RealSense ID: ಇನ್ಮುಂದೆ ATM ಅನ್ನು ಸ್ಪರ್ಶಿಸದೆಯೇ ನಿಮ್ಮ ಬ್ಯಾಕಿಂಗ್ ವ್ಯವಹಾರ ಪೂರ್ಣಗೊಳಿಸಿ

RealSense ID: ಹಲವು ದೇಶಗಳಲ್ಲಿ ಈಗಾಗಲೇ ಈ ತಂತ್ರಜ್ಞಾನ ಬಳಸಲಾಗುತ್ತಿದೆ. ಆದರೆ, ಇದೀಗ ಈ ತಂತ್ರಜ್ಞಾನ ಭಾರತದಲ್ಲಿಯೂ ಕೂಡ ಎಂಟ್ರಿ ಹೊಡೆಯಲಿದೆ. ಈ ಡಿವೈಸ್ ಅಭಿವೃದ್ಧಿಪಡಿಸಲು ಆಕ್ಟಿವ್ ಡೆಪ್ತ್ ಸೆನ್ಸರ್ ಬಳಕೆ ಮಾಡಲಾಗಿದೆ. ಹೀಗಾಗಿ ಇದು ಸುರಕ್ಷತೆಯನ್ನು ಮತ್ತಷ್ಟು ಸುನಿಶ್ಚಿತಗೊಳಿಸಲಿದೆ.

Written by - Nitin Tabib | Last Updated : Jan 10, 2021, 09:11 PM IST
  • ಇನ್ಮುಂದೆ ATM ಸ್ಪರ್ಶಿಸದೆಯೇ ಹಣವನ್ನು ವಿಥ್ ಡ್ರಾ ಮಾಡಿ.
  • ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಹೊಸ ತಂತ್ರಜ್ಞಾನ.
  • RealSense ID ಹೆಸರಿನ ಈ ತಂತ್ರಜ್ಞಾನವನ್ನು Intel ಅಬಿವೃದ್ಧಿಪಡಿಸಿದೆ.
RealSense ID: ಇನ್ಮುಂದೆ ATM ಅನ್ನು ಸ್ಪರ್ಶಿಸದೆಯೇ ನಿಮ್ಮ ಬ್ಯಾಕಿಂಗ್ ವ್ಯವಹಾರ ಪೂರ್ಣಗೊಳಿಸಿ title=
RealSense ID (File Photo)

RealSense ID - ನವದೆಹಲಿ: ಮಾಹಿತಿ ತಂತ್ರಜ್ಞಾನದ ಕಂಪನಿ ಇಂಟೆಲ್ ಇತೀಚೆಗಷ್ಟೇ ತಂತ್ರಜ್ಞಾನವೊಂದನ್ನು ವಿಕಸಿತಗೊಳಿಸಿದ್ದು, ಇದನ್ನು ಬಳಸಿ ಬಳಕೆದಾರರು ಸ್ಪರ್ಶ ಮಾಡದೆಯೇ ಏಟಿಎಂ ಅಥವಾ ಯಾವುದೇ ಸ್ಮಾರ್ಟ್ ಡಿವೈಸ್ ಅನ್ನು ತೆರೆಯಬಹುದಾಗಿದೆ. ಕಂಪನಿ ಇದಕ್ಕೆ RealSense ID ಎಂದು ಹೆಸರಿಸಿದೆ. ಇದೊಂದು ಫೆಸಿಯಲ್ ರಿಕಗ್ನಿಶನ್ ಸಿಸ್ಟಂ ಆಗಿದ್ದು, ಇದು ಬಳಕೆದಾರರ ಗುರುತು ಪತ್ತೆಹಚ್ಚಿ ಯಾವುದೇ ಒಂದು ಸ್ಮಾರ್ಟ್ ಡಿವೈಸ್ ಅನ್ಲಾಕ್ ಮಾಡಬಹುದು.

