Jio Fiber: ಮಾರುಕಟ್ಟೆಯಲ್ಲಿ ಭಾರಿ ಭಾರಿ ಹಲ್ ಚಲ್ ಸೃಷ್ಟಿಸಿದೆ ಜಿಯೋ ಫೈಬರ್ನ ಈ ಅಗ್ಗದ ಪ್ಲಾನ್

Jio Fiber: ಈ ಪ್ಲಾನ್ ನಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ ಗ್ರಾಹಕರ ಮನರಂಜನೆಯ ಕುರಿತು ಕೂಡ ವಿಶೇಷ ಕಾಳಜಿ ವಹಿಸಲಾಗಿದೆ. ಈ ಪ್ಲಾನ್ ಬಳಸಿ ನೀವು ತಿಂಗಳಿಗೆ ಸಾವಿರಾರು ರೂ.ಗಳ ಉಳಿತಾಯ ಮಾಡಬಹುದು. ಏಕೆಂದರೆ, ಇದರಲ್ಲಿ ನಿಮಗೆ ಹಲವಾರು ಪ್ರಮುಖ ಓಟಿಟಿ ವೇದಿಕೆಗಳ ಉಚಿತ ಚಂದಾದಾರಿಕೆಯನ್ನು  ನೀಡಲಾಗುತ್ತಿದೆ.  

Written by - Nitin Tabib | Last Updated : Nov 30, 2022, 01:33 PM IST
  • ಈ ಯೋಜನೆಯಲ್ಲಿ ಸಿಗುವ ಪ್ರಯೋಜನಗಳ ಕುರಿತು ಹೇಳುವುದಾದರೆ,
  • ಮೊದಲನೆಯದಾಗಿ, ಪ್ಲಾನ್‌ನಲ್ಲಿ ನೀವು 300 mbps ವೇಗದಲ್ಲಿ ಇಂಟರ್ನೆಟ್ ಸಿಗಲಿದೆ,
  • ಇದು ಕಣ್ಣು ಪಿಳಿಕಿಸುವುದರಲ್ಲಿ ಭಾರೀ ಗಾತ್ರದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ನಿಮಗೆ ಅನುಮತಿಸುತ್ತದೆ.
Jio Fiber: ಮಾರುಕಟ್ಟೆಯಲ್ಲಿ ಭಾರಿ ಭಾರಿ ಹಲ್ ಚಲ್ ಸೃಷ್ಟಿಸಿದೆ ಜಿಯೋ ಫೈಬರ್ನ ಈ ಅಗ್ಗದ ಪ್ಲಾನ್ title=
Jio Fiber

Prepaid Jio Fiber Plan: ರಿಲಯನ್ಸ್ ಮಾಲೀಕತ್ವದ ಜಿಯೋ ಫೈಬರ್ ತನ್ನ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತದೆ. ಜಿಯೋ ಫೈಬರ್‌ನಲ್ಲಿ, ಜನರು ಪೋಸ್ಟ್‌ಪೇಯ್ಡ್ ಕನೆಕ್ಷನ್ ಬದಲಿಗೆ ಇನ್ನೂ ಪ್ರಿಪೇಯ್ಡ್ ಕನೆಕ್ಷನ್ ಅನ್ನೇ ಬಯಸುತ್ತಿದ್ದಾರೆ.  ಏಕೆಂದರೆ ಇದರಲ್ಲಿ ನೀವು ನಿಮ್ಮ ಆಯ್ಕೆಗೆ ಅನುಗುಣವಾಗಿ ಯೋಜನೆಗಳನ್ನು ಆಯ್ದುಕೊಳ್ಳಬಹುದು ಮತ್ತು ನೀವು ಬಯಸಿದಾಗ ಅವುಗಳನ್ನು ಬದಲಾಯಿಸಬಹುದು. ನಿಮಗೂ ಕೂಡ ಚಲನಚಿತ್ರಗಳನ್ನು ನೋಡುವ ಹವ್ಯಾಸ ಇದ್ದರೆ ಮತ್ತು ಅನೇಕ OTT ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆಗಳನ್ನು ಪ್ರತ್ಯೇಕವಾಗಿ ಖರೀದಿಸುತ್ತಿದ್ದರೆ, ಇಂದು ನಾವು ನಿಮಗಾಗಿ ಜಿಯೋ ಫೈಬರ್ನ ಒಂದು ಅದ್ಭುತ ಪ್ರೀಪೈಡ್ ಯೋಜನೆಯ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ವಿಶೇಷ ಎಂದರೆ ಈ ಯೋಜನೆ ನಿಮ್ಮ ಬಜೆಟ್‌ಗೂ ಕೂಡ ಭಾರವಾಗುವುದಿಲ್ಲ ಮತ್ತು ನೀವು ಅದನ್ನು ತುಂಬಾ ಇಷ್ಟಪಡುವಿರಿ.

