ಬೆಂಗಳೂರು : ರಿಲಯನ್ಸ್ ಜಿಯೋ ಭಾರತದಲ್ಲಿ ಮತ್ತೊಂದು ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.ಈ ಹೊಸ ಫೋನಿನ ಹೆಸರು JioPhone Prima 2. ಈ ಫೋನ್ ಕಳೆದ ವರ್ಷ ಬಿಡುಗಡೆಯಾದ JioPhone Prima 4G ಯ ಅಪ್ಡೇಟೆಡ್ ವರ್ಶನ್ ಆಗಿದೆ.ಈ ಫೋನ್ ದೊಡ್ಡ ಬ್ಯಾಟರಿ, ಹೊಸ ವಿನ್ಯಾಸ ಮತ್ತು ಇನ್ನೂ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಬೆಲೆಯೂ 3 ಸಾವಿರ ರೂಪಾಯಿಗಿಂತ ಕಡಿಮೆ. ಇದಲ್ಲದೇ ಯೂಟ್ಯೂಬ್,ವಾಟ್ಸ್ ಆಪ್ ನಂತಹ ಪ್ರಮುಖ ಆಪ್ ಗಳು ಈ ಫೋನ್ ನಲ್ಲಿ ರನ್ ಆಗಲಿವೆ.
JioPhone Prima 2 ಬೆಲೆ :
JioPhone Prima 2 ಬೆಲೆ ಕೇವಲ 2,799.ಈ ಫೋನ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಮಾತ್ರ ಕಾರ್ಯನಿರ್ವಹಿಸುತ್ತದೆ.ಜಿಯೋ ಈ ಫೋನ್‌ಗಾಗಿ ಕೆಲವು ವಿಶೇಷ ಪ್ಲಾನ್ ಗಳನ್ನೂ ಕೂಡಾ ಪರಿಚಯಿಸಿದೆ. ಇದರಲ್ಲಿ ಒಂದು 91 ರೂಪಾಯಿಯ ಪ್ಲಾನ್ ಆಗಿದೆ.ಇದರಲ್ಲಿ 28 ದಿನಗಳವರೆಗೆ ಅನಿಯಮಿತ ಕರೆ ಮತ್ತು 100MB ಡೇಟಾ ಸಿಗುತ್ತದೆ. ಮತ್ತೊಂದು ಪ್ಲಾನ್ 152 ರೂಪಾಯಿಯದ್ದಾಗಿದೆ.ಇದರಲ್ಲಿ 28 ದಿನಗಳವರೆಗೆ ಪ್ರತಿದಿನ ಅರ್ಧ GB ಡೇಟಾ ಸಿಗುತ್ತದೆ. ಒಂದು ವರ್ಷದ ಯೋಜನೆಯನ್ನು ತೆಗೆದುಕೊಂಡರೆ 895 ರೂಪಾಯಿ ಪಾವತಿಸಬೇಕಾಗುತ್ತದೆ. ಇದರಲ್ಲಿ 28 ದಿನಗಳಿಗೆ 2GB ಡೇಟಾ ಸಿಗುತ್ತದೆ.
ಇದನ್ನೂ ಓದಿ : 13 ಸಾವಿರಕ್ಕಿಂತ ಕಡಿಮೆ ಬೆಲೆಗೆ ಐಫೋನ್ 16! ಇಷ್ಟೊಂದು ಅಗ್ಗದ ಬೆಲೆಯಲ್ಲಿ ಸಿಗುತ್ತಿದೆ ಜಗತ್ತಿನ ದುಬಾರಿ ಮೊಬೈಲ್.
ಜಿಯೋಫೋನ್ ಪ್ರೈಮಾ 2 ವಿಶೇಷಣಗಳು :
ಹ್ಯಾಂಡ್ಸೆಟ್ 320 x 240 ಪಿಕ್ಸೆಲ್ ರೆಸಲ್ಯೂಶನ್ ನೊಂದಿಗೆ 2.4-ಇಂಚಿನ QVGA ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿದೆ.JioPhone Prima 2 ಕ್ವಾಲ್ಕಾಮ್ ಪ್ರೊಸೆಸರ್ ಜೊತೆಗೆ 512MB RAM ಮತ್ತು 4GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತದೆ. ಇದರ ಸ್ಟೋರೇಜ್ ಅನ್ನು ಮೈಕ್ರೊ SD ಕಾರ್ಡ್ ಮೂಲಕ 128GB ವರೆಗೆ ವಿಸ್ತರಿಸಬಹುದು.
ಈ ಫೋನ್ 0.3MPಯ ಚಿಕ್ಕ ಕ್ಯಾಮೆರಾವನ್ನು ಹೊಂದಿದೆ.ಈ ಕ್ಯಾಮರಾ ಸಹಾಯದಿಂದ ವೀಡಿಯೊ ಕರೆಗಳನ್ನು ಮಾಡಬಹುದು.ಈ ಫೋನ್ KaiOS 2.5.3 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.ಈ ಫೋನ್ ಯೂಟ್ಯೂಬ್, ಫೇಸ್‌ಬುಕ್ ಮತ್ತು ಗೂಗಲ್ ಅಸಿಸ್ಟೆಂಟ್‌ನಂತಹ ಅಪ್ಲಿಕೇಶನ್‌ಗಳನ್ನು ಹೊಂದಿದೆ. Jio ತನ್ನದೇ ಆದ ಅಪ್ಲಿಕೇಶನ್‌ಗಳನ್ನು ಹೊಂದಿದೆ.JioTV, JioCinema ಮತ್ತು JioSaavn ಕೂಡಾ ಇದರಲ್ಲಿ ಸಿಗುತ್ತದೆ.
ಇದನ್ನೂ ಓದಿ : ಸೆಪ್ಟೆಂಬರ್ 16 ರಿಂದ ಐಫೋನ್ ರನ್ ಆಗುವ ವಿಧಾನವೇ ಬದಲಾಗಲಿದೆ!ನಿಮ್ಮ ಬಳಿ ಈ ಡಿವೈಸ್ ಇರಲೇಬೇಕು !
ಈ ಫೋನ್‌ನಲ್ಲಿ 4G ನೆಟ್‌ವರ್ಕ್ ಅನ್ನು ಬಳಸಬಹುದು. ಬ್ಲೂಟೂತ್ ಸಾಧನಗಳನ್ನು ಕನೆಕ್ಟ್ ಮಾಡಬಹುದು. USB ಮೂಲಕ ಕಂಪ್ಯೂಟರ್‌ಗೆ ಸಂಪರ್ಕಿಸಬಹುದು. JioPhone Prima 2 123.4 mm ಉದ್ದ, 55.5 mm ಅಗಲ ಮತ್ತು 15.1 mm ದಪ್ಪವನ್ನು ಹೊಂದಿದೆ. ಇದರ ತೂಕ 120 ಗ್ರಾಂ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Channel- bit.ly/46lENGm
Facebook Link - https://bit.ly/3Hhqmcj
Youtube Link - https://www.youtube.com/watch?v=kr-YIH866cM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ..