ವಿವಾಹಿತ ಮಹಿಳೆಯರು ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವ ವಿಷಯ ಇದೇ..

Married Women Search on Google:ಕೆಲವು  ತಿಂಗಳ ಹಿಂದೆ, ಗೂಗಲ್‌ ತಾನು ನಡೆಸಿದ ಅಧ್ಯಯನದ ಅಂಶವನ್ನು ಬಹಿರಂಗಪಡಿಸಿದೆ. ಇದರ ಪ್ರಕಾರ ಬಹುತೇಕ ಮಹಿಳೆಯರು ಗೂಗಲ್ ನಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾರೆಯಂತೆ.  

Written by - Ranjitha R K | Last Updated : Sep 13, 2022, 02:57 PM IST
  • ಏನೇ ಪ್ರಶ್ನೆಗಳಿದ್ದರೂ ಮೊದಲು ತಲೆಗೆ ಬರುವುದು ಗೂಗಲ್
  • ಗೂಗಲ್ ಬಳಿಯೇ ಎಲ್ಲಾ ಉತ್ತರಗಳ ಹುಡುಕಾಟ
  • ವಿವಾಹಿತ ಮಹಿಳೆಯರು ಹುಡುಕುತ್ತಿರುತ್ತಾರೆ ಈ ಪ್ರಶ್ನೆಗಳಿಗೆ ಉತ್ತರ
ವಿವಾಹಿತ ಮಹಿಳೆಯರು  ಗೂಗಲ್ ನಲ್ಲಿ  ಅತಿ ಹೆಚ್ಚು ಸರ್ಚ್ ಮಾಡುವ ವಿಷಯ ಇದೇ..  title=
Married Women Search on Google (file photo)

Married Women Search on Google : ನಾವು ಹೊರಗೆ ಹೋಗಬೇಕಾದರೂ, ಆಹಾರವನ್ನು ಸೇವಿಸಬೇಕಾದರೂ, ಯಾವುದೇ ಸಮಸ್ಯೆಗೆ ಉತ್ತರ ಸಿಕ್ಕಿಲ್ಲ ಎಂದಾದರೂ ಮನಸ್ಸಿಗೆ ಮೊದಲು ಬರುವುದು ಗೂಗಲ್‌. ಗೂಗಲ್ ಮಾಡಿದ ಕೂಡಲೇ ಯಾವುದೇ ಸಮಸ್ಯೆ ಇದ್ದರೂ ತಕ್ಷಣ ಉತ್ತರ ಸಿಕ್ಕಿ ಬಿಡುತ್ತದೆ. ವಿವಾಹಿತ ಮಹಿಳೆಯರು ಕೂಡಾ ತಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರ ಕೇಳುವುದು ಗೂಗಲ್ ಬಳಿಯೇ. ಕೆಲವು  ತಿಂಗಳ ಹಿಂದೆ, ಗೂಗಲ್‌ ತಾನು ನಡೆಸಿದ ಅಧ್ಯಯನದ ಅಂಶವನ್ನು ಬಹಿರಂಗಪಡಿಸಿದೆ. ಇದರ ಪ್ರಕಾರ ಬಹುತೇಕ ಮಹಿಳೆಯರು ಗೂಗಲ್ ನಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾರೆಯಂತೆ.  

ವರದಿಯ ಪ್ರಕಾರ, ವಿವಾಹಿತ ಮಹಿಳೆಯರು ತಮ್ಮ ಗಂಡನಿಗೆ ಸಂಬಂಧಪಟ್ಟ ವಿಚಾರದ ಬಗ್ಗೆಯೇ ಹೆಚ್ಚು ಸರ್ಚ್ ಮಾಡುತ್ತಾರೆಯಂತೆ. ಏನು ಮಾಡಿದರೆ ಪತಿಗೆ ಇಷ್ಟವಾಗುತ್ತದೆ? ಪತಿಗೆ ಇಷ್ಟವಾಗುವ ಆಹಾರ ತಯಾರಿಸುವುದು ಹೇಗೆ?  ಗಂಡನನ್ನು ತನ್ನ ಕಪಿ ಮುಷ್ಟಿಯಲ್ಲಿ ಇಟ್ಟುಕೊಳ್ಳುವುದು ಹೇಗೆ? ಪತ್ನಿ ಹೇಳಿದಂತೆ ಪತಿ ಕೇಳಬೇಕಾದರೆ ಏನು ಮಾಡಬೇಕು  ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾಳೆಯಂತೆ. 

