ಪಾತಾಳಕ್ಕೆ ಇಳಿಯಿತು iPhone 15 Plus ಬೆಲೆ ! 18 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ದುಬಾರಿ ಫೋನ್

iPhone 15 Plus ಇಂದು ಅಗ್ಗದ ಬೆಲೆಯಲ್ಲಿ ಲಭ್ಯವಿದೆ. iPhone 15 Plus ಪ್ರಸ್ತುತ Amazonನಲ್ಲಿ ಉತ್ತಮ ಬೆಲೆಗೆ ಲಭ್ಯವಿದೆ. 

Written by - Ranjitha R K | Last Updated : Aug 27, 2024, 12:29 PM IST
  • ಕಡಿಮೆ ಬೆಲೆಯಲ್ಲಿ iPhone 15 Plus ಖರೀದಿಸಬಹುದು
  • ಈ ಫೋನ್ ಅನ್ನು 2023ರಲ್ಲಿ ಬಿಡುಗಡೆ ಮಾಡಲಾಗಿತ್ತು.
  • iPhone 15 Plus ಪ್ರಸ್ತುತ Amazon ನಲ್ಲಿ ಉತ್ತಮ ಬೆಲೆಗೆ ಲಭ್ಯವಿದೆ
 ಪಾತಾಳಕ್ಕೆ ಇಳಿಯಿತು iPhone 15 Plus ಬೆಲೆ ! 18 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ದುಬಾರಿ ಫೋನ್  title=

iPhone 15 Plus Price : ಬಜೆಟ್‌ಗೆ ಸರಿಹೊಂದುವ ಉತ್ತಮ ಸ್ಮಾರ್ಟ್‌ಫೋನ್‌ಗಾಗಿ ನೀವು ಕೂಡಾ ಹುಡುಕುತ್ತಿದ್ದರೆ, iPhone 15 Plus ಅನ್ನು ಖರೀದಿಸಬಹುದು.ಈ ಫೋನ್ ಅನ್ನು 2023ರಲ್ಲಿ ಬಿಡುಗಡೆ ಮಾಡಲಾಗಿತ್ತು.ಇದು ಆಪಲ್‌ನ ಇತ್ತೀಚಿನ ತಂತ್ರಜ್ಞಾನ ಮತ್ತು ಉತ್ತಮ ವಿನ್ಯಾಸದ ಉತ್ತಮ ಸಂಯೋಜನೆಯನ್ನು ಹೊಂದಿದೆ.  iPhone 15 Plus ಪ್ರಸ್ತುತ Amazon ನಲ್ಲಿ ಉತ್ತಮ ಬೆಲೆಗೆ ಲಭ್ಯವಿದೆ. 

iPhone 15 Plus (128GB) Amazon ಡೀಲ್  : 
ಈಗ ಐಫೋನ್ 15 ಪ್ಲಸ್ ಇನ್ನಷ್ಟು ಅಗ್ಗವಾಗಿದೆ.ಈ ಮೊದಲು ಇದರ ಬೆಲೆ 89,900 ರೂಪಾಯಿ ಆಗಿತ್ತು.ಆದರೆ ಈಗ 11% ರಿಯಾಯಿತಿಯೊಂದಿಗೆ ಇದನ್ನು Amazon ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಅದರ ಬೆಲೆ  79,999 ರೂಪಾಯಿಗೆ ಇಳಿಯುತ್ತದೆ.ಈ ಆಫರ್ ಇಲ್ಲಿಗೆ ಮುಗಿಯುವುದಿಲ್ಲ. ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನು ಇನ್ನಷ್ಟು ಕೈಗೆಟುಕುವಂತೆ ಮಾಡಲು ಅಮೆಜಾನ್ ಇನ್ನೂ ಉತ್ತಮ ಆಫರ್ ಗಳನ್ನು ಸೇರಿಸಿದೆ.ಉತ್ತಮ ಸ್ಥಿತಿಯಲ್ಲಿ ಇರುವ ಹಳೆಯ ಫೋನ್ ಅನ್ನುಎಕ್ಸ್ಚೇಂಜ್ ಮಾಡಿಕೊಂಡರೆ 58,700 ವರೆಗೆ ವಿನಿಮಯ ರಿಯಾಯಿತಿ ಸಿಗುತ್ತದೆ.ಈ ಮೂಲಕ ಈ ಹೊಸ ಫೋನ್‌ನ ಬೆಲೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ.  

ಇದನ್ನೂ ಓದಿ : BSNL 4G: ಏರ್ಟೆಲ್, ಜಿಯೋಗೆ ಟಕ್ಕರ್, ₹ 150ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಬಿ‌ಎಸ್‌ಎನ್‌ಎಲ್ ಜಬರ್ದಸ್ತ್ ಪ್ಲಾನ್!

ಇನ್ನು  ಹೆಚ್ಚುವರಿಯಾಗಿ Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ 3,999 ವರೆಗೆ ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತದೆ.  ಇದರೊಂದಿಗೆ ಪೋನಿನ ಬೆಲೆ ಇನ್ನಷ್ಟು ಕಡಿಮೆಯಾಗುತ್ತದೆ.ಈ ಎಲ್ಲಾ ರಿಯಾಯಿತಿಗಳು ಮತ್ತು ಆಫರ್ ಗಳನ್ನೂ ಒಟ್ಟಾಗಿ ಸೇರಿಸಿ ನೋಡಿದರೆ iPhone 15 Plus ನ ಬೆಲೆ ಕೇವಲ 17,300 ರೂಪಾಯಿಗೆ ಇಳಿಯುತ್ತದೆ. 

iPhone 15 Plus ವಿಶೇಷಣಗಳು :
ಐಫೋನ್ 15 ಪ್ಲಸ್ 6.7-ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್ಪ್ಲೇಯನ್ನು ಪ್ರೊಮೋಷನ್ ತಂತ್ರಜ್ಞಾನವನ್ನು ಹೊಂದಿದೆ. ಅದು 120Hz ವರೆಗೆ ರಿಫ್ರೆಶ್  ರೇಟ್ ನೀಡುತ್ತದೆ.ಹಿಂಭಾಗದ ಕ್ಯಾಮರಾ ವ್ಯವಸ್ಥೆಯನ್ನು ಅಪ್ಡೇಟ್ ಮಾಡಲಾಗಿದೆ.  ಹೊಸ 48MP  ಅಮಿನ್ ಸೆನ್ಸಾರ್ ಫೋಟೋ ಮತ್ತು ವೀಡಿಯೊ ಗುಣಮಟ್ಟವನ್ನು ಸುಧಾರಿಸುತ್ತದೆ.iPhone 15 Plus ದೀರ್ಘಾವಧಿಯ ಬ್ಯಾಟರಿಯೊಂದಿಗೆ ಬರುತ್ತದೆ.  ಇದು ನಿಮಗೆ ದಿನವಿಡೀ ವಿಸ್ತೃತ ಬಳಕೆಯನ್ನು ನೀಡುತ್ತದೆ. ಇದು ಹೊಸ ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.

ಇದನ್ನೂ ಓದಿ : ಟೆಲಿಗ್ರಾಮ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್‌... ಭಾರತದಲ್ಲಿ ಬ್ಯಾನ್‌ ಆಗುತ್ತಾ ಜನಪ್ರಿಯ ಮೆಸೇಜಿಂಗ್‌ ಆಪ್?‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews

Trending News