ನವದೆಹಲಿ : ನಿಮಗೆ ಗೊತ್ತಿಲ್ಲದಂತೆ ನಿಮ್ಮ ಫೇಸ್ಬುಕ್ (Facebook) ಪ್ರೊಫೈಲ್ ಅನ್ನು ಯಾರು ನೋಡಿದ್ದಾರೆ ಎಂದು ತಿಳಿದುಕೊಳ್ಳುವ ಆಸಕ್ತಿ ಎಲ್ಲರಿಗೂ ಇರುತ್ತದೆ. ಇದನ್ನು ಪತ್ತೆಹಚ್ಚುವುದು ಈಗ ಸುಲಭ. ಈ ಮಾರ್ಗವನ್ನು ಅನುಸರಿಸಿದರೆ, ಯಾರು ನಿಮ್ಮ ಪ್ರೊಫೈಲನ್ನು (Profile) ವಿಸಿಟ್ ಮಾಡಿ ಹೋಗಿದ್ದಾರೆ ಎನ್ನುವುದನ್ನು ಸುಲಭವಾಗಿ ಕಂಡುಕೊಳ್ಳಬಹುದು. ಇದಕ್ಕಾಗಿ ಥರ್ಡ್ ಪಾರ್ಟಿ ಆಪ್ (Third party app) ಅನ್ನು ಇನ್ ಸ್ಟಾಲ್ ಮಾಡುವ ಅಗತ್ಯವೂ ಇಲ್ಲ. ಬಹಳ ಸುಲಭ ವಿಧಾನದಿಂದ ಯಾರು ನಿಮ್ಮ ಪ್ರೊಫೈಲ್ ಗೆ ಭೇಟಿ ನೀಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬಹುದು .
ಈ ಹಂತಗಳನ್ನು ಅನುಸರಿಸಿದರೆ ಸಾಕು :
-Facebook ಪೇಜ್ ಓಪನ್ ಆದ ಕೂಡಲೇ ರೈಟ್ ಕ್ಲಿಕ್ ಮಾಡಿ
- ಇಲ್ಲಿ ವ್ಯೂ ಪೇಜ್ ಸೋರ್ಸ್ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
-ಹೊಸ ಪೇಜ್ ಓಪನ್ ಆದ ನಂತರ CTRL + F ಕಮಾಂಡ್ ಕೊಡಿ
-ಈ ಕಮಾಂಡ್ ನೀಡಿದ ಕೂಡಲೇ ಬಲಭಾಗದಲ್ಲಿ ಸರ್ಚ್ ಬಾಕ್ಸ್ ಓಪನ್ ಆಗುತ್ತದೆ
- ಇಲ್ಲಿ BUDDY_ID ಎಂದು ಸರ್ಚ್ ಮಾಡಿ
- BUDDY_ID ಗೆ ಸಮಾನವಾಗಿ 15 ಅಂಕಿಯ ID ಕಾಣುತ್ತದೆ ಅದನ್ನು ಕಾಪಿ ಮಾಡಿ
- ಇಷ್ಟು ಮಾಡಿದ ನಂತರ Facebook.com/15-digit ID ಅನ್ನು ಎಂಟರ್ ಮಾಡಿ
- ಈಗ ನಿಮ್ಮ ಪ್ರೋಫೈಲ್ ಗೆ ವಿಸಿಟ್ ಮಾಡಿದ ಯೂಸರ್ ನ ID ಒಪನ್ ಆಗುತ್ತದೆ
ಇದನ್ನೂ ಓದಿ : ಮೂರು ದಿನ ಘೋರ ಅಂಧಕಾರದಲ್ಲಿ ಮುಳುಗಲಿದೆಯಾ ಈ ಭೂಮಿ..?
ಸರ್ಕಾರದೊಂದಿಗೆ ಕೈ ಜೋಡಿಸಿದ ಫೇಸ್ಬುಕ್ :
Facebook ಭಾರತದಲ್ಲಿ ತನ್ನ ಮೊಬೈಲ್ ಅಪ್ಲಿಕೇಶನ್ನಲ್ಲಿ vaccine finder tool ಅನ್ನು ಪರಿಚಯಿಸುತ್ತಿದೆ. ಈ ಟೂಲ್ ಸಹಾಯದಿಂದ ಬಳಕೆದಾರರು ಸಮೀಪದ ಲಸಿಕಾ ಕೇಂದ್ರ (vaccine centre) ಯಾವುದು ಎನ್ನುವುದನ್ನು ತಿಳಿದುಕೊಳ್ಳಬಹುದು. vaccine finder tool ಫೇಸ್ ಬುಕ್ ನ ಮೊಬೈಲ್ ಆಪ್ ನಲ್ಲಿ ಕಾಣಿಸಿಕೊಳ್ಳಲಿದೆ. ಇದು 17 ಭಾಷೆಗಳಲ್ಲಿ ಇರಲಿದೆ. ಕರೋನಾ (Coronavirus) ಸಾಂಕ್ರಮಣದ ಹಿನ್ನೆಲೆಯಲ್ಲಿ ಭಾರತಕ್ಕೆ ಒಂದು ಕೋಟಿ ಡಾಲರ್ ತುರ್ತು ನೆರವನ್ನು ಫೇಸ್ ಬುಕ್ ಘೋಷಿಸಿತ್ತು.
ಇದನ್ನೂ ಓದಿ : Google Pay ಬಳಕೆದಾರರಿಗೆ ಸಿಗಲಿದೆ ಈ ಹೊಸ ಸೌಲಭ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.