ಗಣೇಶ ವಿಸರ್ಜನೆ ಜೋಶ್‌ನಲ್ಲಿ ಯಡವಟ್ಟು : ಗಣಪನ ಮೂರ್ತಿ ಜೊತೆ ಚಿನ್ನದ ಸರವೂ ನೀರಿಗೆ

ನಿನ್ನೆ ಕುಟುಂಬವೊಂದು ಗಣೇಶನ ಮೂರ್ತಿ ಕೂರಿಸಿ ಪೂಜೆ ಮಾಡಿ ಬಳಿಕ ವಿಸರ್ಜನೆ ಮಾಡಿದ್ರು. ಆದರೆ ವಿಸರ್ಜನೆ ಜೋಶ್ ನಲ್ಲಿ ಯಡವಟ್ಟುವೊಂದು ಆಗಿಹೋಗಿದೆ. ಣೇಶನ ಮೂರ್ತಿ ಜೊತೆಗೆ 60 ಗ್ರಾಂ ಚಿನ್ನದ ಸರವನ್ನೂ ನೀರಿಗೆ ಬಿಟ್ಟಿದ್ದರು.. ನಂತರ ಆಗಿದ್ದೇನು..? ಇಲ್ಲಿದೆ ಮಾಹಿತಿ..

Written by - VISHWANATH HARIHARA | Edited by - Krishna N K | Last Updated : Sep 8, 2024, 09:29 PM IST
    • ಕುಟುಂಬವೊಂದು ಗಣೇಶನ ಕೂರಿಸಿ, ಅದ್ಧೂರಿಯಾಗಿ ಪೂಜಿಸಿತ್ತು
    • ಭಕ್ತಿಯಿಂದ ಗಣಪನ ಮೂರ್ತಿಯ ವಿಸರ್ಜನೆಯನ್ನೂ ಮಾಡಿದ್ರು.
    • ನಂತರ ಕುಟುಂಬಕ್ಕೆ ತಾವು ಮಾಡಿದ ಯಡವಟ್ಟು ಗೊತ್ತಾಗಿದೆ.‌
ಗಣೇಶ ವಿಸರ್ಜನೆ ಜೋಶ್‌ನಲ್ಲಿ ಯಡವಟ್ಟು : ಗಣಪನ ಮೂರ್ತಿ ಜೊತೆ ಚಿನ್ನದ ಸರವೂ ನೀರಿಗೆ title=

ಬೆಂಗಳೂರು : ನಿನ್ನೆ ಕುಟುಂಬವೊಂದು ಗಣೇಶನ ಕೂರಿಸಿ,‌ ಚಿನ್ನದ ಸರ, ಹೂವು, ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಿದ್ದರು, ಬಳಿಕ ಭಕ್ತಿಯಿಂದ ಅದ್ಧೂರಿಯಾಗಿ ಗಣಪನ ಮೂರ್ತಿಯ ವಿಸರ್ಜನೆಯನ್ನೂ ಮಾಡಿದ್ರು. ವಿಸರ್ಜನೆ ಮಾಡಿ ಬಂದ ನಂತರ ಕುಟುಂಬಕ್ಕೆ ತಾವು ಮಾಡಿದ ಯಡವಟ್ಟು ಗೊತ್ತಾಗಿದೆ.‌ ಗಣೇಶನ ಮೂರ್ತಿ ಜೊತೆಗೆ 60 ಗ್ರಾಂ ಚಿನ್ನದ ಸರವನ್ನೂ ನೀರಿಗೆ ಬಿಟ್ಟಿದ್ದರು..

