Knowledge Story: ಟಾಯರ್ ಯಾವಾಗಲು ಕಪ್ಪು ಬಣ್ಣದ್ಯಾಕಿರುತ್ತದೆ ಮತ್ತು ಇಷ್ಟೊಂದು ಬಲಿಷ್ಠ ಹೇಗೆ ಇರುತ್ತದೆ? ಇಲ್ಲಿದೆ ಅದರ ಹಿಂದಿನ ವಿಜ್ಞಾನ

Why Tyre Colour Is Black: ಒಂದು ವೇಳೆ ನೀವು ನಿಮ್ಮ ವಾಹನಕ್ಕೆ ಬಳಸುವ ಟೈರ್ (Vehicle Tyre) ಕಪ್ಪು ಬಣ್ಣದ್ದಾಗಿರಲಿಲ್ಲ ಅಂದರೆ ಅದರಿಂದ ಏನಾಗುತ್ತದೆ? ಈ ಕುರಿತು ನಿಮಗೆ ಮಾಹಿತಿ ಇದೆಯೇ? ಇಲ್ಲ ಎಂದಾದಲ್ಲಿ ಈ ಲೇಖನವನ್ನು ಓದಿ.

Written by - Nitin Tabib | Last Updated : Nov 22, 2021, 05:41 PM IST
  • ಕಾರ್ಬೊನೈಸ್ಡ್ ರಬ್ಬರ್ನಿಂದ ಟೈರ್ ತಯಾರಿಸಲಾಗುತ್ತದೆ.
  • ಕಚ್ಚಾ ರಬ್ಬರ್ನ ಬಣ್ಣವು ತಿಳಿ ಹಳದಿಯಾಗಿರುತ್ತದೆ.
  • ಇಂಗಾಲದ ಹಲವಾರು ಶ್ರೇಣಿಗಳಿವೆ.
Knowledge Story: ಟಾಯರ್ ಯಾವಾಗಲು ಕಪ್ಪು ಬಣ್ಣದ್ಯಾಕಿರುತ್ತದೆ ಮತ್ತು ಇಷ್ಟೊಂದು ಬಲಿಷ್ಠ ಹೇಗೆ ಇರುತ್ತದೆ? ಇಲ್ಲಿದೆ ಅದರ ಹಿಂದಿನ ವಿಜ್ಞಾನ title=
Why Tyre Colour Is Black

ನವದೆಹಲಿ: Viral News - ನಮ್ಮ ಜಗತ್ತು ತುಂಬಾ ವರ್ಣಮಯವಾಗಿದೆ. ನಾವು ನಮ್ಮ ಸುತ್ತಲೂ ಕೆಂಪು, ಹಳದಿ, ಹಸಿರು, ನೀಲಿ ಮತ್ತು ಇತರ ಹಲವು ಬಣ್ಣಗಳನ್ನು ನೋಡುತ್ತೇವೆ. ಆದರೆ ಕಾರು ಮತ್ತು ಬೈಕಿನ ಟೈರ್ ಯಾವಾಗಲೂ ಕಪ್ಪು ಬಣ್ಣದ್ದಾಗಿರುವುದನ್ನು ನೀವು ಹಲವು ಬರಿ ಗಮನಿಸಿರಬಹುದು (Why Is The Tire Black). ಟೈರ್‌ಗೆ ಬೇರೆ ಬಣ್ಣ ಏಕೆ ಇಲ್ಲ?  ಟೈರ್‌ನ ಕಪ್ಪು ಬಣ್ಣಕ್ಕೆ ಅದರ ಹಿಂದಿರುವ ವಿಜ್ಞಾನವೇ (Science) ಕಾರಣ. ಟೈರ್ ಮಾತ್ರ ಏಕೆ ಕಪ್ಪು ಬಣ್ಣದ್ದಾಗಿರುತ್ತದೆ ತಿಳಿಯೋಣ ಬನ್ನಿ