ಇದನ್ನು ಓದಿ- ಮೊಬೈಲ್ ಆ್ಯಪ್ ಮೂಲಕ ಎಟಿಎಂನಿಂದ Cash Withdrawal ಸೇವೆ ಆರಂಭಿಸಿದ ಬ್ಯಾಂಕ್

ಸಿಕ್ಯೋರಿಟಿ ಬಳಪಡಿಸಲಿದೆ
ಈ ಡಿವೈಸ್ ತಯಾರಿಸಲು ಆಕ್ಟಿವ್ ಡೆಪ್ತ್ ಸೆನ್ಸರ್ ಗಳನ್ನು ಬಳಕೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಈ ಡಿವೈಸ್ ಅನ್ನು ATM, ಕಿಯೋಸ್ಕ್ ಹಾಗೂ ಸ್ಮಾರ್ಟ್ ಲಾಕ್ಸ್ ಗಳಲ್ಲಿ ಸುರಕ್ಷತೆಯನ್ನು ಬಲಪಡಿಸಲು ಉಪಯೋಗಿಸಬಹುದು ಎಂದು ಕಂಪನಿ ಹೇಳಿದೆ. ಈ ವರ್ಷದ ಏಪ್ರಿಲ್-ಜೂನ್ ಅವಧಿಯ ನಡುವೆ INTEL ಈ ಉಪಕರಣವನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇದನ್ನು ಓದಿ- ಡೆಬಿಟ್ ಕಾರ್ಡ್ ಇಲ್ಲದೆ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ಸುಲಭ ವಿಧಾನ ಇದು

ಯಾವ ರೀತಿ ಇದು ಲಾಭಕಾರಿಯಾಗಿದೆ
ಇಂಟೆಲ್ ನ ಈ ನೂತನ ಉಪಕರಣ ಅಥಾಂಟಿಕೆಶನ್ ಪದ್ಧತಿಯನ್ನು ಬಳಪಡಿಸಲಿದೆ ಹಾಗೂ ಇದರಿಂದ ಬಳಕೆದಾರರ ಐಡಿ ಕಳುವಾಗುವ ಅಪಾಯ ಕೂಡ ಕೊನೆಗೊಳ್ಳಲಿದೆ ಎನ್ನಲಾಗಿದೆ. ಕಾಲಕಾಲಕ್ಕೆ ತಕ್ಕಂತೆ ಬಳಕೆದಾರರ ಮುಖದಲ್ಲಾಗುವ ಬದಲಾವಣೆಯನ್ನು ಕೂಡ ಈ ಡಿವೈಸ್ ನೋಟ್ ಮಾಡಲಿದೆ. ಉದಾಹರಣೆಗೆ ಒಂದು ವೇಳೆ ಬಳಕೆದಾರರ ಮುಖದಲ್ಲಿ ಗಡ್ಡ ಹಾಗೂ ಮೀಸೆಗಳು ಚಿಗುರಿದರು ಕೂಡ ಇದು ಬಳಕೆದಾರರನ್ನು ಪತ್ತೆಹಚ್ಚಲಿದೆ.  ಈ ತಂತ್ರಜ್ಞಾನಕ್ಕೆ ಬೇರೆ ಯಾವುದೇ ರೀತಿಯ ನೆಟ್ವರ್ಕ್ ಆವಶ್ಯಕತೆ ಇಲ್ಲ ಹಾಗೂ ಇದರಲ್ಲಿ ಬಳಕೆದಾರರ ಮುಖದ ಗುರುತು ಸಂಪೂರ್ಣ ಎನ್ಕ್ರಿಪ್ಟ್ ಆಗಿರಲಿದೆ. ಈ ಡಿವೈಸ್ ಮಾರುಕಟ್ಟೆಯ ಬೆಲೆಯನ್ನು ಇಂಟೆಲ್ ರೂ.7300 ಕ್ಕೆ ನಿಗದಿಪಡಿಸಿದೆ.

ಇದನ್ನು ಓದಿ- ಡೆಬಿಟ್, ಕ್ರೆಡಿಟ್ ಕಾರ್ಡ್ ಕುರಿತು ಆರ್‌ಬಿಐನ ಹೊಸ ನಿಯಮ, ಎಚ್ಚರಿಕೆಯಿಂದ ಓದಿ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News