ಇದನ್ನೂ ಓದಿ-ಇನ್ನು ಮೊಬೈಲ್ ನಲ್ಲಿ ಕಾಣಿಸಲಿದೆ ಕರೆ ಮಾಡುವ ವ್ಯಕ್ತಿಯ ನಿಖರ ಹೆಸರು.! ಸರ್ಕಾರ ಪ್ರಾರಂಭಿಸಲಿದೆ ಹೊಸ ತಂತ್ರಜ್ಞಾನ

ಜಿಯೋ ಫೈಬರ್ ಈ ಪ್ರಿಪೇಯ್ಡ್ ಯೋಜನೆ ಯಾವುದು?
ಜಿಯೋ ಫೈಬರ್ನ ಯೋಜನೆಯ ಬೆಲೆ 1499 ರೂ. ಜಿಯೋ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಗ್ರಾಹಕರು ಈ ಯೋಜನೆಯನ್ನು ಖರೀದಿಸಬಹುದು. ಈ ಪ್ಲಾನ್ ದುಬಾರಿ ಎಂದು ನೀವು ಭಾವಿಸಿದರೆ, ನಿಮಗೆ ಈ ಯೋಜನೆಯ ವೆಚ್ಚಕ್ಕಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಸಾಕಷ್ಟು ಕೊಡುಗೆಗಳನ್ನು ಈ ಯೋಜನೆಯಲ್ಲಿ ನೀವು ಗಮನಿಸಬಹುದು. ಇದರಲ್ಲಿ ನಿಮಗೆ ವಿವಿಧ ವೇದಿಕೆಗಳ ಮೇಲೆ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶ ಸಿಗಲಿದ್ದು,  ಯೋಜನೆಯಲ್ಲಿ ನಿಮಗೆ ಉಚಿತ ಅನಿಯಮಿತ ಇಂಟರ್ನೆಟ್ ಜೊತೆಗೆ OTT ಪ್ರಯೋಜನಗಳನ್ನು ಸಹ ನೀಡಲಾಗುತ್ತಿದೆ.

ಇದನ್ನೂ ಓದಿ-ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ iPhone 14! ಮಿಸ್‌ ಮಾಡದಿರಿ ಈ ಚಾನ್ಸ್‌

ಈ ಯೋಜನೆಯಲ್ಲಿ ಸಿಗುವ ಪ್ರಯೋಜನಗಳ ಕುರಿತು ಹೇಳುವುದಾದರೆ, ಮೊದಲನೆಯದಾಗಿ, ಪ್ಲಾನ್‌ನಲ್ಲಿ ನೀವು 300 mbps ವೇಗದಲ್ಲಿ ಇಂಟರ್ನೆಟ್ ಸಿಗಲಿದೆ, ಇದು ಕಣ್ಣು ಪಿಳಿಕಿಸುವುದರಲ್ಲಿ ಭಾರೀ ಗಾತ್ರದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ನಿಮಗೆ ಅನುಮತಿಸುತ್ತದೆ. ಇದರೊಂದಿಗೆ, ನೀವು 30 ದಿನಗಳ ವ್ಯಾಲಿಡಿಟಿಯನ್ನು ಸಹ ಪಡೆಯುವಿರಿ. ಈ ಯೋಜನೆಯಲ್ಲಿನ ಪ್ರಯೋಜನಗಳು ಇಲ್ಲಿಗೆ ಮುಗಿಯುವುದಿಲ್ಲ, ಇದರಲ್ಲಿ ನಿಮಗೆ ಉಚಿತ  Netflix ಹಾಗೂ  Amazon  Prime Video, Disney+ Hotstar, SonyLIV, ZEE5, Voot Select, Voot Kids, Sun NXT, Hoichoi, Discovery+, ALTBalaji, Eros Now, Lionsgate Play, ShemarooMe, JioCinema ಮತ್ತು JioSaavn ಗಳ ಚಂದಾದಾರಿಕೆಯನ್ನು ಸಹ ನೀಡಲಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News