Jio ₹175 Plan Benefits: ಭಾರತದ ಅತಿದೊಡ್ಡ ಸಿರಿವಂತ ಉದ್ಯಮಿ ಮುಖೇಶ್ ಅಂಬಾನಿ ನಾಯಕತ್ವದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಮತ್ತೊಮ್ಮೆ ಕೈಗೆಟುವ ಬೆಲೆಯ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಜಿಯೋ ₹175 ಪ್ಲಾನ್ನಲ್ಲಿ ಗ್ರಾಹಕರಿಗೆ ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ ಓಟಿಟಿ ಪ್ರಯೋಜನಗಳು ಕೂಡ ಉಚಿತವಾಗಿ ಲಭ್ಯವಿದೆ.
ಜಿಯೋ ₹175 ಪ್ರಿಪೇಯ್ಡ್ ಯೋಜನೆ (Jio ₹175 Prepaid Plan) :
ರಿಲಯನ್ಸ್ ಜಿಯೋ (Reliance Jio) ತನ್ನ ಬಳಕೆದಾರರಿಗಾಗಿ ₹175 ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ 12 ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಉಚಿತವಾಗಿರುತ್ತದೆ. ಸ್ಟ್ರೀಮಿಂಗ್, ಬ್ರೌಸಿಂಗ್ ಮತ್ತು ಇತರ ಆನ್‌ಲೈನ್ ಕೆಲಸಗಳಿಗಾಗಿ ಹೆಚ್ಚಿನ ಡೇಟಾವನ್ನು ಬಯಸುವವರಿಗೆ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದ್ದು, ಹೆಚ್ಚು ಕರೆ ಮಾಡದ ಅಥವಾ ಸಂದೇಶಗಳನ್ನು ಬಳಸದ ಗ್ರಾಹಕರಿಗೆ ಈ ಯೋಜನೆ ತುಂಬಾ ಪ್ರಯೋಜನಕಾರಿ ಆಗಿದೆ.
ಇದನ್ನೂ ಓದಿ- ಯಾವುದಾದರೂ ಫ್ರಾಡ್ ಗ್ರೂಪ್'ನಲ್ಲಿ ನಿಮ್ಮನ್ನು ಸೇರಿಸಲಾಗಿದ್ಯಾ? ಈ ಬಗ್ಗೆ ಎಚ್ಚರಿಕೆ ನೀಡುತ್ತೆ ವಾಟ್ಸಾಪ್ Context Cards
ಜಿಯೋದ ₹175 ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳು (Jio ₹175 Prepaid Plan Benefits):
ಜಿಯೋದ ₹175 ಪ್ರಿಪೇಯ್ಡ್ ಯೋಜನೆಯು (Jio ₹175 Prepaid Plan) 28 ದಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಒಟ್ಟು 10 ಜಿಬಿವರೆಗೆ ಹೈ ಸ್ಪೀಡ್ ಡೇಟಾ ಪ್ರಯೋಜನ ಲಭ್ಯವಿದೆ. ಡೇಟಾ ಮುಗಿದ ಬಳಿಕ 64 Kbps ನಲ್ಲಿ ಅನಿಯಮಿತ ಡೇಟಾ ಪ್ರಯೋಜನವನ್ನೂ ಪಡೆಯಬಹುದು.
ಜಿಯೋದ ₹175 ಪ್ರಿಪೇಯ್ಡ್ ಯೋಜನೆಯಲ್ಲಿ ಓಟಿಟಿ ಪ್ರಯೋಜನಗಳು:
ಇದರಲ್ಲಿ, ಜಿಯೋ ಸಿನಿಮಾ ಚಂದಾದಾರಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಈ ರಿಚಾರ್ಜ್ ಯೋಜನೆಯ ಪ್ರಮುಖ ವೈಶಿಷ್ಟ್ಯವೆಂದರೆ ಇದರಲ್ಲಿ JioTV ಮೊಬೈಲ್ ಅಪ್ಲಿಕೇಶನ್ ಮೂಲಕ 12 ಪ್ರೀಮಿಯಂ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶವನ್ನು ಕೂಡ ಪಡೆಯಬಹುದಾಗಿದೆ. ಅವುಗಳೆಂದರೆ... Sony LIV, ZEE5, Lionsgate Play, Discovery+, Sun NXT, Kanchha Lanka, Planet Marathi, Chaupal, DocuBay, EPIC ON ಮತ್ತು Hoichoi.
ಇದನ್ನೂ ಓದಿ- ಉತ್ತಮ ಮೈಲೇಜ್ ಜೊತೆಗೆ EV ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ರತನ್ ಟಾಟಾ ಕನಸಿನ ಕಾರ್
ಜಿಯೋದ ₹175 ಪ್ರಿಪೇಯ್ಡ್ ಯೋಜನೆಯನ್ನು ರೀಚಾರ್ಜ್ ಮಾಡುವುದು ಹೇಗೆ?
ಜಿಯೋದ ₹175 ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳನ್ನು ಪಡೆಯಲು ನೀವು ಬಯಸಿದರೆ ಇದಕ್ಕಾಗಿ MyJio ಅಪ್ಲಿಕೇಶನ್ ಮೂಲಕ ಚಂದಾದಾರರಾಗಬೇಕು. ನಂತರ ನಿಮ್ಮ ಖಾತೆಗೆ JioCinema ಪ್ರೀಮಿಯಂ ಕೂಪನ್ ಕ್ರೆಡಿಟ್ ಮಾಡಲಾಗುತ್ತದೆ. ಪ್ರೀಮಿಯಂ ವಿಷಯದೊಂದಿಗೆ ಬರುವ ಈ ಕೈಗೆಟುಕುವ ಯೋಜನೆಯೊಂದಿಗೆ, ನೀವು ಸುಲಭವಾಗಿ ಸ್ಟ್ರೀಮಿಂಗ್ ಮತ್ತು ಬ್ರೌಸಿಂಗ್ ಅನ್ನು ಆನಂದಿಸಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.