ರಾಜಧಾನಿಯ ಗಲ್ಲಿ-ಗಲ್ಲಿಯಲ್ಲು ಗಣೇಶೋತ್ಸವದ ಸಂಭ್ರಮ.. ಸಡಗರ.. ಎಲ್ಲಿ ನೋಡಿದ್ರು ಗಣಪತಿ ಬಪ್ಪ ಮೋರಿಯಾ ಜೈಘೋಷ.. ಮನೆಮನೆಯಲ್ಲೂ ಜನ ಶ್ರದ್ದ-ಭಕ್ತಿಯ ಗಣೇಶನ ಕೂರಿಸಿ ವಿಸರ್ಜಿಸಿದ್ದಾರೆ. ಆದರೆ ಮಾಗಡಿ ರೋಡ್ ಸಮೀಪ ದಾಸರಹಳ್ಳಿಯ ಬಿ.ಆರ್.ಐ ಕಾಲೋನಿಯ ನಿವಾಸಿಯಾದ ಉಮಾದೇವಿ ಅವರ ಮನೆಯಲ್ಲಿ ನಿನ್ನೆ ಗಣೇಶನ ಮೂರ್ತಿ ಕೂರಿಸಿ ಪೂಜೆ ಮಾಡಿ ಬಳಿಕ ವಿಸರ್ಜನೆ ಮಾಡಿದ್ರು. ಆದರೆ ವಿಸರ್ಜನೆ ಜೋಶ್ ನಲ್ಲಿ ಯಡವಟ್ಟುವೊಂದು ಆಗಿಹೋಗಿದೆ. 

ಇದನ್ನೂ ಓದಿ:"ಜಾಗತಿಕ ಪ್ರಪಂಚಕ್ಕೆ ಅಭಿವೃದ್ಧಿಯ ಕೊಡುಗೆ ನೀಡಲು ವಿದ್ಯಾರ್ಥಿಗಳು ಮುಂದಾಗಬೇಕು: ಸಚಿವ ಡಾ.ಎಂ.ಸಿ.ಸುಧಾಕರ

ಗಣೇಶನಿಗೆ 60 ಗ್ರಾಂ ಚಿನ್ನದ ಸರ ಹಾಕಿ ಪೂಜೆ ಮಾಡಿದ್ರು. ಬಳಿಕ ಗಣೇಶ ವಿಸರ್ಜನೆಗಾಗಿ ಬಿಬಿಎಂಪಿ ಮಾಡಿದ್ದ ಟ್ರಕ್ ಗೆ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಹೋಗಿ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದಾರೆ. ಆದರೆ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಚಿನ್ನದ ಸರದ ನೆನಪಾಗಿ ಕುಟುಂವಸ್ಥರು ಪರದಾಡಿದ್ದಾರೆ.
 
ತಕ್ಷಣ ವಿಜಯನಗರ ಶಾಸಕ ಪ್ರಿಯಕೃಷ್ಣ ಗಮನಕ್ಕೆ ತಂದಿದ್ದಾರೆ. ಸ್ಥಳೀಯರು ಹಾಗೂ ಟ್ರಕ್ ಸಿಬ್ಬಂದಿ ಸಹಾಯಕ್ಕೆ ಬಂದಿದ್ದಾರೆ, ಟ್ರಕ್ ನೀರನ್ನ ಖಾಲಿ ಮಾಡಿ ಗಣೇಶ ಮೂರ್ತಿ ಕರಗಿದ್ದ ಮಣ್ಣಲ್ಲಿ ಚಿನ್ನದ ಸರಕ್ಕೆ ಹುಡುಕಾಡಿದ್ದಾರೆ. ರಾತ್ರಿಯೆಲ್ಲ ಹುಡುಕಾಡಿದ ಬಳಿಕ‌ ಇವತ್ತು ಬೆಳಗ್ಗೆ ಚಿನ್ನದ ಸರ ಸಿಕ್ಕಿದೆ. ಒಟ್ಟಾರೆ ಗಣೇಶ ವಿಸರ್ಜನೆ ವೇಳೆ ನೀರು ಸೇರಿದ್ದ 60 ಗ್ರಾಂ ಚಿನ್ನದ ಸರ ಸಿಕ್ಕು ಕುಟುಂಬಸ್ಥರು ಸಂತಸಗೊಂಡಿದ್ದಾರೆ. ಹುಡುಕಿಕೊಟ್ಟವರಿಗೆ ಧನ್ಯವಾದ ತಿಳಿಸಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News