ನವದೆಹಲಿ : ರಿಲಯನ್ಸ್ ಜಿಯೋ ಇಂದು ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿದ್ದು ಅತಿ ಕಡಿಮೆ ಸಮಯದಲ್ಲಿ ತನ್ನ ಗ್ರಾಹಕರನ್ನು ಮೆಚ್ಚಿಸುವಲ್ಲಿ ಯಶಸ್ವಿ ಆಗಿದೆ. ಜಿಯೋದ ಎಲ್ಲಾ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳನ್ನ ಜನರು ತುಂಬಾ ಇಷ್ಟಪಟ್ಟಿದ್ದಾರೆ. ಇತ್ತೀಚೆಗೆ ಜಿಯೋ ತನ್ನ ಕೆಲವು ಆಯ್ದ ಪ್ರಿಪೇಯ್ಡ್ ಯೋಜನೆಗಳಲ್ಲಿ ಕ್ಯಾಶ್‌ಬ್ಯಾಕ್ ಅವಕಾಶವನ್ನು ನೀಡಲು ಆರಂಭಿಸಿದೆ. ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ ಬನ್ನಿ.
ಜಿಯೋ ಪ್ರಿಪೇಯ್ಡ್ ಯೋಜನೆಗಳ ಮೇಲೆ ಕ್ಯಾಶ್‌ಬ್ಯಾಕ್
ಜಿಯೋ(Jio) ಇತ್ತೀಚೆಗೆ ತನ್ನ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಬಿಡುಗಡೆ ಮಾಡಿದೆ, ಅವರು ಗ್ರಾಹಕರಿಗೆ ತಮ್ಮ ಮೂರು ಪ್ರಿಪೇಯ್ಡ್ ಪ್ಲಾನ್‌ಗಳಾದ 249, 555 ಮತ್ತು 599 ರೂ.ಗಳ ಮೇಲೆ 20% ಕ್ಯಾಶ್‌ಬ್ಯಾಕ್ ನೀಡುತ್ತಿದ್ದಾರೆ. ಈ 20% ಕ್ಯಾಶ್‌ಬ್ಯಾಕ್ ಪಡೆಯಲು, ಬಳಕೆದಾರರು MyJio ಅಪ್ಲಿಕೇಶನ್ ಅಥವಾ Jio.com ಗೆ ಭೇಟಿ ನೀಡಬೇಕು.
ಇದನ್ನೂ ಓದಿ : Moon Latest News: ಭೂವಿಯಿಂದ ಮುನಿಸಿಕೊಳ್ಳುತ್ತಿದ್ದಾನೆಯೇ ಚಂದಿರ? ಹೌದು ಎನ್ನುತ್ತೆ ಈ ವರದಿ
ಈ ಕ್ಯಾಶ್‌ಬ್ಯಾಕ್(Cashback) ಸ್ವಯಂಚಾಲಿತವಾಗಿ ಬಳಕೆದಾರರ ಜಿಯೋ ಖಾತೆಯನ್ನು ತಲುಪುತ್ತದೆ ಎಂದು ಜಿಯೋ ಹೇಳಿದೆ. ನಂತರ ಬಳಕೆದಾರರು ಯಾವಾಗ ಬೇಕಾದರೂ ಈ ಮೊತ್ತವನ್ನು ಮತ್ತಷ್ಟು ರೀಚಾರ್ಜ್ ಮಾಡಲು ಬಳಸಬಹುದು.
ಜಿಯೋ 249 ರೂ. ಯೋಜನೆ
ಜಿಯೋನ 249 ರೂ. ಪ್ಲಾನ್ ನಲ್ಲಿ 28 ದಿನಗಳ ವ್ಯಾಲಿಡಿಟಿಯೊಂದಿಗೆ, ನೀವು ಪ್ರತಿದಿನ 2 ಜಿಬಿ ಡೇಟಾ, ದಿನಕ್ಕೆ 100 ಎಸ್‌ಎಂಎಸ್, ಅನಿಯಮಿತ ಕರೆ ಮತ್ತು ಎಲ್ಲಾ ಜಿಯೋ ಆಪ್(Jio App)ಗಳಿಗೆ ಚಂದಾದಾರಿಕೆಯನ್ನು ಪಡೆಯುತ್ತೀರಿ. ನಿಮ್ಮ ದೈನಂದಿನ ಡೇಟಾ ಖಾಲಿಯಾದರೆ ನಿಮ್ಮ ಇಂಟರ್ನೆಟ್ ವೇಗ 64Kbps ಗೆ ಕಡಿಮೆಯಾಗುತ್ತದೆ. ಈಗ ನೀವು ಈ ಪ್ರಿಪೇಯ್ಡ್ ಯೋಜನೆಯಲ್ಲಿ 20% ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ.