ಟೈರ್ ಏಕೆ ಕಪ್ಪು ಬಣ್ಣದ್ಯಾಕಿರುತ್ತದೆ?
ಆರಂಭಿಕ ದಿನಗಳಲ್ಲಿ ರಬ್ಬರ್‌ನಿಂದ (Rubber) ಟೈರ್‌ಗಳನ್ನು ತಯಾರಿಸುವಾಗ ಟೈರ್‌ಗಳು ಬೇಗನೆ ಸವೆದು ಹೋಗುತ್ತಿದ್ದವು. ಇದಾದ ನಂತರ ವಿಜ್ಞಾನಿಗಳು ಸಂಶೋಧನೆ ನಡೆಸಿದಾಗ ರಬ್ಬರ್‌ನಲ್ಲಿ ಇಂಗಾಲ ಮತ್ತು ಗಂಧಕವನ್ನು ಬೆರೆಸಿದರೆ ಅದು ಬಲಗೊಳ್ಳುತ್ತದೆ  ಎಂಬುದನ್ನು ಅವರು ಕಂಡುಕೊಂಡರು. ಇಂಗಾಲದ ಬಣ್ಣ ಕಪ್ಪು ಎಂದು ನಿಮಗೆ ತಿಳಿದಿರಬಹುದು. ಆದ್ದರಿಂದಲೇ ರಬ್ಬರ್‌ಗೆ ಇಂಗಾಲವನ್ನು ಸೇರಿಸಿದಾಗ ರಬ್ಬರ್ ಕೂಡ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಟೈರ್ ರಬ್ಬರ್ ಏಕೆ ಬೇಗನೆ ಸವೆದು ಹೋಗುವುದಿಲ್ಲ? (Trending News)
ಸಾಮಾನ್ಯವಾಗಿ ಕಚ್ಚಾ ರಬ್ಬರ್‌ನ ಬಣ್ಣವು ತಿಳಿ ಹಳದಿಯಾಗಿರುತ್ತದೆ. ಟೈರ್ ಮಾಡಲು ಕಾರ್ಬನ್ ಅನ್ನು ರಬ್ಬರ್ಗೆ ಬೆರೆಸಲಾಗುತ್ತದೆ ಮತ್ತು ಇದರಿಂದಾಗಿ ಟೈರ್ ಬೇಗನೆ ಸವೆಯುವುದಿಲ್ಲ.

ಇದನ್ನೂ ಓದಿ-Knowledge Story: ಜೀನ್ಸ್ ಮೇಲಿನ ಸಣ್ಣ ಪಾಕೆಟ್ ಇರೋದು ಏಕೆ ಗೊತ್ತಾ?

ವರದಿಯ ಪ್ರಕಾರ, ಸಾಮಾನ್ಯ ರಬ್ಬರ್ ನ ಟೈರ್ ಕೇವಲ 8 ಸಾವಿರ ಕಿಲೋಮೀಟರ್ ಬಾಳಿಕೆ ಬರುತ್ತದೆ. ಆದರೆ ಕಾರ್ಬೊನೈಸ್ಡ್ ರಬ್ಬರ್‌ನಿಂದ ಮಾಡಿದ ಟೈರ್ ಸುಮಾರು 1 ಲಕ್ಷ ಕಿಲೋಮೀಟರ್ ಓಡುವ ಸಾಮರ್ಥ್ಯ ಹೊಂದಿದೆ. ರಬ್ಬರ್ಗೆ ಸೇರಿಸಲಾಗುವ ಇಂಗಾಲದ ಹಲವು ವರ್ಗಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಇಂಗಾಲದ ದರ್ಜೆಯು ರಬ್ಬರ್ ಎಷ್ಟು ಬಲವಾಗಿರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ-Knowledge Story: ನೀವೂ ಆನ್ಲೈನ್ ವಹಿವಾಟು ನಡೆಸುತ್ತೀರಾ? IFSC Code ತಪ್ಪಾಗಿ ನಮೂದಿಸಿದರೆ ಹಣ ಏನಾಗುತ್ತೆ?

ಟೈರ್ ಬಣ್ಣದಲ್ಲಿದ್ದರೆ ಏನು? (Knowledge Story)
ಮಕ್ಕಳ ಬೈಸಿಕಲ್ ಟೈರ್‌ಗಳು (Bicycle Tyre) ಬಣ್ಣದಿಂದ ಕೂಡಿರುವುದನ್ನು ನೀವು ಗಮನಿಸಿರಬೇಕು. ಅವರು ಕಪ್ಪು ಬಣ್ಣದಾಗಿರುವುದಿಲ್ಲ. ಮಕ್ಕಳು ವರ್ಣರಂಜಿತ ವಸ್ತುಗಳನ್ನು ಇಷ್ಟಪಡುವ ಕಾರಣದಿಂದಾಗಿ ಅವುಗಳನ್ನು ಹಾಗೆ ಮಾದಲಾಗಿರುತದೆ. ಸಾಮಾನ್ಯವಾಗಿ ಮಕ್ಕಳನ್ನು ಆಕರ್ಷಿಸಲು ಹಾಗೆ ಮಾಡಲಾಗುತ್ತದೆ. ಮಕ್ಕಳ ಸೈಕಲ್ ಟೈರುಗಳ ರಬ್ಬರ್‌ನಲ್ಲಿ ಕಾರ್ಬನ್ ಕಂಡುಬರುವುದಿಲ್ಲ. ಮಕ್ಕಳ ಬೈಸಿಕಲ್ ಗಳು ಕಡಿಮೆ ದೂರ ಚಲಿಸುವ ಕಾರಣ ಅವುಗಳ ಸವೆಯುವ ಅಪಾಯ ತುಂಬಾ ಕಡಿಮೆಯಾಗಿರುತ್ತದೆ.

ಇದನ್ನೂ ಓದಿ-Knowledge Story: ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಿದೆ Super App, ಇಲ್ಲಿದೆ ಅದರ ವಿಶೇಷತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News