಯ ಮತ್ತು ಎಂಜಿನ್ :
ಈ ಕಾರುಗಳ ವಿಶೇಷಣಗಳು ಒಂದೇ ಆಗಿರುತ್ತವೆ. ಇದು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ Apple CarPlay ಮತ್ತು Android Auto, ಸ್ವಯಂಚಾಲಿತ LED ಹೆಡ್‌ಲೈಟ್‌ಗಳು, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಪುಶ್-ಬಟನ್ ಸ್ಟಾರ್ಟ್‌ನೊಂದಿಗೆ  ಪಾಸಿವ್ ಕೀಲೆಸ್ ಆಕ್ಸೆಸ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ. ಮೊದಲಿನಂತೆಯೇ 1.5-ಲೀಟರ್ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್  ಕನ್ವರ್ಟರ್  ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳನ್ನು ಹೊಂದಿದೆ. ಇದರ ಮೈಲೇಜ್ 20.65kmpl ವರೆಗೆ ಇರುತ್ತದೆ. 

ಬೆಲೆ  :
ಕಂಪನಿಯು ಈ ಕಾರಿನ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಆದಾಗ್ಯೂ, ಡ್ಯುಯಲ್ಟೋನ್ ಬಣ್ಣದ ಆಯ್ಕೆಯನ್ನು ಆರಿಸಿಕೊಳ್ಳುವ ಗ್ರಾಹಕರು ಮೊನೊಟೋನ್ ಒಂದಕ್ಕಿಂತ 16,000 ರೂ.ಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ. ಮಾರುತಿ ಸಿಯಾಜ್‌ನ ಬೆಲೆ 9.20 ಲಕ್ಷದಿಂದ 12.35 ಲಕ್ಷದವರೆಗೆ ಇರುತ್ತದೆ (.  ಇದು ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ವೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಸ್ಕೋಡಾ ಸ್ಲಾವಿಯಾಗೆ ಪ್ರತಿಸ್ಪರ್ಧಿಯಾಗಿದೆ.

ಇದನ್ನೂ ಓದಿ : ಈ ದೇಶದಲ್ಲಿ ಪತ್ತೆಯಾಗಿದೆ ಕೊರೊನಾಗಿಂತಲೂ ಅಪಾಯಕಾರಿ ವೈರಸ್. WHO ನಿಂದ ಅಲರ್ಟ್ ಜಾರಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News