ಜಿಯೋದ 555 ರೂ. ಯೋಜನೆ
ಜಿಯೋದ 555 ರೂ. ಪ್ಲಾನ್(Jio Plans) ನಿಮಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ, ನೀವು ಪ್ರತಿದಿನ 1.5GB ಡೇಟಾ, ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಮತ್ತು ಎಲ್ಲಾ ಜಿಯೋ ಆಪ್‌ಗಳಿಗೆ ಚಂದಾದಾರಿಕೆಯನ್ನು ಪಡೆಯುತ್ತೀರಿ. ಈ ಪ್ಲಾನ್ 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ ಮತ್ತು ಈಗ ಈ ಪ್ಲಾನ್‌ನಲ್ಲಿ ನಿಮಗೆ 20% ಕ್ಯಾಶ್‌ಬ್ಯಾಕ್ ಸಹ ನೀಡಲಾಗುತ್ತದೆ.
ಜಿಯೋ 599 ರೂ. ಯೋಜನೆ
ಇದು ಜಿಯೋದ ಮೂರನೇ ಪ್ರಿಪೇಯ್ಡ್ ಪ್ಲಾನ್(Jio Prepaid plans) ಆಗಿದ್ದು ಇದರಲ್ಲಿ ನೀವು 119 ರೂಪಾಯಿಗಳ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶವನ್ನು ಪಡೆಯುತ್ತೀರಿ. ಈ ಯೋಜನೆಯಲ್ಲಿ 84 ದಿನಗಳ ವ್ಯಾಲಿಡಿಟಿಯೊಂದಿಗೆ, ನೀವು ಪ್ರತಿದಿನ 2GB ಡೇಟಾ, ಎಲ್ಲಾ ಜಿಯೋ ಆಪ್‌ಗಳಿಗೆ ಚಂದಾದಾರಿಕೆ, ದಿನಕ್ಕೆ 100 SMS ಮತ್ತು ಅನಿಯಮಿತ ಧ್ವನಿ ಕರೆಗಳ ಪ್ರಯೋಜನಗಳನ್ನು ಪಡೆಯುತ್ತೀರಿ.
ಇದನ್ನೂ ಓದಿ : New Telecom Reforms : ಈಗ ಈ ಗ್ರಾಹಕರಿಗೆ ಹೊಸ SIM ಖರೀದಿಸಲು ಸಾಧ್ಯವಿಲ್ಲ : ಸರ್ಕಾರದಿಂದ ಹೊಸ ನಿಯಮ ಜಾರಿ
ಇತ್ತೀಚೆಗೆ ರಿಲಾಯನ್ಸ್ ಜಿಯೋ ಹಲವು ಹೊಸ ಯೋಜನೆಗಳನ್ನು(Jio New plans) ಆರಂಭಿಸಿದೆ ಎಂದು ನಿಮಗೆ ಹೇಳೋಣ ಇದರಲ್ಲಿ ನೀವು ಡಿಸ್ನಿ + ಹಾಟ್ ಸ್ಟಾರ್ ನ ಚಂದಾದಾರಿಕೆಯನ್ನು ಕೂಡ ಪಡೆಯುತ್ತಿದ್ದೀರಿ. ಹೆಚ್ಚಿನ ಮಾಹಿತಿಗಾಗಿ, ಜಿಯೋ ಆಪ್ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಆಯ್ಕೆಯ ಯೋಜನೆಯನ್ನು ಆಯ್ಕೆ ಮಾಡಿ ಮತ್ತು ಲಾಭವನ್ನು ಪಡೆದುಕೊಳ್ಳಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.