ದಿನಕ್ಕೊಂದು ಪ್ಲಾನ್ ಬಿಡುಗಡೆ ಮಾಡುತ್ತಿರುವ JIO! ಯಾವ ನೆಟ್ ವರ್ಕ್ ಕೂಡಾ ನೀಡದ ಸೌಲಭ್ಯದೊಂದಿಗೆ ಬಂದಿದೆ ಜಿಯೋ ಫ್ರೀಡಂ ಪ್ಲಾನ್

JIO Freedom Plan :ತನ್ನ ಗ್ರಾಹಕರಿಗಾಗಿ ಜಿಯೋ ಫ್ರೀಡಂ ಪ್ಲಾನ್ ಬಿಡುಗಡೆ ಮಾಡಿದ ಕಂಪನಿ. ಅಗ್ಗದ ರಿಚಾರ್ಜ್ ಪ್ಲಾನ್ ಹುಡುಕುವವರಿಗೆ ಇದೇ ಬೆಸ್ಟ್ ಆಯ್ಕೆ . 

Written by - Ranjitha R K | Last Updated : Aug 8, 2024, 02:08 PM IST
  • ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಜಿಯೋ
  • ಕಂಪನಿಯು ಇತ್ತೀಚೆಗೆ ತನ್ನ ಯೋಜನೆಗಳಲ್ಲಿ ಬದಲಾವಣೆಗಳನ್ನು ಮಾಡಿದೆ.
  • ಇದರಲ್ಲಿ ಅನೇಕ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ.
ದಿನಕ್ಕೊಂದು ಪ್ಲಾನ್ ಬಿಡುಗಡೆ ಮಾಡುತ್ತಿರುವ JIO! ಯಾವ ನೆಟ್ ವರ್ಕ್ ಕೂಡಾ ನೀಡದ ಸೌಲಭ್ಯದೊಂದಿಗೆ ಬಂದಿದೆ ಜಿಯೋ ಫ್ರೀಡಂ ಪ್ಲಾನ್  title=

JIO Freedom Plan : ರಿಲಯನ್ಸ್ ಜಿಯೋ 48 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ದೇಶದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದೆ.ಕಂಪನಿಯು ಇತ್ತೀಚೆಗೆ ತನ್ನ ಯೋಜನೆಗಳಲ್ಲಿ ಬದಲಾವಣೆಗಳನ್ನು ಮಾಡಿದೆ.ಇದರಲ್ಲಿ ಅನೇಕ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ.ಹೆಚ್ಚಿನ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ.ಆದರೆ ಜಿಯೋ ತನ್ನ ಗ್ರಾಹಕರಿಗೆ ಇನ್ನೂ ಹಲವು ಉತ್ತಮ ಕೊಡುಗೆಗಳನ್ನು ನೀಡುತ್ತಿದೆ.ನಿಮ್ಮ ಬಳಿ ಜಿಯೋ ಸಿಮ್ ಇದ್ದು, ಅಗ್ಗದ ರಿಚಾರ್ಜ್ ಪ್ಲಾನ್ ಹುಡುಕುತ್ತಿದ್ದರೆ ಕಂಪನಿಯು ಹೊಸ ಯೋಜನೆಯನ್ನು ಪ್ರಾರಂಭಿಸಿದೆ.ಜಿಯೋ ಫ್ರೀಡಂ ಯೋಜನೆಯಲ್ಲಿ,ಉಚಿತ ಕರೆ ಮತ್ತು ಡೇಟಾದಂತಹ ಸೌಲಭ್ಯಗಳನ್ನು ಪಡೆಯಬಹುದು. 

