Hair care tips : ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕೂದಲು ಉದುರುವಿಕೆ ಸಮಸ್ಯೆಯನ್ನು ಎದರಿಸುತ್ತಿದ್ದಾರೆ. ಕೂದಲು ಉದುರಲು ಹಲವು ಕಾರಣಗಳಿವೆ. ನಾವು ಬಳಸುವ ನೀರು, ಶಾಂಪೂ, ಪರಿಸರ ಮುಂತಾದ ಅಂಶಗಳು ಇದಕ್ಕೆ ಕಾರಣವಾಗಿರಬಹುದು. ಕೂದಲು ಉದುರುವುದನ್ನು ತಪ್ಪಿಸಲು ಕೆಲವು ಸಲಹೆಗಳನ್ನು ಅನುಸರಿಸಿದರೆ ಸಾಕು.. ಈ ಸಮಸ್ಯೆಯಿಂದ ಸರಳವಾಗಿ ಹೊರ ಬರಬಹುದು..
ದೇಹ ಬೆಚ್ಚಗಿದ್ದರೆ ಕೂದಲು ಉದುರುತ್ತದೆ. ವಾರಕ್ಕೊಮ್ಮೆ ಕ್ಯಾಸ್ಟರ್ ಆಯಿಲ್ (ಹರಳೆಣ್ಣೆ) ಅನ್ನು ಸ್ವಲ್ಪ ಬೆಚ್ಚಗಾಗಿಸಿ, ಅದು ತಣ್ಣಗಾದ ನಂತರ ಮಸಾಜ್ ಮಾಡಿ, ನಂತರ ಸ್ನಾನ ಮಾಡಿ. ಹೀಗೆ ಮಾಡಿದರೆ ದೇಹದ ಉಷ್ಣತೆ ಮಾತ್ರ ಕಡಿಮೆಯಾಗಿ ಕೂದಲು ಉದುರುವುದು ನಿಲ್ಲುತ್ತದೆ..
ಇವುಗಳ ಹೊರತಾಗಿ ನಾವು ಸೇವಿಸುವ ಆಹಾರವು ಕೂದಲು ಉದುರುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜಂಕ್ ಫುಡ್ ಬದಲಿಗೆ ಉತ್ತಮ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಉತ್ತಮ.
ಬೆಳ್ಳುಳ್ಳಿ ಮತ್ತು ಶುಂಠಿಯನ್ನು ತುಪ್ಪದಲ್ಲಿ ಹಾಕಿ ಒಲೆಯಲ್ಲಿ ಬಿಸಿ ಮಾಡಿ. ರಾತ್ರಿ ಮಲಗುವ ಮುನ್ನ ಇದನ್ನು ತಲೆಗೆ ಹಚ್ಚಿ ಮರುದಿನ ಬೆಳಗ್ಗೆ ಸ್ನಾನ ಮಾಡಿ. ಹೀಗೆ ನಿರಂತರವಾಗಿ ಮಾಡಿದರೆ ಕೂದಲಿನ ಬೇರು ಗಟ್ಟಿಯಾಗುತ್ತದೆ
ಇದೆಲ್ಲದರ ಹೊರತಾಗಿ ಸಾಕಷ್ಟು ನಿದ್ದೆ ಮಾಡದಿದ್ದರೆ ಕೂದಲು ಉದುರುವುದು ಖಂಡಿತ. ಕನಿಷ್ಠ 7 ಗಂಟೆಗಳ ನಿದ್ದೆ ಅತ್ಯಗತ್ಯ. ನೀವು ಚೆನ್ನಾಗಿ ನಿದ್ದೆ ಮಾಡಿದರೆ, ಈ ಸಮಸ್ಯೆ ಎಂದಿಗೂ ಬರುವುದಿಲ್ಲ..
ಯಾವಾಗಲೂ ಉಗುರು ಬೆಚ್ಚಗೆ ಎಣ್ಣೆಯನ್ನು ಬೆಚ್ಚಗಾಗಿಸಿ, ಕೂದಲಿಗೆ ಹಚ್ಚಿಕೊಳ್ಳುವುದು ಉತ್ತಮ. ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ ಹಾಗು ಕೂದಲು ಉದುರುವುದನ್ನು ತಡೆಯುತ್ತದೆ.
ಪ್ರತಿನಿತ್ಯ ಸ್ವಲ್ಪ ತೆಂಗಿನೆಣ್ಣೆಯನ್ನು ತಲೆಗೆ ಹಚ್ಚಿ, ಅದಕ್ಕೆ ಸ್ವಲ್ಪ ಕ್ಯಾಸ್ಟರ್ ಆಯಿಲ್, ಮೆಂತ್ಯ, ಕೇಸರಿ, ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ.. ಆರಿಸಿ..