Infinix Smart 6 Plus: ಕಡಿಮೆ ಬೆಲೆಯ ಜಬರ್ದಸ್ತ್ ಸ್ಮಾರ್ಟ್‌ಫೋನ್, ಬೆಲೆ ಎಷ್ಟು ಗೊತ್ತಾ?

ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್‍ ನೀಡುವ ಉದ್ದೇಶದಿಂದ Infinix ಈ ಇದನ್ನು ರಿಲೀಸ್ ಮಾಡುತ್ತಿದೆ.   

Written by - Puttaraj K Alur | Last Updated : Jul 29, 2022, 01:30 PM IST
  • Infinix Smart 6 Plus ಹೊಸ ಸ್ಮಾರ್ಟ್‍ಫೋನ್‍ ಇಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ
  • ಬಜೆಟ್ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‍ಫೋನ್‍ ಇದಾಗಿದೆ
  • ವಿಶಿಷ್ಟ ವಿನ್ಯಾಸ & ದೀರ್ಘ ಬ್ಯಾಟರಿ ಬಾಳಿಕೆ ಹೊಂದಿರುವ ಸ್ಮಾರ್ಟ್‍ಫೋನ್‍
Infinix Smart 6 Plus: ಕಡಿಮೆ ಬೆಲೆಯ ಜಬರ್ದಸ್ತ್ ಸ್ಮಾರ್ಟ್‌ಫೋನ್, ಬೆಲೆ ಎಷ್ಟು ಗೊತ್ತಾ?  title=
infinix smart 6 plus smartphone

ನವದೆಹಲಿ: Infinix Smart 6 Plus ಹೊಸ ಸ್ಮಾರ್ಟ್‍ಫೋನ್‍ ಇಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್‍ ನೀಡುವ ಉದ್ದೇಶದಿಂದ Infinix ಈ ಇದನ್ನು ರಿಲೀಸ್ ಮಾಡುತ್ತಿದೆ.   

ಗ್ರಾಹಕರು ಫ್ಲಿಪ್‌ಕಾರ್ಟ್‌ನಿಂದ ಈ ಫೋನ್ ಅನ್ನು ಸುಲಭವಾಗಿ ಖರೀದಿಸಬಹುದು. ಕೈಗೆಟುಕುವ ಬೆಲೆಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ಫೋನ್ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಡಿಸೈನ್‌ನಿಂದ ಡಿಸ್‌ಪ್ಲೇ ಮತ್ತು ಕ್ಯಾಮೆರಾದವರೆಗೆ ಇತರೆ ಫೋನ್‍ಗಳನ್ನು ಮೀರಿಸುವಂತಹ ಫೀಚರ್ಸ್ ಈ ಫೋನಿನಲ್ಲಿದೆ ಎಂದು ಹೇಳಲಾಗುತ್ತಿದೆ.   

ಇದನ್ನೂ ಓದಿ: ಕೇವಲ 600 ರೂಪಾಯಿಗೆ ಸಿಗುತ್ತದೆ Realmeಯ ಸ್ಮಾರ್ಟ್ ಫೋನ್ ..!

Infinix Smart 6 Plus ವೈಶಿಷ್ಟ್ಯಗಳು

ಮಾಹಿತಿಯ ಪ್ರಕಾರ Infinix ಸ್ಮಾರ್ಟ್ 6 ಪ್ಲಸ್‌ನಲ್ಲಿ 6.82-ಇಂಚಿನ HD + ರೆಸಲ್ಯೂಶನ್ ಡಿಸ್ಪ್ಲೇ ಇರುತ್ತದೆ. ಜೊತೆಗೆ 6GB RAM ಮತ್ತು 64GB ಸ್ಟೋರೇಜ್ ಇರುತ್ತದೆ. ಈ ಸ್ಮಾರ್ಟ್‌ಫೋನ್ ‘ಝಿದ್ ಹೈ ಬಾಡಿ’ ಎಂಬ ಕ್ಯಾಪ್ಶನ್‍ನೊಂದಿಗೆ ಮಾರುಕಟ್ಟೆಗೆ ಎಂಟ್ರಿಯಾಗುತ್ತಿದೆ. ಆದ್ದರಿಂದ ಇದರ ವೈಶಿಷ್ಟ್ಯಗಳು ಈ ಶ್ರೇಣಿಯ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಇದೆ. ಕಂಪನಿಯು ಈ ಸ್ಮಾರ್ಟ್‌ಫೋನ್‌ನಲ್ಲಿ 5,000mAh ಬ್ಯಾಟರಿ ನೀಡಿದೆ. ಒಟ್ಟಾರೆ ಈ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ನೀಡಲಾಗಿರುವ ಎಲ್ಲಾ ವೈಶಿಷ್ಟ್ಯಗಳು ಇದರಲ್ಲಿವೆ. ಬಳಸುವಾಗ ಇದು ನಿಮಗೆ ವಿಶಿಷ್ಟವಾದ ಅನುಭವವನ್ನು ನೀಡುತ್ತದೆ.

Infinix Smart 6 Plusನ ನಿರೀಕ್ಷಿತ ಬೆಲೆ

ಈ ಸ್ಮಾರ್ಟ್‌ಫೋನ್‌ ಬೆಲೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಬಿಡುಗಡೆಯಾದ ನಂತರವೇ ಬೆಲೆ ತಿಳಿಯಲಿದೆ. ಸದ್ಯಕ್ಕೆ ಇದರ ಬೆಲೆ 10 ಸಾವಿರ ರೂ.ಗಿಂತ ಕಡಿಮೆ ಇರುತ್ತೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವಾಟ್ಸಾಪ್‌ನಲ್ಲಿ ಯಾರನ್ನಾದರೂ ಬ್ಲಾಕ್ ಮಾಡುವ ಮುನ್ನ ಈ ವಿಷಯಗಳನ್ನು ತಪ್ಪದೇ ತಿಳಿಯಿರಿ

ಸ್ಮಾರ್ಟ್‍ಫೋನ್ ವಿನ್ಯಾಸ

ಸ್ಮಾರ್ಟ್‍ಫೋನ್‍ ವಿನ್ಯಾಸವನ್ನು ಬಹಳ ವಿಶಿಷ್ಟವಾಗಿ ಇರಿಸಲಾಗಿದೆ. ಇದು ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಆಗಿರುತ್ತದೆ. ಇದರ ವಿನ್ಯಾಸ ಮತ್ತು ದೊಡ್ಡ ಡಿಸ್‌ಪ್ಲೇ ಇದರ ಪ್ರಮುಖ ಆಕರ್ಷಣೆಯಾಗಿರುತ್ತದೆ. ಇದನ್ನು ನೀವು ಕಣ್ಣುಮುಚ್ಚಿ ಖರೀದಿಸಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News