ಜಿಯೋ ಫ್ರೀಡಂ ಯೋಜನೆ  (Jio Freedom plan):
ಜಿಯೋ ಫ್ರೀಡಂ ಪ್ಲಾನ್‌ನ ಬೆಲೆ  355 ರೂ. ಅದರ ಮಾನ್ಯತೆ 30 ದಿನಗಳವರೆಗೆ ಇರಲಿದೆ. ಇದು ಇತರ ಜಿಯೋ ಪ್ಲಾನ್ ಗಳಿಗಿಂತ ಭಿನ್ನವಾಗಿದೆ.ಇದರಲ್ಲಿ 30 ದಿನಗಳವರೆಗೆ ಉಚಿತ ಕರೆ ಮಾಡಬಹುದು. ಇದಲ್ಲದೇ ಈ ಪ್ಲಾನ್ ನಲ್ಲಿ ಒಟ್ಟು 25GB ಡೇಟಾ ಲಭ್ಯವಿದೆ. ಈ ಪ್ಲಾನ್ ನ ವಿಶೇಷವೆಂದರೆ ಇದರಲ್ಲಿ ದೈನಂದಿನ ಡೇಟಾ ಮಿತಿ ಇರುವುದಿಲ್ಲ.ಸಂಪೂರ್ಣ 30 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ 25GB ಡೇಟಾವನ್ನು ಬಳಸಬಹುದು.ಇದರ ಜೊತೆಗೆ ಪ್ರತಿದಿನ 100 ಉಚಿತ SMS ಸೌಲಭ್ಯ ಕೂಡಾ ಇದೆ. 

ಇದನ್ನೂ ಓದಿ : ಬದಲಾಗಲಿದೆ ಯುಪಿಐ ಪೇಮೆಂಟ್ ವಿಧಾನ : ಇನ್ನು ಹಣ ಪಾವತಿ ಮಾಡುವಾಗ ಹಾಕಬೇಕಾಗಿರುವುದು ಪಿನ್ ಅಲ್ಲ ಬದಲಿಗೆ ಇದು !

ಜಿಯೋ 349 ರೂ. ಪ್ಲಾನ್ ವಿವರಗಳು :
ಈ ಮಧ್ಯೆ, ಜಿಯೋ 349 ರೂಪಾಯಿಯ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಡೇಟಾ ಬಯಸುವವರಿಗೆ ಇದು ಬೆಸ್ಟ್ ಆಯ್ಕೆ.ಇದರ ವ್ಯಾಲಿಡಿಟಿ 28 ದಿನಗಳವರೆಗೆ ಇರಲಿದೆ.ಇದರಲ್ಲಿಯೂ ಎಲ್ಲಾ ನೆಟ್ ವರ್ಕ್ ಗಳಿಗೆ ಫ್ರೀ ಕಾಲಿಂಗ್ ಸೌಲಭ್ಯ ನೀಡಲಾಗಿದೆ. 

ಇದರಲ್ಲಿ 28 ದಿನಗಳವರೆಗೆ ಒಟ್ಟು 56GB ಡೇಟಾ ಸಿಗುತ್ತದೆ. ಅಂದರೆ ಪ್ರತಿದಿನ 2GB ಡೇಟಾ.ವಿಶೇಷವೆಂದರೆ ಈ ಯೋಜನೆಯಲ್ಲಿ ಅನ್ಲಿಮಿಟೆಡ್ 5G ಡೇಟಾ ಸಹ ಲಭ್ಯವಿದೆ.ಅಂದರೆ, ನೀವಿರುವ ಏರಿಯಾದಲ್ಲಿ 5G ಇದ್ದರೆ ನೀವು ಅದರ ಲಾಭವನ್ನು ಪಡೆಯಬಹುದು.ಜಿಯೋ ಸಿನಿಮಾದ ಉಚಿತ ಚಂದಾದಾರಿಕೆ, ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್‌ನ ಉಚಿತ ಬಳಕೆಯ ಲಾಭವನ್ನು ಕೂಡಾ ಪಡೆಯಬಹುದು.

ಇದನ್ನೂ ಓದಿ :  Electricity Bill ಬಗ್ಗೆ ಯೋಚನೆ ಮಾಡುವ ಅಗತ್ಯವೇ ಇಲ್ಲ!ಈ ACಯನ್ನು ದಿನ ಪೂರ್ತಿ ಬಳಸಿದರೂ ಬಿಲ್ ಏರುವುದೇ ಇಲ್ಲ !ಸರ್ಕಾರವೇ ಹೊರ ತಂದಿದೆ ಈ ಅಗ್ಗದ ಎಸಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News