ಇದನ್ನೂ ಓದಿ : ಒಂದು ರೀಚಾರ್ಜ್, ವರ್ಷಪೂರ್ತಿ ಮೋಜಿಗಾಗಿ ಜಿಯೋ ಪರಿಚಯಿಸಿದೆ 365 ದಿನದ ಪ್ರಿಪೇಯ್ಡ್ ಯೋಜನೆ

ವಿವಾಹಿತ ಮಹಿಳೆ ಹುಡುಕುವುದು ಈ ವಿಷಯದ ಬಗ್ಗೆ : 
- ಗಂಡನನ್ನು ಹೇಗೆ ನಿಯಂತ್ರಿಸುವುದು ?
- ಗಂಡನ ಹೃದಯವನ್ನು ಗೆಲ್ಲುವುದು ಹೇಗೆ ? 
-ಗಂಡನನ್ನು ಸಂತೋಷವಾಗಿರಿಸುವುದು ಹೇಗೆ ?

ವಿವಾಹಿತ ಮಹಿಳೆಯರು ತಮ್ಮ ಕುಟುಂಬದ ಬಗ್ಗೆ, ತಮ್ಮ ಪತಿ ಮತ್ತು ಅತ್ತೆಯನ್ನು ಹೇಗೆ ಸಂತೋಷವಾಗಿಡಬೇಕು ಎನ್ನುವುದಕ್ಕೆ ಕೂಡಾ ಉತ್ತರ ಹುಡುಕುತ್ತಿರುತ್ತಾರೆಯಂತೆ. ವಿವಾಹಿತ ಮಹಿಳೆಯರು ಮದುವೆಯ ನಂತರ Google ನಲ್ಲಿ ತಮ್ಮ ವೃತ್ತಿ ಮತ್ತು ಉದ್ಯೋಗದ ಬಗ್ಗೆಯೂ ಪ್ರಶ್ನೆಗಳನ್ನು ಕೇಳುತ್ತಾರೆ. ಮದುವೆಯ ನಂತರ ಮಹಿಳೆ ಯಾವ ರೀತಿಯ ಕೆಲಸ ಮಾಡಬಹುದು ಎನ್ನುವ ಪ್ರಶ್ನೆ ಸಾಮಾನ್ಯವಾಗಿದೆ. ಇನ್ನು ಮನೆಯಲ್ಲಿ ಕುಳಿತು ಹಣ ಗಳಿಸುವುದು ಹೇಗೆ.? ಕುಟುಂಬದೊಂದಿಗೆ ಕೆಲಸವನ್ನು ಸರಿದೂಗಿಸಿಕೊಂಡು ಹೋಗುವುದು ಹೇಗೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ಪ್ರಯತ್ನಿಸುತ್ತಾಳೆ.  

ಇದನ್ನೂ ಓದಿ : BSNL Cheapest Plan: 200 ಕ್ಕಿಂತ ಕಡಿಮೆ ಬೆಲೆಯಲ್ಲಿ 100 ದಿನಗಳವರೆಗೆ ಅದ್ಭುತ ಪ್ರಯೋಜನ

ಇನ್ನು ವಿವಾಹಿತ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕೂಡಾ ತುಂಬಾ ಚಿಂತೆ ಮಾಡುತ್ತಾರೆ. ಅವರು ಗೂಗಲ್‌ನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಹುಡುಕುತ್ತಾರೆ. ಯಾರೊಂದಿಗೂ ಕೇಳಲಾಗದ ಹೇಳಲಾಗದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಗೂಗಲ್ ಮೇಲೆಯೇ ಅವಲಂಬಿತಳಾಗುತ್ತಾಳೆ ಎಂದು ಹೇಳಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News